ಬಳ್ಳಾರಿ | ನಗರಕ್ಕೆ ಐವರು ಶಾಸಕರಿದ್ದಾರೆ; ಕೆಆರ್‌ಪಿಪಿ ಮುಖಂಡ ಕಿಡಿ

Date:

ಬಳ್ಳಾರಿ ನಗರಕ್ಕೆ ಒಬ್ಬರು ಚುನಾಯಿತ ಶಾಸಕರಿದ್ದರೆ, ಇನ್ನೂ ನಾಲ್ವರು ಅಘೋಷಿತ ಶಾಸಕರಿದ್ದಾರೆ. ಈ ಐವರಿಂದ ಅಧಿಕಾರಿಗಳು ಸರಿಯಾಘಿ ಕೆಲಸ ಮಾಡಲು ಸಾಧ್ಯವಾಗಲುತ್ತಿಲ್ಲ ಎಂದು ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ (ಕೆಆರ್‌ಪಿಪಿ) ಮುಖಂಡ, ಮಾಜಿ ಬುಡಾ ಅಧ್ಯಕ್ಷ ದಮ್ಮೂರು ಶೇಖರ್ ಆರೋಪಿಸಿದ್ದಾರೆ.

ಬಳ್ಳಾರಿಯ ಜನಾರ್ದನ ರೆಡ್ಡಿ ಅವರ ನಿವಾಸದಲ್ಲಿ ಸುದ್ದಿಗೋಷ್ಟಿ ನಡೆಸಿ ಅವರು ಮಾತನಾಡಿದರು. “ಬಳ್ಳಾರಿ ಪಟ್ಟಣಕ್ಕೆ ಚುನಾಯಿತ ಶಾಸಕ ಭರತ್ ರೆಡ್ಡಿ ಹಾಗೂ ಅವರ ಕುಟುಂಬಸ್ಥರಾದ ಸೂರ್ಯ ನಾರಾಯಣ ರೆಡ್ಡಿ, ಪ್ರತಾಪ್ ರೆಡ್ಡಿ, ಶರತ್ ರೆಡ್ಡಿ ಹಾಗೂ ಕಾಂಗ್ರೆಸ್‌ ಮುಖಂಡ ಚಾನಳ್ ಶೇಖರ್ – ಐವರು ಶಾಸಕರಿದ್ದಾರೆ. ಇದರಿಂದ ಕೆಲಸ ಮಾಡಲು ಸಾಧ್ಯವಾಗುತ್ತಿಲ್ಲವೆಂದು ಅಧಿಕಾರಿಗಳೇ ಅಳಲು ತೋಡಿಕೊಳ್ಳುತ್ತಿದ್ದಾರೆ” ಎಂದು ಹೇಳಿದ್ದಾರೆ.

“ಶಾಸಕ ಭರತ್ ರೆಡ್ಡಿ ಜೊತೆ ಗ್ರಾನೈಟ್ ಬಿಜಿನೆಸ್ ಮಾಡುತ್ತಿದ್ದ ದೇವರೆಡ್ಡಿ ನಿಗೂಢ ಸಾವಿನ ಬಗ್ಗೆ ತನಿಖೆ ನಡೆಸುವಂತೆ ಒತ್ತಾಯಿಸಿ ದೇವರೆಡ್ಡಿ ಕುಟುಂಬಸ್ಥರು ಗಾಂಧಿನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಭರತ್‌ ರೆಡ್ಡಿ ಶಾಸಕರಾದ ಒಂದು ತಿಂಗಳ ನಂತರ ಬಿ ರಿಪೋರ್ಟ್ ಹಾಕಲಾಗಿದೆ. ನಗರ ಠಾಣೆಯ ಸಿಪಿಐ ಅವರು ವರ್ಗಾವಣೆಯಾಗಿದ್ದರೂ, ಅವರ ವರ್ಗಾವಣೆಯನ್ನು ತಡೆದು ಅದೇ ಠಾಣೆಯಲ್ಲಿ ಮುಂದುವರಿಸಿದ್ದಾರೆ” ಎಂದು ಆರೋಪಿಸಿದ್ದಾರೆ.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ಕೆಆರ್‌ಪಿಪಿ ಮುಖಂಡ ಆಲಿಖಾನ್ ಮಾತನಾಡಿ, “ಶಾಸಕ ಭರತ್ ರೆಡ್ಡಿಗೆ ಗಾಂಜಾ ಗಿರಾಕಿ ಎಂದು ನಾಮಕರಣ ಮಾಡುತ್ತಿದ್ದೇವೆ. ಅವರನ್ನು ನಾವು ಗಾಂಜಾ ಶಾಸಕ ಎಂದೇ ಕರೆಯುತ್ತೇವೆ. ದಿನದ 24 ಗಂಟೆಯೂ ಅವರು ಗಾಂಜಾ ಸೇವನೆ ಮಾಡಿದವರ ರೀತಿಯಲ್ಲಿ ಇರುತ್ತಾರೆ” ಎಂದರು.

