ಹೂವು ಅರಳುವಾಗ ಅದಕ್ಕಾಗುವ ಸಂಕಟಗಳ ಬಗ್ಗೆ ನಾವ್ಯಾರೂ ಯೋಚಿಸುವುದಿಲ್ಲ ಹೂವನ್ನು ತುಳಿಯುವುದು ಹೆಣ್ಣನ್ನು ತುಳಿಯುವುದಕ್ಕೆ ಸಮ ಹೂವಿನ ಬಗ್ಗೆ ಯಾರೂ ಕ್ರೌರ್ಯ ತೋರುವುದಿಲ್ಲ ಹಾಗೆಯೇ ನಾವು ಕೂಡ ಎಲ್ಲರೊಂದಿಗೆ ಹೂವಾಗಬೇಕು ಎಂದು ಲೇಖಕಿ ಹಾಗೂ ಸಾಮಾಜಿಕ ಹೋರಾಟಗಾರ್ತಿ ಬಾ.ಹ ರಮಾಕುಮಾರಿ ಅಭಿಪ್ರಾಯಪಟ್ಟರು
ತುಮಕೂರು ನಗರದ ವಿಶ್ವವಿದ್ಯಾನಿಲಯ ಆವರಣದಲ್ಲಿರುವ ರಮಣ ಮಹರ್ಷಿ ಉದ್ಯಾನವನದಲ್ಲಿ ಕವಿ ರಂಗಮ್ಮ ಹೊದೇಕಲ್ ಅವರ ಹೂ-ಮಿಂಚು ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನಾವು ಪ್ರೀತಿಯನ್ನು ಹಂಚುತ್ತಿದ್ದೇವೆ ಎನ್ನುತ್ತಿದ್ದೇವೆ ಆದರೂ ಜಗತ್ತು ಪ್ರೀತಿಯ ಕೊರತೆಯಲ್ಲಿ ಸೊರಗುತ್ತಿದೆ ಎಂದರು
ಪುಸ್ತಕ ಕುರಿತು ಕವಿ ಧನಪಾಲ ನಾಗರಾಜಪ್ಪ ಮಾತನಾಡಿ ಮನಸ್ಸುಗಳನ್ನು ಬೆಸೆಯುವ ಪುಸ್ತಕದ ಸಾಲುಗಳು ನಮ್ಮನ್ನು ಯೋಚಿಸುವಂತೆ ಮಾಡುತ್ತದೆ. ಹೂವುಗಳು ಎಲ್ಲಾ ಸಮಯದಲ್ಲೂ ತಮ್ಮ ಸೌಂದರ್ಯ ಬೀರುವ ಹಾಗೆ ಈ ಪುಸ್ತಕದ ಚುಟುಕು ಗದ್ಯಗಳಿವೆ ನಾವೀಗ ಪ್ರಶ್ನಿಸುವುದೇ ಅಪರಾಧವೇನೊ ಎನ್ನುವ ಭಯ ನಮ್ಮನ್ನು ಕಾಡುತ್ತಿದೆ ಪ್ರಶ್ನೆಗಳಿದ್ದಾಗಲೇ ನಾವು ಜೀವಂತವಾಗಿದ್ದೇವೆ ಎನ್ನುವುದು ಸಾಭೀತಾಗುತ್ತದೆ ಹಾಗಾಗಿ ನಮ್ಮಲ್ಲಿ ಪ್ರಶ್ನಿಸುವ ಮನಸ್ಥಿತಿ ಗಟ್ಟಿಯಾಗಬೇಕು ಅಂತಹ ಆತ್ಮಸ್ಥೈರ್ಯ ಹೆಚ್ಚಿಸುವ ಕೃತಿ ಇದಾಗಿದೆ ಎಂದರು
ಸಭೆಯಲ್ಲಿ ಜಿಲ್ಲಾ ಲೇಖಕಿಯರ ಸಂಘದ ಅಧ್ಯಕ್ಷೆ ಆಶಾ ಬಗ್ಗನಡು ಮಾತನಾಡಿ ರಂಗಮ್ಮ ಹೊದೇಕಲ್ ಒಬ್ಬ ವಿಶಿಷ್ಟ ಕವಿ ಇವರು ಕವಿತೆಗಳು ಕಾಡುತ್ತವೆ ಓದಿದಷ್ಟು ನಮ್ಮವೆ ಎನಿಸುವ ಇವರ ಕವಿತೆಗಳು ಹೃದಯಕ್ಕೆ ಆಪ್ತವಾಗಿರುತ್ತವೆ ಈ ಹೂಮಿಂಚು ಕೃತಿಯ ವಿಚಾರಗಳು ಸಹ ನಮಗೆ ಆಪ್ತವೆನಿಸುತ್ತವೆ ಎಂದು ಹೇಳಿದರು
