ತುಮಕೂರು | ಎಸ್ಐಆರ್ ಪ್ರಜಾಪ್ರಭುತ್ವ ಆಶಯಗಳಿಗೆ ಮಾರಕ : ಪ್ರಗತಿಪರ ಸಂಘಟನೆಗಳಿಂದ ವಿರೋಧ

Date:





 ಕೇಂದ್ರದ ಬಿಜೆಪಿ ಸರ್ಕಾರ ದೇಶದ ನಾಗರಿಕರ ಮತದಾನದ ಹಕ್ಕನ್ನು ಕಸಿಯುತ್ತಿರುವುದು ಪ್ರಜಾಪ್ರಭುತ್ವದ ವಿರೋಧಿ ನಡೆಯಾಗಿದೆ, ಚುನಾವಣಾ ಆಯುಕ್ತರು ನಿಷ್ಪಕ್ಷಪಾತವಾಗಿ ಮತ ಪರಿಷ್ಕರಣೆ ನಡೆಸುತ್ತಾರೆಂಬ ನಂಬಿಕೆ ನಮಗಿಲ್ಲ. ಬಿಜೆಪಿ ಪಕ್ಷದ ವಕ್ತಾರರಂತೆ ಚುನಾವಣಾ ಆಯುಕ್ತರು ವರ್ತಿಸುತ್ತಿರುವುದು ಖಂಡನೀಯ ಎಂದು ಹಿರಿಯ ಹೋರಾಟಗಾರ ಸಿ.ಯತಿರಾಜ್ ಆರೋಪಿಸಿದರು
- Advertisement -

ತುಮಕೂರು ನಗರದ ಪತ್ರಿಕಾ ಭವನದಲ್ಲಿ ಸೋಮವಾರ ತುಮಕೂರು ಪ್ರಗತಿಪರ ಹಾಗೂ ಪ್ರಜಾತಂತ್ರ ಸಂರಕ್ಷಣಾ ವೇದಿಕೆ ವತಿಯಿಂದ   ಏರ್ಪಡಿಸಿದ್ದ   ಎಸ್ಐಆರ್ (ವಿಶೇಷ ತೀವ್ರ ಮತ ಪಟ್ಟಿ ಪರಿಷ್ಕರಣೆ ರದ್ದುಪಡಿಸಲು ಆಗ್ರಹಿಸಿ ನಡೆಸಿದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮತದಾನದ ಹಕ್ಕು ನಮ್ಮ ಮೂಲಭೂತ ಹಕ್ಕಾಗಬೇಕು. ಚುನವಾಣಾ ಆಯೋಗ ನಿಷ್ಪಕ್ಷಪಾತವಾಗಿ ಚುನಾವಣೆ ನಡೆಸುವಲ್ಲಿ ವಿಫಲವಾಗಿದೆ. ಅವರನ್ನು ಅಧಿಕಾರದಿಂದ ಕೆಳಗಿಳಿಸಬೇಕು. ಎಸ್ಐಆರ್ ಕೇವಲ ರಾಜಕೀಯ ವಿಷಯಗಳಲ್ಲ. ಜನಸಾಮಾನ್ಯರಿಗೆ ತೊಂದರೆ ನೀಡುತ್ತದೆ. ನಾಗರೀಕರಾದ ನಾವೆಲ್ಲ ಎಚ್ಚರವಹಿಸಬೇಕು, ರಾಜಕೀಯ ಪಕ್ಷಗಳು ಬರೀ ಮತದಾನ ಮಾಡಿಸಿಕೊಳ್ಳುವುದಷ್ಟೇ ಅಲ್ಲ, ಪ್ರಜೆಗಳ ಹಿತವನ್ನು ಕಾಯುವ ಹಿಚ್ಚಾಶಕ್ತಿ ಪ್ರದರ್ಶಿಸಬೇಕು ಎಂದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಹೊಸ ಓದು | ಬಿ. ಚಂದ್ರೇಗೌಡರ ‘ಕಾಳ ಮಾವನ...

