ಮೈಸೂರು | ನೀರು-ಒಳಚರಂಡಿ ಕರ ಹೆಚ್ಚಳ ರದ್ದುಪಡಿಸುವಂತೆ ಪ್ರತಿಭಟನೆ ನಡೆಸಿದ ಎಸ್‌ಯುಸಿಐ(ಸಿ)

Date:

ಮೈಸೂರಿನ ಮಹಾನಗರ ಪಾಲಿಕೆ ಕಚೇರಿ ಆವರಣದಲ್ಲಿ ನೀರು ಮತ್ತು ಒಳಚರಂಡಿ ಕರ ಹೆಚ್ಚಳ ರದ್ದುಪಡಿಸುವಂತೆ ಆಗ್ರಹಿಸಿ ಎಸ್‌ಯುಸಿಐ(ಸಿ) ಸಂಘಟನೆಯ ಜಿಲ್ಲಾ ಸಮಿತಿ ಕಾರ್ಯಕರ್ತರು ಪ್ರತಿಭಟನೆ ನಡೆಸಿ, ಮನವಿ ಸಲ್ಲಿಸಿದರು.

- Advertisement -

ನೀರಿನ ಕರ, ಒಳಚರಂಡಿ ಕರ ಏರಿಕೆ ಮಾಡಲು ಮುಂದಾಗಿರುವ ಮೈಸೂರು ಮಹಾ ನಗರಪಾಲಿಕೆಯ ತೀರ್ಮಾನವನ್ನು ಖಂಡಿಸಿದ ಕಾರ್ಯಕರ್ತರು, ನೀರಿನ ಕರವನ್ನು ಕನಿಷ್ಠ ಶೇ.25%ರಷ್ಟು ಹೆಚ್ಚಿಸಲಾಗಿದೆ. ನೀರಿನ ಕರದ ಶೇ.50%ರಷ್ಟು ಇದ್ದ ಒಳಚರಂಡಿ ಶುಲ್ಕವನ್ನು ಶೇ.40%ಕ್ಕೆ ನಿಗದಿ ಮಾಡಲಾಗಿದೆ. ಇದರಿಂದ, ಒಳಚರಂಡಿ ಶುಲ್ಕವು ಸುಮಾರು ಶೇ.75%ರಷ್ಟು ಏರಿಕೆ ಮಾಡಿದಂತಾಗಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಬ್ರಿಟಿಷ್ ಕಾಲದ ʼಗುಲಾಮಗಿರಿʼ ಕಾನೂನುಗಳೇ ಇಂದಿನ ಪೊಲೀಸ್‌ ವ್ಯವಸ್ಥೆಯ...

ಸ್ವಾತಂತ್ರ್ಯ ಬಂದು ದಶಕಗಳೇ ಕಳೆದಿದ್ದರೂ, ನಾವಿನ್ನೂ ಬ್ರಿಟಿಷರು ಭಾರತೀಯರನ್ನು ದಮನ ಮಾಡಲು ರೂಪಿಸಿದ 1861ರ ಪೊಲೀಸ್ ಕಾಯಿದೆಯ ನೆರಳಿನಲ್ಲೇ ಬದುಕುತ್ತಿದ್ದೇವೆಯೇ? ಖಾಕಿ ಪಡೆಯನ್ನು 'ಪ್ರಜೆಗಳ ರಕ್ಷಕ'ನಾಗಿಸಬೇಕಿದ್ದ ವ್ಯವಸ್ಥೆ, ಇಂದಿಗೂ ರಾಜಕಾರಣಿಗಳ ಕೈಗೊಂಬೆಯಾಗಿ ಉಳಿದುಕೊಳ್ಳಲು...

ಯಾರು ಹಿತವರು ಈ ಇಬ್ಬರೊಳಗೆ? ನೇಹಾ ಬೋರಾ ಅಭಿಜಿತ್...

“ಹೋಲಿಕೆ ಬೇಡ, ಒಗ್ಗಟ್ಟು ಬೇಕು. ನಾವೆಲ್ಲರೂ ಒಟ್ಟಾಗಿ ಚುನಾವಣಾ ಆಯೋಗದ ಅಕ್ರಮಗಳ ವಿರುದ್ಧ ಹೋರಾಡಬೇಕು” ಎಂದು ನೇಹಾ ಬರೆದರೆ, ಅದಕ್ಕೆ ಅಭಿಜೀತ್ ಉತ್ತರ- “ಇಂಕ್ವಿಲಾಬ್ ಜಿಂದಾಬಾದ್” ನೇಹಾ ಬೋರಾ ಮತ್ತು ಅಭಿಜಿತ್ ದೀಪ್ಕೆ ನಡುವೆ...

ಸ್ವತಂತ್ರ ಸಾಂವಿಧಾನಿಕ ಸಂಸ್ಥೆಗಳ ಮೇಲಿನ ನಂಬಿಕೆಯನ್ನು ಕಸಿದುಕೊಳ್ಳುತ್ತಿರುವ ಚುನಾವಣಾ...

