ಮೈಸೂರಿನ ಕೂರ್ಗಳ್ಳಿ ಗ್ರಾಮದ ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ಇನ್ಫೋಸಿಸ್ ನೌಕರರ ತಂಡದ ಒಂದು ಭಾಗವಾದ Soften Team ವತಿಯಿಂದ ವಿದ್ಯಾರ್ಥಿಗಳಿಗೆ ಉಚಿತವಾಗಿ ನೋಟ್‌ಬುಕ್‌ಗಳನ್ನು ವಿತರಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ವಿಶ್ವನಾಥ್ ಹಾಗೂ ತಂಡದವರು, ಮಕ್ಕಳಿಗೆ ನೀಡುತ್ತಿರುವ ನೋಟ್‌ಬುಕ್‌ಗಳ ಹಿಂದೆ ನಮ್ಮ ಪರಿಶ್ರಮದ ಬೆವರಿನ ಹನಿಗಳಿವೆ. ಆದ್ದರಿಂದ ವಿದ್ಯಾರ್ಥಿಗಳು ಪುಸ್ತಕಗಳನ್ನು ವ್ಯರ್ಥ ಮಾಡದೆ, ಅವುಗಳನ್ನು ಸದುಪಯೋಗಪಡಿಸಿಕೊಂಡು ಉತ್ತಮವಾಗಿ ವಿದ್ಯಾಭ್ಯಾಸ ಮಾಡಬೇಕು ಎಂದು ಹಿತನುಡಿದರು.
ಶಾಲೆಯ ಎಸ್‌ಡಿಎಂಸಿ ಅಧ್ಯಕ್ಷ ಎನ್. ರೇವಣ್ಣ ಮಾತನಾಡಿ, ವಿದ್ಯಾರ್ಥಿಗಳಿಗೆ ನೋಟ್‌ಬುಕ್‌ಗಳನ್ನು ವಿತರಿಸಿದ ಇನ್ಫೋಸಿಸ್ ತಂಡಕ್ಕೆ ಗ್ರಾಮ ಹಾಗೂ ಶಾಲೆಯ ಪರವಾಗಿ ಧನ್ಯವಾದ ಸಲ್ಲಿಸಿದರು. ವಿದ್ಯಾರ್ಥಿಗಳು ಪುಸ್ತಕಗಳ ಸದುಪಯೋಗ ಪಡೆದುಕೊಂಡು ಉತ್ತಮವಾಗಿ ಕಲಿತು ಉನ್ನತ ಸ್ಥಾನಕ್ಕೇರಬೇಕು. ಭವಿಷ್ಯದಲ್ಲಿ ತಾವು ಕೂಡ ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರಗಳಿಗೆ ಹೆಚ್ಚಿನ ಆದ್ಯತೆ ನೀಡಿ ಸಮಾಜ ಸೇವೆಯಲ್ಲಿ ತೊಡಗಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಈ ವಿಶೇಷ ಸುದ್ದಿ ಓದಿದ್ದೀರಾ?SIR: 1.08 ಕೋಟಿ ಮತದಾರರಿಗೆ QR ಕೋಡ್ ನೋಟಿಸ್; ಹೆಸರು ಉಳಿಸಿಕೊಳ್ಳಲು ದಾಖಲೆ ಪರಿಶೀಲನೆ ನಿರ್ಣಾಯಕ
This video cannot be played in your browser. Open the video directly
ಕಾರ್ಯಕ್ರಮದಲ್ಲಿ ಇನ್ಫೋಸಿಸ್ ತಂಡದ ವಿಶ್ವನಾಥ್, ಮುರಳಿ, ಚೆನ್ನವೀರಕೃಷ್ಣಯ್ಯ, ಪುಷ್ಪಲತಾ, ಕಾವ್ಯ, ಕಾವ್ಯಶ್ರೀ, ಗುರುಪ್ರಸಾದ್ ಪೈ, ಕಾವ್ಯಶ್ರೀ ಎಚ್.ಸಿ., ಪುರುಷೋತ್ತಮ್, ಶಾಲೆಯ ಮುಖ್ಯ ಶಿಕ್ಷಕ ನಾಗರಾಜ್, ಶಿಕ್ಷಕಿ ಇಂದಿರಾ, ಸೇರಿದಂತೆ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಇದ್ದರು.
ಈ ವಿಶೇಷ ಸುದ್ದಿ ಓದಿದ್ದೀರಾ?SIR: ಆಗಸ್ಟ್ 24ರ ಕರಡು ಪಟ್ಟಿಯ ಬಳಿಕವೇ ನಿಜವಾದ ಪರೀಕ್ಷೆ- ‘ಡಿಜಿಟಲ್ ಪ್ರಮಾಣಪತ್ರ’ ಯೋಜನೆ ಸಿದ್ಧವೇ?





