ಭದ್ರಾವತಿ | ಜುಗಾರಿ ಅಡ್ಡೆ ಬಗ್ಗೆ ಮಾಹಿತಿ ನೀಡಿದ್ದಕ್ಕೆ ಸಾಮಾಜಿಕ ಕಾರ್ಯಕರ್ತನ ಮೇಲೆ ಹಲ್ಲೆ!

Date:

ಭದ್ರಾವತಿ ಅಕ್ರಮ ಇಸ್ಪೀಟು, ತೂರಾ ಬಿಲ್ಲೆ ಜುಗಾರಿ ಅಡ್ಡೆ ಮಾಹಿತಿ ನೀಡಿದಕ್ಕೆ ನನ್ನ ಮೇಲೆ ಹಲ್ಲೆಯಾಗಿದೆ ಎಂದು ಗೋಕುಲ ಕೃಷ್ಣ ಎಂಬುವವರು ಭದ್ರಾವತಿ ನ್ಯೂ ಟೌನ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

- Advertisement -

ಗೋಕುಲ ಕೃಷ್ಣ ಅವರು ಭದ್ರಾವತಿಯ ಸಾಮಾಜಿಕ ಕಾರ್ಯಕರ್ತರಾಗಿದ್ದಾರೆ. ಭದ್ರಾವತಿಯ ಅರಣ್ಯ ಪ್ರದೇಶಗಳಲ್ಲಿ ನಡೆಯುತ್ತಿದ್ದ OC, ಇಸ್ಪೀಟು, ತೂರಾ ಬಿಲ್ಲೆ ಅಕ್ರಮದ ಬಗ್ಗೆ SP ಕಚೇರಿಗೆ ಮಾಹಿತಿ ನೀಡಿದ್ದ ಬೆನ್ನಲ್ಲಿ ಅವರ ಮೇಲೆ ಹಲ್ಲೆಯಾಗಿರುವುದಾಗಿ ತಿಳಿದುಬಂದಿದೆ. ಕೈ ಮರದ ಹತ್ತಿರ, ತಮ್ಮಡಿಹಳ್ಳಿ, ರಾಮಿನಕೊಪ್ಪ ಹೀಗೆ ಮೂರು ಕಡೆ ಕಾಡಿನಲ್ಲಿ ನಡೆಯುತ್ತಿದ್ದ ಜುಗಾರಿ ಅಡ್ಡೆ ಬಗ್ಗೆ ಎಂದು SP ಸ್ಕ್ವಾಡ್ ಗೆ ಲೊಕೇಶನ್ ಕೊಟ್ಟಿದ್ದರು.ಲೊಕೇಶನ್ ಹಾಕಿ ವಾಪಸ್ ಬರುವಾಗಲೇ ಫಾಲೋ ಮಾಡಿ ಅಟ್ಯಾಕ್ ಮಾಡಲಾಗಿದೆ. ಸ್ಪಾಟ್ ಗೆ ಹೋಗಿ ಲೊಕೇಶನ್ ಹಾಕಿ ಭದ್ರಾವತಿಗೆ ವಾಪಸ್ ಬರುತ್ತಿದ್ದಾಗ 4 ಜನ ಬೈಕ್ ನಲ್ಲಿ ಫಾಲೋ ಮಾಡಿ ಕಾರಿಗೆ ಅಡ್ಡ ಹಾಕಿ ದಾಳಿ ಮಾಡಿದ್ದಾರೆ ಎಂದು ತಿಳಿದುಬಂದಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಪಾಕಿಸ್ತಾನದಲ್ಲಿ ಅಹಿಂಸಾ ಮೂರ್ತಿಯ ‘ರಹಸ್ಯರಕ್ಷಣೆ’: ಕರಾಚಿಯಿಂದ ಇಸ್ಲಾಮಾಬಾದ್‌ಗೆ ಗಾಂಧಿ...

ಪಾಕಿಸ್ತಾನದ ಇಸ್ಲಾಮಾಬಾದ್‌ನಲ್ಲಿರುವ ಭಾರತೀಯ ಹೈಕಮಿಷನ್ ಕಚೇರಿಯ ಪ್ರವೇಶ ದ್ವಾರದಲ್ಲಿ ಮಹಾತ್ಮ ಗಾಂಧೀಜಿಯವರ ಭವ್ಯ ಕಂಚಿನ ಪ್ರತಿಮೆ ಇಂದಿಗೂ ಗಾಂಭೀರ್ಯದಿಂದ ನಿಂತಿದೆ. ಕೈಯಲ್ಲಿ ಊರುಗೋಲು ಹಿಡಿದು ದೂರದ ದಿಗಂತವನ್ನು ದಿಟ್ಟಿಸುವಂತಿರುವ ಈ ಬಾಪೂ ಪ್ರತಿಮೆಯು...

