ರಾಯಚೂರು | ಜಿಲ್ಲೆಯಲ್ಲಿ ಸೈಬರ್‌ ವಂಚನೆ ಹೆಚ್ಚಳ : ಬೇಕಿದೆ ಜಾಗೃತಿ

Date:

ರಾಜ್ಯದಲ್ಲಿ ಸೈಬರ್‌ ವಂಚನೆ ಪ್ರಕರಣಗಳು ದಿನೇ ದಿನೇ ಹೆಚ್ಚಾಗುತ್ತಿದ್ದು, ವಿಶೇಷವಾಗಿ ಯುವಕರು ಇಂತಹ ವಂಚನೆಗಳಿಗೆ ಬಲಿಯಾಗುತ್ತಿರುವುದು ಆತಂಕಕ್ಕೆ ಕಾರಣವಾಗಿದೆ. ನೂರಾರು ಯುವಕರು ದಿಢೀರನೇ ಶ್ರೀಮಂತ ಆಗಬೇಕೆಂಬ ಆಸೆಯಿಂದ ಸಾಲ ಮಾಡಿ ಆತ್ಮಹತ್ಯೆಗೆ ಗುರಿಯಾಗಿದ್ದು ಹಲವು ಪ್ರಕರಣಗಳು ನೋಡಿದ್ದೇವೆ.

- Advertisement -

ರಾಯಚೂರು ಜಿಲ್ಲೆಯಲ್ಲಿ ಕಳೆದ ಮೂರು ವರ್ಷಗಳ ಅವಧಿಯಲ್ಲಿ ಒಟ್ಟು 83 ಸೈಬರ್‌ ವಂಚನೆ ಪ್ರಕರಣಗಳು ದಾಖಲಾಗಿದ್ದು, ಈ ಪೈಕಿ ಸುಮಾರು 36 ಪ್ರಕರಣಗಳನ್ನು ಪೊಲೀಸರು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಹೊಸ ಓದು | ಬಿ. ಚಂದ್ರೇಗೌಡರ ‘ಕಾಳ ಮಾವನ...

ಬಿ. ಚಂದ್ರೇಗೌಡರ 'ಬಯಲು ಸೀಮೆಯ ಕಟ್ಟೆಪುರಾಣ' ಅಂಕಣ ಬರಹದಿಂದ ಎದ್ದುಬಂದ ಕಾಳಮಾವ ಈಗ ತನ್ನ ಕಡೇ ದಿನಗಳಲ್ಲಿದ್ದಾರೆ. ಅವರು ಕಣ್ಣುಮುಚ್ಚುವ, ಕಾಲುಮಡಚುವ ದೃಶ್ಯಗಳು ಭಾರತದ ಆತ್ಮಸಾಕ್ಷಿಯ ಅಂತ್ಯಸಂಸ್ಕಾರವನ್ನು ಸಂಕೇತಿಸುವಂತಿವೆ. ನಮ್ಮ ನೆಲದ ನಾಲಿಗೆನಿಷ್ಠೆ...

ಬ್ರಿಟಿಷ್ ಕಾಲದ ʼಗುಲಾಮಗಿರಿʼ ಕಾನೂನುಗಳೇ ಇಂದಿನ ಪೊಲೀಸ್‌ ವ್ಯವಸ್ಥೆಯ...

ಸ್ವಾತಂತ್ರ್ಯ ಬಂದು ದಶಕಗಳೇ ಕಳೆದಿದ್ದರೂ, ನಾವಿನ್ನೂ ಬ್ರಿಟಿಷರು ಭಾರತೀಯರನ್ನು ದಮನ ಮಾಡಲು ರೂಪಿಸಿದ 1861ರ ಪೊಲೀಸ್ ಕಾಯಿದೆಯ ನೆರಳಿನಲ್ಲೇ ಬದುಕುತ್ತಿದ್ದೇವೆಯೇ? ಖಾಕಿ ಪಡೆಯನ್ನು 'ಪ್ರಜೆಗಳ ರಕ್ಷಕ'ನಾಗಿಸಬೇಕಿದ್ದ ವ್ಯವಸ್ಥೆ, ಇಂದಿಗೂ ರಾಜಕಾರಣಿಗಳ ಕೈಗೊಂಬೆಯಾಗಿ ಉಳಿದುಕೊಳ್ಳಲು...

