ಹಾಸನ ಚಲೋ | ಸರ್ಕಾರಗಳೇ ಜವಾಬ್ದಾರಿಯಿಂದ ವರ್ತಿಸಿ: ಸಾಹಿತಿ ರೂಪ ಹಾಸನ

Date:

“ಇಲ್ಲಿ ನಡೆದಿರುವುದು ಕೇವಲ ಒಂದು ಲೈಂಗಿಕ ಹಗರಣವಲ್ಲ ಇದು ವಿಕೃತ ಲೈಂಗಿಕ ಹತ್ಯಾಕಾಂಡವಾಗಿದ್ದು ಸರ್ಕಾರಗಳೇ ಜವಾಬ್ದಾರಿಯಿಂದ ವರ್ತಿಸಿ” ಎಂದು ಸಾಹಿತಿ, ಸಾಮಾಜಿಕ ಕಾರ್ಯಕರ್ತೆ ರೂಪ ಹಾಸನ ಹೇಳಿದರು.

ನೂರಾರು ಮಹಿಳೆಯರ ಅತ್ಯಾಚಾರ ಆರೋಪಿ, ದೇಶದಿಂದ ಪರಾರಿಯಾಗಿರುವ ಸಂಸದ ಪ್ರಜ್ವಲ್ ರೇವಣ್ಣನ ಬಂಧನ ಮತ್ತು ಸಂತ್ರಸ್ತೆಯರ ರಕ್ಷಣೆಗೆ ಒತ್ತಾಯಿಸಿ ಹಾಸನದಲ್ಲಿ ‘ಹೋರಾಟದ ನಡಿಗೆ ಹಾಸನದ ಕಡೆಗೆ’ ಹಾಸನ ಚಲೋ ಬೃಹತ್ ಪ್ರತಿಭಟನೆ ನಡೆಯುತ್ತಿದೆ.

ಈ ಪ್ರತಿಭಟನೆಯಲ್ಲಿ ಅಧ್ಯಕ್ಷೀಯ ಭಾಷಣ ಮಾಡಿ ರೂಪ ಹಾಸನ, “ಇಲ್ಲಿ ನಡೆದಿರುವುದು ಕೇವಲ ಒಂದು ಲೈಂಗಿಕ ಹಗರಣವಲ್ಲ, ಇದು ವಿಕೃತ ಲೈಂಗಿಕ ಹತ್ಯಾಕಾಂಡ. ಹೆಣ್ಣುಮಕ್ಕಳ ಮಾನಪ್ರಾಣ ಕುಟುಂಬವನ್ನು ಪಣಕಿಟ್ಟು ಸಂಸದನೊಬ್ಬ ನಡೆಸಿರುವ ಕಾಮಕೃತ್ಯ” ಎಂದು ಹೇಳಿದರು.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ಇದನ್ನು ಓದಿದ್ದೀರಾ?  ಪ್ರಜ್ವಲ್ ಲೈಂಗಿಕ ಹಗರಣ | ಹೋರಾಟದ ನಡಿಗೆ ಹಾಸನದ ಕಡೆಗೆ; ಪ್ರತಿಭಟನಕಾರರ ಪ್ರಮುಖ ಬೇಡಿಕೆಗಳು

“ತನ್ನ ಕಾಮಕೃತ್ಯವನ್ನು ವಿಡಿಯೋ ಮಾಡಿ, ತನ್ನ ನಿರ್ಲಕ್ಷ್ಯದಿಂದ ಮತ್ತೊಬ್ಬರಿಗೆ ಸಿಗುವಂತೆ ಮಾಡಿದ ಪ್ರಜ್ವಲ್ ರೇವಣ್ಣನನ್ನು ಹಾಗೂ ಆ ವಿಡಿಯೋಗಳನ್ನು ಚುನಾವಣಾ ದಾಳವಾಗಿ ಬಳಸಿಕೊಂಡು ಹಂಚಿದವರು, ಆ ವಿಡಿಯೋಗಳನ್ನು ಇಟ್ಟುಕೊಂಡು ಬೇಕಾದಂತೆ ಬಳಸಿಕೊಂಡವರು ಎಲ್ಲರನ್ನೂ ನಾವು ಖಂಡಿಸಬೇಕಿದೆ” ಎಂದರು.

