ತುಮಕೂರಿನಲ್ಲಿ ಎಸ್ಐಆರ್ ವಿರೋಧಿ ಜನ ಜಾಗೃತಿ ಜಾಥಾಕ್ಕೆ ಚಾಲನೆ

Date:

ತುಮಕೂರು ನಗರದ ಕನ್ನಡ ಭವನದಲ್ಲಿ ಎದ್ದೇಳು ಕರ್ನಾಟಕ ಮತ್ತು ತುಮಕೂರು ಪ್ರಗತಿಪರ ಮತ್ತು ಜನಪರ ಸಂಘಟನೆಗಳ ಒಕ್ಕೂಟದಿಂದ ಎಸ್ಐಆರ್ ವಿರೋಧಿ ಜನಜಾಗೃತಿ ಜಾಥಾ ಕುರಿತು ಕರಪತ್ರ ಬಿಡುಗಡೆ ಮಾಡುವ ಮೂಲಕ ಉದ್ಘಾಟನೆ ಮಾಡಲಾಯಿತು. 

- Advertisement -

ರಾಜ್ಯಮಟ್ಟದ ಎಸ್ಐಆರ್ ವಿರೋಧಿ ಜಾಥಾವನ್ನು ಉದ್ಘಾಟನೆ ಮಾಡಿ  ಪ್ರೊ.ಕೆ ದೊರೈರಾಜ್ ಮಾತನಾಡಿ ಎಸ್ಐಆರ್ ವಿರೋಧಿ ಜನಜಾಗೃತ ಜಾಥಾ ರಾಜ್ಯದಾದ್ಯಂತ ಆರಂಭ ಮಾಡಿರುವ ಉದ್ದೇಶ ಜನರಲ್ಲಿರುವ ಆತಂಕವನ್ನು ನಿವಾರಣೆ ಮಾಡುವುದು . ಏಕೆಂದರೆ ಉತ್ತರ ರಾಜ್ಯಗಳಲ್ಲಿ ಒಂದೊಂದು ರಾಜ್ಯದಲ್ಲೂ ಲಕ್ಷಾಂತರ ಜನರನ್ನ ಮತದಾನದ ಹಕ್ತಿನಿಂದ ಆಚೆಗಿಡುವುದು ಕೂಡ ಒಂದು ಆಘಾತಕಾರಿ ವಿಷಯ ಈ ಸಂದರ್ಭದಲ್ಲಿ ಜನರಲ್ಲಿ ಜಾಗೃತಿ ಬಹಳ ಮುಖ್ಯ . ಆಳುವ ಸರ್ಕಾರಗಳು ರಾಜಕೀಯ ಪಕ್ಷಗಳ ಹಿತಾಸಕ್ತಿಗಳನ್ನು ಬಿಟ್ಟು ಜನಪರವಾದ ಸಂವಿಧಾನ ಬದ್ಧವಾದ ಮತ ಪರಿಷ್ಕರಣೆ ಆಗಲಿ ಎಂದು ಎಂದರು. 

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಜಾಗತಿಕ ಪೈಪೋಟಿಗೆ ಕನ್ನಡಿಗರನ್ನು ಸಜ್ಜುಗೊಳಿಸುವ ಬೃಹತ್ ವೇದಿಕೆ ‘ಬೆಂಗಳೂರು...

ರಾಜ್ಯದ ಯುವಜನತೆಯನ್ನು ಭವಿಷ್ಯದ ಜಾಗತಿಕ ಉದ್ಯೋಗ ಮಾರುಕಟ್ಟೆಯ ತೀವ್ರ ಪೈಪೋಟಿ ಮತ್ತು ಸವಾಲುಗಳಿಗೆ ಸುಸಜ್ಜಿತವಾಗಿ ಸಿದ್ಧಪಡಿಸುವ ಮಹತ್ವಾಕಾಂಕ್ಷೆಯೊಂದಿಗೆ ರಾಜ್ಯ ಸರ್ಕಾರವು ಬೃಹತ್ ಹೆಜ್ಜೆಯನ್ನಿಟ್ಟಿದೆ. ಇದರ ಅಂಗವಾಗಿ ಮುಂಬರುವ ನವೆಂಬರ್ 3, 4 ಹಾಗೂ...

ಇಸ್ರೇಲ್‌ ಚುನಾವಣೆ | ಅರಬ್ಬರ ಭರ್ಜರಿ ವೋಟಿಂಗ್, 19...

