ದಾವಣಗೆರೆ | ನರೇಗಾದಲ್ಲಿ ಗಾಂಧಿ ಹೆಸರು ಕೈಬಿಡಲು ನಿಮಗೆ ಯೋಗ್ಯತೆ ಇದೆಯೇ? ಸಾತಿ ಸುಂದರೇಶ್

Date:

ಆರ್ಎಸ್ಎಸ್ ಮುಖವಾಣಿಯಾದ ಬಿಜೆಪಿ ಇಂದು ಅಧಿಕಾರದಲ್ಲಿದೆ. ನರೇಗಾ ಯೋಜನೆಯಲ್ಲಿ ಗಾಂಧಿ ಹೆಸರು ಕೈಬಿಡಲು ಮಸೂದೆ ತಂದಿದೆ. ಅದನ್ನು ತೆಗೆಯಲು ನಿಮಗೆ ಯೋಗ್ಯತೆ ಇದೆಯಾ ಎಂದು ಕೇಳಬೇಕು. ಅದರ ಹೆಸರು ಬದಲಿಸಲು ಬಿಡಬಾರದು. ಇದರ ವಿರುದ್ಧ ಸಮರ್ಥವಾಗಿ ಹೋರಾಟಕ್ಕಿಳಿಯಬೇಕು ಎಂದು ಕಮ್ಯುನಿಸ್ಟ್ ಪಕ್ಷದ ರಾಜ್ಯ ಮುಖಂಡ ಸಾತಿ ಸುಂದರೇಶ್ ಆಕ್ರೋಶ ವ್ಯಕ್ತಪಡಿಸಿದರು.

- Advertisement -
1003321341

ಭಾರತ ಕಮ್ಯುನಿಸ್ಟ್ ಪಕ್ಷದ ಶತಮಾನೋತ್ಸವ ಜಾಥಾ ದಾವಣಗೆರೆಗೆ ಆಗಮಿಸಿದ ಸಂದರ್ಭದಲ್ಲಿ ಜಯದೇವ ವೃತ್ತದಲ್ಲಿ ನಡೆದ ಬಹಿರಂಗ ಸಭೆಯಲ್ಲಿ ಮಾತನಾಡಿದ ರಾಜ್ಯ ಕಾರ್ಯದರ್ಶಿ ಸಾತಿ ಸುಂದರೇಶ್ “ಅಂದು ಬ್ರಿಟಿಷರ ವಿರುದ್ದ, ಬಂಡವಾಳಶಾಹಿಗಳ ವಿರುದ್ಧ ನಮ್ಮ ಹೋರಾಟ ಇತ್ತು. ರೈತರನ್ನು ಕೇರಳ, ಮಂಗಳೂರಿನಲ್ಲಿ ಶೋಷಿಸುವ ಬ್ರಿಟಿಷರ ವಿರುದ್ಧ ಹೋರಾಟ ಮಾಡಿ ಬೆಳೆದುಬಂದಿರುವ ಪಕ್ಷ ಕಮ್ಯುನಿಸ್ಟ್ ಪಕ್ಷ. ನೂರು ವರ್ಷ ಗಳ ಹಿಂದೆ ಪಕ್ಷ ಸ್ಥಾಪನೆಯದಾಗ ಇದ್ದ ಪರಿಸ್ಥಿತಿ ಇಂದು ಮತ್ತೆ ಇದೆ. ಇಂದು ಮತ್ತೆ ಕೋಮುವಾದ ಸೃಷ್ಟಿಸುವ, ಅಸಮಾನತೆಗೆ ಕಾರಣವಾಗುವ ಆರ್ಎಸ್ಎಸ್ ವಿರುದ್ಧ ಹೋರಾಡಬೇಕು” ಎಂದು ಕರೆ ನೀಡಿದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

History Repeats | ರೋಮ್‌ ಉರಿಯುತ್ತಿದ್ದಾಗ ಪಿಟೀಲು ನುಡಿಸಿದ...

ದೇಶದ ಪ್ರಜಾಪ್ರಭುತ್ವದ ಆಧಾರಸ್ತಂಭಗಳು ಒಂದೊಂದಾಗಿ ಕುಸಿಯುತ್ತಾ, ಚುನಾವಣಾ ವ್ಯವಸ್ಥೆಯೇ ಅಕ್ರಮ ಎಸಗುತ್ತಿರುವಾಗ, ನಿರುದ್ಯೋಗ-ಬೆಲೆ ಏರಿಕೆಯ ಭಾರದಿಂದ ಜನ ಹೈರಾಣಾಗಿರುವಾಗ ಭಾರತದ ಪ್ರಧಾನಿ ಭಜನೆ ಮಾಡುತ್ತಿದ್ದಾರೆ. ರೋಂ ಹೊತ್ತಿ ಉರಿಯುತ್ತಿದ್ದಾಗ ನೀರೋ ಪಿಟೀಲು...

ಅಪರಾಧಿಗಳ ಪರ ಬಿ ಸಿ ರೋಡ್ ಚಲೋ: ಎಂದಿನಂತೆ...

ಕೊಲೆಯಂತಹ ಗಂಭೀರ ಅಪರಾಧ ಎಸಗಿದ ಆರೋಪ ಹೊತ್ತವರ ಪರವಾಗಿ ಸಂಘಪರಿವಾರ ಬೀದಿಗಿಳಿಯುತ್ತಿರುವುದು ಇದೇ ಮೊದಲೇನಲ್ಲ. ಕರಾವಳಿಯ ಜನತೆ ಇಂತಹ ಪ್ರಚೋದನಾತ್ಮಕ ನಡೆಗಳನ್ನು ತಿರಸ್ಕರಿಸಿ, ಸತ್ಯ ಮತ್ತು ನ್ಯಾಯದ ಪರವಾಗಿ ನಿಲ್ಲಬೇಕಾಗಿದೆ. ಕರಾವಳಿ ಕರ್ನಾಟಕವಾಗಲಿ...

14 ಆಕ್ಷೇಪಗಳಿಂದ SIT ಬೇಡಿಕೆಯವರೆಗೆ: ಗ್ಯಾನೇಶ್‌ ಕುಮಾರ್ ಸುತ್ತ...

ಚುನಾವಣಾ ಆಯೋಗದೊಳಗಿನ ಭಿನ್ನಾಭಿಪ್ರಾಯಗಳು ಬಹಿರಂಗಗೊಂಡ ಬೆನ್ನಲ್ಲೇ ಎಸ್‌ಐಆರ್‌ ವಿವಾದ ಹೊಸ ತಿರುವು ಪಡೆದುಕೊಂಡಿದೆ. ಮುಖ್ಯ ಚುನಾವಣಾ ಆಯುಕ್ತ ಗ್ಯಾನೇಶ್‌ ಕುಮಾರ್ ಅವರ ನಿರ್ಧಾರಗಳ ಕುರಿತು ಚುನಾವಣಾ ಆಯುಕ್ತರಾದ ಸುಖಬೀರ್‌ ಸಿಂಗ್‌ ಸಂಧು ಮತ್ತು...

“ಕೇಂದ್ರ ಸರ್ಕಾರ ರೈತರ ಪರವಾಗಿರದೇ,‌ ಅದಾನಿ ಅಂಬಾನಿಗಳ ಪರವಿದೆ. ಈ ದೇಶದ ರಸ್ತೆ, ಏರ್ಪೋರ್ಟ್, ರೈಲು, ಸಾರ್ವಜನಿಕ ಕಾರ್ಖಾನೆ ಎಲ್ಲವನ್ನು ಬಂಡವಾಳಶಾಹಿಗಳಿಗೆ ಕೊಡುತ್ತಿದೆ. ಒಂದು ರೂಪಾಯಿಗೆ ಒಂದು ಎಕರೆ ಭೂಮಿ ಮಂಜೂರು ಮಾಡಲಾಗಿದೆ. ದುಡಿಯುವ ವರ್ಗದ ಜನರ ಸಂಪತ್ತನ್ನು ನೇರವಾಗಿ ಶ್ರೀಮಂತರ ಕೈಗೆ ಕೊಡುತ್ತಿದೆ” ಎಂದು ಆರೋಪಿಸಿದರು.

1003321337

“ಆರ್ಎಸ್ಎಸ್ ಬೆಂಬಲಿತ ಸರ್ಕಾರ ಕೇಂದ್ರದಲ್ಲಿದೆ. ಸಿಪಿಐ ಬಹುತ್ವ ಭಾರತ, ಸೌಹಾರ್ದತೆ, ಸಂವಿಧಾನ ಉಳಿಸಬೇಕು ಎಂದರೆ ಅವರು ದ್ವೇಷ, ಶ್ರೇಣಿಕೃತ ವ್ಯವಸ್ಥೆ, ಕೋಮುವಾದದ ಭಾರತ ಸೃಷ್ಟಿಸಲು ಹೊರಟಿದ್ದಾರೆ. ಚುನಾವಣೆ ಆಯೋಗದ ಮೂಲಕ ಅದನ್ನು ಯಾರಿಗೆ ಮತದಾನದ ಹಕ್ಕು ನೀಡಬೇಕು ಎಂಬುದನ್ನು ನಿರ್ಧರಿಸಲು ಹೊರಟಿದ್ದಾರೆ. ಈ ಮೂಲಕ ಮುಸ್ಲಿಂ ವರ್ಗವನ್ನು ದೂರವಿಡುವ ಪ್ರಯತ್ನ ಮಾಡುತ್ತಿದೆ. ರಾಜ್ಯದಲ್ಲೂ ಶಿಕ್ಷಣ ಬದಲಾವಣೆ ನೆಪದಲ್ಲಿ 28000 ಶಾಲೆ ಮುಚ್ಚಲು ಹೊರಟಿದ್ದಾರೆ. ಈ ಮೂಲಕ ತಳ್ವಕತೆ ಜನರ ಶಿಕ್ಷಣದ ಹಕ್ಕನ್ನು ನಿರಾಕರಿಸಲಾಗುತ್ತಿದೆ” ಎಂದು ಆಪಾದಿಸಿದರು.

“ವಸತಿ ಯೋಜನೆಯಡಿ ಮನೆಗಳನ್ನು ವಸತಿರಹಿತರಿಗೆ ನೀಡಲು ಸಿಪಿಐ ಹೋರಾಟ ಮಾಡಬೇಕಿದೆ.
ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ನಿವೇಶನ ರಹಿತರ ಪತ್ತೆ ಹಚ್ಚಿ ಪಟ್ಟಿ ಮಾಡಬೇಕು. ಹಳ್ಳಿಗಳಲ್ಲಿ ಸರ್ಕಾರಿ ಭೂಮಿ ಪತ್ತೆ ಹಚ್ಚಬೇಕು. ಈ ಕೆಲಸವನ್ನು ಸಿಪಿಐ ಮುಖಂಡರು ಮುಂದಿನ ದಿನಗಳಲ್ಲಿ ಕೈಗೊಳ್ಳಬೇಕು. ಈ ಮೂಲಕ ವಸತಿ ಮತ್ತು ಭೂರಹಿತರಿಗೆ ನೆರವಾಗಬೇಕು” ಎಂದು ಸೂಚಿಸಿದರು.

“ಅಂಕಿ ಅಂಶಗಳ ಪ್ರಕಾರ ಕರ್ನಾಟಕದಲ್ಲಿ ಭೂರಹಿತರು ಮತ್ತು ವಸತಿ ರಹಿತರಿಗೆ ಮನೆಗಳನ್ನು ಒದಗಿಸಲು ಐದು ಲಕ್ಷ ಎಕರೆಗೆ ಬೇಡಿಕೆ ಇದೆ. ಸಮಾಜವಾದಿ ಎಂದೇ ಹೆಸರಾದ ಮುಖ್ಯಮಂತ್ರಿ ಸಿದ್ದರಾಮಯ್ಯನವರು ವಸತಿರಹಿತರಿಗೆ ಮನೆ ನೀಡಬೇಕು. ಈ ಕಾರ್ಯಕ್ರಮಕ್ಕಾಗಿ ಮುಂದಿನ ದಿನಗಳಲ್ಲಿ ವಿಧಾನಸೌಧ ಮುತ್ತಿಗೆ ಹಾಕುವ ಮೂಲಕ ಹೋರಾಟ ನಡೆಸಲಿದ್ದೇವೆ.
ಈ ಮೊದಲು ಲಕ್ಷಂಬೀಡು ಹೋರಾಟ 1971ರಲ್ಲಿ ಆರಂಭಿಸಿದ್ದವು. ಇದರಿಂದಾಗಿ ಕೇರಳದಲ್ಲಿ ಸಾಕಷ್ಟು ವಸತಿರಹಿತರಿಗೆ ಮನೆ ಒದಗಿಸಲಾಗಿತ್ತು. ಇಂದು ಮನೆ ಕಟ್ಟಿಕೊಳ್ಳಲು ಕೇರಳದಲ್ಲಿ ಏಳು ಲಕ್ಷ, ತೆಲಂಗಾಣ ಐದು ಲಕ್ಷ ಸಹಾಯಧನವನ್ನು ಸರ್ಕಾರಗಳು ನೀಡುತ್ತಿವೆ. ಆದರೆ
ಕರ್ನಾಟಕದಲ್ಲಿ 1.2 ಲಕ್ಷ ನೀಡುತ್ತಿದ್ದು, ಮುಂದಿನ ದಿನಗಳಲ್ಲಿ ಇದರ ವಿರುದ್ಧ ಹೋರಾಟ ಮಾಡಿ ಕನಿಷ್ಠ 5ಲಕ್ಷಕ್ಕೆ ಬೇಡಿಕೆ ಇಟ್ಟು ಕೊಡಿಸುವ ಕೆಲಸ ಮಾಡಬೇಕು” ಎಂದು ಕರೆ ನೀಡಿದರು.

1003321338

ಈ ಸುದ್ದಿ ಓದಿದ್ದೀರಾ? ದಾವಣಗೆರೆ | ಕರವೇಯಿಂದ ಮಧ್ಯಮ ವರ್ಗದ ಧ್ವನಿ ಶಾಮನೂರು ಶಿವಶಂಕರಪ್ಪಗೆ ಶ್ರದ್ಧಾಂಜಲಿ.

ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಸಿಪಿಐ ರಾಜ್ಯಮಂಡಳಿ ಸಹಕಾರ್ಯದರ್ಶಿ ಎಚ್ ಎಂ ಸಂತೋಷ್ ಮಾತನಾಡಿ, “ಜನಸಾಮಾನ್ಯರ ಒಗ್ಗೂಡಿಸಿ ಸಮಸಮಾಜದ ನಿರ್ಮಾಣಕ್ಕಾಗಿ ಕಮ್ಯುನಿಸ್ಟ್ ಪಕ್ಷದ ಈ ಜಾಥಾ ನಡೆಸಲಾಗುತ್ತಿದೆ. ಮನುಧರ್ಮ ಸ್ಥಾಪಿಸುವ ಮೂಲಕ ಸಮಾನತೆ ನಿರಾಕರಿಸುವವರು ಅಧಿಕಾರದಲ್ಲಿದ್ದಾರೆ. ಅದರ ವಿರುದ್ಧ ಮಾನವತೆ ಸಾರುವ ಪಕ್ಷ ಕಮ್ಯುನಿಸ್ಟ್ ಪಕ್ಷವನ್ನು ಕಟ್ಟಬೇಕು” ಎಂದು ತಿಳಿಸಿದರು.‌

ಹರಿಹರ ಕಾರ್ಮಿಕ ಮುಖಂಡ ಕೊಟ್ರಪ್ಪ “ಇಂದು ಕಮ್ಯುನಿಸ್ಟ್ ಪಕ್ಷ ನೂರು ವರ್ಷದ ಸಂಭ್ರಮದಲ್ಲಿದೆ. ಇದು ಪ್ರಾಮಾಣಿಕ ಪಕ್ಷ. ಸಮಸಮಾಜ ನಿರ್ಮಾಣ ಗುರಿ ಕಮ್ಯುನಿಸ್ಟ್ ಪಕ್ಷದ್ಧು” ಎಂದು ಅಭಿಪ್ರಾಯಪಟ್ಟರು.

ಜಗಳೂರು ಸಿಪಿಐ ಮುಖಂಡ ಮಾದಿಹಳ್ಳಿ ಮಂಜು ಮಾತನಾಡಿ “ವಿಂಡ್ ಮಿಲ್, ಸೋಲಾರ್, ಬಹುರಾಷ್ಟ್ರೀಯ ಕಂಪನಿಗಳು ಸೇರಿ ರೈತರ ಒಕ್ಕಲೆಬ್ಬಿಸುವ ಮೂಲಕ ಹಾವಳಿ ಮಾಡುತ್ತಿವೆ. ಕೋಮುವಾದ ವಿಜೃಂಭಣೆಯ ಈ ಸಮಯದಲ್ಲಿ ದುಡಿಯುವ ವರ್ಗದ ಜನ ಪ್ರಜಾಪ್ರಭುತ್ವವನ್ನು ಗಟ್ಟಿ ಗೊಳಿಸಬೇಕು” ಎಂದು ತಿಳಿಸಿದರು.

1003321339

ಜಯದೇವ ವೃತ್ತದಲ್ಲಿ ನಡೆದ ಭಾರತ ಕಮ್ಯುನಿಸ್ಟ್ ಪಕ್ಷದ ಬಹಿರಂಗ ಸಭೆಯಲ್ಲಿ ಮಾನವ ಬಂಧುತ್ವ ವೇದಿಕೆಯ ರಾಜ್ಯ ಸಂಚಾಲಕ ಪ್ರೊ.ಎಬಿ ರಾಮಚಂದ್ರಪ್ಪ, ಸಿಪಿಐ ಪಕ್ಷದ ಜಿಲ್ಲಾ ಕಾರ್ಯದರ್ಶಿ ಆವರಗೆರೆ ಚಂದ್ರು, ಸಹ ಕಾರ್ಯದರ್ಶಿ ಎಚ್ ಡಿ ಉಮೇಶ್ ಆವರಗೆರೆ ಮುಖಂಡರಾದ ಬಿಸಿ ಹನುಮನ ಗೌಡ ಇಪ್ಟಾ ರಾಜ್ಯ ಪ್ರಧಾನ ಕಾರ್ಯದರ್ಶಿ ಷಣ್ಮುಖ ಸ್ವಾಮಿ, ಜಿ ಯಲ್ಲಪ್ಪ ಕಲಿಗಾರ ರಫೀವುಲ್ಲಾ ಕೆಜಿ ಶಿವಮೂರ್ತಿ, ಐರಣಿ ಚಂದ್ರು, ಶಿವಕುಮಾರ್, ಸುರೇಶ್ ಯರಗುಂಟೆ, ಜೈನಲ್ಲಾಖಾನ್, ಸರೋಜಾ, ವಿ ಲಕ್ಷ್ಮಣ್, ನರೇಗಾ ರಂಗನಾಥ್, ಕೆರನಹಳ್ಳಿ ರಾಜು, ಎ ತಿಪ್ಪೇಶ್, ಕೆ ಬಾಲಪ್ಪ, ಎ ದಾದಾಪೀರ್ ಸೇರಿದಂತೆ ಜಿಲ್ಲಾ ಮಂಡಳಿಯ ಹಾಗೂ ಚನ್ನಗಿರಿ , ಹೊನ್ನಾಳಿ, ಜಗಳೂರು, ಹರಿಹರ ತಾಲೂಕಿನ ಸಿಪಿಐ ಮಂಡಳಿಯ ಸದಸ್ಯರು, ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಭಾಗವಹಿಸಿದ್ದರು.

WhatsApp Image 2025 11 17 at 3.21.38 PM
ಈ ದಿನ ಡೆಸ್ಕ್
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಚಿಕ್ಕಮಗಳೂರು |ರಾಜ್ಯದಲ್ಲಿ ಪ್ರಸ್ತುತ 9,೦೦೦ಕ್ಕೂ ಹೆಚ್ಚು ಪೋಕ್ಸೋ ಪ್ರಕರಣ

ಚಿಕ್ಕಮಗಳೂರು ನಗರದ ಕುವೆಂಪು ಕಲಾಮಂದಿರದಲ್ಲಿ ಕಾನೂನು ಅರಿವು ಕಾರ್ಯಕ್ರಮದಲ್ಲಿ ಹಿರಿಯ ನ್ಯಾ....

ಚಿಕ್ಕಮಗಳೂರು | ಮಕ್ಕಳ ರಕ್ಷಣೆ ಪ್ರತಿಯೊಬ್ಬ ನಾಗರಿಕನ ಕರ್ತವ್ಯ: ನ್ಯಾ. ಹೆಚ್. ಶಶಿಧರ್ ಶೆಟ್ಟಿ

ಮಕ್ಕಳ ಹಕ್ಕುಗಳನ್ನು ರಕ್ಷಿಸುವುದು ಕೇವಲ ಸರ್ಕಾರ, ಇಲಾಖೆಗಳು ಅಥವಾ ಸರ್ಕಾರೇತರ ಸಂಸ್ಥೆಗಳ...

ಚಿಕ್ಕಮಗಳೂರು | ಜ್ಞಾನೇಶ್ ಕುಮಾರ್ ವಜಾಗೊಳಿಸಿ-SIR ರದ್ದುಗೊಳಿಸಿ; ಕೆ.ಎಲ್ ಅಶೋಕ್ 

ಚಿಕ್ಕಮಗಳೂರು ನಗರದ ಪತ್ರಿಕಾಗೋಷ್ಠಿಯಲ್ಲಿ SIR ವಿರೋಧಿ ಒಕ್ಕೂಟ ಮುಖಂಡರಾದ ಕೆ. ಎಲ್...