ಗ್ರಾಮೀಣ ಬಡವರ ಉದ್ಯೋಗದ ಹಕ್ಕು ಕಸಿಯುವ ವಿಬಿ ಜಿ ರಾಮ್‌ ಜಿ ಮಸೂದೆಯ ಹುನ್ನಾರ: ಸಿಪಿಐಎಂ ಆರೋಪ

Date:

"ಕೇಂದ್ರ ಸರ್ಕಾರವು ಮನರೇಗಾವನ್ನು ಬಲಪಡಿಸಲು, ಸಾರ್ವತ್ರಿಕ ಮತ್ತು ಹಕ್ಕು ಆಧಾರಿತ ಉದ್ಯೋಗ ಖಾತರಿಯಾಗಿ ಅದರ ಪರಿಣಾಮಕಾರಿ ಅನುಷ್ಠಾನವನ್ನು ಖಚಿತಪಡಿಸಲು ರಾಜಕೀಯ ಪಕ್ಷಗಳು, ಕಾರ್ಮಿಕ ಸಂಘಗಳು ಮತ್ತು ಗ್ರಾಮೀಣ ಬಡವರ ಸಂಘಟನೆಗಳೊಂದಿಗೆ ಸಮಾಲೋಚನೆ ಮಾಡಬೇಕು"

ಕೇಂದ್ರ ಸರ್ಕಾರದ ‘ವಿಕಸಿತ್ ಭಾರತ್- ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕಾ ಮಿಷನ್(ಗ್ರಾಮೀಣ)(ವಿಬಿ ಜಿ ರಾಮ್‌ ಜಿ) ಮಸೂದೆ-2025 ಅನ್ನು ಪರಿಚಯಿಸುತ್ತಿರುವ ನಡೆ ‘ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಕಾಯ್ದೆ(ಮನರೇಗಾ)ಯನ್ನು ಬದಲಿಸುವ ಪ್ರಯತ್ನ ಎಂದು ಸಿಪಿಐ(ಎಂ) ಪೊಲಿಟ್‍ಬ್ಯುರೊ ಬಲವಾಗಿ ವಿರೋಧಿಸಿದೆ.

- Advertisement -

ಸಿಪಿಐಎಂ ಕಲಬುರಗಿ ಜಿಲ್ಲಾ ಸಮಿತಿಯಿಂದ ಕೇಂದ್ರ ಸರ್ಕಾರದ ವಿರುದ್ಧ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಕೆ ನೀಲಾ ಅವರು ಮಾತನಾಡಿ, “ಮನರೇಗಾಸೀಮಿತ ಕೆಲಸದ ಹಕ್ಕನ್ನು ಒದಗಿಸುವ ಸಾರ್ವತ್ರಿಕ ಬೇಡಿಕೆ ಚಾಲಿತ ಕಾನೂನು ಆಗಿದ್ದು, ಪ್ರಸ್ತಾವಿತ ಮಸೂದೆಯು ಈ ಕಾನೂನಿನ ಮೂಲ ಸ್ವರೂಪವನ್ನೇ ಸಂಪೂರ್ಣವಾಗಿ ನಿರಾಕರಿಸುತ್ತದೆ. ಬೇಡಿಕೆಗೆ ಅನುಗುಣವಾಗಿ ಹಣವನ್ನು ಹಂಚಿಕೆ ಮಾಡುವ ಕಾನೂನಾತ್ಮಕ ಜವಾಬ್ದಾರಿಯಿಂದ ಇದು ಕೇಂದ್ರ ಸರ್ಕಾರವನ್ನು ಮುಕ್ತಗೊಳಿಸುತ್ತದೆ” ಎಂದು ಟೀಕಿಸಿದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಕಲಬುರಗಿ | ‘ನಮ್ಮನ್ನ ಎಲ್ಲಿಗೆ ಕಳುಹಿಸುತ್ತೀರಿ?’: ತಗ್ಗಿನ ಬೇಲಿಯ...

92ಕ್ಕೂ ಅಧಿಕ ಸ್ಲಂ ಕುಟುಂಬಗಳ ಬದುಕು ಕೇವಲ ಜಮೀನಿನ ಹಕ್ಕಿನ ಪ್ರಶ್ನೆಯಲ್ಲ; ಅವರ ಸುರಕ್ಷಿತ ಓಡಾಟ, ಕುಡಿಯುವ ನೀರು ಹಾಗೂ ನಿತ್ಯದ ಬದುಕಿನ ಹಕ್ಕಿನ ಪ್ರಶ್ನೆಯೂ ಹೌದು. ನ್ಯಾಯಾಲಯದ ವಿಚಾರಣೆ ಅಂತಿಮಗೊಳ್ಳುವವರೆಗೆ ಯಾವುದೇ...

