ಉಡುಪಿ | ತುರ್ತು ಸೇವೆಗೆ ಲಭ್ಯವಿಲ್ಲದ “108” ಅಂಬುಲೆನ್ಸ್ !

Date:

ಉಡುಪಿ ಜಿಲ್ಲೆಯಾದ್ಯಂತ ಕಾರ್ಯ ನಿರ್ವಹಿಸುತ್ತಿರುವ 108 ಆಂಬುಲೆನ್ಸ್ ಸೇವೆ ಹಳಿ ತಪ್ಪಿದ್ದು, ರೋಗಿಗಳಿಗೆ ಕ್ಲಪ್ತ ಸಮಯದಲ್ಲಿ ಆಂಬುಲೆನ್ಸ್ ಸಿಗದೆ ಮೃತ ಪಡುತ್ತಿರುವ ಘಟನೆಗಳು ವರದಿಯಾಗುತ್ತಿವೆ. ಈ ಬಗ್ಗೆ ಜಿಲ್ಲಾಡಳಿತ, ಇಲಾಖೆಗಳು, ಜನಪ್ರತಿನಿಧಿಗಳಿಗೆ ಹಲವಾರು ಬಾರಿ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ ಎಂದು ಸಮಾಜ ಸೇವಕ ವಿಶು ಶೆಟ್ಟಿ ತೀವ್ರ ಆಕ್ರೋಶ ವ್ಯಕ್ತ ಪಡಿಸಿದ್ದಾರೆ.

- Advertisement -

ಸೋಮವಾರ ರಾತ್ರಿ 10 ಗಂಟೆಗೆ ಪೆರ್ಡೂರಿನಲ್ಲಿ ಮಹಿಳೆಯೋರ್ವರು ಹೃದಯಾಘಾತಕ್ಕೆ ಒಳಗಾಗಿದ್ದು, ಕ್ಲಪ್ತ ಕಾಲಕ್ಕೆ 108 ಆಂಬುಲೆನ್ಸ್ ಸಿಗದೆ ಕೊನೆಗೆ ಖಾಸಗಿ ವಾಹನದಲ್ಲಿ ಆಸ್ಪತ್ರೆಗೆ ಬರುವಾಗ ದಾರಿಯಲ್ಲಿಯೇ ಮೃತ ಪಟ್ಟ ಘಟನೆ ನಡೆದಿದೆ. ಜಿಲ್ಲೆಯಲ್ಲಿ ಹದಿನೆಂಟು 108 ಆಂಬುಲೆನ್ಸ್ಗಳು ಕಾರ್ಯ ನಿರ್ವಹಿಸುತ್ತಿದ್ದು, ಕೇವಲ 33 ಮಂದಿ ಸಿಬಂದಿಗಳು ಕಾರ್ಯ ನಿರ್ವಹಿಸುತ್ತಿದ್ದಾರೆ. ಈ ಸಂಖ್ಯೆ 108 ಇರಬೇಕಿತ್ತು. ಈ ನಡುವೆ 108 ಆಂಬುಲೆನ್ಸ್ಗಳು ದಿನದ 24 ಗಂಟೆಗಳ ಬದಲಿಗೆ ಕೇವಲ 16 ಗಂಟೆಗಳಷ್ಟೇ ಸೇವೆ ನೀಡುತ್ತಿರುವುದು ಬೆಳಕಿಗೆ ಬಂದಿದೆ. ಇದರಿಂದ ರೋಗಿಗಳು ತುರ್ತು ಸೇವೆ ಸಿಗದೆ ಪರದಾಡುವಂತಾಗಿದೆ ಎಂದು ಅವರು ಆರೋಪಿಸಿದ್ದಾರೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ರಾಮದುರ್ಗ, ಸವದತ್ತಿ ಬರ ಘೋಷಣೆಗೆ ರೈತರ ಆಗ್ರಹ: 10...

"ಬರಪೀಡಿತ ತಾಲೂಕು ಘೋಷಣೆಯಾಗುತ್ತದೆಂಬ ವಿಶ್ವಾಸದಲ್ಲಿ ಗ್ರೌಂಡ್ ಟ್ರೂಥಿಂಗ್ ಮಾಡಲು ಸಿದ್ಧರಾಗಿದ್ದೆವು. ಆದರೆ ಅದು ಆಗಿಲ್ಲ. ಬರಪೀಡಿತ ತಾಲೂಕು ಎಂದು ಘೋಷಣೆ ಮಾಡಲು ಇನ್ನೂ ಅವಕಾಶವಿದೆ" ಎಂದು ಕೃಷಿ ಅಧಿಕಾರಿಗಳು ಹೇಳಿದರು. ಮುಂಗಾರು ಆರಂಭದಲ್ಲಿ ಉತ್ತಮ...

