ಸರಗೂರು | ಟೈಲರ್ ಕುಟುಂಬಗಳಿಗೆ ಕೆಟಿಎನ್ಎಸ್ ವತಿಯಿಂದ ತಲಾ ₹50 ಸಾವಿರ ಧನಸಹಾಯ

Date:

ಕರ್ನಾಟಕ ಟೈಲರ್ಸ್ ಮತ್ತು ನೀಟಿಂಗ್ ಸೊಸೈಟಿ (ಕೆಟಿಎನ್ಎಸ್) ವತಿಯಿಂದ ನಿಧನರಾದ ಇಬ್ಬರು ಟೈಲರ್ ವೃತ್ತಿಬಾಂಧವರ ಕುಟುಂಬಗಳಿಗೆ ತಲಾ ₹50,000 ಧನಸಹಾಯವನ್ನು ವಿತರಿಸಲಾಯಿತು.

- Advertisement -

ಸರಗೂರು ತಾಲೂಕು ಸಮಿತಿಯ ಸದಸ್ಯ ಟೈಲರ್ ಸೋಮಣ್ಣ ಚಾರ್ ಅವರು ಜುಲೈ 18ರಂದು ಹಾಗೂ ಮೈಸೂರು ತಾಲೂಕು ಬೋಗಾದಿ ವಲಯ ಸಮಿತಿಯ ಸದಸ್ಯ ಟೈಲರ್ ಮಂಜುನಾಥ್ ಅವರು ಜುಲೈ 23ರಂದು ನಿಧನರಾಗಿದ್ದರು. ಅವರ ಕುಟುಂಬಗಳಿಗೆ ಜುಲೈ 28ರಂದು ತಲಾ ₹50,000 ನೆರವು ನೀಡಿ ಸಾಂತ್ವನ ಹೇಳಲಾಯಿತು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಇಸ್ರೇಲ್‌ ಚುನಾವಣೆ | ಅರಬ್ಬರ ಭರ್ಜರಿ ವೋಟಿಂಗ್, 19...

ಇಸ್ರೇಲ್‌ ಪ್ರಧಾನಿ ನೆತನ್ಯಾಹುವಿನ ದ್ವೇಷದ ರಾಜಕೀಯಕ್ಕೆ ಬೇಸತ್ತ ಇಸ್ರೇಲ್‌ ಅರಬ್ಬರು ಈ ಬಾರಿಯ ಸಾರ್ವತ್ರಿಕ ಚುನಾವಣೆಯಲ್ಲಿ ದಾಖಲೆಮಟ್ಟದಲ್ಲಿ ಮತಗಟ್ಟೆಗೆ ಧಾವಿಸಿ ಭರ್ಜರಿ ಓಟಿಂಗ್‌ ಮಾಡಿದ್ದಾರೆ. 19 ಸೀಟುಗಳನ್ನು ಗೆಲ್ಲುವ ಮೂಲಕ ನೆತನ್ಯಾಹು ಭವಿಷ್ಯವನ್ನು...

ಅಭಿವೃದ್ಧಿಯಿಂದ ದೂರ ಉಳಿದ ಜೀವನಮರಡಗಿ: ಬಸ್ ಇಲ್ಲ, ನೀರಿಲ್ಲ,...

ಸ್ವಾತಂತ್ರ್ಯಾನಂತರದ ಅಭಿವೃದ್ಧಿಯ ಹಾದಿಯಲ್ಲಿ ಗ್ರಾಮೀಣ ಪ್ರದೇಶಗಳಿಗೆ ಮೂಲಭೂತ ಸೌಲಭ್ಯಗಳನ್ನು ತಲುಪಿಸುವ ಪ್ರಯತ್ನಗಳು ನಡೆಯುತ್ತಿದ್ದರೂ, ಕಲಬುರಗಿ ಜಿಲ್ಲೆಯ ಕಾಳಗಿ ತಾಲೂಕಿನ ಜೀವನಮರಡಗಿ ಗ್ರಾಮದ ಜನರ ಬದುಕಿನಲ್ಲಿ ಮಾತ್ರ ಇಂದಿಗೂ ಹಲವು ಸಮಸ್ಯೆಗಳು ಮುಂದುವರಿದಿವೆ. ಗ್ರಾಮಕ್ಕೆ...

‘Epstein’ ವಿವಾದದ ನಡುವೆಯೂ ಹರದೀಪ್ ಪುರಿಗೆ ಮಣೆ: ಸಿಖ್...