ಇಸ್ರೇಲ್‌ ಪ್ರಧಾನಿ ನೆತನ್ಯಾಹುವಿನ ದ್ವೇಷದ ರಾಜಕೀಯಕ್ಕೆ ಬೇಸತ್ತ ಇಸ್ರೇಲ್‌ ಅರಬ್ಬರು ಈ ಬಾರಿಯ ಸಾರ್ವತ್ರಿಕ ಚುನಾವಣೆಯಲ್ಲಿ ದಾಖಲೆಮಟ್ಟದಲ್ಲಿ ಮತಗಟ್ಟೆಗೆ ಧಾವಿಸಿ ಭರ್ಜರಿ ಓಟಿಂಗ್‌ ಮಾಡಿದ್ದಾರೆ. 19 ಸೀಟುಗಳನ್ನು ಗೆಲ್ಲುವ ಮೂಲಕ ನೆತನ್ಯಾಹು ಭವಿಷ್ಯವನ್ನು...

ಅಭಿವೃದ್ಧಿಯಿಂದ ದೂರ ಉಳಿದ ಜೀವನಮರಡಗಿ: ಬಸ್ ಇಲ್ಲ, ನೀರಿಲ್ಲ,...

ಸ್ವಾತಂತ್ರ್ಯಾನಂತರದ ಅಭಿವೃದ್ಧಿಯ ಹಾದಿಯಲ್ಲಿ ಗ್ರಾಮೀಣ ಪ್ರದೇಶಗಳಿಗೆ ಮೂಲಭೂತ ಸೌಲಭ್ಯಗಳನ್ನು ತಲುಪಿಸುವ ಪ್ರಯತ್ನಗಳು ನಡೆಯುತ್ತಿದ್ದರೂ, ಕಲಬುರಗಿ ಜಿಲ್ಲೆಯ ಕಾಳಗಿ ತಾಲೂಕಿನ ಜೀವನಮರಡಗಿ ಗ್ರಾಮದ ಜನರ ಬದುಕಿನಲ್ಲಿ ಮಾತ್ರ ಇಂದಿಗೂ ಹಲವು ಸಮಸ್ಯೆಗಳು ಮುಂದುವರಿದಿವೆ. ಗ್ರಾಮಕ್ಕೆ...

ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಕೆ.ಎಸ್ ಸಿದ್ದಲಿಂಗಪ್ಪ ಮಾತನಾಡಿ ಎಸ್ಐಆರ್ ಮೂಲಕ ಮತದಾರರ ಹಕ್ಕನ್ನು ಕಸಿಯುವ ತಂತ್ರವಿದು, ನಮಗಷ್ಟೇ ಅಲ್ಲ ಮುಂದಿನ ಜನಾಂಗಕ್ಕೂ ತೊಂದರೆಯಾಗಲಿದೆ, ಎಂದು ವಿಶ್ಲೇಷಿಸಿದರು.

 ಇದು ಒಂದು ಅತ್ಯುತ್ತಮ ಉದ್ದೇಶವಿರುವ ಜಾಥಾ ಕಾರ್ಯಕ್ರಮ ಎಲ್ಲರೂ ಕೂಡ ಇದರಲ್ಲಿ ಭಾಗವಹಿಸಿ, ಜನರಿಗೆ ತೊಂದರೆ ಆಗದಂತೆ ನೋಡಿಕೊಳ್ಳೋಣ ಎಂದರು.

1003461616

 ಕನ್ನಡ ಸಾಹಿತ್ಯ ಪರಿಶುದ್ಧ ಪರಿಷತ್ತಿನ ನಿಕಟ ಪೂರ್ವ ಅಧ್ಯಕ್ಷರಾದ ಬಾ.ಹ.ರಮಾ ಕುಮಾರಿ ಯವರು ನಾವೆಲ್ಲರೂ ಸಮಾಜದ ಋಣದಲ್ಲಿ ಬದುಕಿದ್ದೇವೆ ಯಾರ ಮತ ಹೋದರೇನಂತೆ ನಮಗೇನು ಎಂದು ಸಮಾಧಾನ ಪಟ್ಟುಕೊಳ್ಳುವುದು ಸರಿಯಲ್ಲ ನಾವೆಲ್ಲರೂ ಇದರಲ್ಲಿ ಸಕ್ರಿಯವಾಗಿ ಪಾಲ್ಗೊಂಡು ಜನರಿಗೆ ಸಹಾಯ ಮಾಡಬೇಕಾಗಿದೆ ನಮ್ಮ ಮತ ನಮ್ಮ ಹಕ್ಕು ರಕ್ಷಣೆಯಾಗಬೇಕಿದೆ ಎಂದರು.