ಚುನಾವಣಾ ಆಯೋಗದ ಸಭೆ: ಪರಿಹಾರವಲ್ಲ, ತೇಪೆ ಹಚ್ಚುವ ಕಾರ್ಯಕ್ರಮ

ಅವೈಜ್ಞಾನಿಕ 'SIR' ಪ್ರಕ್ರಿಯೆ ಮತ್ತು ಆಯೋಗದೊಳಗಿನ ಭಿನ್ನಾಭಿಪ್ರಾಯಗಳು ಸಾರ್ವಜನಿಕವಾಗಿ ಬಯಲಾದ ಬೆನ್ನಲ್ಲೇ ಬಿಡುಗಡೆಯಾದ ಚುನಾವಣಾ ಆಯೋಗದ ಪತ್ರಿಕಾ ಪ್ರಕಟಣೆ, ತಪ್ಪುಗಳನ್ನು ತಿದ್ದುವ ಬದಲು ವ್ಯವಸ್ಥೆಯ ಲೋಪಗಳಿಗೆ ತೇಪೆ ಹಚ್ಚುವ ಯತ್ನದಂತೆ ಕಾಣುತ್ತಿದೆ. ದೇಶದ ಇತಿಹಾಸದಲ್ಲೇ...

ಹೊರಟ್ಟಿ ಅವರ ಹೋರಾಟದ ಬದುಕು ಮತ್ತು ಅವರ ಭಕ್ತ...

ಗ್ಯಾರಂಟಿ ಯೋಜನೆಗಳಿಂದ ಕೂಲಿ ಕಾರ್ಮಿಕರು ಸಿಗುತ್ತಿಲ್ಲವೆಂಬ ಬಸವರಾಜ ಹೊರಟ್ಟಿ ಅವರ ಹೇಳಿಕೆ ಮತ್ತು ಅದಕ್ಕೆ ಸಿಕ್ಕ ಸಾರ್ವಜನಿಕ ಚಪ್ಪಾಳೆಗಳು, ಕೇವಲ ಹಸಿವನ್ನೇ ಶ್ರಮದ ಇಂಧನವನ್ನಾಗಿ ನೋಡುವ ಸಮಾಜದ ಕ್ರೂರ ಮನಸ್ಥಿತಿಯನ್ನು ಅನಾವರಣಗೊಳಿಸುತ್ತವೆ. ಬಸವರಾಜ ಹೊರಟ್ಟಿ...

“ಮಸೂದೆಯಲ್ಲಿ ಖಾತರಿಪಡಿಸುವ ಉದ್ಯೋಗವನ್ನು 100 ರಿಂದ 125 ದಿನಗಳಿಗೆ ಹೆಚ್ಚಿಸಲಾಗುತ್ತದೆ ಎಂಬ ಸರ್ಕಾರದ ದಾವೆ ಕೇವಲ ಅಲಂಕಾರಿಕವಾಗಿದೆ. ವಾಸ್ತವದಲ್ಲಿ, ಉದ್ಯೋಗ ಚೀಟಿಗಳನ್ನು ತರ್ಕಬದ್ಧಗೊಳಿಸುವ ಹೆಸರಿನಲ್ಲಿ ಗ್ರಾಮೀಣ ಕುಟುಂಬಗಳ ದೊಡ್ಡ ವಿಭಾಗಗಳನ್ನು ಹೊರಗಿಡಲು ಮಸೂದೆ ಬಾಗಿಲು ತೆರೆಯುತ್ತದೆ. ಕೃಷಿ ಋತುವಿನ ಗರಿಷ್ಠ ಅವಧಿಯಲ್ಲಿ 60 ದಿನಗಳವರೆಗೆ ಉದ್ಯೋಗವನ್ನು ಸ್ಥಗಿತಗೊಳಿಸಲು ಸರ್ಕಾರಗಳಿಗೆ ಅವಕಾಶ ನೀಡುವ ನಿಬಂಧನೆಯು ಗ್ರಾಮೀಣ ಕುಟುಂಬಗಳಿಗೆ ಅತಿ ಅಗತ್ಯವಾಗಿರುವ ಸಮಯದಲ್ಲಿ ಕೆಲಸವನ್ನು ನಿರಾಕರಿಸುತ್ತದೆ ಮತ್ತು ಅವರನ್ನು ಭೂಮಾಲೀಕರ ಮೇಲೆ ಅವಲಂಬಿತರನ್ನಾಗಿ ಮಾಡುತ್ತದೆ. ಕೆಲಸದ ಸ್ಥಳದಲ್ಲಿ ಡಿಜಿಟಲ್ ಹಾಜರಾತಿಯನ್ನು ಕಡ್ಡಾಯಗೊಳಿಸುವುದರಿಂದ ಕಾರ್ಮಿಕರಿಗೆ ಕೆಲಸದ ನಷ್ಟ ಮತ್ತು ಅವರ ಹಕ್ಕುಗಳ ನಿರಾಕರಣೆಯಂತಹ ಅಪಾರ ತೊಂದರೆಗಳು ಉಂಟಾಗುತ್ತವೆ” ಎಂದು ಕಿಡಿಕಾರಿದರು.

