ಲಿಂಗಸೂಗೂರು ತಾಲ್ಲೂಕಿನ ಹುನುಕುಂಟಿ ಗ್ರಾಮದಲ್ಲಿ ಮಹಿಳೆ ಮೇಲೆ ಅತ್ಯಾಚಾರ ಎಸಗಿದ ಅಪರಾಧಿಗೆ ಜೀವಾವಧಿ ಶಿಕ್ಷೆ ಹಾಗೂ ₹1.05 ಲಕ್ಷ ದಂಡ ವಿಧಿಸಿ 3ನೇ ಜಿಲ್ಲಾ ಹೆಚ್ಚುವರಿ ನ್ಯಾಯಾಧೀಶ ಎ.ಸೋಮ ಶೇಖರ ಸೋಮವಾರ ಆದೇಶಿಸಿದ್ದಾರೆ.
ತಾಲ್ಲೂಕಿನ ಹುನುಕುಂಟಿ ಗ್ರಾಮದಲ್ಲಿ ಮಹಿಳೆ ಮೇಲೆ ಅದೇ ಗ್ರಾಮದ ನಾಗರಾಜ ಅಲಿಯಾಸ್ ನಾಗಲಿಂಗಪ್ಪ ಚೊಕ್ಕಾಡಿ ಅತ್ಯಾಚಾರ ಎಸಗಿದ್ದರಿಂದ ಪಟ್ಟಣದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಈ ಸುದ್ದಿ ಓದಿದ್ದೀರಾ? ರಾಯಚೂರು ರಾಜಕೀಯದಲ್ಲಿ ಮತ್ತೆ ಹಿನ್ನಡೆ: ಸಚಿವ ಸ್ಥಾನಕ್ಕೆ ಚೊಂಬು, ಜಿಲ್ಲೆಯ ನಿರೀಕ್ಷೆ ಭಗ್ನ
ತನಿಖಾಧಿಕಾರಿ ಸತ್ಯಾನಾರಾಯಣ ರಾವ ಎಂ.ಜಿ. ಹಾಗೂ ಡಿವೈಎಸ್‌ಪಿ ದತ್ತಾತ್ರೇಯ ಕಾರ್ನಾಡ ಅವರು, ತನಿಖೆ ಕೈಗೊಂಡು ಆರೋಪಿ ವಿರುದ್ಧ ದೋಷರೋಪ ಪಟ್ಟಿ ಸಲ್ಲಿಸಿದ್ದರು. ವಾದ ವಿವಾದ ಆಲಿಸಿದ ನ್ಯಾಯಾಧೀಶ ಸೋಮಶೇಖರ ಅವರು, ಅಪರಾಧಿಗೆ ಜೀವಾವಧಿ ಶಿಕ್ಷೆ ಹಾಗೂ ₹1.05 ಲಕ್ಷ ದಂಡ ವಿಧಿಸಿ ಆದೇಶಿಸಿದ್ದಾರೆ ಎಂದು ಸರ್ಕಾರಿ ಅಭಿಯೋಜಕ ಮಂಜುನಾಥ ಬೇರ್ಗಿ ತಿಳಿಸಿದ್ದಾರೆ.