ಈ ಸಂದರ್ಭದಲ್ಲಿ ದುರಪ್ಪ ನಾಯಕ, ಸಂಜಯ್ ಬೆಟಗೇರಿ, ಶಿವಾರೆಡ್ಡಿ, ಉಮಾರಾಜ್, ಪರ್ವಿನ್ ಭಾನು, ಮಲ್ಲಿಕಾರ್ಜುನ ಆಚಾರಿ, ಕೊಳಗಲ್ಲು ಅಂಜಿ ಸೇರಿದಂತೆ ಮತ್ತಿತರು ಇದ್ದರು.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

‌ಬೈಂದೂರು | ಸಮಾಜದ ಎಲ್ಲ ವರ್ಗದವರ ಹಿತ ಕಾಯಲು ಬದ್ಧ: ಕಾಂಗ್ರೆಸ್ ಅಭ್ಯರ್ಥಿ ಗೀತಾ ಶಿವರಾಜ್‌ಕುಮಾರ್

ಲೋಕಸಭಾ ಚುನಾವಣೆಯಲ್ಲಿ ಬೈಂದೂರು ಮತದಾರರು ನನ್ನ ಕೈ ಬಲಪಡಿಸಿದರೆ, ಸಮಾಜದ ಎಲ್ಲ...

ಚಿಕ್ಕಬಳ್ಳಾಪುರ | ₹400 ಕೋಟಿ ನಕಲಿ ನೋಟು ಹಂಚಿಕೆಗೆ ಸಕಲ ತಯಾರಿ: ಪಕ್ಷೇತರ ಅಭ್ಯರ್ಥಿ ಆರೋಪ 

ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಚಿಕ್ಕಬಳ್ಳಾಪುರ ಕ್ಷೇತ್ರದ ಮತದಾರರಿಗೆ ಹಣ ಹಂಚಲು ಜನವರಿ...

ಚಿಕ್ಕಮಗಳೂರು | ಮಾಜಿ ಸಚಿವ ಮಾಧುಸ್ವಾಮಿ ಕಾರು ಅಪಘಾತ

ಮಾಜಿ ಸಚಿವ ಮಾಧುಸ್ವಾಮಿ ಅವರು ತೆರಳುತ್ತಿದ್ದ ಕಾರು ಅಪಘಾತಕ್ಕೀಡಾದ ಘಟನೆ ಚಿಕ್ಕಮಗಳೂರು...

ವಿಶೇಷ ಜಾತ್ರೆ | ತಲೆ ಮೇಲೆ ತೆಂಗಿನಕಾಯಿ ಒಡೆದುಕೊಂಡು ಮಳೆಗಾಗಿ ಪ್ರಾರ್ಥನೆ ಮಾಡಿದ ಖಾಜಿಸೊನ್ನೇನಹಳ್ಳಿ ಗ್ರಾಮಸ್ಥರು

ಅಕಾಲಿಕ ಮಳೆಯಿಂದ ರಾಜ್ಯದಲ್ಲಿ ಬಿರು ಬೇಸಿಗೆ ವಾತಾವರಣ ಸೃಷ್ಟಿಯಾಗಿದೆ. ದಿನದಿಂದ ದಿನಕ್ಕೆ...