ಉಡುಪಿ | ಪಾಪನಾಶಿನಿ ಪಾಲಾಗುತ್ತಿದೆ ಜಾರುಕುದ್ರು: ಆತಂಕದಲ್ಲಿ ನಿವಾಸಿಗಳು

Date:

ಉಡುಪಿ ಜಿಲ್ಲೆಯ ಕಾಪು ವಿಧಾನಸಭಾ ಕ್ಷೇತ್ರದ ಉಡುಪಿ ತಾಲೂಕು ಉದ್ಯಾವರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಜಾರುಕುದ್ರು ಪ್ರದೇಶವು ಹಂತ ಹಂತವಾಗಿ ನದಿ ಕೊರೆತಕ್ಕೆ ಒಳಗಾಗಿ ಪಾಪನಾಶಿನಿ ಹೊಳೆಯ ಒಡಲಿಗೆ ಸೇರುತ್ತಿದ್ದು, ಇಲ್ಲಿನ ನಿವಾಸಿಗಳು ಆತಂಕದ ಪರಿಸ್ಥಿತಿಯಲ್ಲಿ ಬದುಕುವಂತಾಗಿದೆ.

- Advertisement -

ಉದ್ಯಾವರದಲ್ಲಿ ಹರಿಯುವ ಪಾಪನಾಶಿನಿ ಹೊಳೆಯು ವೇಗವಾಗಿ ಹರಿದು ಬಂದು ಜಾರುಕುದ್ರು ಭಾಗದಲ್ಲಿ ವಿಭಜಿಸಿ ತಿರುವು ಪಡೆಯುತ್ತದೆ. ಈ ವೇಳೆ ವೇಗವಾಗಿ ಹರಿದು ಬರುವ ನೀರು ನೇರವಾಗಿ ಜಾರುಕುದ್ರುವಿನ ಭೂಭಾಗಕ್ಕೆ ಅಪ್ಪಳಿಸುವುದರಿಂದ ನದಿ ಕೊರೆತ ತೀವ್ರಗೊಂಡಿದೆ. ಪರಿಣಾಮವಾಗಿ ವರ್ಷದಿಂದ ವರ್ಷಕ್ಕೆ ಭೂಭಾಗ ಸವಕಳಿಯಾಗುತ್ತಿದ್ದು, ಸೂಕ್ತ ಕ್ರಮ ಕೈಗೊಳ್ಳದಿದ್ದರೆ ಜಾರುಕುದ್ರು ಪ್ರದೇಶವೇ ಕಣ್ಮರೆಯಾಗುವ ಆತಂಕವನ್ನು ಸ್ಥಳೀಯರು ವ್ಯಕ್ತಪಡಿಸಿದ್ದಾರೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ನಂಬಿಕೆಯ ಪ್ರಾರ್ಥನೆಗೆ ‘ಸಮ್ಮತಿ ಪತ್ರ’ದ ಕಾವಲು: ಮಹಾರಾಷ್ಟ್ರದ ಚರ್ಚ್...

ಸಾಮಾನ್ಯವಾಗಿ ಈ ಹಿಂದಿನಿಂದಲೂ ಚರ್ಚ್‌ಗಳ ಮೂಲಕ ಉಚಿತ ವೈದ್ಯಕೀಯ ಶಿಬಿರ, ರಕ್ತದಾನ, ಇತರೆ ಸಾಮಾಜಿಕ ಸೇವೆಗಳನ್ನು ಮಾಡಿಕೊಂಡು ಬರಲಾಗಿದೆ. ಆದರೆ ಮಹಾರಾಷ್ಟ್ರದಲ್ಲಿ ಜಾರಿಗೆ ಬಂದಿರುವ ಮತಾಂತರ ವಿರೋಧ ಕಾಯ್ದೆ ಈ ಸಾಮಾಜಿಕ ಕಾರ್ಯಗಳಿಗೂ...

ಮೋದಿ ಸರ್ಕಾರ ಗೆದ್ದದ್ದೇ ಅಥವಾ ಕದ್ದದ್ದೇ? ಸಿಇಸಿ ವಿವಾದ...

2024ರ ಲೋಕಸಭಾ ಚುನಾವಣೆಯ ಮತದಾನ ಅಂಕಿಅಂಶಗಳಲ್ಲಿ ಕಂಡುಬಂದ 4.65 ಕೋಟಿ ಮತಗಳ ವ್ಯತ್ಯಾಸ ಮತ್ತು 79 ಕ್ಷೇತ್ರಗಳ ಫಲಿತಾಂಶಗಳ ಕುರಿತು VFD ವರದಿ ಗಂಭೀರ ಪ್ರಶ್ನೆಗಳನ್ನು ಎತ್ತಿತ್ತು. ಇದೇ ವೇಳೆ ಚುನಾವಣಾ ಆಯೋಗದ...

