ಶಿವಮೊಗ್ಗ | ಸ್ಮಾರ್ಟ್‌ ಸಿಟಿ ಅದ್ವಾನ: ಸಾರ್ವಜನಿಕರ ಪರದಾಟ ಕೇಳೋರು ಯಾರು?

Date:

ಭಾರೀ ನಿರೀಕ್ಷೆ ಹಾಗೂ ಪ್ರಚಾರದೊಂದಿಗೆ ಅನುಷ್ಠಾನಗೊಂಡಿದ್ದ ಸ್ಮಾರ್ಟ್ ಸಿಟಿ ಯೋಜನೆಯು ಈಗ ಜನರಿಗೆ ಸಂಕಷ್ಟ ತಂದೊಡ್ಡಿದೆ.

- Advertisement -

ಸ್ಮಾರ್ಟ್ ಸಿಟಿ ಯೋಜನೆಯಡಿ ಶಿವಮೊಗ್ಗ ನಗರದ ಚಿತ್ರಣವೇ ಬದಲಾಗಲಿದೆ. ಮೂಲಸೌಕರ್ಯ ವ್ಯವಸ್ಥೆಯಲ್ಲಿ ಆಮೂಲಾಗ್ರ ಸುಧಾರಣೆಯಾಗಲಿದೆ. ನೂರಾರು ಕೋಟಿ ರೂ. ಅನುದಾನ ಬರಲಿದೆ. ನಗರವು ಸ್ಮಾರ್ಟ್, ಹೈಟೆಕ್ ಆಗಲಿದೆ ಎಂದೆಲ್ಲ ಯೋಜನೆಯ ಪ್ರಾರಂಭದಲ್ಲಿ ಹೇಳಲಾಗಿತ್ತು. ಯಾವ ರೀತಿಯಲ್ಲಿ ನಗರ ಅಭಿವೃದ್ದಿಗೊಳಿಸಬೇಕು ಎಂಬ ಕುರಿತಂತೆ ಜನಾಭಿಪ್ರಾಯ ಕೂಡ ಸಂಗ್ರಹಿಸಲಾಗಿತ್ತು. ಆದರೆ, ದಿನಗಳೆದಂತೆ ಸ್ಮಾರ್ಟ್ ಸಿಟಿ ಯೋಜನೆ ಅನುಷ್ಠಾನಗೊಂಡ ನಂತರ, ನಾಗರಿಕರಲ್ಲಿದ್ದ ನಿರೀಕ್ಷೆಗಳೆಲ್ಲ ಹುಸಿಯಾಗುತ್ತಾ ಬರಲಾರಂಭಿಸಿತ್ತು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

SIR ವಿರೋಧಿ ಹೋರಾಟ: ಡಿಕೆಶಿ–ಮಮತಾ ತೋರಿದ ದಾರಿ ವಿಪಕ್ಷಗಳಿಗೆ...

ಭಾರತದ ಪ್ರಜಾಪ್ರಭುತ್ವದ ಅಡಿಪಾಯವೇ ನ್ಯಾಯಯುತ, ಸ್ವತಂತ್ರ ಹಾಗೂ ಪಾರದರ್ಶಕ ಚುನಾವಣೆ. ಆದರೆ, ಅಧಿಕಾರದ ಗದ್ದುಗೆ ಏರಿರುವ ಮೋದಿ-ಶಾ ಜೋಡಿ, ಈ ಅಡಿಪಾಯವನ್ನೇ (ಚುನಾವಣಾ ಆಯೋಗವನ್ನೇ) ತಮ್ಮ ಸೂತ್ರದ ಬೊಂಬೆ ಮಾಡಿಕೊಂಡಿದೆ. ಎಸ್‌ಐಆರ್‌ ಹೆಸರಿನಲ್ಲಿ...

ಪೊಲೀಸ್ ಇಲಾಖೆ ಸುಧಾರಣೆಗೆ 3 ಸಮಿತಿ; ಬದಲಾವಣೆ ಅಗತ್ಯವೇ?...

