ರಾಯಚೂರು ಜಿಲ್ಲೆ ಲಿಂಗಸುಗೂರು ತಾಲ್ಲೂಕು ಮುದಗಲ್ ಸಮೀಪದ ಹೂನೂರು ಗ್ರಾಮದಲ್ಲಿ ದಲಿತ ಮಹಿಳೆಯ ಶವ ಸಂಸ್ಕಾರಕ್ಕೆ ಅಡ್ಡಿಪಡಿಸಿದ ಕಾರಣ ಉದ್ಭವಿಸಿದ ಸಮಸ್ಯೆಗೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಗ್ರಾಮದಲ್ಲಿ ಶವ ಸಂಸ್ಕಾರಕ್ಕೆ ಹೋಗುವ ಮಾರ್ಗವು ಹೊಲದಿಂದ ಹೋಗಬೇಕಾಗುತ್ತದೆ. ಹೊಲದ ಮಾಲೀಕರು ರಸ್ತೆ ನಮ್ಮ ಹೊಲದಲ್ಲಿ ಬರುವುದಿಲ್ಲವೆಂದು ಪಟ್ಟು ಹಿಡಿದಾಗ ಮೃತರ ಕುಟುಂಬಸ್ಥರು ಅಧಿಕಾರಿಗಳ ಗಮನಕ್ಕೆ ತಂದರು.
ಈ ಸುದ್ದಿ ಓದಿದ್ದೀರಾ? ರಾಯಚೂರು | ರೇಷನ್ ಕಾರ್ಡ್ ಬಯೋಮೆಟ್ರಿಕ್ ನೀಡದ್ದಕ್ಕೆ ಜೀವಂತ ಮಹಿಳೆ ಮೃತ ಎಂದು ದಾಖಲೆ; ಉಚಿತ ಚಿಕಿತ್ಸೆಗೆ ತೊಂದರೆ
ಮಾಹಿತಿ ತಿಳಿದ ತಕ್ಷಣ ಮಾಹಿತಿ ತಿಳಿದ ತಕ್ಷಣ ಲಿಂಗಸುಗೂರು ತಹಶೀಲ್ದಾರ್ ಸತ್ಯಮ್ಮ, ಉಪ ತಹಶೀಲ್ದಾರ್ ತುಳಜಾ ರಾಮ್ ಸಿಂಗ್, ಮಸ್ಕಿ ಸಿಪಿಐ ರಾಮಣ್ಣ ಜಾಲಗಾರ, ಮುದಗಲ್ ಪಿ.ಎಸ್.ಐ ವೆಂಕಟೇಶ ಮಾಡಗೇರ್ ಸೇರಿದಂತೆ ಸರ್ವೆ ಇಲಾಖೆ, ವಿ.ಎ ಹಾಗೂ ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ತಾತ್ಕಾಲಿಕವಾಗಿ ರಸ್ತೆ ಕಲ್ಪಿಸಿ ಶವ ಸಂಸ್ಕಾರ ಮಾಡಲು ಸೂಚಿಸಿದರು.