ಕರಗುವ ಹಿಮಾಲಯ, ಕುಸಿಯುವ ಆರ್ಥಿಕತೆ: ಹಿಮಪ್ರಳಯದ ಹಾದಿಯಲ್ಲಿ ಭಾರತದ...

ಹಿಮಾಲಯವು ಕೇವಲ ಮಂಜಿನ ಬೆಟ್ಟಗಳ ಸಮೂಹವಲ್ಲ; ಅದು ಭಾರತದ ಆರ್ಥಿಕ ಸ್ಥಿರತೆ, ಆಹಾರ ಭದ್ರತೆ ಮತ್ತು ಶಕ್ತಿ ಭದ್ರತೆಯ ತಾಣ. ಇಂದಿನ ಜಾಗತಿಕ ತಾಪಮಾನ ಏರಿಕೆಯ ಸವಾಲನ್ನು ಭಾರತವು ಕೇವಲ ಪರಿಸರ ಸಮಸ್ಯೆಯಾಗಿ...

ಈ ದಿನ ಕವಿತೆ | ಇಸ್ರೇಲಿನ ವಾಯುದಾಳಿಯ ರಾತ್ರಿಯಲಿ...

ಈ ಬಾರಿ ಪ್ಯಾಲೆಸ್ತೀನ್‌ನ ಕವಿ ಮೊಸಾಬ್ ಅಬು ತೋಹಾ ಅವರ ಕವನವನ್ನು ಇಂಗ್ಲಿಷ್‌ನಿಂದ ಕನ್ನಡಕ್ಕೆ ತಂದಿದ್ದಾರೆ ಸಿ ಎಚ್‌ ಭಾಗ್ಯ ಅವಳು ತನ್ನ ಹಾಸಿಗೆಯ ಸುತ್ತಾ ಇರುವ ಮಕ್ಕಳನ್ನು ಒಟ್ಟೈಸುವಳು.ಹೊಟೇಲ್ ಬಿಡುವ...

ಇಂದು ಬೆಳಗ್ಗೆ 8 ಗಂಟೆಗೆ 108 ಗೆ ಕರೆ ಮಾಡಿದಾಗ ಆಂಬುಲೆನ್ಸ್ ಉಡುಪಿಯಲ್ಲಿಲ್ಲ, ಕಾಪು, ಮಲ್ಪೆ, ಬ್ರಹ್ಮಾವರ, ಶಿರ್ವ, ಮಂಚಕಲ್‌ನಲ್ಲೂ ಇಲ್ಲ. ಉಡುಪಿ ಜಿಲ್ಲೆಯ 5 ಮಂದಿ ಶಾಸಕರು, ಉಡುಪಿ ಸಂಸದರ ಗಮನಕ್ಕೆ ತರುತ್ತಿದ್ದೇನೆ. 108 ಸಮಯಕ್ಕೆ ಸರಿಯಾಗಿ ಸಿಗದೆ ಹಲವಾರು ಜೀವಗಳು ಬಲಿಯಾಗಿವೆ. ಈ ಬಗ್ಗೆ ಸಂಬಂಧಪಟ್ಟವರ ಗಮನ ಸೆಳೆದರೂ ಯಾವುದೇ ಪ್ರಯೋಜವಾಗಿಲ್ಲ ಎಂದು ವಿಶು ಶೆಟ್ಟಿ ಬೇಸರ ವ್ಯಕ್ತ ಪಡಿಸಿದ್ದಾರೆ.