ಮೈತ್ರಿ ಮತ್ತು ಸ್ವೀಕೃತಿಗೆ ಹೆಣ್ತನ ಮುಖ್ಯ ಎನ್ನುವ ‘ಡೋರೊಥಿ’

ಲಿಂಗತ್ವ ಅಲ್ಪಸಂಖ್ಯಾತ ಭಾವನೆಗಳನ್ನು 'ಅಸ್ಪೃಶ್ಯತೆ'ಗೆ ಸಮನಾಗಿ ಈ ಗಂಡಾಳ್ವಿಕೆ ನೋಡುತ್ತದೆ; 'ಲಿಂಗ ಸಂಕರ' ಸ್ಥಿತಿಯನ್ನು, ಜಾತಿ ಸಂಕರದಷ್ಟೇ 'ಮರ್ಯಾದಾಗೇಡು' ಎಂಬಂತೆ ಭಾವಿಸುತ್ತದೆ. ಹೀಗೆ ನೋಡುವ 'ಸನಾತನ' (ಜಡ್ಡುಗಟ್ಟಿದ ಗಂಡು ಮನಸ್ಥಿತಿ ಅಥವಾ ಮುದಿಯಾದ...

ಸುತ್ತಲೂ ಪಾಪನಾಶಿನಿ ಹೊಳೆಯಿಂದ ಆವೃತವಾಗಿರುವ ಜಾರುಕುದ್ರುವಿಗೆ ಸುಮಾರು ₹6 ಕೋಟಿ ವೆಚ್ಚದಲ್ಲಿ ಬೃಹತ್ ಸೇತುವೆ ಹಾಗೂ ರಸ್ತೆ ನಿರ್ಮಿಸಲಾಗಿದೆ. ನಾಗಿ, ಪ್ರೇಮ, ಪದ್ದು ಪೂಜಾರ್ತಿ, ಜಗದೀಶ ಗಾಣಿಗ, ರೋಶನ್ ಕೋಟ್ಯಾನ್ ಸೇರಿದಂತೆ ಹಲವು ಕುಟುಂಬಗಳು ಇಲ್ಲಿ ವಾಸಿಸುತ್ತಿವೆ.

ದಾಖಲೆಗಳ ಪ್ರಕಾರ ಈಗಾಗಲೇ ಸುಮಾರು ಎರಡು ಎಕರೆಗೂ ಅಧಿಕ ಭೂಭಾಗವನ್ನು ನದಿ ಕೊರೆತದಿಂದ ಕಳೆದುಕೊಳ್ಳಲಾಗಿದೆ. ನೂರಾರು ಸಂಖ್ಯೆಯ ಫಸಲು ಭರಿತ ತೆಂಗಿನ ಮರಗಳು ಹೊಳೆಯ ಪಾಲಾಗಿವೆ. ಮಳೆಗಾಲದಲ್ಲಿ ಪ್ರವಾಹದ ನೀರಿನೊಂದಿಗೆ ವಿಷಜಂತುಗಳು ಮನೆಗಳೊಳಗೆ ನುಗ್ಗುತ್ತಿದ್ದು, ನಿವಾಸಿಗಳು ಭಯದಲ್ಲೇ ದಿನ ಕಳೆಯುವಂತಾಗಿದೆ. ಕೆಲವು ಮನೆಗಳ ಗೋಡೆಗಳಲ್ಲಿ ಈಗಾಗಲೇ ಬಿರುಕುಗಳು ಕಾಣಿಸಿಕೊಂಡಿವೆ.

ಕೊರೆತಕ್ಕೆ ಕಾರಣವೇನು?

ಪಾಪನಾಶಿನಿ ಹೊಳೆಯಲ್ಲಿ ಹೂಳು ತುಂಬಿಕೊಂಡಿರುವುದು ನದಿ ನೀರಿನ ಹರಿವಿನ ಮೇಲೆ ಪರಿಣಾಮ ಬೀರುತ್ತಿದೆ. ಜಾರುಕುದ್ರು ಪ್ರದೇಶಕ್ಕೆ ಸೂಕ್ತ ತಡೆಗೋಡೆ ಇಲ್ಲದಿರುವುದರಿಂದ ನೀರಿನ ರಭಸ ನೇರವಾಗಿ ಭೂಭಾಗಕ್ಕೆ ಅಪ್ಪಳಿಸಿ ಕೊರೆತ ಉಂಟಾಗುತ್ತಿದೆ ಎಂದು ಸ್ಥಳೀಯರು ಹೇಳುತ್ತಾರೆ.