ಯಾರು ಹಿತವರು ಈ ಇಬ್ಬರೊಳಗೆ? ನೇಹಾ ಬೋರಾ ಅಭಿಜಿತ್...

“ಹೋಲಿಕೆ ಬೇಡ, ಒಗ್ಗಟ್ಟು ಬೇಕು. ನಾವೆಲ್ಲರೂ ಒಟ್ಟಾಗಿ ಚುನಾವಣಾ ಆಯೋಗದ ಅಕ್ರಮಗಳ ವಿರುದ್ಧ ಹೋರಾಡಬೇಕು” ಎಂದು ನೇಹಾ ಬರೆದರೆ, ಅದಕ್ಕೆ ಅಭಿಜೀತ್ ಉತ್ತರ- “ಇಂಕ್ವಿಲಾಬ್ ಜಿಂದಾಬಾದ್” ನೇಹಾ ಬೋರಾ ಮತ್ತು ಅಭಿಜಿತ್ ದೀಪ್ಕೆ ನಡುವೆ...

ಆನ್‌ಲೈನ್‌ ಉದ್ಯೋಗ, ಹೂಡಿಕೆ, ಷೇರು ಮಾರುಕಟ್ಟೆ, ಕ್ರಿಪ್ಟೋ ಕರೆನ್ಸಿ, ಲಾಟರಿ, ಕಸ್ಟಮರ್ ಕೇರ್ ಕರೆಗಳು, ನಕಲಿ ಲಿಂಕ್‌ಗಳು ಹಾಗೂ ಸಾಮಾಜಿಕ ಜಾಲತಾಣಗಳ ಮೂಲಕ ನಡೆಯುವ ವಂಚನೆಗಳು ಹೆಚ್ಚಾಗಿ ಕಂಡು ಬರುತ್ತಿವೆ. ಕಡಿಮೆ ಸಮಯದಲ್ಲಿ ಹೆಚ್ಚಿನ ಲಾಭ ನೀಡುವುದಾಗಿ ನಂಬಿಸಿ ಯುವಕರನ್ನು ಆಕರ್ಷಿಸುವುದು ವಂಚಕರ ಪ್ರಮುಖ ತಂತ್ರವಾಗಿದೆ.

ಬಹುತೇಕ ಪ್ರಕರಣಗಳಲ್ಲಿ ಯುವಕರು ಮೊಬೈಲ್‌ ಆ್ಯಪ್‌ಗಳು, ನಕಲಿ ವೆಬ್‌ಸೈಟ್‌ಗಳು ಹಾಗೂ ವಾಟ್ಸ್‌ಆಪ್‌, ಟೆಲಿಗ್ರಾಂ ಲಿಂಕ್‌ಗಳ ಮೂಲಕ ಹಣ ಹೂಡಿಕೆ ಮಾಡಿ ಲಕ್ಷಾಂತರ ರೂಪಾಯಿ ಕಳೆದುಕೊಂಡಿದ್ದಾರೆ. ಕೆಲವರು ಉದ್ಯೋಗ ಸಿಗುತ್ತದೆ ಎಂಬ ಭರವಸೆಗೆ, ಇನ್ನೂ ಕೆಲವರು ಆನ್‌ಲೈನ್‌ ಟ್ರೇಡಿಂಗ್ ಹಾಗೂ ಕ್ರಿಪ್ಟೋ ಹೂಡಿಕೆಯ ಹೆಸರಿನಲ್ಲಿ ವಂಚನೆಗೆ ಒಳಗಾಗಿದ್ದಾರೆ.

