ರಾಮನಗರ | ಅಂಚೆ ಕಚೇರಿಗೆ ಸಾರ್ವಜನಿಕರ ಮುತ್ತಿಗೆ; ಸಮಸ್ಯೆ ಪರಿಹರಿಸುವುದಾಗಿ ಪೋಸ್ಟ್‌ಮಾಸ್ಟರ್‌ ಭರವಸೆ

Date:

ಪಿಂಚಣಿ ಸೇರಿದಂತೆ ಸರ್ಕಾರದ ಸವಲತ್ತುಗಳಿಂದ ಬರುವ ಹಣವನ್ನು ಪೋಸ್ಟ್‌‌ಮ್ಯಾನ್‌ ಸರಿಯಾಗಿ ಕೊಡದೆ ಅಲೆದಾಡಿಸುತ್ತಿದ್ದಾರೆ ಎಂದು ಆರೋಪಿಸಿ ರಾಮನಗರ ಜಿಲ್ಲೆಯ ಕನಕಪುರದ ವೆಂಕಟರಾಯನದೊಡ್ಡಿ ಅಂಚೆ ಕಚೇರಿಗೆ ಸಾರ್ವಜನಿಕರು ಸೋಮವಾರ ಮುತ್ತಿಗೆ ಹಾಕಿದ್ದರು.

“ವೆಂಕಟರಾಯನದೊಡ್ಡಿ ಅಂಚೆ ಕಚೇರಿಯಲ್ಲಿ ಕೆಲಸ ಮಾಡುವ ಪೋಸ್ಟ್‌ಮ್ಯಾನ್‌ ರಮೇಶ್‌ ಅವರು ಸರ್ಕಾರದಿಂದ ವಿವಿಧ ಯೋಜನೆಯಲ್ಲಿ ಬರುವ ಹಣವನ್ನು ಹಳ್ಳಿಗಳಿಗೆ ಬಂದು ಸರಿಯಾಗಿ ಕೊಡುತ್ತಿಲ್ಲ. ತಮಗೆ ₹10,000, ₹15,000 ಹಣ ಬೇಕಿದ್ದರೆ ಕಾದು ಕುಳಿತು ₹5,000ದಂತೆ ಮೂರು ದಿನ ಪಡೆಯಬೇಕಾದ ಸ್ಥಿತಿ ಉಂಟಾಗಿದೆ” ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.

“ಅಂಜೆ ಕಚೇರಿಯಲ್ಲಿ ಹಣ ಪಡೆಯಬೇಕಿದ್ದರೆ ಮುಂಚಿತವಾಗಿ ಪಾಸ್‌ ಪುಸ್ತಕ  ಕೊಡಬೇಕು, ಅದರಲ್ಲಿ ದಿನಕ್ಕೆ ₹35,000 ಮಾತ್ರ ಕೊಡುತ್ತಿದ್ದು, ₹5,000ದಂತೆ ಏಳು ಜನಕ್ಕೆ ಹಣ ಕೊಟ್ಟು ಹಣ ಖಾಲಿ ಆಗಿದೆ ಎಂದು ಹೇಳುತ್ತಾರೆ. ಅಂಚೆ ಕಚೇರಿಗೆ ಬಂದರೂ ಹಣ ಸಿಗದೆ ಹಿಂದಿರುಗಬೇಕಾಗಿದೆ” ಎಂದು ಅಸಮಾಧಾನ ವ್ಯಕ್ತಪಡಿಸಿದರು.

“ಕೆಲವು ಸಮಯ ಪೋಸ್ಟ್‌ಮ್ಯಾನ್‌ ಮತ್ತು ಸಾರ್ವಜನಿಕರ ನಡುವೆ ಗದ್ದಲ ನಡೆಯಿತು. ನಮ್ಮ ಹಣವನ್ನು ನಮಗೆ ಕೊಡಿ, ಇಲ್ಲವಾದಲ್ಲಿ ಹಣ ಕೊಡಲು ಆಗುವುದಿಲ್ಲವೆಂದು ಬರೆದುಕೊಡಿ” ಎಂದು ಆಕ್ರೋಶ ವ್ಯಕ್ತಪಡಿಸಿದರು.

