ಮಕ್ಕಳು ವಿದ್ಯೆಯ ಜೊತೆಗೆ ವಿನಯವನ್ನು ಕಲಿಯಬೇಕು, ಸುಂಸಂಸ್ಕೃತರಾಗಬೇಕು ಹಾಗೆಯೇ ಸೇವಾ ಮನೋಭಾವ ಬೆಳಸಿಕೊಳ್ಳಬೇಕು ಎಂದು ನಿವೃತ್ತ ಪ್ರಾಂಶುಪಾಲ ಡಾ. ಧರಣೇಂದ್ರಯ್ಯ ಹೇಳಿದರು.
ಶಿರಾ ನಗರದ ಆಂಜನೇಯ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತಾನಾಡಿದ ಅವರು ಭಾರತ ದೇಶದಲ್ಲಿ ಜನ ಸಂಪನ್ಮೂಲ ಹೆಚ್ಚಿದೆ, ಈ ನೆಲದ ಹಿರಿಮೆ-ಗರಿಮೆ ದೊಡ್ಡದು, ದೇಶ ನಮಗೇನು ನೀಡಿದೆ ಎಂಬುದಕ್ಕಿಂತ ದೇಶಕ್ಕೆ ನಾವೇನು ನೀಡಿದ್ದೇವೆ ಎಂಬುದು ಮುಖ್ಯ, ಪೋಷಕರು ನಿಮ್ಮ ಮಕ್ಕಳನ್ನ ದೇಶದ ಆಸ್ತಿಯನ್ನಾಗಿ ಮಾಡಿ ಎಂದು ಮಕ್ಕಳು ಹಾಗೂ ಪೋಷಕರನ್ನ ಉದ್ದೇಶಿಸಿ ಮಾತಾನಾಡಿದರು
ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳ ಪಥಸಂಚಲನ ಹಾಗೂ ಮಕ್ಕಳ ವೇಷಭೂಷಣ ನೋಡುಗರ ಕಣ್ಮನ ಸೆಳೆಯುವಂತಿತ್ತು. ಇನ್ನೂ ಕಾರ್ಯಕ್ರಮದಲ್ಲಿ ಆಂಜನೇಯ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕ ಚೇತನ್ ಕುಮಾರ್ ಜೆ.ಸಿ, ಶಾಲಾ ಆಡಳಿತ ನಿರ್ದೇಶಕ ದೇವೇಗೌಡ ಕೆ.ಟಿ, ಶಾಲಾ ಆಡಳಿತಾಧಿಕಾರಿ ಶಿವಕುಮಾರ್ ಕೆ.ಎಸ್. ಸೇರಿದಂತೆ ಶಾಲಾ ಶಿಕ್ಷಕರು, ಪೋಷಕರು ಉಪಸ್ಥಿತರಿದ್ದರು.