“ಒಂದು ಪ್ರಮುಖ ಕಳವಳವೆಂದರೆ ಈ ಯೋಜನೆಗೆ ಹಣಕಾಸು ನೀಡಿಕೆಯ ವಿಧಾನದಲ್ಲಿ ಪ್ರಸ್ತಾವಿತ ಬದಲಾವಣೆ. ಈ ಮಸೂದೆಯು ವೇತನ ಪಾವತಿಗಳಿಗೆ ಕೇಂದ್ರದ ಜವಾಬ್ದಾರಿಯನ್ನು ಶೇ.100ರಿಂದ ಪ್ರಮುಖ ರಾಜ್ಯಗಳೊಂದಿಗೆ 60:40 ಹಂಚಿಕೆ ವ್ಯವಸ್ಥೆಗೆ ಇಳಿಸುತ್ತದೆ. ಇದು ನಿರುದ್ಯೋಗ ಭತ್ಯೆ ಮತ್ತು ವಿಳಂಬ ಪರಿಹಾರದ ವೆಚ್ಚವನ್ನು ಭರಿಸುವ ಜವಾಬ್ದಾರಿಯನ್ನು ರಾಜ್ಯಗಳಿಗೆ ದಾಟಿಸುತ್ತದೆ. ಇದು ರಾಜ್ಯ ಸರ್ಕಾರಗಳ ಮೇಲೆ ತಾಳಿಕೊಳ್ಳಲು ಸಾಧ್ಯವಿಲ್ಲದ ಆರ್ಥಿಕ ಹೊರೆಯನ್ನು ಹೇರುತ್ತದೆ. ಆದರೆ, ಅದೇ ವೇಳೆ ನಿರ್ಧಾರ ತೆಗೆದುಕೊಳ್ಳುವ ಪ್ರಕ್ರಿಯೆಯಲ್ಲಿ ಅವುಗಳಿಗೆ ಯಾವುದೇ ಪಾತ್ರವನ್ನು ನಿರಾಕರಿಸುತ್ತದೆ” ಎಂದು ಹೇಳಿದರು.

ಪೂರ್ತಿ ವೀಡಿಯೋಗೆ ಲಿಂಕ್‌ ಕ್ಲಿಕ್‌ ಮಾಡಿ https://www.facebook.com/share/v/1Akjf6Xb9L

“ಕೇಂದ್ರವು ರಾಜ್ಯವಾರು ವೆಚ್ಚದ ಮಿತಿಗಳನ್ನು ವಿಧಿಸುವ ಮತ್ತು ಹೆಚ್ಚುವರಿ ವೆಚ್ಚಗಳನ್ನು ರಾಜ್ಯಗಳು ಭರಿಸಬೇಕು ಎನ್ನುವ ʼವಾಡಿಕೆಯ ಹಂಚಿಕೆʼಯನ್ನು ಇದರಲ್ಲಿ ತಂದಿರುವುದು ಈ ಕಾರ್ಯಕ್ರಮದ ವ್ಯಾಪ್ತಿಯನ್ನು ಮತ್ತಷ್ಟು ಮೊಟಕುಗೊಳಿಸುತ್ತದೆ ಮತ್ತು ಕೇಂದ್ರದ ಹೊಣೆಗಾರಿಕೆಯನ್ನು ತಗ್ಗಿಸುತ್ತದೆ” ಎಂದರು.