“ಎಷ್ಟೆಲ್ಲ ಹಂತಗಳಲ್ಲಿ ವಿಡಿಯೋ ಹರಿಬಿಡಲಾಗುತ್ತಿದೆ ಎಂಬುವುದು ಇಲ್ಲಿನ ಹೋರಾಟಗಾರರು, ಜನತೆಗೆ ತಿಳಿದಿದೆ. ಇಲ್ಲಿನ ಹೆಣ್ಣುಮಕ್ಕಳ ಸಮಾದಿ ಕಟ್ಟಲಾಗುತ್ತಿದ್ದು, ಹೆಣ್ಣುಮಕ್ಕಳ ಜರ್ಜರಿತರಾಗಿರುವ ಸ್ಥಿತಿಯನ್ನು ನೋಡಿ ನಾವು ನೊಂದಿದ್ದೇವೆ. ಅತ್ಯಂತ ತಳಸಮುದಾಯದಲ್ಲಿ ಕೆಲಸ ಮಾಡುವ ಹೆಣ್ಣುಮಕ್ಕಳನ್ನು ಪ್ರಜ್ವಲ್ ತನ್ನ ಕಾಮಕೃತ್ಯಕ್ಕೆ ಬಳಸಿಕೊಂಡಿದ್ದಾನೆ. ಹಾಗಾಗಿ, ನಿಮ್ಮೊಂದಿಗೆ ನಾವಿದ್ದೇವೆ, ನೊಂದ ಹೆಣ್ಣುಮಕ್ಕಳು ಧೈರ್ಯವಾಗಿ ಮನೆಯಿಂದ ಹೊರಬಂದು ಎಸ್ಐಟಿ ಮುಂದೆ ನಿಮ್ಮ ದೂರು ದಾಖಲಿಸಿ” ಎಂದು ಸಾಹಿತಿ ರೂಪ ಹಾಸನ ಧೈರ್ಯ ತುಂಬಿದರು.

ಸರ್ಕಾರಗಳೇ ಜವಾಬ್ದಾರಿಯಿಂದ ವರ್ತಿಸಿ

“ಪ್ರಕರಣ ಬೆಳಕಿಗೆ ಬಂದು ಐದು ವಾರಗಳಾದರು ಇನ್ನೂ ಪ್ರಜ್ವಲ್ ರೇವಣ್ಣನನ್ನು ರಕ್ಷಿಸುತ್ತಿರುವ ರಾಜ್ಯ ಕೇಂದ್ರ ಸರ್ಕಾರಗಳು, ಪರಸ್ಪರ ಕೆಸರೆರಚಾಟ ನಡೆಸುತ್ತಿರುವ ರಾಜಕೀಯ ನಾಯಕರು ಮೊದಲು ಅದನ್ನು ನಿಲ್ಲಿಸಿ. ತಕ್ಷಣ ಪ್ರಜ್ವಲ್‌ನನ್ನು ಬಂಧಿಸಿ, ವಿಚಾರಣೆಗೆ ಒಳಪಡಿಸಿ” ಎಂದು ಆಗ್ರಹಿಸಿದರು.

