ನಂಜನಗೂಡಿನಲ್ಲಿ ‘ಈಶ ಗ್ರಾಮೋತ್ಸವ-2026’ರ ಸಂಭ್ರಮ

Date:

ನಂಜನಗೂಡಿನ ಜೆಎಸ್‌ಎಸ್ ಆರ್ಟ್ಸ್, ಕಾಮರ್ಸ್ ಮತ್ತು ಸೈನ್ಸ್ ಕಾಲೇಜು ಆವರಣದಲ್ಲಿ ನಡೆದ ಈಶ ಗ್ರಾಮೋತ್ಸವ-2026ರ ಕ್ಲಸ್ಟರ್ ಪಂದ್ಯಾವಳಿಯು ಗ್ರಾಮೀಣ ಕ್ರೀಡಾ ಸಂಭ್ರಮಕ್ಕೆ ಸಾಕ್ಷಿಯಾಯಿತು. ಈಶ ಔಟ್‌ರೀಚ್ ಆಯೋಜಿಸಿದ್ದ ಈ ಕ್ರೀಡಾ ಉತ್ಸವದಲ್ಲಿ ನಂಜನಗೂಡು ಭಾಗದ ವಿವಿಧ ಗ್ರಾಮಗಳ ನೂರಾರು ಆಟಗಾರರು ಹಾಗೂ ಗ್ರಾಮಸ್ಥರು ಭಾಗವಹಿಸಿದರು.

- Advertisement -

ಗ್ರಾಮೀಣ ಕ್ರೀಡಾ ಹಬ್ಬವೆಂದು ಗುರುತಿಸಿಕೊಂಡಿರುವ ಈಶ ಗ್ರಾಮೋತ್ಸವ ಕ್ರೀಡೆಯ ಮೂಲಕ ಗ್ರಾಮೀಣ ಸಮಾಜವನ್ನು ಒಗ್ಗೂಡಿಸುವ, ಯುವಜನರಲ್ಲಿ ತಂಡದ ಮನೋಭಾವ, ಆತ್ಮವಿಶ್ವಾಸ ಮತ್ತು ಸಮುದಾಯ ಪ್ರಜ್ಞೆಯನ್ನು ಬೆಳೆಸುವ ಉದ್ದೇಶ ಹೊಂದಿದೆ. ಈ ಕ್ಲಸ್ಟರ್ ಪಂದ್ಯಾವಳಿಯಲ್ಲಿ ಸುಮಾರು 290 ಪುರುಷರ ವಾಲಿಬಾಲ್ ಹಾಗೂ ಮಹಿಳೆಯರ ಥ್ರೋಬಾಲ್ ಆಟಗಾರರು ಸ್ಪರ್ಧಿಸಿದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಜಾಗತಿಕ ಪೈಪೋಟಿಗೆ ಕನ್ನಡಿಗರನ್ನು ಸಜ್ಜುಗೊಳಿಸುವ ಬೃಹತ್ ವೇದಿಕೆ ‘ಬೆಂಗಳೂರು...

ರಾಜ್ಯದ ಯುವಜನತೆಯನ್ನು ಭವಿಷ್ಯದ ಜಾಗತಿಕ ಉದ್ಯೋಗ ಮಾರುಕಟ್ಟೆಯ ತೀವ್ರ ಪೈಪೋಟಿ ಮತ್ತು ಸವಾಲುಗಳಿಗೆ ಸುಸಜ್ಜಿತವಾಗಿ ಸಿದ್ಧಪಡಿಸುವ ಮಹತ್ವಾಕಾಂಕ್ಷೆಯೊಂದಿಗೆ ರಾಜ್ಯ ಸರ್ಕಾರವು ಬೃಹತ್ ಹೆಜ್ಜೆಯನ್ನಿಟ್ಟಿದೆ. ಇದರ ಅಂಗವಾಗಿ ಮುಂಬರುವ ನವೆಂಬರ್ 3, 4 ಹಾಗೂ...

ಇಸ್ರೇಲ್‌ ಚುನಾವಣೆ | ಅರಬ್ಬರ ಭರ್ಜರಿ ವೋಟಿಂಗ್, 19...

ಇಸ್ರೇಲ್‌ ಪ್ರಧಾನಿ ನೆತನ್ಯಾಹುವಿನ ದ್ವೇಷದ ರಾಜಕೀಯಕ್ಕೆ ಬೇಸತ್ತ ಇಸ್ರೇಲ್‌ ಅರಬ್ಬರು ಈ ಬಾರಿಯ ಸಾರ್ವತ್ರಿಕ ಚುನಾವಣೆಯಲ್ಲಿ ದಾಖಲೆಮಟ್ಟದಲ್ಲಿ ಮತಗಟ್ಟೆಗೆ ಧಾವಿಸಿ ಭರ್ಜರಿ ಓಟಿಂಗ್‌ ಮಾಡಿದ್ದಾರೆ. 19 ಸೀಟುಗಳನ್ನು ಗೆಲ್ಲುವ ಮೂಲಕ ನೆತನ್ಯಾಹು ಭವಿಷ್ಯವನ್ನು...

