ಮೈಸೂರು | ‘ಡೋಪ್ಲಿನ್ ಕಾಂಪ್ಲೆಕ್ಸ್’ ತೆರವು ಪ್ರಕರಣ; ನಾವು ಮಾಲೀಕರೇ ಹೊರತು ಬಾಡಿಗೆದಾರರಲ್ಲ

Date:

ಮೈಸೂರಿನ ಹೃದಯಭಾಗದಲ್ಲಿರುವ ‘ಡೋಪ್ಲಿನ್ ಕಾಂಪ್ಲೆಕ್ಸ್’ ಆಸ್ತಿ ವಶಕ್ಕೆ ಹೈಕೋರ್ಟ್ ತೀರ್ಪು ನೀಡಿದ ಬೆನ್ನಲ್ಲೇ, ಸಂತೇಪೇಟೆಯಲ್ಲಿನ ‘ಡೋಪ್ಲಿನ್ ಕಾಂಪ್ಲೆಕ್ಸ್’ ತೆರವು ಕುರಿತು ಮೈಸೂರು ಅಭಿವೃದ್ದಿ ಪ್ರಾಧಿಕಾರ (ಎಂಡಿಎ) ನೀಡಿರುವ ಗಡುವು ನಮಗೆ ಸಂಬಂಧಿಸಿದ್ದಲ್ಲ, ನಾವು ಮಾಲೀಕರೇ ಹೊರತು ಬಾಡಿಗೆದಾರರಲ್ಲ ಎಂದು ಕಾಂಪ್ಲೆಕ್ಸ್ ಅಸೋಸಿಯೇಷನ್ ಅಧ್ಯಕ್ಷ ಗಿರೀಶ್ ಸ್ಪಷ್ಟಪಡಿಸಿದ್ದಾರೆ.

- Advertisement -

ಗುರುವಾರ ಬೆಳಗ್ಗೆ ಕಾಂಪ್ಲೆಕ್ಸ್ ಆವರಣದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ, ನಮ್ಮ ಕಾನೂನು ತಜ್ಞರಿಗೆ ಹೈಕೋರ್ಟ್ ತೀರ್ಪಿನ ಪ್ರತಿ ನೀಡಿ ಪರಿಶೀಲನೆ ಮಾಡಿಸಿಕೊಂಡಿದ್ದೇವೆ. ಅವರಿಂದ ವಸ್ತುಸ್ಥಿತಿಯನ್ನು ಮನದಟ್ಟು ಮಾಡಿಕೊಂಡ ನಂತರ ವರ್ತಕರ ಅಸೋಸಿಯೇಷನ್‌ನಲ್ಲಿ ಈ ಕುರಿತು ಚರ್ಚೆ ಮಾಡಿದ್ದೇವೆ. ಕಾನೂನು ತಜ್ಞರ ಸಲಹೆಯನ್ನು ಪರಿಗಣಿಸಿ, ಈ ವಿಚಾರವಾಗಿ ವರ್ತಕರು ಯಾರೂ ಕೂಡ ಆತಂಕಗೊಳ್ಳಬಾರದೆಂದು ತೀರ್ಮಾನ ಕೈಗೊಂಡಿದ್ದೇವೆ ಎಂದು ತಿಳಿಸಿದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಡಾ. ಟಿ.ಎಸ್.‌ ಚನ್ನೇಶ್‌ ಸರಣಿ | ವೈದ್ಯಕೀಯ ನೊಬೆಲ್‌...

ನಮ್ಮ ಮೆದುಳು, ಭಾವನೆಗಳನ್ನು, ವರ್ತನೆಗಳನ್ನು ಮತ್ತು ದೈಹಿಕ ಕಾರ್ಯಗಳನ್ನು ಹೇಗೆ ನಿಯಂತ್ರಿಸುತ್ತದೆ ಎಂಬುದನ್ನು ಸಂಶೋಧನೆಯಿಂದ ಬಿಡಿಸಿಟ್ಟು 2026ರ ವೈದ್ಯಕೀಯ ನೊಬೆಲ್‌ ಪ್ರಶಸ್ತಿಗೆ ಪಾತ್ರರಾದ ಮೂವರು ಸಂಶೋಧಕರು ಮತ್ತು ಸಂಶೋಧನೆಯ ಸುತ್ತಲಿನ ವಿಶ್ಲೇಷಣಾತ್ಮಕ ಬರಹ ಈ...

ಪೊಲೀಸ್ ಸುಧಾರಣೆ | ಹೈಟೆಕ್ ಪೊಲೀಸಿಂಗ್ Vs ವಾಸ್ತವ:...

