ಹಟ್ಟಿ ಚಿನ್ನದ ಗಣಿ ಕಂಪನಿಯಿಂದ ಜಮೀನು ಹಕ್ಕು ಹಾಗೂ ಪರಿಹಾರ, ಉದ್ಯೋಗಕ್ಕಾಗಿ ಆಗ್ರಹಿಸಿ ರೈತರು ಕಳೆದ 18 ದಿನಗಳಿಂದ ಸರತಿ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದಾರೆ. ಈ ನಡುವೆ ಗುರುವಾರ ಸಂಜೆ ರೈತ ಅಸ್ವಸ್ಥಗೊಂಡಿದ್ದಾರೆ.
ರೈತ ಗುಂಡಪ್ಪ ಅವರಿಗೆ ಏಕಾಏಕಿ ತಲೆಸುತ್ತು ಕಾಣಿಸಿಕೊಂಡಿದ್ದು, ಅಸ್ವಸ್ಥರಾದ ಅವರನ್ನು ಸಹ ರೈತರು ಗಣಿ ಕಂಪನಿಯ ಆಂಬುಲೆನ್ಸ್‌ನಲ್ಲಿ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಬಳಿಕ ಗಣಿ ಕಂಪನಿ ಆಸ್ಪತ್ರೆಯಲ್ಲಿ ಅವರಿಗೆ ಚಿಕಿತ್ಸೆ ನೀಡಲಾಗಿದೆ.
ಈ ಕುರಿತು ಆಕ್ರೋಶ ವ್ಯಕ್ತಪಡಿಸಿದ ರೈತರು, ‘ಹೋರಾಟದ ಸಂದರ್ಭದಲ್ಲಿ ರೈತ ಕುಟುಂಬದ ಯಾರಿಗಾದರೂ ಜೀವಹಾನಿಯಾದರೆ ಅದಕ್ಕೆ ಗಣಿ ಕಂಪನಿಯ ಅಧಿಕಾರಿಗಳೇ ನೇರ ಹೊಣೆ. ರೈತರ ಜೀವದ ಜೊತೆ ಅಧಿಕಾರಿಗಳು ಚೆಲ್ಲಾಟವಾಡುತ್ತಿದ್ದಾರೆ. ನಮ್ಮ ಭೂಮಿಗಾಗಿ ಜೀವದ ಹಂಗು ತೊರೆದು ಹೋರಾಟ ನಡೆಸುತ್ತಿದ್ದೇವೆ’ ಎಂದು ಆರೋಪಿಸಿದರು.
ಈ ಸುದ್ದಿ ಓದಿದ್ದೀರಾ? ರಾಯಚೂರು | ಭೂಮಾನಂದ ಕೊಲೆ ಸಮಗ್ರ ತನಿಖೆಗೆ ಆಗ್ರಹ: ಆ.23ರಂದು ಹದ್ದಿನಾಳದಿಂದ ಬೈಕ್ ರ‍್ಯಾಲಿ
‘ರೈತರ ಜಮೀನನ್ನು ಕಾನೂನುಬದ್ಧವಾಗಿ ಭೂಸ್ವಾಧೀನಪಡಿಸಿಕೊಂಡು ಸೂಕ್ತ ಪರಿಹಾರ ಹಾಗೂ ಉದ್ಯೋಗ ನೀಡಬೇಕು. ರೈತರ ನ್ಯಾಯಯುತ ಬೇಡಿಕೆಗಳನ್ನು ಈಡೇರಿಸುವವರೆಗೆ ಹೋರಾಟ ಮುಂದುವರಿಸಲಾಗುವುದು’ ಎಂದು ರೈತರು ಒತ್ತಾಯಿಸಿದರು




