ಜಿಲ್ಲೆಗೆ ಸಚಿವ ಸ್ಥಾನ ಕೈತಪ್ಪಿರುವ ಕುರಿತು ಜಿಲ್ಲೆಯ ಚುನಾಯಿತ ಜನಪ್ರತಿನಿಧಿಗಳು ಮೌನ ವಹಿಸಿರುವುದು ಸ್ವಾಭಿಮಾನದ ರಾಜಕೀಯವನ್ನೇ ಕಳೆದುಕೊಂಡಿರುವುದರ ಸಂಕೇತವಾಗಿದೆ. ಅನ್ಯ ಜಿಲ್ಲೆಯವರನ್ನು ಜಿಲ್ಲಾ ಉಸ್ತುವಾರಿ ಸಚಿವರನ್ನಾಗಿ ನೇಮಕ ಮಾಡುವುದನ್ನು ವಿರೋಧಿಸಿ ಸೆಪ್ಟೆಂಬರ್ 17ರಂದು ನಡೆಯಲಿರುವ ಕಲ್ಯಾಣ ಕರ್ನಾಟಕ ವಿಮೋಚನಾ ದಿನಾಚರಣೆಯಂದೇ ಪ್ರತಿರೋಧ ಹೋರಾಟ ನಡೆಸಲಾಗುವುದು ಎಂದು ಪ್ರಗತಿಪರ, ದಲಿತ ಹೋರಾಟ ಸಮಿತಿ ಸಂಚಾಲಕ ಎಸ್. ಮಾರೆಪ್ಪ ಹೇಳಿದರು.
ಅವರಿಂದು ಮಾಧ್ಯಮಗೋಷ್ಟಿ ಉದ್ದೇಶಿಸಿ ಮಾತನಾಡಿ, ಜಿಲ್ಲೆಯವರಿಗೆ ಸಚಿವ ಸ್ಥಾನ ನೀಡದೇ ಅನ್ಯಾಯ ಮಾಡಿರುವದನ್ನು ವಿರೋಧಿಸಿ ಸ್ವಾತಂತ್ರೋತ್ಸವ ದಿನದಂದು ಸಚಿವರಿಗೆ ಘೇರಾವ್ ಹಾಕಲು ಮುಂದಾದಾಗ ಪೊಲೀಸರು ಬಂಧಿಸುವ ಮೂಲಕ ಹೋರಾಟ ಹತ್ತಿಕ್ಕುವ ಕೆಲಸ ಮಾಡಿದ್ದಾರೆ.ವಿಪಯಾರ್ಸವೆಂದರೆ ಜಿಲ್ಲೆಯ ಯಾವೊಬ್ಬ ಜನಪ್ರತಿನಿಧಿಯೂ ಜಿಲ್ಲೆಗೆ ಆಗಿರುವ ಅನ್ಯಾಯದ ವಿರುದ್ದ ಧ್ವನಿಯೆತ್ತುತ್ತಿಲ್ಲ. ಕಲ್ಬುರ್ಗಿ ದೊರೆಗೆ ಜಿಲ್ಲೆ ಗುಲಾಮಗಿರಿ ರಾಜಕೀಯ ಧ್ವನಿ ಕೇಳಿಸದಂತೆ ತಡೆಯಲಾಗುತ್ತಿದೆ. ಜಿಲ್ಲೆ ಜನಪ್ರತಿನಿಧಿಗಳು ಕೈ ಚಾಚುವ ಮನಸ್ಥಿತಿಯಿಂದ ಹೊರಬರುತ್ತಿಲ್ಲ. ಸಚಿವ ದೊರಕುವವರಗೆ ಹೋರಾಟ ನಿಲ್ಲುವುದಿಲ್ಲ ಹಾಗೂ ಜಿಲ್ಲೆಯ ಸ್ವಾಭಿಮಾನದ ಪ್ರಶ್ನಿಸಿ ನಡೆಯುವ ಹೋರಾಟಕ್ಕೆ ಸಾರ್ವಜನಿಕರು ಬೆಂಬಲಿಸಲು ಕೋರಿದರು.
ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾಧ್ಯಕ್ಷ ಅಶೋಕಕುಮಾರ ಜೈನ್ ಮಾತನಾಡಿ, ಜಿಲ್ಲೆಗೆ ಸಚಿವ ಸ್ಥಾನಕ್ಕೆ ವಂಚಿಸಿರುವ ಎಲ್ಲಾ ಪಕ್ಷಗಳಿಂದಲೂ ನಡೆಯುತ್ತಲೇ ಬಂದಿದೆ. ಜಿಲ್ಲೆ ಚುನಾಯಿತ ಜನಪ್ರತಿನಿಧಿಗಳು ಪ್ರಶ್ನಿಸದೇ ಇರುವದೇ ಕಾರಣವಾಗಿದೆ. ಜಿಲ್ಲೆಗೆ ಸಚಿವ ಸ್ಥಾನ ನೀಡಲು ಆಗ್ರಹಿಸಿ ಜಿಲ್ಲೆಗೆ ಆಗಮಿಸುವ ಸಚಿವರುಗಳಿಗೆ ಘೇರಾವ್ ಮಾಡಲಾಗುತ್ತದೆ. ಚುನಾಯಿತ ಜನಪ್ರತಿನಿಧಿಗಳು ಬೆಂಬಲಿಸಿ ಭಾಗವಹಿಸುವಂತೆ ಆಗ್ರಹಿಸಿದರು.
ಈ ಸುದ್ದಿ ಓದಿದ್ದೀರಾ? ರಾಯಚೂರು | ಸರ್ಕಾರಿ ಶಾಲೆಗಳಲ್ಲಿ ಖಾಲಿ ಶಿಕ್ಷಕರ ಹುದ್ದೆ ಭರ್ತಿಗೆ ಆಗ್ರಹ: ಉಸ್ತುವಾರಿ ಸಚಿವರಿಗೆ ಮನವಿ
ಈ ಸಂದರ್ಬದಲ್ಲಿ ರವೀಂದ್ರನಾಥ ಪಟ್ಟಿ, ಎಂ.ಆರ್.ಭೇರಿ,ಬಸವರಾಜ ಭಂಡಾರಿ, ಜೈಭೀಮ, ಶ್ರೀನಿವಾಸ ಕಲವಲದೊಡ್ಡಿ, ಹೇಮರಾಜ ಅಸ್ಕಿಹಾಳ, ಶ್ರೀನಿವಾಸ ಕೊಪ್ಪರ, ನರಸಿಂಹಲು ಸೇರಿ ಅನೇಕರಿದ್ದರು.