“ಅಂಚೆ ಇಲಾಖೆಯಲ್ಲಿ ಹಣದ ಮಿತಿ ಇರುತ್ತದೆ. ಅದನ್ನು ನಮ್ಮ ವೈಯಕ್ತಿಕವಾಗಿ ರಿಸ್ಕ್‌ ತೆಗೆದುಕೊಂಡು ಜನರಿಗೆ ಹಂಚಬೇಕಿದೆ. ಹಿಂದಿನ ದಿನಗಳಲ್ಲಿ ಪಿಂಚಣಿ ಮಾತ್ರ ಕೊಡಬೇಕಿತ್ತು. ಈಗ ಹಲವಾರು ರೀತಿಯಲ್ಲಿ ಹಣ ಬರುತ್ತಿದ್ದು, ಅದನ್ನು ಇಲ್ಲಿಂದಲೇ ಕೊಡಬೇಕಿದೆ. ಅಷ್ಟು ಹಣ ತಂದು ಇಲ್ಲಿ ಕೊಡಲು, ಹಣಕ್ಕೆ ಇಲ್ಲಿ ಭದ್ರತೆಯಿಲ್ಲ” ಎಂದು ಪೋಸ್ಟ್‌ಮ್ಯಾನ್‌ ರಮೇಶ್‌ ವಿವರಿಸಿದ್ದಾರೆ.

ಈ ಸುದ್ದಿ ಓದಿದ್ದೀರಾ? ವಿಜಯಪುರ | ಅಂಗನವಾಡಿ ನೌಕರರ ಹೋರಾಟ; ಖಾತೆಗೆ ಜಮೆಯಾಯಿತು 2019ರ ಗೌರವ ಧನ

ಸ್ಥಳದಲ್ಲಿ ಜಮಾಯಿಸಿದ್ದ ಜನರನ್ನು ನಿಯಂತ್ರಿಸಲಾಗದೆ ಪೋಸ್ಟ್‌ಮ್ಯಾನ್‌ ಅಲ್ಲಿಂದ ಪೋಸ್ಟ್‌ಮಾಸ್ಟರ್‌ಗೆ ಕರೆ ಮಾಡಿ ಅಲ್ಲಿನ ಸಮಸ್ಯೆಯ ಬಗ್ಗೆ ತಿಳಿಸಿದರು. ಪೋಸ್ಟ್‌ ಮಾಸ್ಟರ್‌ ವಿಜಯಕುಮಾರ್‌ ಜನರನ್ನು ಸಮಾಧಾನ ಮಾಡಿ ಇಲಾಖೆಯ ಹಿರಿಯ ಅಧಿಕಾರಿಗಳೊಂದಿಗೆ ಮಾತನಾಡಿ ಮುಂದೆ ಸಮಸ್ಯೆ ಬರದಂತೆ ಪರಿಹರಿಸಿಕೊಡುವ ಭರವಸೆ ನೀಡಿದ್ದಾರೆ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ನಮ್ಮನ್ನು ಬೆಂಬಲಿಸಿ

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಗದಗ | ₹5 ಕೋಟಿ ವೆಚ್ಚದಲ್ಲಿ 13 ಸ್ಮಾರಕಗಳ ರಕ್ಷಣೆ; ಕಾಮಗಾರಿಗೆ ಶಿಲಾನ್ಯಾಸ

13 ಅಸುರಕ್ಷಿತ ಸ್ಮಾರಕಗಳ ಸಂರಕ್ಷಣೆ ಮಾಡಲು ₹5 ಕೋಟಿ ವೆಚ್ಚದಲ್ಲಿ ಕಾಮಗಾರಿಗಳ...

ಕೊಪ್ಪಳ | ಗಣೇಶ ಚತುರ್ಥಿಯ ಮರುದಿನ ಮುಸ್ಲಿಮರ ಈ ಮನೆಯಲ್ಲಿ ಇಲಿ ಪೂಜೆ!

ಡೊಳ್ಳು ಹೊಟ್ಟೆ ಗಣಪನಿಗೆ ಮೂಷಿಕ(ಇಲಿ)ವು ವಾಹನ ಎಂಬುದು ಹಿಂದೂಗಳ ನಂಬಿಕೆ. ಗಣೇಶ...

ಮಂಡ್ಯ | ವಚನ ದರ್ಶನ ಪುಸ್ತಕದ ಮೂಲಕ ಬಸವಣ್ಣನ ಆಲೋಚನೆಗಳಿಗೆ ಧಕ್ಕೆ: ಮುಕುಂದರಾಜ್

ಕನ್ನಡ ಸಾರಸ್ವತ ಲೋಕದಲ್ಲಿ ವಚನ ದರ್ಶನ ಪುಸ್ತಕ ಹೊರತರುವ ಮೂಲಕ ಇತಿಹಾಸವನ್ನು...

ಗದಗ | ಗೋವಿಂದ ಪೈ ಜಯಂತಿ ಸರ್ಕಾರದಿಂದ ಆಚರಿಸಲು ಮನೋಹರ್ ಮೆರವಾಡೆ ಒತ್ತಾಯ

ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ಗೋವಿಂದ ಪೈ ಕೊಡುಗೆ ಅಪಾರವಾಗಿದೆ. ಅವರ ಜಯಂತಿಯನ್ನು...