ಇದಲ್ಲದೆ, ಸೇತುವೆ ನಿರ್ಮಾಣದ ಸಂದರ್ಭದಲ್ಲಿ ಬಳಸಲಾಗಿದ್ದ ಮಣ್ಣಿನ ರಾಶಿಯ ಒಂದು ಭಾಗ ಇನ್ನೂ ಸೇತುವೆಯ ತಳಭಾಗದಲ್ಲೇ ಉಳಿದುಕೊಂಡಿದೆ. ಇದರಿಂದ ಮಳೆಗಾಲದಲ್ಲಿ ನೀರಿನ ಹರಿವಿಗೆ ಅಡ್ಡಿಯುಂಟಾಗಿ ಪ್ರವಾಹದ ನೀರು ಜಾರುಕುದ್ರುವಿನತ್ತ ನುಗ್ಗುತ್ತಿದೆ ಎಂಬ ಆರೋಪವೂ ಕೇಳಿಬಂದಿದೆ.

ಜಾರುಕುದ್ರುವಿನ ಎದುರು ಭಾಗದಲ್ಲಿ ಈಗಾಗಲೇ ನದಿ ದಂಡೆ ನಿರ್ಮಿಸಿ ಸಂರಕ್ಷಣೆ ಮಾಡಲಾಗಿದೆ. ಇದರಿಂದ ಹೊಳೆಯ ನೀರಿನ ಹರಿವು ಮತ್ತಷ್ಟು ಜಾರುಕುದ್ರುವಿನತ್ತ ತಿರುಗುತ್ತಿದೆ ಎಂಬುದು ಸ್ಥಳೀಯರ ಅಭಿಪ್ರಾಯವಾಗಿದೆ.

ಸೇತುವೆ ತಳದ ಮಣ್ಣು ತೆರವು, ತಡೆಗೋಡೆ ನಿರ್ಮಾಣಕ್ಕೆ ಆಗ್ರಹ

ಜಾರುಕುದ್ರುವಿನ ಸುರಕ್ಷತೆಗಾಗಿ ಸೇತುವೆಯ ತಳಭಾಗದಲ್ಲಿ ಸಂಗ್ರಹವಾಗಿರುವ ಮಣ್ಣನ್ನು ತಕ್ಷಣ ತೆರವುಗೊಳಿಸಬೇಕು. ಹೊಳೆಯಲ್ಲಿ ಹೂಳೆತ್ತಿ ನೀರಿನ ಹರಿವಿಗೆ ಸುಗಮ ವ್ಯವಸ್ಥೆ ಕಲ್ಪಿಸುವುದರ ಜತೆಗೆ ನದಿ ಕೊರೆತ ತಡೆಯಲು ಶಾಶ್ವತ ತಡೆಗೋಡೆ ನಿರ್ಮಿಸಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.

ಮಳೆಗಾಲದಲ್ಲಿ ದುಸ್ತರ ಬದುಕು

ಜಾರುಕುದ್ರುವಿನಲ್ಲಿ ಆಗಾಗ್ಗೆ ಪ್ರವಾಹ ಉಂಟಾಗುತ್ತಿದ್ದು, ಮಳೆ ತೀವ್ರವಾದ ಸಂದರ್ಭದಲ್ಲಿ ನಿವಾಸಿಗಳು ತಮ್ಮ ಮನೆಗಳನ್ನು ತೊರೆದು ಸಂಬಂಧಿಕರ ಮನೆಗಳು ಅಥವಾ ಗಂಜಿ ಕೇಂದ್ರಗಳಲ್ಲಿ ಆಶ್ರಯ ಪಡೆಯಬೇಕಾದ ಪರಿಸ್ಥಿತಿ ಎದುರಾಗುತ್ತದೆ. ನಿರಂತರ ನದಿ ಕೊರೆತ ಮತ್ತು ಪ್ರವಾಹದ ಭೀತಿಯಿಂದ ಕೆಲವರು ತಮ್ಮ ಜಮೀನುಗಳನ್ನು ತೊರೆದು ಸುರಕ್ಷಿತ ಪ್ರದೇಶಗಳಲ್ಲಿ ಮನೆ ನಿರ್ಮಿಸಿಕೊಂಡು ಸ್ಥಳಾಂತರಗೊಂಡಿದ್ದಾರೆ.