ಪೊಲೀಸ್‌ ಇಲಾಖೆಯ ಕಾರ್ಯವೈಖರಿಯಲ್ಲಿ ಸುಧಾರಣೆ, ಡಿಜಿಟಲ್‌ ಟಚ್‌ ಹಾಗೂ ನೇಮಕಾತಿ ವ್ಯವಸ್ಥೆಯ ಪುನರ್‌ರಚನೆಗೆ ರಾಜ್ಯ ಸರ್ಕಾರ ಉನ್ನತ ಮಟ್ಟದ 3 ತಜ್ಞರ ಸಮಿತಿಗಳನ್ನು ರಚಿಸಿದೆ. ಆದರೆ, ಪೊಲೀಸ್‌ ಠಾಣೆಗಳಲ್ಲಿ ಸಾರ್ವಜನಿಕರು ಎದುರಿಸುವ ಸಮಸ್ಯೆಗಳಿಂದ...

ಪಾಕಿಸ್ತಾನದಲ್ಲಿ ಅಹಿಂಸಾ ಮೂರ್ತಿಯ ‘ರಹಸ್ಯರಕ್ಷಣೆ’: ಕರಾಚಿಯಿಂದ ಇಸ್ಲಾಮಾಬಾದ್‌ಗೆ ಗಾಂಧಿ...

ಪಾಕಿಸ್ತಾನದ ಇಸ್ಲಾಮಾಬಾದ್‌ನಲ್ಲಿರುವ ಭಾರತೀಯ ಹೈಕಮಿಷನ್ ಕಚೇರಿಯ ಪ್ರವೇಶ ದ್ವಾರದಲ್ಲಿ ಮಹಾತ್ಮ ಗಾಂಧೀಜಿಯವರ ಭವ್ಯ ಕಂಚಿನ ಪ್ರತಿಮೆ ಇಂದಿಗೂ ಗಾಂಭೀರ್ಯದಿಂದ ನಿಂತಿದೆ. ಕೈಯಲ್ಲಿ ಊರುಗೋಲು ಹಿಡಿದು ದೂರದ ದಿಗಂತವನ್ನು ದಿಟ್ಟಿಸುವಂತಿರುವ ಈ ಬಾಪೂ ಪ್ರತಿಮೆಯು...

ಹಲವು ಕಾಮಗಾರಿಗಳ ಬಗ್ಗೆ ಸಾರ್ವಜನಿಕರಿಂದ ಭಾರೀ ಟೀಕೆಗಳು ವ್ಯಕ್ತವಾಗಿರುವ ನಡುವೆಯೇ ಅವೈಜ್ಞಾನಿಕವಾಗಿ ಕಾಮಗಾರಿಗಳ ಅನುಷ್ಠಾನ, ವಿಳಂಬ, ಕಳಪೆ ಗುಣಮಟ್ಟ ಸೇರಿದಂತೆ ಹತ್ತು ಹಲವು ದೂರುಗಳು ಕೇಳಿಬಂದಿದೆ. ಇದೆಂತ ಸ್ಮಾರ್ಟ್ ಸಿಟಿ? ಎಂದು ಶಿವಮೊಗ್ಗ ಜನರ ಪ್ರಶ್ನೆಯಾಗಿದೆ?

ಶಿವಮೊಗ್ಗ ನಗರದ ಬಿ ಎಚ್ ರಸ್ತೆಯಲ್ಲಿರುವ ಮೀನಾಕ್ಷಿ ಭವನ್, ಕೃಷ್ಣ ಕೆಫೆ, ಹೊಳೆ ಸ್ಟಾಪ್ ರಸ್ತೆ, ಹಾಗೂ ಮಹಾನಗರ ಪಾಲಿಕೆ ರಸ್ತೆಯಲ್ಲಿ ಬರುವ ಕಸ್ತೂರ್ಬಾ ಶಾಲೆ ಅಂಬೇಡ್ಕರ್ ಭವನದ ರಸ್ತೆಯ ಭಾಗಗಳಲ್ಲಿ ಸಣ್ಣ ಮಳೆ ಬಂದರೆ ಸಾಕು. ಎಲ್ಲವೂ ಅಯೋಮಯವಾಗುತ್ತದೆ. ಮಳೆಗೆ ರಸ್ತೆ ತುಂಬಾ ನೀರು ತುಂಬುತ್ತದೆ. ಸಮರ್ಪಕ ಒಳಚರಂಡಿ ವ್ಯವಸ್ಥೆ ಇಲ್ಲದ ಕಾರಣ ವಾಹನ ಸವಾರರು ಪರದಾಟ ನಡೆಸಬೇಕಿದೆ.

ರಸ್ತೆಯಲ್ಲೇ ನೀರು ತುಂಬುವುದರಿಂದ ವಾಹನ ಸವಾರರು ಸುತ್ತಮುತ್ತಲಿನ ವಾಹನ ಸವರರಿಗೆ ಹಾಗೂ ಅಕ್ಕಪಕ್ಕ ಓಡಾಡುವ ಸಾರ್ವಜನಿಕರಿಗೆ ಕೆಸರು ನೀರನ್ನೆರಚಿ ಪ್ರಯಾಣಿಸಬೇಕಿದೆ. ಇವೆಲ್ಲವೂ ಸ್ಮಾರ್ಟ್ ಸಿಟಿ ಕಳಪೆ ಕಾಮಗಾರಿಗೆ ಹಿಡಿದ ಕೈಗನ್ನಡಿ ಆಗಿದೆ.

ಹಾಗೆಯೇ ನಗರದ ಹಲವು ಭಾಗಗಳಲ್ಲಿ ವಿದ್ಯುತ್ ಕಂಬದಲ್ಲಿ ತಂತಿಗಳು ನೇತಾಡುತ್ತಿದ್ದು, ಸಾರ್ವಜನಿಕರ ಬಲಿಗೆ ಕಾಯುತ್ತಿದೆ. ಯಾಕೆಂದರೆ ಅಪಾಯ ಕಟ್ಟಿಟ್ಟ ಬುತ್ತಿ ಆಗಿದೆ.

ಶಿವಮೊಗ್ಗದ ಜನರು ಎದುರಿಸುತ್ತಿರುವ ಸಮಸ್ಯೆಗಳ ಸಂಬಂಧ ಶಿವಮೊಗ್ಗ ಸ್ಮಾರ್ಟ್ ಸಿಟಿ ನಿರ್ದೇಶಕರಾದ ರಾಜಣ್ಣ ಈ.ದಿನ.ಕಾಮ್ ಜೊತೆಗೆ ಮಾತನಾಡಿ, ” ಶಿವಮೊಗ್ಗ ಸ್ಮಾರ್ಟ್ ಸಿಟಿ ಕಾಮಗಾರಿ ಎಲ್ಲವು ಜೂನ್ ತಿಂಗಳಿಗೆ ಮುಗಿದಿದೆ. ಈವಾಗ ಏನಿದ್ದರೂ ಆಡಿಟ್ ಆಗುತ್ತಿದೆ. ಹಾಗಾಗಿ ನಮಗೆ ಇದು ಜವಾಬ್ದಾರಿ ಇಲ್ಲ. ಜೊತೆಗ್ ವಿದ್ಯುತ್ ವಿಚಾರ ಕೇವಲ 10% ನಮ್ಮ ಮೇಲಿದೆ. ಉಳಿದಿದ್ದೆಲ್ಲ ಮೆಸ್ಕಾಂ ವ್ಯಾಪ್ತಿಯಲ್ಲಿದೆ. ಹಾಗಾಗಿ ಮೆಸ್ಕಾಂಗೆ ಇದರ ಕುರಿತು ತಿಳಿಸಿ” ಎಂದು ಕೈ ತೊಳೆದುಕೊಂಡರು.