ಅಭಿವೃದ್ಧಿಯಿಂದ ದೂರ ಉಳಿದ ಜೀವನಮರಡಗಿ: ಬಸ್ ಇಲ್ಲ, ನೀರಿಲ್ಲ,...

ಸ್ವಾತಂತ್ರ್ಯಾನಂತರದ ಅಭಿವೃದ್ಧಿಯ ಹಾದಿಯಲ್ಲಿ ಗ್ರಾಮೀಣ ಪ್ರದೇಶಗಳಿಗೆ ಮೂಲಭೂತ ಸೌಲಭ್ಯಗಳನ್ನು ತಲುಪಿಸುವ ಪ್ರಯತ್ನಗಳು ನಡೆಯುತ್ತಿದ್ದರೂ, ಕಲಬುರಗಿ ಜಿಲ್ಲೆಯ ಕಾಳಗಿ ತಾಲೂಕಿನ ಜೀವನಮರಡಗಿ ಗ್ರಾಮದ ಜನರ ಬದುಕಿನಲ್ಲಿ ಮಾತ್ರ ಇಂದಿಗೂ ಹಲವು ಸಮಸ್ಯೆಗಳು ಮುಂದುವರಿದಿವೆ. ಗ್ರಾಮಕ್ಕೆ...

ಪುರುಷರ ವಾಲಿಬಾಲ್ ವಿಭಾಗದಲ್ಲಿ ಚಾಮುಂಡಿ ಬಾಯ್ಸ್ (ಹೊಸ ಹುಂಡಿ) ತಂಡ ಪ್ರಥಮ ಸ್ಥಾನ ಪಡೆದು ಚಾಂಪಿಯನ್ ಆಗಿ ಹೊರಹೊಮ್ಮಿತು. ಅಪ್ಪು ಬಾಯ್ಸ್ (ಕಳಲೆ) ತಂಡ ದ್ವಿತೀಯ, ಮಿಥಿಲಾ ಮಿರ್ಲೆ (ಕೆ.ಆರ್. ನಗರ) ತಂಡ ತೃತೀಯ ಹಾಗೂ ವೋಲಿ ಸ್ಪೈಕರ್ಸ್ (ದೇವರಾಯಶೆಟ್ಟಿಪುರ) ತಂಡ ನಾಲ್ಕನೇ ಸ್ಥಾನ ಗಳಿಸಿತು.

ಮಹಿಳೆಯರ ಥ್ರೋಬಾಲ್ ವಿಭಾಗದಲ್ಲಿ ಚಾಮುಂಡಿ ಗರ್ಲ್ಸ್ (ಹೆಡತಲೆ) ತಂಡ ಪ್ರಶಸ್ತಿ ತನ್ನದಾಗಿಸಿಕೊಂಡರೆ, ಚಾಮುಂಡೇಶ್ವರಿ (ಕಳಲೆ) ತಂಡ ದ್ವಿತೀಯ, ಟಿಎನ್‌ಸಿ ಗರ್ಲ್ಸ್ (ಟಿ.ಎನ್.ಪುರ) ತಂಡ ತೃತೀಯ ಹಾಗೂ ಲಕ್ಷ್ಮೀಕಾಂತ (ಕಳಲೆ) ತಂಡ ನಾಲ್ಕನೇ ಸ್ಥಾನ ಪಡೆಯಿತು. ವಿಜೇತ ತಂಡಗಳು ಮುಂದಿನ ವಿಭಾಗೀಯ ಹಂತದ ಪಂದ್ಯಾವಳಿಗೆ ಅರ್ಹತೆ ಪಡೆದಿವೆ. ಕ್ರೀಡಾಂಗಣದಲ್ಲಿ ತೋರಿದ ಕ್ರೀಡಾಸ್ಫೂರ್ತಿ, ಉತ್ಸಾಹ ಮತ್ತು ಶಿಸ್ತು ಪರಿಗಣಿಸಿ ಹೇಮಂತ್ ಗೌಡ ಹಾಗೂ ಗೀತಾ ಅವರಿಗೆ ಕ್ಲಸ್ಟರ್ ಮಟ್ಟದ ವಿಶೇಷ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಈಶ ಪ್ರತಿನಿಧಿ ಸುಜಾತಾ ಮಾತನಾಡಿ, “ಈಶ ಗ್ರಾಮೋತ್ಸವವು ಕ್ರೀಡೆಯ ಮೂಲಕ ಜನರನ್ನು ಒಂದೆಡೆ ತಂದು ಗ್ರಾಮೀಣ ಸಮಾಜದ ಬಾಂಧವ್ಯವನ್ನು ಮತ್ತಷ್ಟು ಗಟ್ಟಿಗೊಳಿಸುತ್ತಿದೆ. ಗ್ರಾಮೀಣ ಕರ್ನಾಟಕದಿಂದ ದೊರೆತಿರುವ ಅಭೂತಪೂರ್ವ ಸ್ಪಂದನೆ ನಮ್ಮ ಹಳ್ಳಿಗಳಲ್ಲಿರುವ ಪ್ರತಿಭೆ ಹಾಗೂ ಉತ್ಸಾಹವನ್ನು ಪ್ರತಿಬಿಂಬಿಸುತ್ತದೆ. ಭಾಗವಹಿಸಿದ ಎಲ್ಲ ತಂಡಗಳಿಗೂ ಅಭಿನಂದನೆಗಳು. ವಿಜೇತ ತಂಡಗಳು ವಿಭಾಗೀಯ ಹಂತದಲ್ಲೂ ಉತ್ತಮ ಸಾಧನೆ ಮಾಡಲಿ ಎಂದರು.

