ರಾಜಕಾರಣದಷ್ಟೇ, ಇಂದು ದೇಶದ ಶಿಕ್ಷಣ ವ್ಯವಸ್ಥೆಯೂ ಕಲುಷಿತಗೊಳ್ಳುತ್ತಿದ್ದು, ಗುಣಾತಕ ಶಿಕ್ಷಣ ನೀಡುವುದು ಪ್ರಸ್ತುತ ದಿನಗಳಲ್ಲಿ ದೊಡ್ಡ ಸವಾಲಾಗಿದೆ ಎಂದು ಮಾಜಿ ವಿಧಾನ ಪರಿಷತ್ತು ಸದಸ್ಯ ಡಾ.ವೈ.ಎ.ನಾರಾಯಣಸ್ವಾಮಿ ಕಳವಳ ವ್ಯಕ್ತಪಡಿಸಿದರು.
ತುಮಕೂರು ನಗರದ ಸೆಂಟ್ರಲ್ ಲೈಬ್ರರಿ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ‘ಗೆಳೆಯರ ಗೆಳೆಯ ಕೆಸಿಬಿ’ ಕೃತಿ ಲೋಕಾರ್ಪಣೆ ಹಾಗೂ ಡಾ.ಕೆ.ಸಿ.ಬಸವರಾಜ್ ಅವರ ಅಭಿನಂದನಾ ಸಮಾರಂ ಭದಲ್ಲಿ ಭಾಗವಹಿಸಿ ಮಾತನಾಡಿ ಅವರು, ಸರ್ಕಾರಗಳು ಬದಲಾದಂತೆ ಶೈಕ್ಷಣಿಕ ನೀತಿಗಳೂ ಬದಲಾಗುತ್ತಿವೆ. ಇಂದು ಶಿಕ್ಷಕರನ್ನು ಗುಣಮಟ್ಟದ ಪಾಠ-ಪ್ರವಚನಗಳಿಗೆ ಬಳಸಿಕೊಳ್ಳುವ ಬದಲು ಕೇವಲ ‘ಬಯೋಮೆಟ್ರಿಕ್’ ಗಡುವುಗಳಿಗೆ ಸೀಮಿತಗೊಳಿಸಲಾಗುತ್ತಿದೆ, ಶಿಕ್ಷಣದಲ್ಲಿ ಗುಣಮಟ್ಟ ಕುಸಿಯುತ್ತಿದ್ದು, ಯುವಜನತೆಯ ಭವಿಷ್ಯದ ಜೊತೆ ಚೆಲ್ಲಾಟವಾಡಲಾಗುತ್ತಿದೆ. ಈ ವ್ಯವಸ್ಥೆಯ ವಿರುದ್ಧ ಪ್ರಜ್ಞಾವಂತರು ಧ್ವನಿ ಎತ್ತಬೇಕಿದೆ ಎಂದರು.
ಶೋಷಿತ ಹಾಗೂ ದಮನಿತ ಸಮುದಾಯದಿಂದ ಬಂದು, ಎಲ್ಲಾ ಸವಾಲುಗಳನ್ನು ಎದುರಿಸಿ ಉನ್ನತ ಹುದ್ದೆಗೆ ಏರಿದ ಕೆಸಿಬಿ ಅವರ ಸಾಧನೆ ಸಾಮಾನ್ಯವಾದದ್ದಲ್ಲ. ಸರ್ಕಾರಿ ಸೇವೆಯಿಂದ ನಿವೃತ್ತರಾದ ಮಾತ್ರಕ್ಕೆ ಮನೆಯಲ್ಲಿ ಕೂರದೆ, ಕೆಸಿಬಿ ಅವರು ತಮಲ್ಲಿರುವ ಜ್ಞಾನ, ವಿದ್ವತ್ತು ಹಾಗೂ ಅನುಭವವನ್ನು ಸಮಾಜದ ಏಳಿಗೆಗಾಗಿ ಹಾಗೂ ಯುವಜನರ ಹಿತಕ್ಕಾಗಿ ಧಾರೆ ಎರೆಯಬೇಕು ಎಂದರು.