ಅಧಿಕೃತ ಮಾಹಿತಿ ಪ್ರಕಾರ ರಾಯಚೂರು ಜಿಲ್ಲೆಯಲ್ಲಿ 2023ರಲ್ಲಿ 33 ಪ್ರಕರಣ, 20 ಪತ್ತೆ 1.66 ಕೋಟಿ, 58,393 ವಂಚನೆ ಆಗಿದೆ. 2024 ರಲ್ಲಿ 32 ಪ್ರಕರಣ, 12 ಪತ್ತೆ 13.64 ಕೋಟಿ, 11,640 ವಂಚನೆ ಆಗಿದೆ. 2025 ನವೆಂಬರ್ 15 ರವರೆಗೆ 18 ಪ್ರಕರಣ 04 ಪತ್ತೆ 3.62 ಕೋಟಿ, 73,027 ವಂಚನೆ ಆಗಿದೆ. ಸೈಬರ್ ಅಪರಾಧದಲ್ಲಿ ಕ್ರಮಕೈಗೊಂಡರೂ ಸಹ ನಿಯಂತ್ರಣವಾಗದೇ ಇರುವುದು, ಶೀಘ್ರ ಆರೋಪಿಗಳ ಬಂಧನ ಮಾಡಿಲ್ಲ ಎಂಬುದು ನಾಗರಿಕರ ಅಭಿಪ್ರಾಯ.

ರಾಯಚೂರು ಜಿಲ್ಲೆಯಲ್ಲಿ ಸೈಬರ್‌ ವಂಚನೆ ದೊಡ್ಡ ಸಮಸ್ಯೆಯಾಗಿ ಪರಿಣಮಿಸುತ್ತಿದ್ದು, ಯುವಕರೇ ಪ್ರಮುಖ ಬಲಿಪಶುಗಳಾಗುತ್ತಿದ್ದಾರೆ. ಸಾರ್ವಜನಿಕ ಜಾಗೃತಿ ಹಾಗೂ ಎಚ್ಚರಿಕೆಯಿಂದ ಮಾತ್ರ ಇಂತಹ ವಂಚನೆಗಳನ್ನು ತಡೆಗಟ್ಟಲು ಸಾಧ್ಯವಾಗುತ್ತೆ. ರಾಜ್ಯ ಸೇರಿ ಜಿಲ್ಲೆಯಲ್ಲಿಯೂ ಕೂಡ ಸಾಲಿದಾರಿಟಿ ಸಂಘಟನೆಯ ವತಿಯಿಂದ ಇಡೀ ರಾಜ್ಯಾದ್ಯಂತ ಆನಲೈನ್ ಹಾಗೂ ದುಶ್ಚಟಕ್ಕೆ ಬಲಿಯಾಗುತ್ತಿರುವ ನಿಟ್ಟಿನಲ್ಲಿ ಯುವಕರಲ್ಲಿ ಜಾಗೃತಿ ಮೂಡಿಸುವುದಕ್ಕೆ ಹಲವು ಕಡೆ ಕಾರ್ಯಕ್ರಮಗಳು ಆಯೋಜಿಸುವಲ್ಲಿ ಸಕ್ರಿಯರಾಗಿ ಕರ್ತವ್ಯ ನಿರ್ವಹಿಸಿದ್ದಾರೆ.

ಕೆಲವು ದಿನಗಳ ಹಿಂದೆ ರಾಷ್ಟ್ರೀಕೃತ ಬ್ಯಾಂಕ್, ಸಹಕಾರ ಬ್ಯಾಂಕ್ ಹಾಗೂ ಖಾಸಗಿ ಬ್ಯಾಂಕ್‌ಗಳಲ್ಲಿ ಉಳಿತಾಯ ಖಾತೆಗಳನ್ನು ಹೊಂದಿರುವ ವ್ಯವಸ್ಥಾಪಕರು ಅಲರ್ಟ್ ಮೆಸೇಜ್‌ಗಾಗಿ ಒಂದೇ ಮೊಬೈಲ್ ನಂಬರ್ ಲಿಂಕ್ ಮಾಡಿಸಿದ್ದರು. ಅನ್‌ಲೈನ್ ಗೇಮಿಂಗ್ ಮೋಹಕ್ಕೆ ಒಳಗಾಗಿ ಇದೀಗ ಎಲ್ಲ ಹಣವನ್ನೂ ಕಳೆದುಕೊಂಡು ಬೆತ್ತಲಾಗಿರುವ ಘಟನೆ ನಡೆದಿತು.