ಶಿವಮೊಗ್ಗ ಸ್ಮಾರ್ಟ್ ಸಿಟಿ ಇಇ ವಿಜಯ್ ಕುಮಾರ್ ಅವರನ್ನು ಸಂಪರ್ಕ ಮಾಡಿದಾಗ, ದೂರುಗಳು ಬಂದಿದ್ದು, ಮೀನಾಕ್ಷಿ ಭವನ್ ಸ್ಥಳಕ್ಕೆ ತೆರಳಿ ಪರಿಶೀಲನೆ ಮಾಡಿ ಸರಿಪಡಿಸಿಕೊಡಲು ಪ್ರಯತ್ನಿಸುವೆ” ಎಂದು ತಿಳಿಸಿದ್ದಾರೆ.

WhatsApp Image 2024 08 27 at 9.06.26 PM

ಮಹಾನಗರ ಪಾಲಿಕೆಯ ಎ ಇ ಸ್ವಾತಿ ನಾಯ್ಕ್ ಅವರನ್ನು ಸಂಪರ್ಕ ಮಾಡಿದಾಗ ಇದು ರಾಷ್ಟ್ರೀಯ ಹೆದ್ದಾರಿ ವಿಭಾಗಕ್ಕೆ ಬರುವುದಾಗಿ ತಿಳಿಸಿದ್ದಾರೆ. ನಂತರ ರಾಷ್ಟ್ರೀಯ ಹೆದ್ದಾರಿ ವಿಭಾಗದವರನ್ನು ಸಂಪರ್ಕ ಮಾಡಿದಾಗ ಇದು ಪಿಡಬ್ಲ್ಯೂಡಿಗೆ ಬರುವುದಾಗಿ ತಿಳಿಸಿದ್ದಾರೆ.

ನಂತರ ಪಿಡಬ್ಲ್ಯೂಡಿ ಸದಾನಂದ ಮುಖ್ಯ ಇಂಜಿನಿಯರ್ ಅವರನ್ನು ಸಂಪರ್ಕ ಮಾಡಿದಾಗ, “ಇದು ಸ್ಮಾರ್ಟ್ ಸಿಟಿ ವ್ಯಾಪ್ತಿಯಲ್ಲೆ ಬರುತ್ತದೆ. ಫುಟ್ ಪಾಥಲ್ಲಿ ಕಂಬಿ ಹಾಕುವುದು, ರಸ್ತೆ ಯುಜಿಡಿ ಎಲ್ಲವು ಅವರಿಗೆ ಬಿಟ್ಟು ಕೊಡಲಾಗಿದೆ. ಹಾಗಾಗಿ ಇದು ಅವರ ವ್ಯಾಪ್ತಿಯಲ್ಲೆ ಸರಿಯಾಗಬೇಕಿದೆ” ಎಂದು ತಿಳಿಸಿದ್ದಾರೆ. ಸ್ಮಾರ್ಟ್ ಸಿಟಿ ಇಂಜಿನಿಯರ್‌ಗಳು ಹೊಳೆ ಬಸ್ ಸ್ಟಾಪ್ ಹಾಗೂ ಫುಟ್ ಪಾತ್ ಕೆಲಸ ಎಲ್ಲವು ನಮ್ಮ ವ್ಯಾಪ್ತಿಯಲ್ಲೆ ಆಗಿರುವುದು. ಆದರೆ ಮಧ್ಯೆ ಇರುವ ರಸ್ತೆ ಮಾತ್ರ ನಮ್ ದಲ್ಲ ಎಂದು ಹೇಳುತ್ತಿದ್ದಾರೆ. ಅಧಿಕಾರಿಗಳ ‘ನಮ್ಮದಲ್ಲ, ಅವರದ್ದು’ ಎಂಬ ಮಾತುಗಳಿಂದಾಗಿ ಸಾರ್ವಜನಿಕರು ಸಂಕಷ್ಟಕ್ಕೀಡಾಗಿರುವುದಂತೂ ಮಾತ್ರ ವಾಸ್ತವ. ಅಧಿಕಾರಿಗಳ ಈ ನಡೆಗೆ ಸಾರ್ವಜನಿಕರು ಹಿಡಿಶಾಪ ಹಾಕಿದ್ದಾರೆ.