ಹಿರಿಯ ಸಾಹಿತಿ ಹಾಗೂ ಚಿಂತಕ ಪ್ರೊ. ಎಸ್.ಜಿ. ಸಿದ್ದರಾಮಯ್ಯ ಅವರು ಮಾತನಾಡಿ ಶಿಕ್ಷಣ ಕ್ಷೇತ್ರವು ದಿನೇ ದಿನೇ ವ್ಯಾಪಾರೀಕರಣಗೊಳ್ಳುತ್ತಿದ್ದು, ಲಕ್ಷಾಂತರ ವಿದ್ಯಾರ್ಥಿಗಳು ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ. ಈ ಬಿಕ್ಕಟ್ಟಿನ ಬಗ್ಗೆ ಶಿಕ್ಷಕರು ಸೇರಿದಂತೆ ಇಡೀ ಸಮಾಜ ಆತ್ಮಾವಲೋಕನ ಮಾಡಿಕೊಳ್ಳಬೇಕಾಗಿದೆ ಎಂದು ಕರೆ ನೀಡಿದ್ದಾರೆ. ಶಿಕ್ಷಣ ಮತ್ತು ಶಿಕ್ಷಕರ ಹೊಣೆಗಾರಿಕೆ ಕುರಿತು ಗೌರವಾನ್ವಿತ ವಿಚಾರಗಳನ್ನು ಹಂಚಿಕೊಂಡರು.
ಒಬ್ಬ ಶಿಕ್ಷಕ ನಿರಂತರ ಅಧ್ಯಯನಶೀಲನಾಗಿ, ನಿತ್ಯ ವಿದ್ಯಾರ್ಥಿಯಂತೆ ಕಲಿಯುತ್ತಿದ್ದಾಗ ಮಾತ್ರ ಆತನಿಗೆ ಬೋಧಿಸುವ ನಿಜವಾದ ಅರ್ಹತೆ ದೊರೆಯುತ್ತದೆ ಎಂದು ಪ್ರೊ. ಸಿದ್ದರಾಮಯ್ಯ ಅಭಿಪ್ರಾಯಪಟ್ಟರು.
ನಿವೃತ್ತಿಯಾದ ನಂತರ ಸಮಾಜಮುಖಿ ಚಟುವಟಿಕೆಗಳಿಂದ ದೂರವಾಗಿ ಮನೆಗಷ್ಟೇ ಸೀಮಿತವಾಗಬಾರದು. ಗೋರೂರು ಚನ್ನಬಸಪ್ಪ ಅವರಂತಹ ಹಿರಿಯರಂತೆ ಸದಾ ಕ್ರಿಯಾಶೀಲರಾಗಿ ಸಮಾಜದೊಂದಿಗೆ ತೊಡಗಿಸಿಕೊಂಡಾಗ ಮಾತ್ರ ನಿರಂತರ ಯೌವನ ಮತ್ತು ಆರೋಗ್ಯ ಕಾಯ್ದುಕೊಳ್ಳಲು ಸಾಧ್ಯ ಎಂದು ತಿಳಿಸಿದರು.
ಪ್ರೊ.ಕೆ.ಸಿ.ಬಸವರಾಜು ಮಾತನಾಡಿ ಅಭಿನಂದನಾ ಸಮಿತಿಯ ಎಲ್ಲಾ ಪದಾಧಿಕಾರಿಗಳು ಹಾಗೂ ಕಾರ್ಯಕ್ರಮ ಆಯೋಜನೆಗೆ ಶ್ರಮಿಸಿದ ತಮ ಗೆಳೆಯರಿಗೆ ಕೃತಜ್ಞತೆಗಳನ್ನು ತಿಳಿಸುತ್ತೇನೆ ಶಿವನಂಜಯ್ಯ ಅವರ ನೇತೃತ್ವದಲ್ಲಿ ಶ್ರದ್ಧೆಯಿಂದ ಮೂಡಿಬಂದ ಅಭಿನಂದನಾ ಗ್ರಂಥವನ್ನು ಬಿಡುಗಡೆ ಮಾಡಲಾಗಿದ್ದು ಈ ಗ್ರಂಥದಲ್ಲಿ ನನ್ನ ಕುರಿತು 70ಕ್ಕೂ ಹೆಚ್ಚು ಲೇಖನಗಳು ಪ್ರಕಟಗೊಂಡಿರುವುದು ನನಗೆ ಸೊಜಿಗವೆನಿಸುತ್ತದೆ ಸ್ನೇಹಿತರು ಹಾಗೂ ಶಿಕ್ಷಕರ ಪ್ರೀತಿಗೆ ಕೃತಜ್ಞ ನಾಗಿದ್ದು ಹಿತೈಷಿಗಳ ಆಶೀರ್ವಾದ ಮತ್ತು ಪ್ರೀತಿಗೆ ನಾನು ಸದಾ ಆಭಾರಿಯಾಗಿರುವುದಾಗಿ ತಿಳಿಸಿದರು.