ವಂಚನೆಗೊಳಗಾದ ಹೈ ಫಿರೋಜ್ ಮಾತನಾಡಿ, ವಾಟ್ಸಪ್ ಗ್ರೂಪ್‌ಗಳಲ್ಲಿ ಎಪಿಕೆ ಫೈಲ್‌ಗಳು, ಬಂಪರ್ ಆಫರ್‌ಗಳ ಹೆಸರಿನಲ್ಲಿ ಬರುತ್ತಿರುವ ಲಿಂಕ್‌ಗಳ ಮೂಲಕ ಸೈಬರ್ ವಂಚನೆ ಹೆಚ್ಚಾಗಿದೆ. ಇಂತಹ ಒಂದು ಲಿಂಕ್ ಅನ್ನು ಕ್ಲಿಕ್ ಮಾಡಿದ ಪರಿಣಾಮ ನಾನು ಸಾವಿರಾರು ರೂಪಾಯಿ ಕಳೆದುಕೊಂಡಿದ್ದೇನೆ ಎಂದು ಅಳಲು ತೋಡಿಕೊಂಡರು. ಈ ರೀತಿಯ ಲಿಂಕ್‌ಗಳನ್ನು ಒಬ್ಬರು ಕ್ಲಿಕ್ ಮಾಡಿದರೆ ಅದು ಅವರ ಸಂಪೂರ್ಣ ಸಂಪರ್ಕ ಪಟ್ಟಿಗೆ ಹರಡುತ್ತದೆ. ಪರಿಣಾಮವಾಗಿ ಅನೇಕ ಜನರು ಹಣ ಕಳೆದುಕೊಳ್ಳುವ ಸ್ಥಿತಿ ನಿರ್ಮಾಣವಾಗಿದೆ. ಇಂತಹ ವಂಚಕ ಲಿಂಕ್‌ಗಳ ಬಗ್ಗೆ ಸಾರ್ವಜನಿಕರು ಜಾಗೃತರಾಗಬೇಕಿದ್ದು, ಈ ಪ್ರಕರಣಗಳಿಗೆ ಪೊಲೀಸರು ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಅವರು ಒತ್ತಾಯಿಸಿದರು.

ಇದನ್ನೂ ಓದಿ : ರಾಯಚೂರು | 10 ತಿಂಗಳಲ್ಲಿ 736 ಅಪಘಾತ 264 ಮಂದಿ ಮೃತ್ಯು

ಆರಂಭದಲ್ಲಿ ಸ್ವಲ್ಪ ಸ್ವಲ್ಪ ಹಣ ಬಂದಂತೆ ಆಗಿದೆ. ಇದರಿಂದಾಗಿ ವ್ಯವಸ್ಥಾಪಕರಿಗೆ ಮೋಸಗಾರರ ಮೇಲೆ ನಂಬಿಕೆಯೂ ಹೆಚ್ಚಾಗಿದೆ. ಅಧಿಕ ಹಣ ತೊಡಗಿಸಿದ ನಂತರ ಡಿಸೆಂಬರ್ 2ರಂದು ಗೇಮ್ ಸೈಟ್‌ನಲ್ಲಿ ಇದ್ದ ಲಾಗಿನ್ ಖಾತೆ ಇದ್ದಕ್ಕಿದ್ದಂತೆಯೇ ಬ್ಲಾಕ್ ಆಯಿತು. ಸಂಬಂಧಪಟ್ಟವರನ್ನು ಸಂಪರ್ಕಿಸಲು ಅಲ್ಲಿ ಯಾವುದೇ ನಂಬ‌ರ್ ಸಹ ಇರಲಿಲ್ಲ. ನಂತರ ಅವರಿಗೆ 70 ಲಕ್ಷ ಹೋಗಿರುವುದು ಮನವರಿಕೆಯಾಗಿದೆ.