ಹೂಮಿಂಚು ಕೃತಿಯ ಕರ್ತೃ ರಂಗಮ್ಮ ಹೊದೇಕಲ್ ಮಾತನಾಡಿ ಹೂ-ಮಿಂಚಿನಂತಹ ಕೃತಿಗಳು ಪ್ರೀತಿಯನ್ನು ಹಂಬಲಿಸುವವರಿಗೆ ಪ್ರೀತಿಯನ್ನು ಕೊಡುವ ಕೆಲಸ ಮಾಡಲಿ ಜೊತೆಗೆ ಸಮಾಜ ಮತ್ತು ಕುಟುಂಬದೊಳಗಿನ ದೌರ್ಜನ್ಯವನ್ನು ಪ್ರೀತಿ ಹಂಚುವ ಮೂಲಕ ಶಮನ ಮಾಡಬೇಕು ಹಾಗೆ ಪುಸ್ತಕ ಬಿಡುಗಡೆಗಳು ಹೆಚ್ಚಾಗುತ್ತಿರುವ ಹೊತ್ತಿನಲ್ಲಿ ಅದಕ್ಕೆ ಅನುಗುಣವಾಗಿ ಓದುಗರು ಹೆಚ್ಚಾಗಬೇಕು ಸಾಹಿತ್ಯ-ಓದು ಪ್ರೀತಿ , ಮಾನವೀಯ ಸಂಬಂಧಗಳನ್ನು ಗಟ್ಟಿಗೊಳಿಸುತ್ತವೆ ಇಂತಹ ಪ್ರೀತಿ ಹಂಚುವ ಕಾರ್ಯಕ್ರಮಗಳು ಸಮಾಜದಲ್ಲಿ ಹೆಚ್ಚು ಹೆಚ್ಚು ನಡೆಯಲಿ ಎಂದು ಹೇಳುತ್ತಾ ಹೂಗಳನ್ನು ಪೋಣಿಸಿ ಹೂಮಿಂಚನ್ನು ಕಟ್ಟಿದ ಬಗೆಯನ್ನು ವಿವರಿಸಿದರು ಅದರ ಹಿಂದಿನ ಸಹಾಯಕ ಕೈಗಳನ್ನು ನೆನೆದು ಅವರೆಲ್ಲರಿಗೂ ಕೃತಜ್ಞತೆ ಸಲ್ಲಿಸಿದರು ದಾರಿಬುತ್ತಿ ಬಳಗದ ದರ್ಶನ್ ಹಾದಿಗುಂಟ ಹೂವ ಚೆಲ್ಲಿ ಎನ್ನುವ ಶೀರ್ಷಿಕೆಯಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಹೂವುಗಳು ಪ್ರಸಾರವಾದ ಮತ್ತು ಅದು ಪುಸ್ತಕವಾಗಿ ರೂಪುಗೊಂಡದ್ದರ ಬಗ್ಗೆ ತಿಳಿಸಿದರು
ಕಾರ್ಯಕ್ರಮದಲ್ಲಿ ಲೇಖಕಿ ಇಂದ್ರಮ್ಮ, ಡಾ.ಎಚ್.ಸಿ ಭವ್ಯ ನವೀನ್ಶಾ, ರದಾಂಬ ಟ್ರಸ್ಟ್ ನ ಯಶೋಧ ಅಂಗಳ ಕಮ್ಯುನಿಟಿ ಟ್ರಸ್ಟ್ ನ ವರುಣ್ ಉಪಸ್ಥಿತರಿದ್ದರು
ದಾದಪೀರ್ ಸ್ವಾಗತಿಸಿದರು ದರ್ಶನ್ ಕವಿತೆ ಹಾಡಿದರು ನವೀನ್ ವಂದಿಸಿದರು ಕೆ.ವಿ ವಿವೇಕ ಕಾರ್ಯಕ್ರಮ ನಿರೂಪಿಸಿದರು