ಜಾಥಾ ನಿರ್ದೇಶಕರಾಗಿ ಎದ್ದೇಳು ಕರ್ನಾಟಕದ ಹೋರಾಟಗಾರರಾದ ಕುಮಾರ್ ಸಮತಲ ಮಾತನಾಡಿ ಕೇಂದ್ರ ಚುನಾವಣಾ ಆಯೋಗ ಜಾರಿಗೆ ತಂದಿರುವ ಎಸ್ಐಆರ್ ಪ್ರಕ್ರಿಯೆ ಸಂವಿಧಾನ ವಿರೋಧಿ ಮತ್ತು ಪ್ರಜಾತಂತ್ರವನ್ನು ದುರ್ಬಲಗೊಳಿಸುವ ಹುನ್ನಾರವಾಗಿದೆ. ರಾಜ್ಯದ ಬಹುತೇಕ ಪ್ರಗತಿಪರ ಸಂಘಟನೆಗಳು ಮತ್ತು ಜಾತ್ಯಾತೀತ ಪಕ್ಷಗಳು ಎದ್ದೇಳು ಕರ್ನಾಟಕ ಜೊತೆ ಸೇರಿ ಎಸ್ಐಆರ್  ವಿರೋಧಿ ಜಾಥಾ ಸಂಘಟಸಿದ್ದೇವೆ ಎಂದರು.

1003461617

ತುಮಕೂರಿನ ಸಿಐಟಿಯು ಸುಬ್ರಮಣ್ಯ ಮತ್ತು ಸ್ಲಂ ಜನಾಂದೋಲನ ಕರ್ನಾಟಕದ ಅರುಣ್ ಹಾಗೂ ವೆಲ್ಫೇರ್ ಪಾರ್ಟಿಯ ತಾಜುದ್ದೀನ್ ಮಾತನಾಡಿ ಎಸ್ಐಆರ್ ಜನಜಾಗೃತಿ ಜಾಥಾ ಜನರ ಮತದಾನದ ಹಕ್ಕು ರಕ್ಷಿಸುವ ಉದ್ದೇಶವಾಗಿದೆ. ಇದೆ ಜೂನ್ 30 ರಂದು ಮನೆ ಬಾಗಿಲಿಗೆ ಬಂದು ದಾಖಲೆಗಳ ಪರಿಶೀಲನೆ ನಡೆಸುವುದು ನಿಶ್ಚಿತ ಆಧಾರಿಗಳು ಬಿಎಲ್ಎ ಗಳು ಸಮೀಕ್ಷೆಯಲ್ಲಿ ಪಾರದರ್ಶಕತೆ ಕಾಪಾಡಿಕೊಳ್ಳಬೇಕು. ವಲಸೆ ಕಾರ್ಮಿಕರು, ಸ್ಲಂ ನಿವಾಸಿಗಳು,  ಬಡವರು, ವಯಸ್ಕರು ಮಹಿಳೆಯರು, ಹೆಚ್ಚು ಎಸ್ಐಆರ್ ನಿಂದ ಮತ ಕಳೆದುಕೊಳ್ಳುತ್ತಾರೆ ಎಂಬುದು ಆತಂಕವಾಗುತ್ತಿದೆ. ಇಂತಹವರ ಬಗ್ಗೆ ಗಮನಹರಿಸಿ ದಾಖಲೆಗಳನ್ನು ಸರಳೀಕರಿಸಬೇಕು. ಮತದಾನ ಕಸಿದರೆ ಸರ್ಕಾರದ ಯಾವುದೇ ಸೌಲಭ್ಯ ಸಿಗುವುದಿಲ್ಲ ನಾಗರಿಕರು ಹೆಚ್ಚು ಜಾಗೃತರಾಗಿ ಎಂದರು. 

ಎದ್ದೇಳು ಕರ್ನಾಟಕದ ಇಂದಿರಮ್ಮ ಮಾತನಾಡಿ ಎಸ್ಐಆರ್ ವಿರೋಧಿ ಜನಜಾಗೃತಿ ಜಾಥ ಕನ್ನಡ ಭವನದಿಂದ ಪ್ರಾರಂಭಗೊಂಡು ನಗರದ ಟೌನ್ ಹಾಲ್ ಸರ್ಕಲ್, ಮಾರ್ಗವಾಗಿ ಬೀಜಿ ಪಾಳ್ಯ ಸರ್ಕಲ್. ದಾನ ಪ್ಯಾಲೇಸ್ ಸರ್ಕಲ್. ಚರ್ಚ್ ಸರ್ಕಲ್ ಗಳಲ್ಲಿ ಜನ ಜಾಗೃತಿ ಸಭೆಗಳನ್ನು ಮಾಡಲಾಗಿದೆ. 