ಈ ವರ್ಷ ನಡೆಯುತ್ತಿರುವ ಈಶ ಗ್ರಾಮೋತ್ಸವದ 18ನೇ ಆವೃತ್ತಿ ದೇಶದ 10 ರಾಜ್ಯಗಳು ಹಾಗೂ ಪುದುಚೇರಿ ಕೇಂದ್ರಾಡಳಿತ ಪ್ರದೇಶಕ್ಕೆ ವಿಸ್ತರಿಸಿದ್ದು, 40 ಸಾವಿರಕ್ಕೂ ಹೆಚ್ಚು ಗ್ರಾಮಗಳಿಂದ 80 ಸಾವಿರಕ್ಕೂ ಅಧಿಕ ಗ್ರಾಮೀಣ ಆಟಗಾರರಿಗೆ ಸ್ಪರ್ಧಿಸುವ ಅವಕಾಶ ಕಲ್ಪಿಸಿದೆ. ಗ್ರಾಮೀಣ ಕ್ರೀಡೆಗಳ ಉತ್ತೇಜನಕ್ಕಾಗಿ ನೀಡಿದ ಕೊಡುಗೆಯನ್ನು ಗುರುತಿಸಿ ಭಾರತ ಸರ್ಕಾರದ ಯುವ ವ್ಯವಹಾರಗಳು ಮತ್ತು ಕ್ರೀಡಾ ಸಚಿವಾಲಯವು ಈಶ ಗ್ರಾಮೋತ್ಸವವನ್ನು ರಾಷ್ಟ್ರೀಯ ಕ್ರೀಡಾ ಪ್ರೋತ್ಸಾಹಕ ಸಂಸ್ಥೆ (NSPO) ಎಂದು ಗುರುತಿಸಿದೆ. ಬೇರುಮಟ್ಟದಲ್ಲಿ ಕ್ರೀಡೆಯನ್ನು ಅಭಿವೃದ್ಧಿಪಡಿಸಿದ ಅತ್ಯುತ್ತಮ ಸೇವೆಗಾಗಿ 2018ರಲ್ಲಿ ರಾಷ್ಟ್ರೀಯ ಖೇಲ್ ಪ್ರೋತ್ಸಾಹನ ಪುರಸ್ಕಾರ ನೀಡಿ ಗೌರವಿಸಲಾಗಿದೆ.

ಕರ್ನಾಟಕದಲ್ಲಿ ಕ್ಲಸ್ಟರ್ ಪಂದ್ಯಾವಳಿಗಳು 18 ಜಿಲ್ಲೆಗಳಲ್ಲಿ ಮುಂದುವರಿಯಲಿದ್ದು, ಅರ್ಹ ತಂಡಗಳು ಆಗಸ್ಟ್‌ನಲ್ಲಿ ನಡೆಯುವ ವಿಭಾಗೀಯ ಹಂತದ ಪಂದ್ಯಗಳಲ್ಲಿ ಪಾಲ್ಗೊಳ್ಳಲಿವೆ. ಅಂತಿಮ ಪಂದ್ಯಾವಳಿಗಳು ಸೆಪ್ಟೆಂಬರ್ 4ರಿಂದ 6ರವರೆಗೆ ಕೊಯಂಬತ್ತೂರಿನ ಈಶ ಯೋಗ ಕೇಂದ್ರದಲ್ಲಿ ನಡೆಯಲಿದ್ದು, ದೇಶದ ಅತ್ಯುತ್ತಮ ಗ್ರಾಮೀಣ ತಂಡಗಳು ₹1 ಕೋಟಿಗೂ ಅಧಿಕ ಬಹುಮಾನದ ಮೊತ್ತಕ್ಕಾಗಿ ಸೆಣಸಲಿವೆ ಎಂದು ಹೇಳಿದರು.

ಈ ವಿಶೇಷ ಸುದ್ದಿ ಓದಿದ್ದೀರಾ?SIR ಪ್ರಕ್ರಿಯೆಯೇ ಗೊಂದಲದ ಗೂಡು: ಮತದಾರರ ಪಟ್ಟಿಯೇ ಒಂದು, ನೆಲಮಟ್ಟದ ವಾಸ್ತವವೇ ಇನ್ನೊಂದು!

ಕ್ರೀಡೋತ್ಸವದಲ್ಲಿ ಅಂತಾರಾಷ್ಟ್ರೀಯ ಪ್ಯಾರಾ ಬ್ಯಾಡ್ಮಿಂಟನ್ ತರಬೇತುದಾರ ಆನಂದ್ ಕುಮಾರ್ ಮುಖ್ಯ ಅತಿಥಿಗಳಾಗಿದ್ದು, ಸಂಜಯ್, ವೀರೇಶ್, ಉಮಾಶಂಕರ್  ಹೊನ್ನೇಗೌಡ, ಆಶಾ ಸೇರಿದಂತೆ ಇನ್ನಿತರರು ಇದ್ದರು.

eedina
ಈ ದಿನ ಡೆಸ್ಕ್‌
Website | + posts

<p><iframe src="https://www.youtube.com/embed/8qwx4L0lKFQ?autoplay=1&mute=1&loop=1&playlist=8qwx4L0lKFQ&controls=0&modestbranding=1&showinfo=0" width="560" height="315" frameborder="0" allowfullscreen="allowfullscreen"></iframe></p>

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬಾಗೇಪಲ್ಲಿ | ಕನ್ನಡ ರಾಜ್ಯೋತ್ಸವ ಪ್ರಶಸ್ತಿಗೆ ಚಿಕ್ಕಬಳ್ಳಾಪುರ ಜಿಲ್ಲೆಯ ಕೃಷ್ಣೇಗೌಡ ಆಯ್ಕೆ

ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿರುವ ಗಣ್ಯರಿಗೆ ಕರ್ನಾಟಕ ಸರ್ಕಾರ ನೀಡುವ...

ಚಿಕ್ಕಬಳ್ಳಾಪುರ ಜಿಲ್ಲಾ ಎಸಿ ಆಗಿ ಕೆ.ಆರ್.ಶೋಭಿತಾ ನೇಮಕ: ಡಿ.ಎಚ್.ಅಶ್ವಿನ್ ವರ್ಗಾವಣೆ

ಚಿಕ್ಕಬಳ್ಳಾಪುರ : ಜಿಲ್ಲೆಯ ಉಪವಿಭಾಗದ ನೂತನ ಉಪವಿಭಾಗಾಧಿಕಾರಿಯಾಗಿ ಕೆ.ಆರ್. ಶೋಭಿತಾ ಅಧಿಕಾರ...

ಚಿಂತಾಮಣಿ | ನಳಂದ ವಿದ್ಯಾ ಮಂದಿರದಲ್ಲಿ ಪೋಕ್ಸೋ ಕಾಯ್ದೆ ಕುರಿತು ಕಾನೂನು ಅರಿವು ಕಾರ್ಯಕ್ರಮ ಯಶಸ್ವಿ

ಲೈಂಗಿಕ ದೌರ್ಜನ್ಯ ತಡೆಗಟ್ಟುವ ನಿಟ್ಟಿನಲ್ಲಿ ಪೋಕ್ಸೋ ಕಾಯ್ದೆ ಬಗ್ಗೆ ವಿದ್ಯಾರ್ಥಿಗಳಿಗೆ ಕಾನೂನು...

ಕಲಬುರಗಿ | ಸಾರ್ವಜನಿಕ ಶಿಕ್ಷಣ ಬಲವರ್ಧನೆಗೆ ಎಸ್‌ಎಫ್‌ಐ ಆಗ್ರಹ: 17ನೇ ರಾಜ್ಯ ಸಮ್ಮೇಳನದ ಬಹಿರಂಗ ಸಭೆಯಲ್ಲಿ ಸರ್ಕಾರಕ್ಕೆ ಎಚ್ಚರಿಕೆ

ಸಾರ್ವಜನಿಕ ಶಿಕ್ಷಣ ವ್ಯವಸ್ಥೆಯನ್ನು ಬಲಪಡಿಸುವುದು, ವಿದ್ಯಾರ್ಥಿ ಸಂಘಟನೆಗಳ ಚುನಾವಣೆ ನಡೆಸುವುದು, ಕೋಮು...