ಪೊಲೀಸ್‌ ಇಲಾಖೆಯನ್ನು ಆಧುನೀಕರಿಸಲು AI, ಸೈಬರ್‌ ತಂತ್ರಜ್ಞಾನ, ಡಿಜಿಟಲ್‌ ತನಿಖೆ, ಸಿಸಿಟಿವಿ, ಬಾಡಿ ಕ್ಯಾಮೆರಾ ಸೇರಿದಂತೆ ಹಲವು ತಂತ್ರಜ್ಞಾನಗಳು ಪ್ರವೇಶಿಸುತ್ತಿವೆ. ಆದರೆ ಹೈಟೆಕ್‌ ಆಗುತ್ತಿರುವ ಪೊಲೀಸ್‌ ವ್ಯವಸ್ಥೆ ಜನರ ಬದುಕಿಗೆ ಎಷ್ಟು ಹತ್ತಿರವಾಗುತ್ತಿದೆ?...

ಐದು ಭಾಷೆ, ಆರು ದಶಕ, ಅನಂತ ಪ್ರಯೋಗ: ಭಾರತೀಯ...

ಬದುಕಿನ ಕೊನೆಯ ಉಸಿರಿನವರೆಗೂ ಕೇವಲ ಸಿನಿಮಾವನ್ನೇ ಶ್ವಾಸವಾಗಿಸಿಕೊಂಡಿದ್ದ, 95ನೇ ವಯಸ್ಸಿನಲ್ಲೂ ಹೊಸ ಕಥೆಯ ಕನಸು ಕಾಣುತ್ತಿದ್ದ ಭಾರತೀಯ ಚಿತ್ರರಂಗದ ಅಪ್ರತಿಮ ದಾರ್ಶನಿಕ ಸಿಂಗೀತಂ ಶ್ರೀನಿವಾಸರಾವ್ ನಮ್ಮೊಂದಿಗಿಲ್ಲ. ಆರು ದಶಕಗಳ ಕಾಲ ತಮ್ಮ ಅನಂತ...

ಇಲ್ಲಿರುವವರೆಲ್ಲಾ 1980ನೇ ಇಸವಿಯಲ್ಲಿ ಈ ಸ್ಥಳ ಹಂಚಿಕೆಯಾದಾಗಿನಿಂದ ಹಿಡಿದು ಇಲ್ಲಿಯವರೆಗೂ ಎಲ್ಲರೂ ಕ್ರಯಪತ್ರ ಮಾಡಿಸಿಕೊಂಡು ಮೂಲ ಮಾಲೀಕರೇ ಆಗಿರುತ್ತಾರೆ. ಪ್ರತಿವರ್ಷ ಕಂದಾಯವನ್ನೂ ಕಟ್ಟಿದ್ದೇವೆ. ಹೀಗಾಗಿ, ಇಲ್ಲಿ ಬಾಡಿಗೆದಾರರು ಎಂದು ಬಳಸಿರುವುದು ತಪ್ಪು ಮಾಹಿತಿ. ನಾವು ಮಾಲೀಕರೇ ಹೊರತು ಬಾಡಿಗೆದಾರರಲ್ಲ. ಡೋಪ್ಲಿನ್ ಕಾಂಪ್ಲೆಕ್ಸ್ ಎಂದು ಹೆಸರು ಬಂದ ಮೇಲೆ ನಮ್ಮ ಮಾರ್ಕೆಟ್ ರೆಪ್ಯುಟೇಷನ್ ಹಾಳಾಗಿದೆ. ನಮ್ಮ ಬಳಿ ವ್ಯವಹಾರ ಮಾಡಬೇಕೆಂದವರು ಒಂದು ಬಾರಿ ಯೋಚನೆ ಮಾಡುವ ಪರಿಸ್ಥಿತಿ ಉಂಟಾಗಿದೆ ಎಂದು ಹೇಳಿದರು.