ಇದನ್ನು ಓದಿದ್ದೀರಾ?  ಪ್ರಜ್ವಲ್‌ ರೇವಣ್ಣ ಅತ್ಯಾಚಾರ ಪ್ರಕರಣ | ಹಾಸನ ಚಲೋ; ವಿಕೃತ ಕಾಮಿ ಪ್ರಜ್ವಲ್ ಬಂಧನಕ್ಕೆ ಮೊಳಗಿದ ಘೋಷಣೆ

“ಅಲ್ಲದೆ, ಇಂದಿಗೂ ಈ ಕ್ಷಣಕ್ಕೂ ವಿಡಿಯೋ ಹರಿಬಿಡುತ್ತಿರುವವರನ್ನು ಎಡೆಮುರಿಕಟ್ಟಿ, ಪ್ರಕರಣಕ್ಕೆ ಅಂತ್ಯ ಹಾಡಿ. ಇಲ್ಲದಿದ್ದರೆ ಸರ್ಕಾರಗಳ ಮೇಲೆ ನಂಬಿಕೆ ಕಳೆದುಕೊಳ್ಳಬೇಕಾದ ಪರಿಸ್ಥಿತಿ ನಿರ್ಮಾಣವಾಗಲಿದೆ. ನಿಮ್ಮ ರಾಜಕೀಯ ನಿಲ್ಲಿಸಿ. ಹೆಣ್ಣುಮಕ್ಕಳ ಸಮಾಧಿಯ ಮೇಲೆ ಭವ್ಯ ಬಂಗಲೆ ಕಟ್ಟುತ್ತಿರುವುದನ್ನು ನಿಲ್ಲಿಸಿ. ಸರ್ಕಾರಗಳು ಇನ್ನಾದರೂ ಜವಾಬ್ದಾರಿಯಿಂದ ವರ್ತಿಸದಿದ್ದರೆ ಅಂತಹ ಸರ್ಕಾರಗಳ ವಿರುದ್ಧ ಮತ್ತೊಂದು ರೀತಿಯ ಗಟ್ಟಿತನದ ಹೋರಾಟವನ್ನು ಕಟ್ಟಬೇಕಾಗುತ್ತದೆ” ಎಂದು ಎಚ್ಚರಿಕೆ ನೀಡಿದರು.

ಈ ದಿನ ಡೆಸ್ಕ್‌
Website | + posts

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ನಮ್ಮನ್ನು ಬೆಂಬಲಿಸಿ

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬೆಂಗಳೂರು | ಕುಡಿಯುವ ನೀರಿನ ದರ ಏರಿಕೆ ಅನಿವಾರ್ಯ: ಡಿ.ಕೆ ಶಿವಕುಮಾರ್

ರಾಜ್ಯದಲ್ಲಿ ಸದ್ಯ ದಿನನಿತ್ಯ ಬಳಕೆಯ ವಸ್ತುಗಳ ಬೆಲೆ ಏರಿಕೆಯಿಂದ ಜನ ತತ್ತರಿಸಿದ್ದಾರೆ....

ಭ್ರಷ್ಟಾಚಾರ, ಕಮಿಷನ್‌ ದಂಧೆ ನಿಲ್ಲಿಸಿದರೆ ಗ್ಯಾರಂಟಿ ಯೋಜನೆಗಳಿಗೂ ಮಿಕ್ಕಿ ಹಣ ಉಳಿಯುತ್ತದೆ: ಎಎಪಿ

ಗ್ಯಾರಂಟಿ ಯೋಜನೆಗಳ ಹೆಸರಿನಲ್ಲಿ ರಾಜ್ಯ ಸರ್ಕಾರವು ಒಂದು ಕೈಯಲ್ಲಿ ಕೊಟ್ಟಂತೆ ನಟಿಸಿ...

ಜುಲೈ12ರಂದು ವಿಧಾನಪರಿಷತ್ತಿನ ಒಂದು ಸ್ಥಾನಕ್ಕೆ ಉಪ ಚುನಾವಣೆ

ರಾಜ್ಯದಲ್ಲಿ ತೆರವಾಗಿರುವ ವಿಧಾನಪರಿಷತ್ತಿನ ಒಂದು ಸ್ಥಾನಕ್ಕೆ ಜುಲೈ12ರಂದು ಉಪ ಚುನಾವಣೆ ನಡೆಯಲಿದೆ.ಕೇಂದ್ರ...