ಗಾಂಧಿಯ ಆರ್ಥಿಕ ಸಾಮಾಜಿಕ ಸಂಕೇತಗಳು: ಉಪ್ಪು, ಖಾದಿ, ಚರಕ...

ಗ್ರಾಮೀಣ ಭಾರತದ ಆರ್ಥಿಕತೆ ಮನಗಂಡಿದ್ದ ಗಾಂಧಿ ಹಾಲಿನ ಬಗೆಗಿನ ಕಠೋರ ನಿಲುವನ್ನು ನಿರಾಕರಿಸಿ ತನ್ನನ್ನು ತಾನು ಮೇಕೆಯ ಮಮಕಾರದ ಹಾಲಿಗೆ ಕೊಟ್ಟುಕೊಂಡಿದ್ದರು. ಈಗಿನ ಪಶುಪಾಲಕ ಸಮುದಾಯಗಳ ಸಾವಯವ ಬದುಕಿನ ರೀತಿ ನೀತಿ ಗಮನಿಸಿ......

ಈ ದಿನ ವಿಶೇಷ | ಗಾಂಧೀ ಎಂದರೆ ಏನು?

ಇಂದು ಮಹಾತ್ಮಾ ಗಾಂಧೀಜಿಯವರ ಜನ್ಮದಿನ. ಅವರ ವಿಚಾರ, ಚಿಂತನೆ, ನಡೆ-ನುಡಿ... ಅವರನ್ನು ಗ್ರಹಿಸಲು ಅವರ ದಿನಚರಿಯ ಭಾಗವೇ ಆಗಿದ್ದ ಕೆಲವು ತುಣುಕುಗಳು ನಿಮ್ಮ ಓದಿಗಾಗಿ... ಆರೆಸ್ಸೆಸ್‌ಗೊಂದು ಕಿವಿಮಾತುಅದು ದೇಶ ವಿಭಜನೆಯ ಕಾಲ. ಎಲ್ಲೆಲ್ಲೂ ಹಿಂದೂ-ಮುಸ್ಲಿಂ...

ಈ ಸಂದರ್ಭದಲ್ಲಿ ಕಾರಿನ ರೈಟ್ ಸೈಡ್ ಗ್ಲಾಸ್ ಗೆ ದೊಣ್ಣೆಯಿಂದ ಹೊಡೆತದಿಂದ , ಹಿಂದಿನ ಗ್ಲಾಸ್ ಪುಡಿ, ಪುಡಿಯಾಗಿದೆ. ನಂತರ ಮಚ್ಚು ಹಿಡಿದು ಹಲ್ಲೆಗೆ ಯತ್ನಿಸಿರುವುದಾಗಿ ಹಾಗೂ ಜೀವ ಬೆದರಿಕೆ ಒಡ್ಡಿರುವುದಾಗಿ ಆರೋಪಿಸಿದ್ದಾರೆ .”ಪೊಲೀಸರಿಗೆ ಮಾಹಿತಿ ಕೊಟ್ಟಿದ್ದಕ್ಕೆ ಬಿಡಲ್ಲ” ಎಂದು ಜೀವ ಬೆದರಿಕೆ ಹಾಕಿ ನ್ಯೂಟೌನ್ ಪೋಲಿಸ್ ಠಾಣೆಯ ವರೆಗೂ ಬೆನ್ನಟ್ಟಿದ ದುಷ್ಕರ್ಮಿಗಳು ಎಂದು ದೂರಿನಲ್ಲಿ ತಿಳಿಸಿದ್ದಾರೆ.CCTV ಫೂಟೇಜ್ ಇದ್ದರೂ Arms Act ಹಾಕದೆ ಸಾಮಾನ್ಯ ಕೇಸ್ ಹಾಕಿದ್ದಾರೆ ಎಂದು ಗೋಕುಲ ಕೃಷ್ಣ ಅವರು ಪೊಲೀಸರ ನಿರ್ಲಕ್ಷ್ಯ ಎಂದು ಆರೋಪ ಮಾಡಿದ್ದಾರೆ.