WhatsApp Image 2024 08 27 at 9.06.25 PM

ಒಳಚರಂಡಿಗೆ ನೀರು ಹೋಗಲು ಸರಿಯಾಗಿ ಹರಿದು ಹೋಗುವ ವ್ಯವಸ್ಥೆಯನ್ನು ಯಾರು ಮಾಡಿಕೊಡಬೇಕು ಎಂಬ ಪ್ರಶ್ನೆಗೆ ಉತ್ತರ ಸಿಗಬೇಕಿದೆ. 1200₹ ಕೋಟಿ ವೆಚ್ಚದಲ್ಲಿ ಶಿವಮೊಗ್ಗ ಸ್ಮಾರ್ಟ್ ಸಿಟಿ ಕಾಮಗಾರಿ ಲೆಕ್ಕ ತೋರಿಸುತ್ತಿದ್ದಾರೆ. ಆದರೆ ಸರಿಯಾಗಿ ಕೆಲಸಗಳು ಆಗಿಲ್ಲ. ಆಗಿರುವ ಕೆಲಸಗಳು ಸಹ ಕಳಪೆ ಕಾಮಗಾರಿ ಆಗಿರುವುದು ಕಣ್ಣ ಮುಂದಿದೆ. ಇದಕ್ಕೆಲ್ಲ ಶಿವಮೊಗ್ಗ ಸಂಸದರಾದ ಬಿ ವೈ ರಾಘವೇಂದ್ರ ಅವರು ಯಾವಾಗ ಪರಿಹಾರ ಕಂಡುಕೊಳ್ಳುತ್ತಾರೋ ಕಾದುನೋಡಬೇಕಿದೆ.

ಸ್ಮಾರ್ಟ್ ಸಿಟಿ
WhatsApp Image 2025 11 17 at 5.17.05 PM
ರಾಘವೇಂದ್ರ, ಶಿವಮೊಗ್ಗ
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಉಡುಪಿ | ತುಳುನಾಡ ರಕ್ಷಣಾ ವೇದಿಕೆ ಮಹಿಳಾ ಘಟಕದಿಂದ ಅರ್ಥಪೂರ್ಣ ಗಾಂಧಿ ಜಯಂತಿ

ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ ಜಯಂತಿಯ ಅಂಗವಾಗಿ ತುಳುನಾಡ ರಕ್ಷಣಾ ವೇದಿಕೆ (ರಿ.)...

ಉಡುಪಿ | ಸಮುದಾಯದ ಅಭಿವೃದ್ಧಿಗೆ ಉದ್ಯಮಿಗಳ ಒಗ್ಗಟ್ಟು ಅಗತ್ಯ: ಮುಮ್ತಾಜ್ ಮನ್ಸೂರಿ

ನಮ್ಮ ಸಮುದಾಯದ ದುರ್ಬಲ ವರ್ಗಗಳನ್ನು ಮೇಲಕ್ಕೆತ್ತಲು ಎಲ್ಲರೂ ಬೆಂಬಲ ಮತ್ತು ಸಹಕಾರದೊಂದಿಗೆ...

ರಾಯಚೂರು | ಎಸ್‌ಐಆರ್ ವಿರೋಧಿಸಿ ಪ್ರತಿಭಟನೆ: ಜ್ಞಾನೇಶ ಕುಮಾರ ರಾಜೀನಾಮೆಗೆ ನಾಗರಿಕ ವೇದಿಕೆ ಆಗ್ರಹ

ಕೇಂದ್ರ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ ಕುಮಾರ ಅವರ ರಾಜೀನಾಮೆಗೆ ಆಗ್ರಹಿಸಿ...