ನ್ಯಾಯಾಲಯ ಮತ್ತು ಚುನಾವಣಾ ಆಯೋಗಗಳ 'ಸ್ವತಂತ್ರತೆ' ಎಂಬ ಮುಖವಾಡವೇ ಈಗ ಸರ್ಕಾರಕ್ಕೆ ರಕ್ಷಣಾ ಕವಚವಾಗಿ ಕೆಲಸ ಮಾಡುತ್ತಿದೆ. ಹೀಗಾಗಿ ಇವತ್ತು ವಿರೋಧ ಪಕ್ಷಗಳ ಆಕ್ರೋಶವೆಲ್ಲವೂ ಸಾಂವಿಧಾನಿಕ ಸಂಸ್ಥೆಗಳ ಕಡೆಗೆ ತಿರುಗಿದೆ. ಸರ್ಕಾರ ತೀರಾ...

ಮೈಸೂರು ಮಹಾ ನಗರಪಾಲಿಕೆಯ ಈ ಕ್ರಮದಿಂದ, ನೀರಿನ ಕನಿಷ್ಠ ಗೃಹಬಳಕೆಗೆ ಇದುವರೆಗೆ ಬರುತ್ತಿದ್ದ ಶುಲ್ಕ ₹165 ರೂಪಾಯಿ ಇನ್ನು ಮುಂದೆ ₹228 ರೂಪಾಯಿಗೆ ಏರಿಕೆಯಾಗಲಿದೆ. ಅಂದರೆ, ಇದು ಒಟ್ಟಾರೆ ಶೇ.40%ರಷ್ಟು ಏರಿಕೆಗೆ ಸಮ. ಇದಲ್ಲದೆ ವಾಣಿಜ್ಯ, ಕೈಗಾರಿಕಾ ಬಳಕೆಗಳ ದರವನ್ನು ಕೂಡ ಏರಿಕೆ ಮಾಡಲಾಗಿದೆ. ಈಗಾಗಲೆ ವಿದ್ಯುತ್, ಅಡುಗೆ ಅನಿಲ, ಬಸ್ ಮತ್ತು ರೈಲು ಪ್ರಯಾಣ, ಔಷಧ, ಆಸ್ತಿ ತೆರಿಗೆ, ಮನೆ ಬಾಡಿಗೆ ಇತ್ಯಾದಿ ಜೀವನಾವಶ್ಯಕ ಸರಕು ಮತ್ತು ಸೇವೆಗಳ ಬೆಲೆ ತೀವ್ರವಾಗಿ ಏರಿಕೆ ಆಗಿರುವಾಗ ನೀರಿನ ದರ ಹೆಚ್ಚಳವು ಗಾಯದ ಮೇಲೆ ಉಪ್ಪು ಸುರಿದಂತಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಬೆಲೆ ಏರಿಕೆಯ ವಿಷವರ್ತುಲದಿಂದ ಜನರನ್ನು ಪಾರು ಮಾಡಬೇಕಾದ ಸರ್ಕಾರಗಳೇ ಇದಕ್ಕೆ ಕಾರಣವಾಗಿದ್ದು, ರಾಜಪ್ರಭುತ್ವದ ಕಾಲದಲ್ಲೇ ಕುಡಿಯುವ ನೀರನ್ನು ಮೂಲಭೂತ ಅವಶ್ಯಕತೆಯೆಂದು ಪರಿಗಣಿಸಿ ಉಚಿತವಾಗಿ ಪೊರೈಸುತ್ತಿದ್ದ ಮೈಸೂರಿನಲ್ಲಿ, ಪ್ರಜಾಪ್ರಭುತ್ವ ವ್ಯವಸ್ಥೆಯಡಿಯಲ್ಲಿ ಅದನ್ನು ಮಾರಾಟದ ಸರಕನ್ನಾಗಿ ಮಾಡಲು ಹೊರಟಿರುವುದು ನಾಚಿಕೆಗೇಡಿನ ಸಂಗತಿ. ಜನಪ್ರತಿನಿಧಿಗಳೇ ಇಲ್ಲದಿರುವ ಸಂದರ್ಭದಲ್ಲಿ ಮೈಸೂರು ಮಹಾ ನಗರಪಾಲಿಕೆಯ ಈ ತೀರ್ಮಾನ ಜನವಿರೋಧಿ ಮಾತ್ರವಲ್ಲ, ಜನತಂತ್ರ ವಿರೋಧಿಯೂ ಹೌದು ಎಂದು ಆಕ್ರೋಶ ವ್ಯಕ್ತಪಡಿಸಿದರು.