ಸರ್ಕಾರಿ ಕಾಲೇಜು ಶಿಕ್ಷಕರ ಸಂಘದ ರಾಜ್ಯ ಅಧ್ಯಕ್ಷರು ಹಾಗೂ ನೃಪತುಂಗ ವಿಶ್ವವಿದ್ಯಾಲಯದ ಪರೀಕ್ಷಾಂಗ ಕುಲಸಚಿವರಾದ ಡಾ.ಟಿ.ಎಂ.ಮಂಜುನಾಥ್ ಅವರು ಮಾತನಾಡಿ ಕಷ್ಟದ ಹಿನ್ನೆಲೆಯಿಂದ ಬಂದು, ಸವಾಲುಗಳನ್ನು ಎದುರಿಸಿ ಶ್ರೇಷ್ಠ ಮಟ್ಟಕ್ಕೆ ಬೆಳೆದ ಡಾ. ಕೆ.ಸಿ. ಬಸವರಾಜ್ (ಕೆಸಿಬಿ) ಅವರ ಸಾಧನೆ ಮತ್ತು ಸಮಾಜಮುಖಿ ಚಿಂತನೆಗಳು ಸರ್ವರಿಗೂ ಮಾದರಿಯಾಗಿವೆ ಎಂದರು
ಬೆಂಗಳೂರು ಪ್ರಾದೇಶಿಕ ಕಚೇರಿಯ ಜಂಟಿ ನಿರ್ದೇಶಕರಾದ ಡಾ. ಕೆ. ರಾಮಕೃಷ್ಣರೆಡ್ಡಿ, ಹೆಚ್.ಜಿ. ನಾರಾಯಣ್, ವೈ. ರಮೇಶ್, ಶ್ರೀನಾಥ್‌ರಾಜ್, ಜಿ. ತಿಪ್ಪೇಸ್ವಾಮಿ,ಡಾ. ಎಂ.ಜೆ. ಶಿವಣ್ಣ ಮಲ್ಲಿಕಾರ್ಜುನಯ್ಯ, . ಟಿ. ಗಂಗಾಧರಯ್ಯ, ಎಂ.ಜಿ .ರಾಮಣ್ಣ, ವಸಂತ ಟಿ.ಡಿ. ಪ್ರಾಂಶುಪಾಲರು, ಎಂ.ಎಸ್. ನಾಗರಾಜು, ಪಿ.ಟಿ. ಶ್ರೀನಿವಾಸ ನಾಯಕ, ಮುನೀಂದ್ರ ಕುಮಾರ್ ಡಿ.ಎಸ್. ಡಾ. ಶ್ರೀನಿವಾಸ್ ರೆಡ್ಡಿ, ಕೆ. ರಾಮಕೃಷ್ಣ ರೆಡ್ಡಿ,ಡಾ. ಟಿ.ಎಂ. ಮಂಜುನಾಥ, ಡಿ. ಶಿವನಂಜಯ್ಯ, ಡಾ. ಕೆ. ರಾಮಕೃಷ್ಣ ರೆಡ್ಡಿ ಡಾ. ಟಿ.ಎಂ. ಮಂಜುನಾಥ, ಡಾ. ಡಿ. ಶಿವನಂಜಯ್ಯ, ಜಿ. ಶ್ರೀನಾಥರಾಜ್, ಟಿ.ಡಿ. ವಸಂತ, ಡಿ.ಎಸ್. ಮುನೀಂದ್ರ ಕುಮಾರ್, ಜಿ. ತಿಪ್ಪೇಸ್ವಾಮಿ ಡಾ. ಓ. ನಾಗರಾಜು, ಸ ಎಂ. ಗೋವಿಂದರಾಯ, ವಿ.ಎನ್. ಮುರುಳೀಧರ್, ಸದಸ್ಯರು ಪ್ರೊ. ಎನ್.ಪಿ. ಶಿವಾನಂದಯ್ಯ, ಧರ್ಮಪತ್ನಿ ವಸಂತಟಿಪುತ್ರಿ ಭೂಮಿಕಾ ಕೃತಿ ಸಂಪಾದಕೀಯ ಮಂಡಳಿ ಸದಸ್ಯರು ಲಕ್ಷ್ಮೀರಂಗಯ್ಯ ಸೇರಿದಂತೆ ಅಭಿಮಾನಿಗಳು ಇತರರು ಉಪಸ್ಥಿತರಿದ್ದರು.




