ರಾಯಚೂರು ಜಿಲ್ಲೆಯ ಮಾನ್ವಿ ತಾಲೂಕಿನ ಹುಸೇನಪುರ ಕ್ರಾಸ್ ಹತ್ತಿರದ ಭತ್ತದ ಗದ್ದೆಯಲ್ಲಿ ಯುವಕನ ಶವ ಪತ್ತೆಯಾದ ಘಟನೆ ಜರುಗಿದೆ.
ಮೃತ ಯುವಕನನ್ನು ಮಾನ್ವಿ ಪಟ್ಟಣದ ರಾಮಣ್ಣ ನಕ್ಕುಂದಿ ಮಾದಿಗ (28) ಎಂದು ಗುರುತಿಸಲಾಗಿದೆ. ಕೊಲೆಯೋ ಆಕಸ್ಮಿಕ ಸಾವೋ ಎಂದು ಸಾವಿನ ನಿಖರ ಕಾರಣ ತಿಳಿದುಬಂದಿಲ್ಲ. ಇನ್ನೂ ಘಟನೆ ಕುರಿತು ಮಾನ್ವಿ ಠಾಣೆಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ತನಿಖೆ ಆರಂಭಿಸಿದ್ದಾರೆ.
ಯುವಕನ ತಂದೆ ತಾಯಿ ದುಡಿಯಲು ಬೆಂಗಳೂರಿಗೆ ಗುಳೆ ಹೋಗಿದ್ದು, ಯುವಕನ ಸಹೋದರ ಸಂಬಂಧಿಯೊಬ್ಬರು ದೂರು ನೀಡಿದ್ದು ,ತನಿಖೆಯಿಂದ ಸತ್ಯಾಸತ್ಯತೆ ಹೊರಬೀಳಲಿದೆ.
ಈ ಸುದ್ದಿ ಓದಿದ್ದೀರಾ? ರಾಯಚೂರು | ಭೂಮನಂದ ಹದ್ದಿನಾಳ ಕುಟುಂಬಕ್ಕೆ ಜಿಲ್ಲಾಧಿಕಾರಿ ಭೇಟಿ; ಸಾಂತ್ವನ, ಆಹಾರ ಕಿಟ್ ವಿತರಣೆ
ಜಿಲ್ಲೆಯಲ್ಲಿ ದಲಿತರ ಕೊಲೆ ಹೆಚ್ಚಾಗುತ್ತಿದ್ದು, ಪೊಲೀಸರು ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಪೊಲೀಸರು ತ್ವರಿತಗತಿಯಲ್ಲಿ ತನಿಖೆ ನಡೆಸಬೇಕು ಎಂದು ಸ್ಥಳೀಯರ ಒತ್ತಾಯವಾಗಿದೆ.