ಸಂಬಂಧಪಟ್ಟವರು ನಿರ್ಲಕ್ಷ ಮಾಡುತ್ತಿದ್ದಾರೆ. ಮಾಧ್ಯಮಗಳಾದರೂ ಈ ಬಗ್ಗೆ ವರದಿ ಮಾಡಿ ಸರಕಾರದ ಗಮನ ಸೆಳೆಯಬೇಕು. 108 ದಿನದ 24 ಗಂಟೆ ಸೇವೆ ನೀಡುವ ಉದ್ದೇಶ ಹೊಂದಿದ್ದರೂ ಅದರ ಪಾಲನೆ ಆಗುತ್ತಿಲ್ಲ. ತುರ್ತು ಸಂದರ್ಭದಲ್ಲಿ ಐದಾರು ಗಂಟೆಗಳು ಕಳೆದರೂ ಆಂಬುಲೆನ್ಸ್ ಬರುತ್ತಿಲ್ಲ. ಇತ್ತೀಚಿಗೆ ಉಡುಪಿ ಹೊರವಲಯದಲ್ಲಿ ರೋಗಿ ಒಬ್ಬರಿಗೆ ಆಸ್ಪತ್ರೆಗೆ ದಾಖಲಿಸಲು ಬೆಳಗ್ಗೆ 10ಗಂಟೆಗೆ ಪೋನ್ ಮಾಡಿದರೂ ಮಧ್ಯಾಹ್ನ 3 ಗಂಟೆಯಾದರೂ ಅಂಬುಲೆನ್ಸ್ ಬಂದಿರಲಿಲ್ಲ. ಹೀಗಾದರೆ ಬಡ ರೋಗಿಗಳ ಪ್ರಾಣ ಉಳಿಯುವುದು ಹೇಗೆ ಎಂಬುದನ್ನು ಸಂಬಂಧ ಪಟ್ಟವರು ಸ್ಪಷ್ಟ ಪಡಿಸಬೇಕು ಎಂದು ವಿಶುಶೆಟ್ಟಿಯವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಎಷ್ಟೋ ಸಂದರ್ಭದಲ್ಲಿ ಬಡ ರೋಗಿಗಳನ್ನು ಜಿಲ್ಲಾಸ್ಪತ್ರೆಯಿಂದ ಮಂಗಳೂರಿನ ವೆನ್ಲಾಕ್ ಆಸ್ಪತ್ರೆಗೆ ದಾಖಲಿಸುವ ಅಗತ್ಯ ಇರುತ್ತದೆ.ಅಂತಹ ಪರಿಸ್ಥಿತಿಯಲ್ಲಿ 108 ಸೇವೆಗೆ ಸಿಗದಿದ್ದಾರೆ ದುಬಾರಿ ಖಾಸಗಿ ಆಂಬುಲೆನ್ಸ್ ಮಾಡಿ ಅವರನ್ನು ಕೊಂಡೊಯ್ಯಲು ಸಾಧ್ಯವೇ? ಹೀಗಾಗಿ ಅದೆಷ್ಟೋ ರೋಗಿಗಳು ದಾರಿಯಲ್ಲಿಯೇ ಪ್ರಾಣ ಬಿಟ್ಟ ಉದಾಹರಣೆಗಳಿವೆ.


ಪ್ರಸ್ತುತ 108 ಸೇವೆಯನ್ನು ಆವಲೋಕಿಸಿದಾಗ 3 ಪಾಳಿಯಲ್ಲಿ 8ಗಂಟೆಯಂತೆ 24ಗಂಟೆ ಕರ್ತವ್ಯ ನಿರ್ವಹಿಸ ಬೇಕಾದ ಈ ಆಂಬುಲೆನ್ಸ್ ಗಳು ಯಾವುದಾದರೊಂದು ಪಾಳಿಯನ್ನು ನಿರ್ವಹಿಸುತ್ತಿಲ್ಲ. ಈ ಸಂದರ್ಭದಲ್ಲಿ ಫೋನ್ ಮಾಡಿದರೆ ಆಂಬುಲೆನ್ಸ್ ಖಾಲಿ ಇಲ್ಲ ಎಂದೋ ಅಥವಾ ತಾಂತ್ರಿಕ ದೋಷ ಎಂದೋ ಸಬೂಬು ನೀಡಲಾಗುತ್ತಿದೆ ಎಂದು ವಿಶು ಶೆಟ್ಟಿ ಆರೋಪಿಸಿದ್ದಾರೆ. ಕಳೆದ ಒಂದು ವರ್ಷದಿಂದ ಈ ಸಮಸ್ಯೆ ನಡೆಯುತ್ತಿದೆ. ಈ ಬಗ್ಗೆ ಹಲವಾರು ಬಾರಿ ಸಂಬಂಧ ಪಟ್ಟ ಇಲಾಖೆ ಅಧಿಕಾರಿಗಳ ಗಮನ ಸೆಳೆಯಲಾಗಿದೆ. ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಬಡ ರೋಗಿಗಳು ಪ್ರಾಣ ಬಿಡುವಂತಾಗಿದೆ ಎಂದು ಅವರು ದೂರಿದ್ದಾರೆ.