'Epstein files' ವಿವಾದವು ಹರದೀಪ್ ಸಿಂಗ್ ಪುರಿ ಅವರ ರಾಜಕೀಯ ಬದುಕಿನಲ್ಲಿ ಸಣ್ಣದೊಂದು ಬಿರುಗಾಳಿ ಎಬ್ಬಿಸಿದ್ದು ಸುಳ್ಳಲ್ಲ. ವಿರೋಧ ಪಕ್ಷಗಳ ಟೀಕೆಗಳು ಮತ್ತು ನೈತಿಕ ಹೊಣೆಗಾರಿಕೆಯ ಪ್ರಶ್ನೆಗಳು ಅವರನ್ನು ಸಂಪುಟದಿಂದ ಹೊರಗಟ್ಟುವ ಹಂತಕ್ಕೆ...

ಈ ಸಂದರ್ಭದಲ್ಲಿ ಮಾತನಾಡಿದ ಕೆಟಿಎನ್ಎಸ್ ರಾಜ್ಯಾಧ್ಯಕ್ಷ ಚನ್ನನಾಯಕ, ಕಳೆದ ನಾಲ್ಕು ವರ್ಷಗಳಿಂದ ಸಮಿತಿಯು ಸಮಾಜಮುಖಿ ಸೇವೆಗಳ ಜೊತೆಗೆ ಸದಸ್ಯರ ಸಂಕಷ್ಟದ ಸಂದರ್ಭಗಳಲ್ಲಿ ನೆರವಾಗುವ ಕಾರ್ಯವನ್ನು ನಿರಂತರವಾಗಿ ನಡೆಸಿಕೊಂಡು ಬರುತ್ತಿದೆ ಎಂದು ತಿಳಿಸಿದರು.

ಟೈಲರ್ ವೃತ್ತಿಬಾಂಧವರು ನಿಧನರಾದ ಸಂದರ್ಭದಲ್ಲಿ ಅವರ ಕುಟುಂಬಗಳಿಗೆ ಆರ್ಥಿಕ ನೆರವು ನೀಡುವ ಪರಂಪರೆಯನ್ನು ಸಮಿತಿ ಬೆಳೆಸಿಕೊಂಡಿದ್ದು, ಇದುವರೆಗೆ 27 ಕುಟುಂಬಗಳಿಗೆ ಧನಸಹಾಯ ನೀಡಲಾಗಿದೆ ಎಂದು ಹೇಳಿದರು. ಮುಂದಿನ ದಿನಗಳಲ್ಲಿ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿರುವ ಟೈಲರ್ ವೃತ್ತಿಬಾಂಧವರನ್ನು ಸಮಿತಿಯ ಸದಸ್ಯರನ್ನಾಗಿ ಸೇರ್ಪಡೆಗೊಳಿಸಿ, ಇನ್ನಷ್ಟು ಕುಟುಂಬಗಳಿಗೆ ನೆರವಾಗುವ ಉದ್ದೇಶ ಹೊಂದಿದ್ದೇವೆ ಎಂದು ತಿಳಿಸಿದರು.

ಇದುವರೆಗೆ ಸಮಿತಿಯ ಸೇವಾ ಕಾರ್ಯಗಳಿಗೆ ಕೈಜೋಡಿಸಿದ ಎಲ್ಲಾ ಸದಸ್ಯರು, ಪದಾಧಿಕಾರಿಗಳು ಹಾಗೂ ದಾನಿಗಳ ಸಹಕಾರವನ್ನು ಸ್ಮರಿಸಿದ ಅವರು, ಸಮಿತಿಯ ಪರವಾಗಿ ಹಾಗೂ ವೈಯಕ್ತಿಕವಾಗಿ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು.