ಪ್ರಭಾವಿಗಳು ಕೋಟಿಗಟ್ಟಲೆ ತೆರಿಗೆ ಬಾಕಿ ಉಳಿಸಿಕೊಂಡಿದ್ದರು, ಅವರಿಂದ ಕರ ವಸೂಲಿ ಮಾಡದೆ ಉಳಿಸಿಕೊಂಡಿದೆ. ದುಂದುವೆಚ್ಚ, ಕಳಪೆ ಕಾಮಗಾರಿ, ಭ್ರಷ್ಟಾಚಾರಗಳಿಂದ ರೋಗಗ್ರಸ್ತವಾಗಿರುವ ಮಹಾ ನಗರಪಾಲಿಕೆಗೆ ಎಷ್ಟೇ ತೆರಿಗೆ ಪಾವತಿಸಿದರೂ ಏನೂ ಸುಧಾರಿಸುವುದಿಲ್ಲ ಎಂಬುದನ್ನು ಜನರು ಅನುಭವದಿಂದ ಕಲಿತಿದ್ದಾರೆ ಎಂದು ಆರೋಪಿಸಿದರು.

ಪಾಲಿಕೆ ಜನರ ಮೇಲೆ ಮತ್ತೆ ಮತ್ತೆ ಹೊರೆ ಹಾಕುವ ಮೊದಲು ಈ ಲೋಪಗಳನ್ನು ಸರಿಪಡಿಸಬೇಕು. ಮೋಟಾರು ಸೆಸ್ ನಿಗದಿ, ವಾಹನಗಳ ಮೇಲಿನ ಕರ ನಿಗದಿ ತೀರ್ಮಾನವನ್ನು ವಾಪಸ್ ಪಡೆದಿರುವುದು ಸ್ವಾಗತಾರ್ಹ. ಅದೇ ರೀತಿ ನೀರು ಹಾಗೂ ಒಳಚರಂಡಿ ಶುಲ್ಕದ ದುಬಾರಿ ಏರಿಕೆಯನ್ನು ತಕ್ಷಣವೇ ಕೈಬಿಡಬೇಕೆಂದು ಒತ್ತಾಯಿಸಿದರು.

ಈ ಸುದ್ದಿ ಓದಿದ್ದೀರಾ? ಮೈಸೂರು | ರಂಗಭೂಮಿ ಸಮಾಜದೊಂದಿಗೆ ಸಂವಾದ ನಡೆಸುವ ಜೀವಂತ ಕ್ಷೇತ್ರ: ಪ್ರೊ. ಓ ಎಲ್ ನಾಗಭೂಷಣಸ್ವಾಮಿ

ಮೈಸೂರು ಮಹಾನಗರ ಪಾಲಿಕೆಯ ಹೆಚ್ಚುವರಿ ಆಯುಕ್ತೆ ವೀಣಾ ಪ್ರತಿಭಟನಾಕಾರರಿಂದ ಮನವಿ ಪತ್ರ ಸ್ವೀಕರಿಸಿದರು. ಎಸ್‌ಯುಸಿಐ(ಸಿ) ಜಿಲ್ಲಾ ಕಾರ್ಯದರ್ಶಿ ಬಿ. ರವಿ, ಜಿಲ್ಲಾ ಸಮಿತಿ ಸದಸ್ಯರಾದ ಎಂ. ಉಮಾದೇವಿ, ಚಂದ್ರಶೇಖರ ಮೇಟಿ, ಜಿ. ಎಸ್. ಸೀಮಾ, ಪಿ.ಎಸ್. ಸಂಧ್ಯಾ, ಯಶೋಧರ, ಹರೀಶ್, ಸುನೀಲ್, ಸುಮಾ, ಬಸವರಾಜು, ಆಸಿಯಾ ಬೇಗಂ, ನೀತುಶ್ರೀ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದರು.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಶಿರಸಿ | ರಾಜೇಂದ್ರ ಸಿರ್ಸಿಕರ್‌ಗೆ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ಗೌರವ

ಶಿರಸಿ: ಪ್ರಾಣಿ-ಪಕ್ಷಿಗಳ ರಕ್ಷಣೆ ಮತ್ತು ಪುನರ್ವಸತಿ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿರುವ ಶಿರಸಿಯ ರಾಜೇಂದ್ರ...

ಧಾರವಾಡ | ಪೊಲೀಸ್ ಹೆಸರೇಳಿ ರೂ. 15,700 ವಂಚನೆ: ನಾಲ್ಕು ಬೈಕ್‍ಗಳು ನಗದು ವಶ

ಪೊಲೀಸ್ ಹೆಸರೇಳಿ ವ್ಯಕ್ತಿಯೊಬ್ಬರಿಂದ ₹15,700 ಹಣ ಪಡೆದು ವಂಚಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ...

ಗೋಕರ್ಣ | ಕುಡ್ಲೆ ಕಡಲತೀರದಲ್ಲಿ ಸಮುದ್ರ ಸುಳಿಗೆ ಸಿಲುಕಿದ್ದ ಬೆಂಗಳೂರಿನ ಇಬ್ಬರು ಪ್ರವಾಸಿಗರ ರಕ್ಷಣೆ

ಗೋಕರ್ಣ: ಸಮುದ್ರದಲ್ಲಿ ಈಜುತ್ತಿದ್ದ ವೇಳೆ ಅಪಾಯಕಾರಿ ಸುಳಿಗೆ ಸಿಲುಕಿದ ಬೆಂಗಳೂರಿನ ಇಬ್ಬರು...