ಈ ಸುದ್ದಿ ಓದಿದ್ದೀರಾ? ಮನರೇಗಾ ಬದಲಿಗೆ ವಿಬಿ ಜಿ ರಾಮ್‌ ಜಿ ಮಸೂದೆ: ಬೆಳಗಾವಿಯಲ್ಲಿ ರಾಜ್ಯ ಕಾಂಗ್ರೆಸ್ ಶಾಸಕರ ಪ್ರತಿಭಟನೆ

“ಯೋಜನೆಯ ಹೆಸರನ್ನು ಮನರೇಗಾದಿಂದ ಜಿ ರಾಮ್‌ ಜಿ ಗೆ ಬದಲಾಯಿಸುವ ದುಷ್ಟ ನಡೆ ಬಿಜೆಪಿ-ಆರ್‌ಎಸ್‌ಎಸ್ ಸೈದ್ಧಾಂತಿಕ ಕೊಂಕನ್ನು ಬಿಂಬಿಸುತ್ತದೆ. ಹಾಗಾಗಿ VB-G RAM G ಮಸೂದೆಯನ್ನು ಕೂಡಲೇ ಹಿಂತೆಗೆದುಕೊಳ್ಳಬೇಕು. ಕೇಂದ್ರ ಸರ್ಕಾರವು ಮನರೇಗಾವನ್ನು ಬಲಪಡಿಸಲು, ಸಾರ್ವತ್ರಿಕ ಮತ್ತು ಹಕ್ಕು ಆಧಾರಿತ ಉದ್ಯೋಗ ಖಾತರಿಯಾಗಿ ಅದರ ಪರಿಣಾಮಕಾರಿ ಅನುಷ್ಠಾನವನ್ನು ಖಚಿತಪಡಿಸಲು ರಾಜಕೀಯ ಪಕ್ಷಗಳು, ಕಾರ್ಮಿಕ ಸಂಘಗಳು ಮತ್ತು ಗ್ರಾಮೀಣ ಬಡವರ ಸಂಘಟನೆಗಳೊಂದಿಗೆ ಸಮಾಲೋಚನೆ ಮಾಡಬೇಕು” ಎಂದು ಸಿಪಿಐ(ಎಂ) ಆಗ್ರಹಿಸಿದೆ.

ಈ ವೇಳೆ ಸಾಹಿತಿ ಮೀನಾಕ್ಷಿ ಬಾಳಿ ಸೇರಿದಂತೆ ಹಲವು ಜನಪರ ಮನಸುಳ್ಳವರು ಇದ್ದರು.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ರಾಯಚೂರು | ಪೊತ್ನಾಳ ಗ್ರಂಥಾಲಯದಲ್ಲಿ ಮೂಲಸೌಕರ್ಯ ಕೊರತೆ: ಓದಲು ಬರುವ ವಿದ್ಯಾರ್ಥಿಗಳಿಗೆ ಪರದಾಟ

ಮಾನ್ವಿ ತಾಲ್ಲೂಕಿನ ಪೊತ್ನಾಳ ಗ್ರಾಮ ಪಂಚಾಯತ್ ವ್ಯಾಪ್ತಿಯ ಸರ್ಕಾರಿ ಶಾಲೆಯ ಮೈದಾನದಲ್ಲಿರುವ...

Bhalki Ground Report | ಮುಸ್ಲಿಮರ ಮತ ಹಕ್ಕಿಗೆ ಕನ್ನ: ಬಗೆದಷ್ಟು ಬಯಲಾಗ್ತಿದೆ ‘ಫಾರ್ಮ್-7’ರ ಸಂಚು?

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಸಚಿವ ಈಶ್ವರ ಬಿ.ಖಂಡ್ರೆ ಅವರು ಪ್ರತಿನಿಧಿಸುವ...

ಕಲಬುರಗಿ | ಪ್ರೀತಿಸಿದ ಯುವತಿಯನ್ನೇ ಮದುವೆಯಾಗಲು ಪಟ್ಟು: ಟವರ್ ಏರಿದ ಯುವಕ!

ತಾನು ಪ್ರೀತಿಸಿದ ಯುವತಿಯನ್ನೇ ಮದುವೆಯಾಗಬೇಕು ಎಂದು ಪಟ್ಟು ಹಿಡಿದ ಯುವಕನೊಬ್ಬ, ಮದುವೆಗೆ...

ಅಳಿವಿನ ಅಂಚಿನಲ್ಲಿ ಅಕ್ಕಸಾಲಿಗರ ಕುಲಕಸುಬು: ಸರ್ಕಾರದ ನೆರವಿಗೆ ಚಿನ್ನ-ಬೆಳ್ಳಿ ಕೆಲಸಗಾರರ ಆಗ್ರಹ

ಒಮ್ಮೆ ರಾಜಾಶ್ರಯ ಪಡೆದಿದ್ದ ಪಾರಂಪರಿಕ ಕುಲಕಸುಬುಗಳಲ್ಲಿ ಒಂದಾಗಿದ್ದ ಚಿನ್ನ ಮತ್ತು ಬೆಳ್ಳಿ...