ಈ ವಿಶೇಷ ಸುದ್ದಿ ಓದಿದ್ದೀರಾ?ಮತದಾರರ ಪಟ್ಟಿ ಪರಿಷ್ಕರಣೆನಾ, ದಾಖಲೆಗಳ ಪರೀಕ್ಷೆಯಾ? -SIR ಮೇಲೇಳಿಸಿರುವ ಪ್ರಶ್ನೆಗಳು

ಕಾರ್ಯಕ್ರಮದಲ್ಲಿ ರಾಜ್ಯ ಉಪಾಧ್ಯಕ್ಷ ಕುಮಾರ್, ಪ್ರಧಾನ ಕಾರ್ಯದರ್ಶಿ ಗೋವಿಂದ ನಾಯಕ್, ಸಹ ಕಾರ್ಯದರ್ಶಿ ಪ್ರಸನ್ನ ಕುಮಾರ್, ಖಜಾಂಚಿ ಕಮಲ, ಪಲ್ಲವಿ, ಸಂಘಟನಾ ಕಾರ್ಯದರ್ಶಿ ರವಿ ಗೌಡ, ವೆಂಕಟೇಶ್, ಜಿಲ್ಲಾಧ್ಯಕ್ಷ ಪ್ರಕಾಶ್, ಸರಗೂರು ತಾಲೂಕು ಅಧ್ಯಕ್ಷ ಜನಾರ್ಧನ್, ಸೋಮಶೇಖರ್, ಬಾಬು ಎಸ್.ಪಿ., ಬಸವರಾಜು, ರಂಗಸ್ವಾಮಿ, ಪುಟ್ಟಮ್ಮದು, ಮಂಜು, ಈರಾಜನಾಯಕ, ರಮೇಶ್, ಸುರೇಶ್, ನಾಗರಾಜು ಸೇರಿದಂತೆ ಸಮಿತಿಯ ಹಲವಾರು ಪದಾಧಿಕಾರಿಗಳು ಹಾಗೂ ಸದಸ್ಯರು ಇದ್ದರು.

eedina
ಈ ದಿನ ಡೆಸ್ಕ್‌
Website | + posts

<p><iframe src="https://www.youtube.com/embed/8qwx4L0lKFQ?autoplay=1&mute=1&loop=1&playlist=8qwx4L0lKFQ&controls=0&modestbranding=1&showinfo=0" width="560" height="315" frameborder="0" allowfullscreen="allowfullscreen"></iframe></p>

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ದಾಂಡೇಲಿ | ಆಶ್ರಯ ನಿವೇಶನ ಅಕ್ರಮವಾಗಿ ನೋಂದಣಿ ಆರೋಪ: ಕ್ರಮಕ್ಕೆ ಆಗ್ರಹಿಸಿ ದೂರು

ದಾಂಡೇಲಿ: ಜೋಯಿಡಾ ತಾಲೂಕಿನ ವೆಂಕಟೇಶ @ ಸ್ವಾಮಿ ಸುಬ್ಬಯ್ಯ ಭೂಪಾನಿ ಅವರಿಗೆ...

ಮುಂಡಗೋಡ | ಜುವೆಲರ್ಸ್ ಅಂಗಡಿಯಲ್ಲಿ 1.30 ಲಕ್ಷ ರೂ. ಮೌಲ್ಯದ ಬೆಳ್ಳಿ ಕಾಲು ಚೈನ್ ಕಳವು

ಮುಂಡಗೋಡ: ಪಟ್ಟಣದ ಶಿರಸಿ ರಸ್ತೆಯಲ್ಲಿರುವ ಶ್ರೀ ರಾಜಲಕ್ಷ್ಮೀ ಜುವೆಲರ್ಸ್ ಅಂಗಡಿಯಲ್ಲಿ ಸುಮಾರು...

ವಿಜಯಪುರ | ಡಾ. ಅಣ್ಣಾಭಾವು ಸಾಠೆ ಅವರಿಗೆ ‘ಭಾರತ ರತ್ನ’ ನೀಡಿ; ರಾಜ್ಯದಲ್ಲಿ ಜಯಂತಿ ಆಚರಿಸಿ

ಲೋಕಶಾಹಿರ ಡಾ. ಅಣ್ಣಾಭಾವು ಸಾಠೆ ಅವರಿಗೆ ದೇಶದ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ...

ರಾಯಚೂರು | ರಕ್ತನಿಧಿ ಕೇಂದ್ರ ಸ್ಥಾಪನೆ ಜೀವ ರಕ್ಷಣೆಯ ಮಹತ್ವದ ಕಾರ್ಯ: ಸಂಸದ ಜಿ.ಕುಮಾರ ನಾಯಕ

ರಕ್ತ ನಿಧಿ ಕೇಂದ್ರ ಬಹಳ ಅವಶ್ಯಕವಾಗಿದ್ದು ಇಂತಹ ಮಹತ್ವದ ಕಾರ್ಯಗಳು ಜನರ...