ಉದ್ಯೋಗಾಕಾಂಕ್ಷಿಗಳನ್ನು ಉದ್ಯೋಗದಾತರೊಂದಿಗೆ ಸಂಪರ್ಕಿಸುವ ಹಾಗೂ ಉದ್ಯೋಗಾವಕಾಶಗಳನ್ನು ಸುಲಭವಾಗಿ ತಲುಪಿಸುವ ಉದ್ದೇಶದಿಂದ ಸಾಲಿಡಾರಿಟಿ ಯೂತ್ ಮೂವ್ಮೆಂಟ್ ಕರ್ನಾಟಕ ರೂಪಿಸಿರುವ ‘ಜಾಬ್ ಬ್ರಿಡ್ಜ್’ ವೆಬ್‌ಸೈಟ್‌ನ ಪೋಸ್ಟರ್‌ನ್ನು ಜಮಾಅತೆ ಇಸ್ಲಾಮಿ ಹಿಂದ್ ಸಿಂಧನೂರು ಸ್ಥಾನೀಯ ಅಧ್ಯಕ್ಷ ಜನಾಬ್ ಹುಸೇನ್ ಸಾಬ್ ಅವರು ಲೋಕಾರ್ಪಣೆ ಮಾಡಿದರು.
ಕಾರ್ಯಕ್ರಮದಲ್ಲಿ ಮಾತನಾಡಿದ ಸಾಲಿಡಾರಿಟಿ ಯೂತ್ ಮೂವ್ಮೆಂಟ್ ಸಿಂಧನೂರು ಸ್ಥಾನೀಯ ಅಧ್ಯಕ್ಷ ಅಬುಲೈಸ್ ನಾಯ್ಕ್, ‘ಜಾಬ್ ಬ್ರಿಡ್ಜ್’ ಯೋಜನೆಯು ಉದ್ಯೋಗದಾತರು ಮತ್ತು ಉದ್ಯೋಗಾಕಾಂಕ್ಷಿಗಳ ನಡುವೆ ಸಂಪರ್ಕ ಸೇತುವೆಯಾಗಿ ಕಾರ್ಯನಿರ್ವಹಿಸಲಿದ್ದು, ಯುವಕರು ತಮ್ಮ ಅರ್ಹತೆಗೆ ತಕ್ಕ ಉದ್ಯೋಗಾವಕಾಶಗಳನ್ನು ಪಡೆಯಲು ಇದು ನೆರವಾಗಲಿದೆ ಎಂದು ತಿಳಿಸಿದರು.
ನಿರುದ್ಯೋಗಿ ಯುವಕರಿಗೆ ಉದ್ಯೋಗಾವಕಾಶ ಕಲ್ಪಿಸುವ ಉದ್ದೇಶದಿಂದ ಸೋಲಿಡಾರಿಟಿ ಯೂತ್ ಮೂವ್ಮೆಂಟ್ ಕರ್ನಾಟಕವು ಆಗಸ್ಟ್ 1ರಿಂದ 15ರವರೆಗೆ ‘ಜಾಬ್ ಬ್ರಿಡ್ಜ್’ ಉದ್ಘಾಟನಾ ಅಭಿಯಾನ ಹಮ್ಮಿಕೊಂಡಿದೆ. ಕಾರ್ಯಕ್ರಮದಲ್ಲಿ ಸಾಲಿಡಾರಿಟಿ ಯೂತ್ ಮೂವ್ಮೆಂಟ್ ಜಿಲ್ಲಾ ಅಧ್ಯಕ್ಷ ಡಾ. ವಾಸಿಂ, ಸ್ಥಾನೀಯ ಕಾರ್ಯದರ್ಶಿ ನಯೀಮ್ ಇರ್ಫಾನ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಯುವಕರು ಹಾಗೂ ಉದ್ಯೋಗದಾತರು www.jobbridgenode.com ವೆಬ್‌ಸೈಟ್‌ನಲ್ಲಿ ನೋಂದಣಿ ಮಾಡಿಕೊಂಡು ಇದರ ಸೌಲಭ್ಯವನ್ನು ಸದುಪಯೋಗಪಡಿಸಿಕೊಳ್ಳುವಂತೆ ಮನವಿ ಮಾಡಲಾಯಿತು.
ಈ ಸುದ್ದಿ ಓದಿದ್ದೀರಾ? ಸಿಂಧನೂರು | 50ಕ್ಕೂ ಹೆಚ್ಚು ವಿದ್ಯಾರ್ಥಿಗಳು ಅಸ್ವಸ್ಥ: ಮೊರಾರ್ಜಿ ವಸತಿ ಶಾಲೆಯ ವಾರ್ಡನ್ ಅಮಾನತು
ಈ ಸಂದರ್ಭದಲ್ಲಿ ಜಮಾಅತೆ ಇಸ್ಲಾಮಿ ಹಿಂದ್ ಸಿಂಧನೂರು ಕಾರ್ಯದರ್ಶಿ ಅಲಿ ಮುರ್ತುಜಾ, ಮುಸ್ತಫಾ ಖಾದ್ರಿ, ಖಾನ್ ಸಾಬ್, ಅನ್ವರ್ ಹುಸೇನ್, ಮೌಲಾನಾ ಉಸಾಮಾ ಸಾಬ್, ಹಾಜಿ ರಾಜಾ ಹುಸೇನ್ ಹಿಮಾಯತಿ, ಶರೀಫುದ್ದೀನ್ ಸಾಬ್, ಡಾ. ನೂರುಲ್ ಇಸ್ಲಾಂ, ಮೆಹಬೂಬ್ ಪಾಷಾ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು.