Rafi
ರಫಿ ಗುರುಗುಂಟ
+ posts

ಗುಲಬರ್ಗಾ ವಿವಿಯಿಂದ ಪತ್ರಿಕೋದ್ಯಮದಲ್ಲಿ ಎಂ ಎ ಪದವಿ, ಕಲ್ಯಾಣ ಕರ್ನಾಟಕ ವಲಯ ಕೋರ್ಡಿನೇಟರ್

ಪೋಸ್ಟ್ ಹಂಚಿಕೊಳ್ಳಿ:

ರಫಿ ಗುರುಗುಂಟ
ರಫಿ ಗುರುಗುಂಟ
ಗುಲಬರ್ಗಾ ವಿವಿಯಿಂದ ಪತ್ರಿಕೋದ್ಯಮದಲ್ಲಿ ಎಂ ಎ ಪದವಿ, ಕಲ್ಯಾಣ ಕರ್ನಾಟಕ ವಲಯ ಕೋರ್ಡಿನೇಟರ್

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ರಾಯಚೂರು | ಬರ ಪರಿಹಾರ, ಸಮರ್ಪಕ ವಿದ್ಯುತ್ ಪೂರೈಕೆಗೆ ಆಗ್ರಹ: ಜೆಡಿಎಸ್‌ನಿಂದ ಬೃಹತ್ ಪ್ರತಿಭಟನೆ

ರಾಜ್ಯದಲ್ಲಿ ಎದುರಾಗಿರುವ ಬರ ಪರಿಸ್ಥಿತಿಗೆ ಸೂಕ್ತ ಪರಿಹಾರ ಒದಗಿಸಬೇಕು, ರೈತರಿಗೆ ಸಮರ್ಪಕ...

ರಾಯಚೂರು | ಭೂಮಾಪಕ–ಗ್ರಾಮ ಆಡಳಿತಾಧಿಕಾರಿ ಪರೀಕ್ಷೆ: ಪರೀಕ್ಷಾ ಕೇಂದ್ರಗಳ ಸುತ್ತ 200 ಮೀ. ನಿಷೇಧಿತ ಪ್ರದೇಶ

ಭೂದಾಖಲೆಗಳ ಇಲಾಖೆಯಲ್ಲಿನ ಉಳಿಕೆ ಮೂಲ ವೃಂದದ ಭೂಮಾಪಕರ ಹುದ್ದೆಗಳು ಹಾಗೂ ಕಂದಾಯ...

ಸಿಂಧನೂರು | ₹10 ಕೋಟಿಗೂ ಅಧಿಕ ಅವ್ಯವಹಾರ ಆರೋಪ; ಕಿರಿಯ ಅಭಿಯಂತರ ಅಮಾನತು

ಸಿಂಧನೂರು ಉಪವಿಭಾಗದ ಕಿರಿಯ ಅಭಿಯಂತರ ನಾಗರಾಜ ಪ್ರಭಾ ಅವರನ್ನು ₹10 ಕೋಟಿಗೂ...

ರಾಯಚೂರು | ಕಾಲೇಜಿನಲ್ಲಿ ಶೌಚಾಲಯವಿದೆ, ನೀರಿಲ್ಲ: 400 ಮಂದಿ ವಿದ್ಯಾರ್ಥಿನಿಯರ ಪರದಾಟ

ಹೆಣ್ಣುಮಕ್ಕಳಿಗೆ ಶಿಕ್ಷಣ ನೀಡುವುದಷ್ಟೇ ಸಾಲದು; ಅವರು ಸುರಕ್ಷಿತ, ಗೌರವಯುತ ಹಾಗೂ ಸ್ವಚ್ಛ...