ಗುಬ್ಬಿ | ಶ್ರೀ ಚಿದಂಬರಾಶ್ರಮದಲ್ಲಿ ಕಲರಿಪಯಟ್ಟು ಶಿಬಿರ

Date:

ವಿಶ್ವದ ಅತ್ಯಂತ ಹಳೆಯ ಸಮರ ಕಲೆ ಕೇರಳ ಮೂಲದ ಕಲರಿಪಯಟ್ಟು ಕಲೆಯನ್ನು ಆಶ್ರಮದ ಶಾಲಾ ಮಕ್ಕಳಿಗೆ ಕಲಿಸಲು ಚಿದಂಬರ ಪಬ್ಲಿಕ್ ಸ್ಕೂಲ್ ಇದೇ ತಿಂಗಳ 17 ರಿಂದ 22 ರವರೆಗೆ ಆರು ದಿನಗಳ ಕಾಲ ಕಲರಿಪಯಟ್ಟು ಶಿಬಿರವನ್ನು ಆಯೋಜಿಸಲಾಗಿದೆ ಎಂದು ಶ್ರೀ ಚಿದಂಬರಾಶ್ರಮ ಅಧ್ಯಕ್ಷ ಸಚ್ಚಿದಾನಂದ ಶರ್ಮ ತಿಳಿಸಿದ್ದಾರೆ.

- Advertisement -

ಸಾಂಸ್ಕೃತಿಕ ಪರಂಪರೆಯ ಸಮರ ಕಲೆ ಕಲರಿಪಯಟ್ಟು ಕಲಿತು ದೇಶ ವಿದೇಶದಲ್ಲೂ ಖ್ಯಾತಿ ಪಡೆದ ಸುದರ್ಶನ್ ಪಂಡಿತ್ ಅವರು ನಮ್ಮ ಚಿದಂಬರಾಶ್ರಮದ ಹಳೆಯ ವಿದ್ಯಾರ್ಥಿ ಎಂದು ಹೇಳಲು ಹೆಮ್ಮೆ ಎನಿಸಿದೆ. ಇವರ ಕಲೆಯ ಪ್ರಕಾರಗಳನ್ನು ಮಕ್ಕಳಿಗೆ ಕಲಿಸಲು ಇದೇ ತಿಂಗಳ 17 ಬೆಳಿಗ್ಗೆ 10.30 ಕ್ಕೆ ಶಿಬಿರ ಉದ್ಘಾಟನೆ ಆಶ್ರಮದ ಆರ್ತಿ ಯೋಗ ಧ್ಯಾನ ಮಂದಿರದಲ್ಲಿ ಆಗಲಿದೆ ಎಂದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

History Repeats | ರೋಮ್‌ ಉರಿಯುತ್ತಿದ್ದಾಗ ಪಿಟೀಲು ನುಡಿಸಿದ...

ದೇಶದ ಪ್ರಜಾಪ್ರಭುತ್ವದ ಆಧಾರಸ್ತಂಭಗಳು ಒಂದೊಂದಾಗಿ ಕುಸಿಯುತ್ತಾ, ಚುನಾವಣಾ ವ್ಯವಸ್ಥೆಯೇ ಅಕ್ರಮ ಎಸಗುತ್ತಿರುವಾಗ, ನಿರುದ್ಯೋಗ-ಬೆಲೆ ಏರಿಕೆಯ ಭಾರದಿಂದ ಜನ ಹೈರಾಣಾಗಿರುವಾಗ ಭಾರತದ ಪ್ರಧಾನಿ ಭಜನೆ ಮಾಡುತ್ತಿದ್ದಾರೆ. ರೋಂ ಹೊತ್ತಿ ಉರಿಯುತ್ತಿದ್ದಾಗ ನೀರೋ ಪಿಟೀಲು...

ಅಪರಾಧಿಗಳ ಪರ ಬಿ ಸಿ ರೋಡ್ ಚಲೋ: ಎಂದಿನಂತೆ...

ಕೊಲೆಯಂತಹ ಗಂಭೀರ ಅಪರಾಧ ಎಸಗಿದ ಆರೋಪ ಹೊತ್ತವರ ಪರವಾಗಿ ಸಂಘಪರಿವಾರ ಬೀದಿಗಿಳಿಯುತ್ತಿರುವುದು ಇದೇ ಮೊದಲೇನಲ್ಲ. ಕರಾವಳಿಯ ಜನತೆ ಇಂತಹ ಪ್ರಚೋದನಾತ್ಮಕ ನಡೆಗಳನ್ನು ತಿರಸ್ಕರಿಸಿ, ಸತ್ಯ ಮತ್ತು ನ್ಯಾಯದ ಪರವಾಗಿ ನಿಲ್ಲಬೇಕಾಗಿದೆ. ಕರಾವಳಿ ಕರ್ನಾಟಕವಾಗಲಿ...

14 ಆಕ್ಷೇಪಗಳಿಂದ SIT ಬೇಡಿಕೆಯವರೆಗೆ: ಗ್ಯಾನೇಶ್‌ ಕುಮಾರ್ ಸುತ್ತ...