ಡೋಪ್ಲಿನ್ ಕಾಂಪ್ಲೆಕ್ಸ್‌ನಲ್ಲಿರುವ 51 ಅಂಗಡಿಗಳಲ್ಲಿ ಶೇ.70ರಷ್ಟು ವರ್ತಕರು ಅಂದಿನ ಮುಡಾಗೆ ಹಣ ಪಾವತಿಸಿ ನೋಂದಣಿ ಮಾಡಿಸಿಕೊಂಡು ಟೈಟಲ್ ಡೀಡ್ ಕೂಡ ಪಡೆದಿದ್ದೇವೆ. ಹೈಕೋರ್ಟ್ ನೀಡಿರುವ ತೀರ್ಪಿನ ಪ್ರತಿಯನ್ನು ನಮ್ಮ ಕಾನೂನು ತಜ್ಞರಿಗೆ ತೋರಿಸಿ ಪರಿಶೀಲನೆ ನಡೆಸಿದ್ದೇವೆ. ಉಚ್ಚ ನ್ಯಾಯಾಲಯದ ತೀರ್ಪಿಗೂ ನಿಮಗೂ ಯಾವುದೇ ಸಂಬಂಧವಿಲ್ಲ ನೀವು ನಿಶ್ಚಿಂತೆಯಿಂದ ಇರಿ ಎಂದು ಸಲಹೆ ನೀಡಿದ್ದಾರೆ ಇಲ್ಲಿ ಶಾಪಿಂಗ್ ಕಾಂಪ್ಲೇಕ್ಸ್ ಮಾಡಿದರೆ ಪಾರ್ಕಿಂಗ್ ವ್ಯವಸ್ಥೆ ಮಾಡಲು ಆಗುತ್ತದೆಯೇ? ಎಂದು ಪ್ರಶ್ನಿಸಿದ ಅವರು, ಇಲ್ಲಿ ನಾವು ಮೂಲ ಮಾಲೀಕರು. ನಮಗೆ ಇಲ್ಲಿ ಎಲ್ಲಾ ಹಕ್ಕುಗಳಿವೆ. ಹಾಗಾಗಿ, ಇಲ್ಲಿ ಕಾಂಪ್ಲೆಕ್ಸ್ ಹೇಗೆ ಮಾಡುತ್ತಾರೆ ಎಂದು ಮರು ಪ್ರಶ್ನಿಸಿದರು.

ಡೋಪ್ಲಿನ್ ಕಾಂಪ್ಲೆಕ್ಸ್ ಬಾಡಿಗೆದಾರರನ್ನು ಮಾರ್ಚ್ ಮೊದಲ ವಾರದಲ್ಲಿ ತೆರವು ಮಾಡಿಸುತ್ತೇವೆ ಎಂದು ಎಂಡಿಎ ಆಯುಕ್ತ ಕೆ.ಆರ್. ರಕ್ಷಿತ್ ಮಾಧ್ಯಮಗಳಿಗೆ ನೀಡಿರುವ ಹೇಳಿಕೆಯಿಂದ ಸಹಜವಾಗಿಯೇ ನಮ್ಮ ವರ್ತಕರು ಈ ಮೊದಲು ಆತಂಕಗೊಂಡಿದ್ದರು. ಅಲ್ಲದೆ, ಅಂಗಡಿ ಮಾಲೀಕರಾಗಿರುವ ನಮ್ಮನ್ನು ಹೇಗೆ ತೆರವುಗೊಳಿಸುತ್ತಾರೆ ಎಂಬ ಗೊಂದಲ ಕೂಡ ಕಾಡಿತು. ಈ ವಿಚಾರದ ಖಚಿತತೆ ಪಡೆಯಲು ನಿನ್ನೆ ನಮ ಕೆಲವು ವರ್ತಕರು ಎಂಡಿಎ ಕಚೇರಿಗೆ ಹೋದಾಗ ಅಲ್ಲಿನ ಅಧಿಕಾರಿಗಳು ಯಾವುದೇ ಸ್ಪಷ್ಟನೆ ನೀಡಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಆದರೆ, ಈಗ ನಮ್ಮ ಕಾನೂನು ತಜ್ಞರು ನೀಡಿರುವ ಸಲಹೆಯಿಂದ ನಾವು ನಿರಾತಂಕವಾಗಿದ್ದೇವೆ. ಎಂಡಿಎ ನೀಡಿರುವ ಗಡುವು ನಮಗೆ ಸಂಬಂಧಪಟ್ಟಿದ್ದಲ್ಲ ಎಂಬ ತೀರ್ಮಾನಕ್ಕೆ ಬಂದಿದ್ದು, ನಾವೆಲ್ಲಾ ಎಂದಿನಂತೆ ವ್ಯಾಪಾರದಲ್ಲಿ ತೊಡಗಿದ್ದೇವೆ ಎಂದು ತಿಳಿಸಿದರು.