ತಕ್ಷಣವೇ ಸಂಬಂಧಪಟ್ಟ ಇಲಾಖೆಗಳು ಸ್ಥಳ ಪರಿಶೀಲನೆ ನಡೆಸಿ ವೈಜ್ಞಾನಿಕ ಅಧ್ಯಯನದ ಆಧಾರದಲ್ಲಿ ಶಾಶ್ವತ ಪರಿಹಾರ ಕ್ರಮ ಕೈಗೊಳ್ಳದಿದ್ದರೆ, ಮುಂದಿನ ದಿನಗಳಲ್ಲಿ ಜಾರುಕುದ್ರುವಿನ ಅಸ್ತಿತ್ವವೇ ಅಪಾಯಕ್ಕೆ ಸಿಲುಕುವ ಸಾಧ್ಯತೆಯಿದೆ ಎಂದು ನಿವಾಸಿಗಳು ಆತಂಕ ವ್ಯಕ್ತಪಡಿಸಿದ್ದಾರೆ.

ಸ್ಥಳೀಯ ನಿವಾಸಿ ಶಾಂತಾ ಪೂಜಾರ್ತಿ ಮಾತನಾಡಿ, ಜಾರುಕುದ್ರು ಪ್ರದೇಶದಲ್ಲಿ ಹಲವು ವರ್ಷಗಳಿಂದ ಸಮಸ್ಯೆ ಮುಂದುವರಿದಿದ್ದು, ಇದೀಗ ಇಲ್ಲಿಂದ ವಲಸೆ ಹೋಗುವ ಅನಿವಾರ್ಯ ಪರಿಸ್ಥಿತಿ ಎದುರಾಗಿದೆ ಎಂದು ಆತಂಕ ವ್ಯಕ್ತಪಡಿಸಿದರು. ಈಗಾಗಲೇ ತಮ್ಮ 25–30 ಸೆಂಟ್ಸ್‌ ಭೂಮಿ ಹಾಗೂ ಫಲಭರಿತ ತೆಂಗಿನ ಮರಗಳು ಹೊಳೆಯ ಪಾಲಾಗಿವೆ. ಹೀಗಾಗಿ ಹೊಳೆಯಲ್ಲಿ ತುಂಬಿರುವ ಹೂಳು ಹಾಗೂ ಸೇತುವೆಯ ಕೆಳಭಾಗದಲ್ಲಿ ಸುರಿದಿರುವ ಮಣ್ಣನ್ನು ತಕ್ಷಣ ತೆರವುಗೊಳಿಸಿ, ನದಿ ದಂಡೆ ಸಂರಕ್ಷಣೆಗೆ ಶಾಶ್ವತ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಉದ್ಯಾವರ ಗ್ರಾ.ಪಂ. ಮಾಜಿ ಸದಸ್ಯ ಗಿರೀಶ್‌ ಸುವರ್ಣ ಮಾತನಾಡಿ, ಮಳೆಗಾಲ ಆರಂಭವಾದರೆ ಸಾಕು ಜಾರುಕುದ್ರು ನಿವಾಸಿಗಳಲ್ಲಿ ಆತಂಕ ಮೂಡುತ್ತದೆ. ಪಾಪನಾಶಿನಿ ಹೊಳೆಯು ವೇಗವಾಗಿ ಹರಿದು ಬಂದು ಜಾರುಕುದ್ರು ಭಾಗದಲ್ಲಿ ವಿಭಜನೆಯಾಗುವುದರಿಂದ ಇಲ್ಲಿ ಹೆಚ್ಚಿನ ಅವಾಂತರ ಸೃಷ್ಟಿಯಾಗುತ್ತಿದೆ. ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ ನದಿ ದಂಡೆ ನಿರ್ಮಿಸುವಂತೆ ಉದ್ಯಾವರ ಗ್ರಾ.ಪಂ.ನಲ್ಲಿ ನಿರ್ಣಯ ಕೈಗೊಂಡು ಸಂಬಂಧಪಟ್ಟ ಇಲಾಖೆಗೆ ಈಗಾಗಲೇ ಕಳುಹಿಸಲಾಗಿದೆ. ಮಾಜಿ ಶಾಸಕರು, ಮಾಜಿ ಸಚಿವರು ಹಾಗೂ ಹಾಲಿ ಶಾಸಕರಿಗೂ ಈ ಕುರಿತು ಮನವಿ ಸಲ್ಲಿಸಲಾಗಿದೆ. ಸರ್ಕಾರ ಕೂಡಲೇ ಸೂಕ್ತ ಕ್ರಮ ಕೈಗೊಂಡು ಇಲ್ಲಿನ ನಿವಾಸಿಗಳ ಆತಂಕಕ್ಕೆ ಶಾಶ್ವತ ಪರಿಹಾರ ಕಲ್ಪಿಸಬೇಕು ಎಂದು ಆಗ್ರಹಿಸಿದರು.