493841

ಕಾಡಲ್ಲಿ ಜಿಂಕೆ ಹೊಡೆದು ಅಡ್ಡೆಯಲ್ಲಿ ಪಾರ್ಟಿ, ಯುವಕರು ದುಶ್ಚಟಕ್ಕೆ ಬಲಿಯಾಗುತ್ತಿದ್ದಾರೆ ಎಂದು ತಿಳಿಸಿದ್ದಾರೆ – ಅರಣ್ಯ ಇಲಾಖೆಗೂ ಮಾಹಿತಿ ನೀಡಿದ್ದೆ ಎಂಬ ಮಾಹಿತಿ ಸಂತ್ರಸ್ತರದ್ದಾಗಿದೆ. ಸುಲ್ತಾನ್ ಮಟ್ಟಿಯಿಂದ 2-3 ಕಿ.ಮೀ ದೂರದಲ್ಲಿ ನಡೆಯುವ ಈ ಅಡ್ಡೆಗೆ ಕಾಲೇಜು ಹುಡುಗರು, ಕೂಲಿ ಕಾರ್ಮಿಕರು ಹೋಗುತ್ತಿದ್ದಾರೆ ಇವರುಗಳು ಇದಕ್ಕೆ ಬಲಿಯಾಗುತ್ತಿರುವುದಾಗಿ ಆರೋಪಿಸಿದ್ದಾರೆ.ಹಾಗೂ ಇಲ್ಲಿ ಕಾಯುವವರಿಗೆ ದಿನಕ್ಕೆ 1000 ರೂ, ಅಡ್ಡೆ ನಡೆಸುವವರಿಗೆ 1.5 ಲಕ್ಷ ಲಾಭ ಎಂದು ಆರೋಪಿಸಿದ್ದಾರೆ.ಇದೆಲ್ಲ ವಿಚಾರ ಪ್ರಶ್ನಿಸಿದ್ದಕ್ಕೆ ನಮ್ಮ ಮೇಲೆ ಅಟ್ಯಾಕ್ ಆಗಿದೆ ಎಂದು ಗೋಕುಲ್ ಕೃಷ್ಣ ಆಕ್ರೋಶ ಹೊರಹಾಕಿದ್ದಾರೆ.

Advertisements
493930

ಗೋಕುಲ ಕೃಷ್ಣ ಅವರು ನೀಡಿದ ದೂರಿನ ಅನ್ವಯ BNS ಸೆಕ್ಷನ್ ನಲ್ಲಿ FIR ದಾಖಲಿಸಿರುವ ಭದ್ರಾವತಿ ಪೊಲೀಸರು.ಅಪರಿಚಿತ 3 ಬೈಕ್ ಸವಾರರ ವಿರುದ್ಧ BNS 2023 – U/S 126(2), 352, 351(2), 324(3), 3(5) ಅಡಿಯಲ್ಲಿ ಭದ್ರಾವತಿಯ ನ್ಯೂ ಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಮುಂದುವರೆಸಿದ್ದಾರೆ.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಹವಾಮಾನ | ರಾಜ್ಯದಲ್ಲಿ ಮುಂದಿನ 24 ಗಂಟೆಯೊಳಗೆ ಗಾಳಿ ಸಹಿತ ಮಳೆ ಸೂಚನೆ

ಮುಂದಿನ 24 ಗಂಟೆಗಳಲ್ಲಿ ಕರ್ನಾಟಕದ ಉತ್ತರ ಮತ್ತು ದಕ್ಷಿಣ ಒಳನಾಡು, ಕರಾವಳಿ...

ಶರಾವತಿ ಪಂಪ್ಡ್‌ ಸ್ಟೋರೇಜ್‌ ಯೋಜನೆ: ಪರಿಷ್ಕೃತ ಪ್ರಸ್ತಾವನೆ ಸಲ್ಲಿಸಿದ ಕೆಪಿಸಿಎಲ್‌

ಶರಾವತಿ ಪಂಪ್ಡ್‌ ಸ್ಟೋರೇಜ್‌ ಯೋಜನೆ ಪ್ರಸ್ತಾಪಕ್ಕೆ ಹೈಕೋರ್ಟ್‌ ತಡೆಯಾಜ್ಞೆ ಬೆನ್ನಲ್ಲೇ, ಕೆಪಿಸಿಎಲ್...

ಶಿವಮೊಗ್ಗ | ಗಾಂಧೀಜಿ ಶಾಂತಿ ತತ್ವವನ್ನು ದೇಶಕ್ಕೆ ಕೊಡುಗೆಯಾಗಿಸಿದ್ದಾರೆ: ಡಾ. ಪ್ರಹ್ಲಾದಪ್ಪ

ಗಾಂಧೀಜಿ ಮತ್ತು ಅಂಬೇಡ್ಕರ್ ಅವರನ್ನು ಒಂದೇ ದೃಷ್ಟಿಕೋನದಲ್ಲಿ ನೋಡುವ ಅಗತ್ಯವಿದೆ. ಮಹಾತ್ಮ...

ತೀರ್ಥಹಳ್ಳಿ | ಗುಡ್ಡ ಕುಸಿತ: ಮಗು ಸೇರಿ ಮೂವರ ಸಾವು, ಕೂಲಿಗಾಗಿ 4 ದಿನದ ಹಿಂದಷ್ಟೇ ಊರು ಬಿಟ್ಟಿದ್ದ ಕುಟುಂಬ

ದುಡಿಮೆ ಅರಸಿ ಹೋಗಿದ್ದ ಕೊಪ್ಪಳದ ಕುಟುವೊಂದು ಪ್ರಕೃತಿ ವಿಕೋಪಕ್ಕೆ ಪ್ರಾಣ ತೆತ್ತಿದೆ....