ಅಸೋಸಿಯೇಷನ್‌ನ ಸುದೀಪ್ ಮಾತನಾಡಿ, ಅರ್ಜಿದಾರರಾದ ವಿವೇಕಾನಂದರವರಿಗೂ ಇದಕ್ಕೂ ಯಾವುದೇ ಸಂಬಂಧವಿಲ್ಲ. ಡ್ಯೂಪ್ಲೀನ್ ಕಾಂಪ್ಲೇಕ್ಸ್‌ನಲ್ಲಿ ಇರುವವರಲ್ಲಿ ಶೇ.75ರಷ್ಟು ಮೂಲ ಮಾಲೀಕರು. ಇಲ್ಲಿಯವರನ್ನು ಬಾಡಿಗೆದಾರರು ಎಂದು ಬಿಂಬಿಸುತ್ತಿದ್ದಾರೆ. ದಾಖಲೆಗಳ ಪ್ರಕಾರ ಒಂದು ಭಾಗಕ್ಕೆ ಭಕ್ಷಿ ಬಸಪ್ಪಾಜಿ ಅರಸ್ ಅನ್ನುವವರಿಗೆ ಬಾಡಿಗೆ ಕಟ್ಟುತ್ತಿದ್ದೇವು, ಇನ್ನೊಂದು ಭಾಗ ಮನ್ನಾರ್‍ಸ್ ಎಂಪೋರಿಯಂ ಅವರದ್ದು. ಮತ್ತೊಂದು ಭಾಗ ಭಾವಸಾರ್ ಸೈಕಲ್ ಅವರದ್ದು. ಸಿಐಟಿಬಿ ಅವರು ಇವರಿಂದ ಖರೀದಿ ಮಾಡಿ ಹಂಚಿಕೆ ಮಾಡುತ್ತೇವೆ ಎಂದಿದ್ದರು ಹಾಗೂ ಮಹಾರಾಜರ ಆಜ್ಞೆ ಮೇರೆಗೆ ತುಂಬಾ ಹಳಯವರಿಗೆ ಜಾಗ ನೀಡಲಾಯಿತು ಎಂದರು.

ಈ ಸುದ್ದಿ ಓದಿದ್ದೀರಾ? ಮೈಸೂರು | ಪತ್ರಿಕೋದ್ಯಮ ಸಮಾಜದ ಆಧಾರ ಸ್ತಂಭ

ಪತ್ರಿಕಾಗೋಷ್ಠಿಯಲ್ಲಿ ಉಪಾಧ್ಯಕ್ಷ ಜಗದೀಶ್, ಖಜಾಂಚಿ ಎನ್. ಹರ್ಷ, ಕಾರ್ಯದರ್ಶಿ ಶ್ರೀನಿವಾಸನ್ ಇದ್ದರು.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ವಿಜಯಪುರ | ಉದ್ಯೋಗ ಖಾತ್ರಿ ಪೂರ್ಣ ಕೂಲಿ ಪಾವತಿಗೆ ಆಗ್ರಹಿಸಿ ಅಧಿಕಾರಿಗಳಿಗೆ ಮನವಿ

ಉದ್ಯೋಗ ಖಾತ್ರಿ ಯೋಜನೆಯಡಿ ಕೆಲಸ ಮಾಡಿರುವ ಕೂಲಿಕಾರರಿಗೆ ಅವರ ಶ್ರಮಕ್ಕೆ ತಕ್ಕಂತೆ...

ಕೊಡಗು | ಫಾರಂ-7 ದುರುಪಯೋಗ: ಬಿಜೆಪಿ ಬೂತ್ ಅಧ್ಯಕ್ಷ ಸೇರಿ ಐವರ ವಿರುದ್ಧ ಎಫ್‌ಐಆರ್!

ಕೊಡಗು ಜಿಲ್ಲೆಯ ಬ್ಯಾಡಗೊಟ್ಟ ಗ್ರಾಮದಲ್ಲಿ ಮತದಾರರ ಹೆಸರುಗಳನ್ನು ಅಳಿಸಲು ಫಾರಂ-7 ಅರ್ಜಿಗಳನ್ನು...

ಬಾಗೇಪಲ್ಲಿ | ಗಿಡ ನೆಟ್ಟು ಪ್ರಕೃತಿಯ ಋಣ ತೀರಿಸಿ:- ಚೇತನ್ ನಾಯ್ಡು ಫೌಂಡೇಷನ್ ಅಧ್ಯಕ್ಷ ಬಿ.ಆರ್.ನರಸಿಂಹ ನಾಯ್ಡು

ಗಿಡ ನೆಟ್ಟು ಪ್ರಕೃತಿಯ ಋಣ ತೀರಿಸಿ ಪ್ರಕೃತಿಯಿಂದ ಹಲವು ರೀತಿಯ ಪ್ರಯೋಜನಗಳನ್ನು...