ತುಮಕೂರು | ಎಲ್ಲ ರೀತಿಯ ಜ್ಞಾನಕ್ಕೂ ಅಂತಃಕರಣದ ಸ್ಪರ್ಶ ಬೇಕು : ಡಾ. ಗೀತ ವಸಂತ

Date:

ಯಾರಿಗೆ ಪ್ರೀತಿಯ ಅಗತ್ಯವಿದೆಯೋ, ಅವರಿಗೆ ಪ್ರೀತಿಯನ್ನು ನೀಡುವ ತುರ್ತಿದೆ. ಜ್ಞಾನದ ಪ್ರಮಾಣ ಎಷ್ಟಿದ್ದರೂ ಮನುಷ್ಯರ ಒಡನಾಟ ಇರದಿದ್ದರೆ ಅದು ವ್ಯರ್ಥ ಎಂದು ಡಾ. ಡಿವಿಜಿ ಕನ್ನಡ ಆಧ್ಯಯನ ಕೇಂದ್ರದ ಅಧ್ಯಾಪಕರಾದ ಡಾ. ಗೀತ ವಸಂತ ಅಭಿಪ್ರಾಯಪಟ್ಟರು.

- Advertisement -

 ದೇವರಾಯಪಟ್ಟಣದ ಶ್ರೀಶಾರದಾಂಬ ಟ್ರಸ್ಟ್ ನ ವೃದ್ಧಾಶ್ರಮ ಮತ್ತು ಅನಥಾಶ್ರಮ ಧಾಮದಲ್ಲಿ, ಅಂಗಳ ಕಮ್ಯುನಿಟಿ ಟ್ರಸ್ಟ್ ಮತ್ತು ದಾರಿಬುತ್ತಿ ಬಳಗ ಇವರ ಸಹಯೋಗದಲ್ಲಿ ಆಯೋಜಿಸಲಾಗಿದ್ದ, ಮಹಿಳಾ ದಿನಾಚರಣೆಯ ಕಾರ್ಯಕ್ರಮದಲ್ಲಿ ಮಾತನಾಡಿದ ಇವರು,  ನಮ್ಮ ಜ್ಞಾನ ಯಾರನ್ನೂ ಸಂತೈಸದಿದ್ದರೆ ಅದು ಕೇವಲ ಕನ್ನಡಿಯೊಳಗಿನ ಗಂಟು. ಎಲ್ಲ ಜ್ಞಾನಕ್ಕೂ ಅಂತಃಕರಣದ ಸ್ಪರ್ಶ ಬೇಕು, ಸಂತತನ ಬೇಕು. ಪುಸ್ತಕಗಳಿಂದ ಕಲಿಯುವಷ್ಟೇ, ಮನುಷ್ಯರ ಜೊತೆ ಕಲಿಯುವುದೂ ಇದೆ. ಇಂಥಹ ಕಲಿಕೆಗೆ, ಮತ್ತು ಪ್ರೀತಿ ಹಂಚುವ ಕಾರ್ಯಕ್ಕೆ ಈ ಸ್ಥಳ ಅತ್ಯಂತ ಸೂಕ್ತವಾಗಿದೆ ಎಂದು ಹೇಳಿದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

SIR ವಿರೋಧಿ ಹೋರಾಟ: ಡಿಕೆಶಿ–ಮಮತಾ ತೋರಿದ ದಾರಿ ವಿಪಕ್ಷಗಳಿಗೆ...

ಭಾರತದ ಪ್ರಜಾಪ್ರಭುತ್ವದ ಅಡಿಪಾಯವೇ ನ್ಯಾಯಯುತ, ಸ್ವತಂತ್ರ ಹಾಗೂ ಪಾರದರ್ಶಕ ಚುನಾವಣೆ. ಆದರೆ, ಅಧಿಕಾರದ ಗದ್ದುಗೆ ಏರಿರುವ ಮೋದಿ-ಶಾ ಜೋಡಿ, ಈ ಅಡಿಪಾಯವನ್ನೇ (ಚುನಾವಣಾ ಆಯೋಗವನ್ನೇ) ತಮ್ಮ ಸೂತ್ರದ ಬೊಂಬೆ ಮಾಡಿಕೊಂಡಿದೆ. ಎಸ್‌ಐಆರ್‌ ಹೆಸರಿನಲ್ಲಿ...

ಪೊಲೀಸ್ ಇಲಾಖೆ ಸುಧಾರಣೆಗೆ 3 ಸಮಿತಿ; ಬದಲಾವಣೆ ಅಗತ್ಯವೇ?...

ಪೊಲೀಸ್‌ ಇಲಾಖೆಯ ಕಾರ್ಯವೈಖರಿಯಲ್ಲಿ ಸುಧಾರಣೆ, ಡಿಜಿಟಲ್‌ ಟಚ್‌ ಹಾಗೂ ನೇಮಕಾತಿ ವ್ಯವಸ್ಥೆಯ ಪುನರ್‌ರಚನೆಗೆ ರಾಜ್ಯ ಸರ್ಕಾರ ಉನ್ನತ ಮಟ್ಟದ 3 ತಜ್ಞರ ಸಮಿತಿಗಳನ್ನು ರಚಿಸಿದೆ. ಆದರೆ, ಪೊಲೀಸ್‌ ಠಾಣೆಗಳಲ್ಲಿ ಸಾರ್ವಜನಿಕರು ಎದುರಿಸುವ ಸಮಸ್ಯೆಗಳಿಂದ...

ಪಾಕಿಸ್ತಾನದಲ್ಲಿ ಅಹಿಂಸಾ ಮೂರ್ತಿಯ ‘ರಹಸ್ಯರಕ್ಷಣೆ’: ಕರಾಚಿಯಿಂದ ಇಸ್ಲಾಮಾಬಾದ್‌ಗೆ ಗಾಂಧಿ...

ಪಾಕಿಸ್ತಾನದ ಇಸ್ಲಾಮಾಬಾದ್‌ನಲ್ಲಿರುವ ಭಾರತೀಯ ಹೈಕಮಿಷನ್ ಕಚೇರಿಯ ಪ್ರವೇಶ ದ್ವಾರದಲ್ಲಿ ಮಹಾತ್ಮ ಗಾಂಧೀಜಿಯವರ ಭವ್ಯ ಕಂಚಿನ ಪ್ರತಿಮೆ ಇಂದಿಗೂ ಗಾಂಭೀರ್ಯದಿಂದ ನಿಂತಿದೆ. ಕೈಯಲ್ಲಿ ಊರುಗೋಲು ಹಿಡಿದು ದೂರದ ದಿಗಂತವನ್ನು ದಿಟ್ಟಿಸುವಂತಿರುವ ಈ ಬಾಪೂ ಪ್ರತಿಮೆಯು...

ಕಾರ್ಯಕ್ರಮದಲ್ಲಿ ಮಾತನಾಡಿದ ಕ.ಲೇ.ಸಂ. ಜಿಲ್ಲಾಧ್ಯಕ್ಷರಾದ ಆಶಾರಾಣಿ ಬಗ್ಗನಡು ಅವರು, ಈ ಸ್ಥಳ ಮತ್ತು ಈ ಹೊತ್ತು ನಾವು ಮಾತನಾಡುವುದಕ್ಕಿಂತ, ಪ್ರೀತಿಯೇ ಮಾತನಾಡುವಂತಹದ್ದು. ನಮಗೆ ಅನುವಾದಾಗಲೆಲ್ಲ ಇಲ್ಲಿನ ಮನಸ್ಸುಗಳೊಂದಿಗೆ ಸೇರುವುದು ನಮ್ಮ ಜವಾಬ್ದಾರಿ ಮತ್ತು ಇದರಲ್ಲಿಯೇ ನಿಜವಾದ ಮಹಿಳಾ ದಿನಾಚರಣೆಯ ಸಾರ್ಥಕ್ಯವಿದೆ. ಜಗತ್ತು ‘ರೊಟ್ಟಿಗಿಂತ, ಪ್ರೀತಿಗಾಗಿ ಹಸಿದಿರುವ’ ಈ ಹೊತ್ತು ಪ್ರೀತಿಯ ಹುಡುಕಾಟ ಮತ್ತು ಹಂಚುವಿಕೆ ಹೀಗೇ ನಿರಂತರವಾಗಿರಲಿ ಎಂದರು.

ಸಾಹಿತಿ ಹಾಗೂ ಕಲಾವಿದರಾದ ಜ್ಯೋತಿ ಶಾಂತರಾಜು ಅವರು ಮಾತನಾಡುತ್ತಾ, ಮನುಷ್ಯತ್ವದ ಕಡೆಗಿನ ಈ ನಡೆಗಳು ನಿರಂತರವಾಗಿರಬೇಕು. ಈ ವೃದ್ಧರ ಒಡನಾಟದ ಮೂಲಕ ನಾವು ನಮ್ಮೊಳಗಿನ ಆರ್ದ್ರತೆಯನ್ನು ಜೀವಂತವಾಗಿಸಿಕೊಳ್ಳಲು ಸಾಧ್ಯ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಬಾ. ಹ. ರಮಾಕುಮಾರಿಯವರು, ಮಾನವೀಯತೆಯನ್ನು ಕಳೆದುಕೊಂಡರೆ ಏನಾಗುತ್ತದೆ ಎಂಬುದಕ್ಕೆ ಅನಾಥಾಶ್ರಮಗಳೇ ಸಾಕ್ಷಿ. ಮಕ್ಕಳಿಗೆ ಶಿಕ್ಷಣದ ಜೊತೆಗೆ ಮಾನವೀಯತೆಯ ಪಾಠಗಳನ್ನೂ ಕಲಿಸಬೇಕು. ಇಂದು ಜಗತ್ತು ಯುದ್ಧ, ಅಧಿಕಾರ ದಾಹದಿಂದ ತುಂಬಿ ನೂರಾರು ಮುಗ್ಧ ಮನಸ್ಸುಗಳ ಸಾವಿಗೆ ಸಾಕ್ಷಿಯಾಗುತ್ತಿದೆ. ಅಲ್ಲದೇ, ಸಾವಿರಾರು ಮಕ್ಕಳು, ವೃದ್ಧರು ಅನಾಥರಾಗುತ್ತಿದ್ದಾರೆ. ಇದಕ್ಕೆಲ್ಲ ಪ್ರೀತಿ ಮತ್ತು ಮಾನವೀಯತೆಯೇ ಪರಿಹಾರ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಶಾರದಾಂಬ ಟ್ರಸ್ಟಿನ ಯಶೋಧ, ಸಾಹಿತಿ ರಂಗಮ್ಮ ಹೊದೇಕಲ್ ಸೇರಿದಂತೆ ಜಿಲ್ಲೆಯ ಕವಿಗಳು, ಶಿಕ್ಷಕರು, ಸಮಾಜ ಸೇವಕರು ಹಾಗೂ ಸಾರ್ವಜನಿಕರು ಹಾಜರಿದ್ದರು.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ತುಮಕೂರು | ಎಸ್‌ಐಆರ್‌ ಹೆಸರಿನಲ್ಲಿ ಮತದಾರರ ಹಕ್ಕು ಕಸಿಯುವ ಆರೋಪ: ಸೆ.28ಕ್ಕೆ ಕಾಂಗ್ರೆಸ್ ಬೃಹತ್ ಪ್ರತಿಭಟನೆ

ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ಪ್ರಕ್ರಿಯೆಯಲ್ಲಿ ಬಡವರು, ದಲಿತರು,...

ತುಮಕೂರು | ಎಸ್‌ಐಆರ್ ರದ್ದುಪಡಿಸಿ, ಜ್ಞಾನೇಶ್ ಕುಮಾರ್‌ರನ್ನು ಪದಚ್ಯುತಿಗೊಳಿಸಿ : ಪ್ರಕಾಶ್ ರಾಜ್

ಜನರನ್ನು ಗೊಂದಲಕ್ಕೆ ಸಿಲುಕಿಸಿ ಅರ್ಹರ ಮತಹಕ್ಕು ಕಸಿಯುವ ಸಾಧ್ಯತೆ ಇರುವ ಎಸ್‌ಐಆರ್‌...

ಮಧುಗಿರಿಯಲ್ಲಿ ಲೋಕಾಯುಕ್ತ ಬೇಟೆ : ₹30 ಸಾವಿರ ಲಂಚ ಪಡೆಯುವಾಗ ಆರ್‌ಐ ಬಂಧನ

 ಪೌತಿ ಖಾತೆ ಮಾಡಿಕೊಡಲು ರೈತನಿಂದ ₹1 ಲಕ್ಷ ಲಂಚದ ಬೇಡಿಕೆ ಇಟ್ಟಿದ್ದ...

ತುಮಕೂರು | ಪಿಟಿಸಿಎಲ್ ಕಾಯ್ದೆ ಹೋರಾಟ ಸಮಿತಿ ಜಿಲ್ಲಾ ಅಧ್ಯಕ್ಷರಾಗಿ ಶೆಟ್ಟಿಹಳ್ಳಿ ಮಹೇಶ್ ಅವಿರೋಧ ಆಯ್ಕೆ

ಪಿಟಿಸಿಎಲ್ ಕಾಯ್ದೆಗೆ ಸಂಬಂಧಿಸಿದಂತೆ ಜಿಲ್ಲೆಯಲ್ಲಿ ದಲಿತರಿಗೆ ಆಗುತ್ತಿರುವ ಅನ್ಯಾಯಗಳ ವಿರುದ್ಧ ಹೋರಾಟ...