ಈ ಕುರಿತು ಪ್ರತಿಕ್ರಿಯಿಸಿದ ಕಾಪು ವಿಧಾನಸಭಾ ಕ್ಷೇತ್ರದ ಶಾಸಕ ಗುರ್ಮೆ ಸುರೇಶ್‌ ಶೆಟ್ಟಿ, ಜಾರುಕುದ್ರು ನಿವಾಸಿಗಳ ಆತಂಕದ ಅರಿವಿದೆ. ಇಲ್ಲಿನ ನಿವಾಸಿಗಳು ಈ ಹಿಂದೆಯೂ ಸಮಸ್ಯೆಗೆ ಪರಿಹಾರ ಕಲ್ಪಿಸುವಂತೆ ಮನವಿ ಸಲ್ಲಿಸಿರುವುದು ಗಮನಕ್ಕೆ ಬಂದಿದೆ. ಶೀಘ್ರದಲ್ಲೇ ಸ್ಥಳಕ್ಕೆ ಭೇಟಿ ನೀಡಿ ಪರಿಸ್ಥಿತಿಯನ್ನು ಪರಿಶೀಲಿಸುತ್ತೇನೆ. ರಾಜ್ಯ ಸರಕಾರದಿಂದ ಸಮರ್ಪಕ ಅನುದಾನ ಲಭ್ಯವಾಗದಿರುವುದು ಸಮಸ್ಯೆಯಾಗಿದೆ. ಆದರೂ ಕ್ಷೇತ್ರದ ಶಾಸಕನಾಗಿ ಶಾಶ್ವತ ಪರಿಹಾರ ಯೋಜನೆ ಅನುಷ್ಠಾನಕ್ಕೆ ಪ್ರಾಮಾಣಿಕ ಪ್ರಯತ್ನ ನಡೆಸುತ್ತೇನೆ ಎಂದು ಭರವಸೆ ನೀಡಿದರು.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ರಾಯಚೂರು | ಭೂಮಾಪಕ–ಗ್ರಾಮ ಆಡಳಿತಾಧಿಕಾರಿ ಪರೀಕ್ಷೆ: ಪರೀಕ್ಷಾ ಕೇಂದ್ರಗಳ ಸುತ್ತ 200 ಮೀ. ನಿಷೇಧಿತ ಪ್ರದೇಶ

ಭೂದಾಖಲೆಗಳ ಇಲಾಖೆಯಲ್ಲಿನ ಉಳಿಕೆ ಮೂಲ ವೃಂದದ ಭೂಮಾಪಕರ ಹುದ್ದೆಗಳು ಹಾಗೂ ಕಂದಾಯ...

ಎಂಆರ್‌ಪಿಎಲ್‌ನಲ್ಲಿ ಭಾರೀ ಸ್ಫೋಟ: ಓರ್ವ ಸಾವು; ಸುರಕ್ಷತಾ ಲೋಪದ ಸಮಗ್ರ ತನಿಖೆಗೆ ಆಗ್ರಹ

ಜೋಕಟ್ಟೆ ಸಮೀಪದ ಮಂಗಳೂರು ರಿಫೈನರಿ ಆ್ಯಂಡ್ ಪೆಟ್ರೋಕೆಮಿಕಲ್ಸ್ ಲಿಮಿಟೆಡ್‌ (ಎಂಆರ್‌ಪಿಎಲ್) ಘಟಕದಲ್ಲಿ...

ಮಡಗಾಂವ್- ಮಂಗಳೂರು ವಂದೇ ಭಾರತ್ ರೈಲು ಬೆಂಗಳೂರಿಗೆ ವಿಸ್ತರಣೆ

ಮಂಗಳೂರು-ಮಡಗಾಂವ್ ನಡುವೆ ಸಂಚರಿಸುತ್ತಿದ್ದ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲನ್ನು ಬೆಂಗಳೂರಿನವರೆಗೆ ವಿಸ್ತರಿಸಲಾಗಿದೆ....