ಈ ಬಗ್ಗೆ ಮಾಧ್ಯಮದ ಜೊತೆ ಮಾತನಾಡಿದ ಸಮಾಜ ಸೇವಕ ವಿಶು ಶೆಟ್ಟಿ ಅಂಬಲಪಾಡಿ, ಜಾತಿ ಧರ್ಮಕ್ಕೆ ಕೋಟಿ ಕೋಟಿ ಖರ್ಚು ಮಾಡಿ ಆ ಜಾತಿ, ಈ ಜಾತಿ ಎಂಬುದನ್ನು ಹೇಳುವ ಬದಲು ಎಲ್ಲಾ ಜಾತಿ, ಧರ್ಮಗಳಿಗೆ ಅನುಕೂಲವಾಗುವ 108 ಆಂಬುಲೆನ್ಸ್ ಸೇವೆಯನ್ನು ಮೊದಲು ಸರಿಪಡಿಸಿ. 108 ಆಂಬುಲೆನ್ಸ್ ಸೇವೆಯ ಸಮಸ್ಯೆ ಬಗ್ಗೆ ತುರ್ತು ಸಂದರ್ಭದಲ್ಲಿ 6-7 ಅಂಬುಲೆನ್ಸ್ ಗಳು ಮಾತ್ರ ಲಭ್ಯವಿರುತ್ತವೆ. ಇವುಗಳಲ್ಲಿ ತಾಂತ್ರಿಕ ದೋಷ ಅಥವಾ ಇನ್ನಿತರ ಕಾರಣ ಗಳಿಂದ ನಿಂತರೆ ದೇವರೇ ಗತಿ. ಹೀಗಾಗಿ ಶಿಫ್ಟ್ ವ್ಯವಸ್ತೆಯನ್ನು ಕೈ ಬಿಡಬೇಕು. ಎಲ್ಲಾ 18 ಆಂಬುಲೆನ್ಸ್ ಗಳು 24*7 ಲಭ್ಯವಾಗಬೇಕು. ಆದರೆ ಇದೀಗ ಇವರ ಸೇವಾ ನ್ಯೂನತೆಯಿಂದ ಜನ ಸಂಕಷ್ಟಕ್ಕೆ ಸಿಲುಕಿದ್ದಾರೆ. ಸಂಬಂಧ ಪಟ್ಟ ಇಲಾಖಾ ಅಧಿಕಾರಿಗಳು ತುರ್ತಾಗಿ ಇತ್ತ ಗಮನ ಹರಿಸಬೇಕು. ಜನರ ಪ್ರಾಣ ಉಳಿಸುವ ಈ 108 ಸೇವೆ 24*7ಕಾರ್ಯ ನಿರ್ವಹಿಸುವಂತಾಗಬೇಕು ಎಂದು ಹೇಳಿದ್ದಾರೆ.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಕೋಲಾರ | ಕೆ.ಎಸ್. ಗಣೇಶ್ ನೇತೃತ್ವದಲ್ಲಿ ಬೆಳೆದ ಸಂಘದಿಂದ ಎರಡು ಜಿಲ್ಲೆಗಳ ಪತ್ರಕರ್ತರಿಗೆ ಆರ್ಥಿಕ, ಆರೋಗ್ಯ ಹಾಗೂ ಸಾಮಾಜಿಕ ನೆರವು

ಪತ್ರಕರ್ತರ ಆರ್ಥಿಕ ಹಾಗೂ ಸಾಮಾಜಿಕ ಅಗತ್ಯಗಳಿಗೆ ಸ್ಪಂದಿಸುವ ಉದ್ದೇಶದಿಂದ ಆರಂಭಗೊಂಡಿರುವ ಕೋಲಾರ...

ಚಿಕ್ಕಮಗಳೂರು | ಸಿಎಂ ಭೇಟಿ: ಕಾಂಗ್ರೆಸ್ ಸರ್ಕಾರ ಜನಪರ ಕಾಳಜಿಗೆ ಸಾಕ್ಷಿಯಾಗಿದೆ; ಹೆಚ್.ಪಿ ಮಂಜೇಗೌಡ

ಚಿಕ್ಕಮಗಳೂರು ನಗರದ ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹೆಚ್.ಪಿ.ಮಂಜೇಗೌಡ ಮಾತನಾಡಿ,"ಕಸ್ತೂರಿ ರಂಗನ್...

‌ಮೈಸೂರು ವಿವಿ ಸಂಜೆ ಕಾಲೇಜು: ಸಾಂಸ್ಕೃತಿಕ ಹಾಗೂ NSS ಚಟುವಟಿಕೆಗಳಿಗೆ ಚಾಲನೆ

ಮೈಸೂರು ವಿವಿ ಸಂಜೆ ಕಾಲೇಜಿನ ಪಠ್ಯೇತರ ಚಟುವಟಿಕೆಗಳ ಸಮಿತಿಯಿಂದ 2026-27ನೇ ಶೈಕ್ಷಣಿಕ...

ಚಿಕ್ಕಮಗಳೂರು | ಮಲೆನಾಡಿನ ಕರಾಳ ಅರಣ್ಯ ಕಾಯ್ದೆ ರದ್ದಾಗಬೇಕು; ಹಕ್ಕು ವಂಚಿತರಿಗೆ ಹಕ್ಕು ಸಿಗಬೇಕು; ಕೆ.ಎಲ್ ಅಶೋಕ್ 

ಚಿಕ್ಕಮಗಳೂರು ನಗರದ ಪತ್ರಿಕಾಗೋಷ್ಠಿಯಲ್ಲಿ ಕರ್ನಾಟಕ ಜನಶಕ್ತಿ ರಾಜ್ಯ ಕಾರ್ಯದರ್ಶಿ ಕೆ. ಎಲ್...