ರಾಜ್ಯ ಸಮಿತಿ ಅಧ್ಯಕ್ಷ ಮಂಡಲಿಯ ರಾಮಕೃಷ್ಣಪ್ಪ. ಪ್ರಗತಿಪರ ಚಿಂತಕ, ರೈತ ನಾಯಕ ರಮೇಶ್ ಹಾಗೂ ಜಾತದ ಮಾರ್ಗದರ್ಶಿ ಕೆ ವೆಂಕಟರಾಮು ಹಾಗೂ ಸಾವಿತ್ರಿಬಾಯಿಪುಲೆ ಮಹಿಳಾ ಸಂಘದ ಸಂಚಾಲಕರಾದ ಅನುಪಮಾ. ಜಮಾತೆ ಹಿಂದ್ ಇಸ್ಲಾಮಿನ ಮುಖಂಡರು. ತುಮಕೂರು ನಗರದ ಎಲ್ಲಾ ಪ್ರಗತಿಪರ ಸಂಘಟನೆಗಳ ಮುಖ್ಯಸ್ಥರು ಜಾತ್ಯತೀತ ಪಕ್ಷಗಳ ನೇತಾರರು, ಸಾಹಿತಿಗಳು ಹಿರಿಯ ನಾಗರಿಕರು ಅನೇಕ ಸರ್ಕಾರೇತರ ಸಂಘಗಳ ಪ್ರತಿನಿಧಿಗಳು ಭಾಗವಹಿಸಿದ್ದರು.

eedina
ಈ ದಿನ ಡೆಸ್ಕ್‌
Website | + posts

<p><iframe src="https://www.youtube.com/embed/8qwx4L0lKFQ?autoplay=1&mute=1&loop=1&playlist=8qwx4L0lKFQ&controls=0&modestbranding=1&showinfo=0" width="560" height="315" frameborder="0" allowfullscreen="allowfullscreen"></iframe></p>

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬೆಂಗಳೂರು | ಡಿಸಿಎಂ ಡಾ. ಜಿ.ಪರಮೇಶ್ವರ ಆರೋಗ್ಯ ಸ್ಥಿರ; ನಾಯಕರ ಭೇಟಿ

ರಾಜ್ಯ ಬ್ಯಾಡ್ಮಿಂಟನ್ ಅಸೋಸಿಯೇಷನ್‌ನಲ್ಲಿ ನಡೆದ ಕಾರ್ಯಕ್ರಮದ ವೇಳೆ ಉಸಿರಾಟದ ತೊಂದರೆ ಕಾಣಿಸಿಕೊಂಡ...

ತುಮಕೂರು | ಚಿರತೆ ಸೆರೆಗೆ ನಿರ್ಲಕ್ಷ್ಯ, ರೈತರ ಮೇಲೆ ಕೇಸ್‌ : ಅರಣ್ಯಾಧಿಕಾರಿಗಳ ಅಮಾನತಿಗೆ ಆಗ್ರಹ

ಚಿರತೆ ಸೆರೆಹಿಡಿಯುವಲ್ಲಿ ನಿರ್ಲಕ್ಷ್ಯ ತೋರಿದ ಹಾಗೂ ಗ್ರಾಮಸ್ಥರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದ...

ಅಮಾನಿಕೆರೆಯಲ್ಲಿ ಜಲಕ್ರೀಡೆಯ ಹೊಸ ಅಲೆ: ಮಿನಿ ಒಲಿಂಪಿಕ್ಸ್‌ಗೆ ತುಮಕೂರು ಮಕ್ಕಳು ಸಜ್ಜು

ತುಮಕೂರು ನಗರದ ಅಮಾನಿಕೆರೆಯಲ್ಲಿ ಜಲಕ್ರೀಡೆಗಳಿಗೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಜಿಲ್ಲಾಡಳಿತ ಮಹತ್ವದ...

ತುಮಕೂರು | ಸಮಾಜದ ಸಮಸ್ಯೆಗಳಿಗೆ ತಂತ್ರಜ್ಞಾನದಿಂದ ಪರಿಹಾರ ಕಂಡುಕೊಳ್ಳಿ : ಡಾ. ಅಕಿಹಿಕೊ ಕೆನ್ ಸುಗಿಯಾಮಾ

ತಂತ್ರಜ್ಞಾನವನ್ನು ಕಲಿಯುವುದಕ್ಕೆ ಮಾತ್ರ ಸೀಮಿತವಾಗದೆ, ಸಮಾಜದ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಹಾಗೂ...