ಜನತೆಯು ಅಗತ್ಯ ವಸ್ತುಗಳ ಮತು ಪೆಟ್ರೋಲ್ – ಡೀಸಲ್, ಅಡಿಗೆ ಅನಿಲ ದರಗಳ ಏರಿಕೆಯಿಂದಾಗಿ ವಿಪರೀತ ಬೆಲೆ ಏರಿಕೆಯಿಂದಾಗಿ ತತ್ತರಿಸುವಂತೆ ಅಗಿದೆ ಎಂದು ಅರೋಪಿಸಿ ಸಿಪಿಐ (ಎಂ) ತುಮಕೂರು ಜಿಲ್ಲಾ ಸಮಿತಿಯು ಮಂಗಳವಾರ ಸಂಜೆ ತುಮಕೂರು ನಗರದ ಸ್ವತ್ರಂತ್ರ ಚೌಕದಲ್ಲಿ ಗ್ಯಾಸ್ ಸಿಲಿಂಡರ್‌ಗೆ ಹಾರ ಹಾಕಿ ಪಕ್ಕದಲ್ಲಿ ಹೋಗೆ ಹಾಕಿ ವಿನೂತವಾಗಿ ಪ್ರತಿಭಟಿಸಿದರು.
ಸಿಪಿಐ (ಎಂ) ರಾಜ್ಯ ಕಾರ್ಯದರ್ಶಿ ಮಂಡಳಿ ಸದಸ್ಯ ಸೈಯದ್ ಮುಜೀಬ್ ಮಾತನಾಡಿ ಕೇಂದ್ರ ಸರ್ಕಾರದ ನೀತಿಗಳ ಕಾರಣ ಬೆಲೆ ಏರಿಕೆಯಾಗುತ್ತಿದೆ. ಇದು ಬಿಜೆಪಿ ಸರ್ಕಾರದ ದಂಧೆ ಎಂದು ಕಟುವಾಗಿ ಟೀಕಿಸಿದರು.
ಜನತೆ ಬೆಲೆ ಏರಿಕೆ , ಗಲಭೆಗಳಲ್ಲಿನ ಸಂತ್ರಸ್ಥರಿಗೆ, ಸಂಕಷ್ಟಕಗಳಿಂದ ಬಳಲುವ ಭಾರತೀಯ ಜನತೆ ಸಾಂತ್ವನ ಹೇಳಲು ಸಮಯ ಇಲ್ಲದ ಪ್ರಧಾನ ಮಂತ್ರಿಗಳು ವಿದೇಶಿದಲ್ಲಿ ಮಹಿಳಾ ರಾಜಕಾರಣಿಗೆ ಚಾಕ್ಲೇಟ್ ತಿನ್ನಿಸುವಲ್ಲಿ ಬಿಜಿ ಇದ್ದಾರೆ ಎಂದು ಕುಟುಕಿದರು.
ಸಿಪಿಐ (ಎಂ) , ಜಿಲ್ಲಾ ಕಾರ್ಯದರ್ಶಿ ಎನ್ .ಕೆ ಸುಬ್ರಮಣ್ಯ ಮಾತನಾಡಿ ವಾಣಿಜ್ಯ ಸಿಲಿಂಡರ್ ದರಗಳಲ್ಲಿ ತೀವ್ರ ಏರಿಕೆಯು ತೀರ ಖಂಡನಾರ್ಹವಾಗಿದೆ., ಇದರ ಪರಿಣಾವಾಗಿ ಬೇರೆಲ್ಲ ಸಾಮಗ್ರಿಗಳ ಬೆಲೆಗಳು ತೀವ್ರವಾಗಿ ಏರುತ್ತಿವೆ. ವಾಣಿಜ್ಯ ಸಂಸ್ಥೆಗಳು/ ಹೋಟಲ್ ಗಳು ಹೊರೆಗಳನ್ನು ಗ್ರಾಹಕರ ಮೇಲೆ ಖಂಡಿತವಾಗಿಯೂ ದಾಟಿಸುತ್ತದೆ, ಇದು ಅವರ ಹೊರೆಗಳು ಮತ್ತು ಹಣದುಬ್ಬರವನ್ನು ಮತ್ತಷ್ಟು ಹೆಚ್ಚಿಸುತ್ತದೆ. ಅನೇಕ ಸಣ್ಣ ಸಂಸ್ಥೆಗಳು ಮುಚ್ಚುವಂತಾಗಿದೆ ಎಂದು ಅಪಾಧಿಸಿದರು.
ಸಿಪಿಐ (ಎಂ) ನಗರ ಕಾರ್ಯದರ್ಶಿ ಎ. ಲೋಕೇಶ್ ಮಾತನಾಡಿ, 5 ಕೆಜಿ ಸಬ್ಸಿಡಿ ರಹಿತ ಸಿಲಿಂಡರ್‌ಗಳ ಬೆಲೆಯನ್ನು 261 ರೂ.ಗಳಷ್ಟು ತೀವ್ರವಾಗಿ ಹೆಚ್ಚಿಸಲಾಗಿದೆ. 5 ಕೆಜಿ ಸಿಲಿಂಡರ್‌ಗಳ ಬೆಲೆಯ ಈ ಕ್ರೂರ ಏರಿಕೆಯು 14 ಕೆಜಿ ಸಿಲಿಂಡರ್‌ಗಳನ್ನು ಪಡೆಯುವ ಅಸಮರ್ಥತೆಯಿಂದಾಗಿ ಅವುಗಳನ್ನು ಬಳಸುವ ಸಣ್ಣ ಮನೆಗಳು ಮತ್ತು ವಲಸೆ ಕಾರ್ಮಿಕರ ಮೇಲೆ ಅತ್ಯಂತ ಪ್ರತಿಕೂಲ ಪರಿಣಾಮ ಬೀರುತ್ತದೆ ಎಂದರು.
ಜನವಾಧಿ ಮಹಿಳಾ ಸಂಘಟನೆ ಜಿಲ್ಲಾ ಸಂಚಾಲಕಿ ಟಿ. ಆರ್ ಕಲ್ಪನಾ ಮಾತನಾಡಿ ಬೇಲೆ ಏರಿಕೆಯು ಮಹಿಳೆಯರನ್ನು ಅತಿಯಾಗಿ ಕಾಡುತ್ತಿದೆ ಎಂದ ಅವರು. ಮಹಿಳೆಯೆ ಬೇಲೆ ಏರಿಕೆಯಿಂದ ಹೆಚ್ಚು ಬಾಧಿತಳಾಗುತ್ತಿದ್ದಾರೆ ಎಂದರು. ಪಿ.ಎಫ್ ಪಿಂಚಣಿದಾರರ ಸಂಘದ ಜಿಲ್ಲಾ ಸಂಚಾಲಕರಾದ ಟಿ.ಜಿ. ಶಿವಲಿಂಗಯ್ಯ ನವರು ಮಾತನಾಡಿ ಲಕ್ಷಂತಾರ ಪಿಂಚಣಿದಾರರು ಪಿಂಚಣಿ ಹೆಚ್ಚಳ ಇಲ್ಲದೆ ವಿಪರೀತ ಬೇಲೆಏರಿಕೆಯಿಂದ ಕಂಗಾಲಾಗಿದ್ದಾರೆ ಎಂದರು.
ಪ್ರತಿಭಟನೆಯನ್ನು ಉದ್ದೇಶಿಸಿ ಸಿಐಟಿಯು ಶಿವಕುಮಾರ್ ಸ್ವಾಮಿ, ಪುಟ್ ಪಾತ್ ವ್ಯಾಪಾರಿಗಳ ಸಂಘದ ವಾಸೀಂ ಅಕ್ರಂ, ಸಮುದಾಯ ಅಶ್ವಥಯ್ಯ, ಮಾತನಾಡಿದರು.
ಪ್ರತಿಭಟನೆಯಲ್ಲಿ ಆಟೋ ಚಾಲಕರ ಸಂಘ ಇಂತಿಯಾಜ್, ಉಮೇಶ್ ,ನರಸಿಂಹಮೂರ್ತಿ,ಮುತ್ತುರಾಜು,ಖಲೀಲ್,ಶ್ರಿನಿವಾಸಗೌಡ, ಮಿನಾಕ್ಷಿ, ಯದಯ,ಗೋಪಾಲ್ ನೇತ್ರವತಿ,ಗಂಗಮ್ಮ, ಇತರು ಭಾಗವಹಿಸಿದ್ದರು.