ಚುನಾವಣಾ ಆಯೋಗದೊಳಗಿನ ಭಿನ್ನಾಭಿಪ್ರಾಯಗಳು ಬಹಿರಂಗಗೊಂಡ ಬೆನ್ನಲ್ಲೇ ಎಸ್‌ಐಆರ್‌ ವಿವಾದ ಹೊಸ ತಿರುವು ಪಡೆದುಕೊಂಡಿದೆ. ಮುಖ್ಯ ಚುನಾವಣಾ ಆಯುಕ್ತ ಗ್ಯಾನೇಶ್‌ ಕುಮಾರ್ ಅವರ ನಿರ್ಧಾರಗಳ ಕುರಿತು ಚುನಾವಣಾ ಆಯುಕ್ತರಾದ ಸುಖಬೀರ್‌ ಸಿಂಗ್‌ ಸಂಧು ಮತ್ತು...

ಸುದರ್ಶನ್ ಪಂಡಿತ್ 2000 ಇಸವಿಯಲ್ಲಿ ಕಲರಿಯ ಗುರುಕುಲಂ ಶ್ರೀ ರಂಜನ್ ಮುಳ್ಳರತ್ ಅವರ ಮಾರ್ಗದರ್ಶನದಲ್ಲಿ ಕಲರಿಪಯಟ್ಟು ಸಮರ ಕಲೆ ಕಲಿಕೆ ಆರಂಭಿಸಿ ಇಂದು ಕಲರಿ ಸತ್ವಂ ಎಂಬ ಹೆಗ್ಗಳಿಕೆಗೆ ಪಾತ್ರರಾಗಿ 90 ನಿಮಿಷಗಳ ಕಾಲ ಎಡಬಿಡದೆ ಏಕವ್ಯಕ್ತಿ ಕಲರಿಪಯಟ್ಟು ಕಲೆ ಪ್ರದರ್ಶನ ಮಾಡಿ ಹೈರೇಂಜ್ ಬುಕ್ ಆಫ್ ರೆಕಾರ್ಡ್ಸ್ ಹಾಗೂ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ನಲ್ಲಿ ದಾಖಲೆ ಮಾಡಿದ್ದಾರೆ ಎಂದರು.

ಹಂಪಿ ಉತ್ಸವ ಹಾಗೂ ದಸರಾ ಉತ್ಸವದಲ್ಲಿ ಪ್ರದರ್ಶನ ನೀಡಿ ಪ್ರಸ್ತುತ ಸಮರ ಕಲಾ ನಿರ್ವಹಣಾ ಸಂಸ್ಥೆ ಮುಖ್ಯಸ್ಥರಾಗಿ ಮಕ್ಕಳಿಗೆ ಸಮರ ಕಲೆ ಕಲಿಸುತ್ತಿದ್ದಾರೆ. ಇವರ ಶಿಬಿರದಲ್ಲಿ ಕಲಿಯುವ ಆಸಕ್ತ ಮಕ್ಕಳು ಆಶ್ರಮದ ಕಚೇರಿಗೆ ಭೇಟಿ ಮಾಡಬಹುದಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಮಧುಗಿರಿ | ಗಣೇಶ ವಿಸರ್ಜನೆ ವೇಳೆ ಗಲಾಟೆ: ಹಲ್ಲೆ ನಡೆಸಿ ಕೊಲೆ ಮಾಡಿದ ಆರೋಪ; ಆರೋಪಿ ಬಂಧನ

ಮಧುಗಿರಿ ತಾಲ್ಲೂಕಿನ ಮಿಡಿಗೇಶಿ ಹೋಬಳಿಯ ಕಸಾಪುರ ಗ್ರಾಮದಲ್ಲಿ ಭಾನುವಾರ ಗಣೇಶ ಮೂರ್ತಿ...

ಗುಬ್ಬಿ | ಬರಗಾಲ ಕಾಮಗಾರಿ ಆರಂಭಕ್ಕೆ ಒತ್ತಾಯ: ಸೆ.28ರಂದು ಜಿಲ್ಲಾಧಿಕಾರಿ ಕಚೇರಿ ಮುಂದೆ ರೈತಸಂಘ ಪ್ರತಿಭಟನೆ

ಬರಪೀಡಿತ ಪ್ರದೇಶಗಳನ್ನು ಘೋಷಿಸಿದ್ದರೂ ಸರ್ಕಾರ ಈವರೆಗೆ ಯಾವುದೇ ಬರಗಾಲ ಪರಿಹಾರ ಕಾಮಗಾರಿಗಳನ್ನು...

ತುಮಕೂರು | ಪಾರಂಪರಿಕ ಮೌಲ್ಯಗಳು ಜೀವನದ ಆದರ್ಶಗಳು : ಡಿ. ಕೃಷ್ಣ

 ಐತಿಹಾಸಿಕ ಸ್ಮಾರಕಗಳು ಹಾಗೂ ಪಾರಂಪರಿಕ ಮೌಲ್ಯಗಳನ್ನು ಮುಂದಿನ ಪೀಳಿಗೆಗೆ ಉಳಿಸಿ-ಬೆಳೆಸುವ ಜವಾಬ್ದಾರಿ...

ತುರುವೇಕೆರೆ | ಪರಂಪರೆ ಪೂರ್ವಜರ ಉಡುಗೊರೆಯಲ್ಲ, ಮುಂದಿನ ಪೀಳಿಗೆಗೆ ನೀಡುವ ಸಾಲ : ಡಾ. ಮಹೇಶ್ ಕುಮಾರ್

ಪರಂಪರೆ ಎಂಬುದು ಪೂರ್ವಜರಿಂದ ಪಡೆದ ಉಡುಗೊರೆಯಲ್ಲ; ಮುಂದಿನ ಪೀಳಿಗೆಗೆ ಉಳಿಸಿ ನೀಡಲು...