ಬಿ. ಚಂದ್ರೇಗೌಡರ 'ಬಯಲು ಸೀಮೆಯ ಕಟ್ಟೆಪುರಾಣ' ಅಂಕಣ ಬರಹದಿಂದ ಎದ್ದುಬಂದ ಕಾಳಮಾವ ಈಗ ತನ್ನ ಕಡೇ ದಿನಗಳಲ್ಲಿದ್ದಾರೆ. ಅವರು ಕಣ್ಣುಮುಚ್ಚುವ, ಕಾಲುಮಡಚುವ ದೃಶ್ಯಗಳು ಭಾರತದ ಆತ್ಮಸಾಕ್ಷಿಯ ಅಂತ್ಯಸಂಸ್ಕಾರವನ್ನು ಸಂಕೇತಿಸುವಂತಿವೆ. ನಮ್ಮ ನೆಲದ ನಾಲಿಗೆನಿಷ್ಠೆ...

ಬ್ರಿಟಿಷ್ ಕಾಲದ ʼಗುಲಾಮಗಿರಿʼ ಕಾನೂನುಗಳೇ ಇಂದಿನ ಪೊಲೀಸ್‌ ವ್ಯವಸ್ಥೆಯ...

ಸ್ವಾತಂತ್ರ್ಯ ಬಂದು ದಶಕಗಳೇ ಕಳೆದಿದ್ದರೂ, ನಾವಿನ್ನೂ ಬ್ರಿಟಿಷರು ಭಾರತೀಯರನ್ನು ದಮನ ಮಾಡಲು ರೂಪಿಸಿದ 1861ರ ಪೊಲೀಸ್ ಕಾಯಿದೆಯ ನೆರಳಿನಲ್ಲೇ ಬದುಕುತ್ತಿದ್ದೇವೆಯೇ? ಖಾಕಿ ಪಡೆಯನ್ನು 'ಪ್ರಜೆಗಳ ರಕ್ಷಕ'ನಾಗಿಸಬೇಕಿದ್ದ ವ್ಯವಸ್ಥೆ, ಇಂದಿಗೂ ರಾಜಕಾರಣಿಗಳ ಕೈಗೊಂಬೆಯಾಗಿ ಉಳಿದುಕೊಳ್ಳಲು...

ಯಾರು ಹಿತವರು ಈ ಇಬ್ಬರೊಳಗೆ? ನೇಹಾ ಬೋರಾ ಅಭಿಜಿತ್...

“ಹೋಲಿಕೆ ಬೇಡ, ಒಗ್ಗಟ್ಟು ಬೇಕು. ನಾವೆಲ್ಲರೂ ಒಟ್ಟಾಗಿ ಚುನಾವಣಾ ಆಯೋಗದ ಅಕ್ರಮಗಳ ವಿರುದ್ಧ ಹೋರಾಡಬೇಕು” ಎಂದು ನೇಹಾ ಬರೆದರೆ, ಅದಕ್ಕೆ ಅಭಿಜೀತ್ ಉತ್ತರ- “ಇಂಕ್ವಿಲಾಬ್ ಜಿಂದಾಬಾದ್” ನೇಹಾ ಬೋರಾ ಮತ್ತು ಅಭಿಜಿತ್ ದೀಪ್ಕೆ ನಡುವೆ...


ಪಿಯುಸಿಎಲ್ ಜಿಲ್ಲಾಧ್ಯಕ್ಷ ಪ್ರೊ.ಕೆ ದೊರೈರಾಜ್ ಮಾತನಾಡಿ  ಎಸ್ಐಆರ್ ಜನಾಭಿಪ್ರಾಯ ಕೇಳದೆ ಸರ್ವಾಧಿಕಾರಿ ಧೋರಣೆಯ ಪ್ರಕ್ರಿಯೆ ಪ್ರಜಾಪ್ರಭುತ್ವದ ವಿರುದ್ಧದ ನಡೆಯಾಗಿದೆ, ದೇಶದಲ್ಲಿ ನುಸುಳುಕೊರರಿದ್ದಾರೆ ಎಂಬ ನೆಪದಲ್ಲಿ ಬಹಳ ಸಂಕೀರ್ಣವಾದಂತಹ ನಿಯಮಗಳನ್ನು ಹೇರುವುದು, ಯಾವಾಗ ಹುಟ್ಟಿದ್ದೆ..? ಎಲ್ಲಿ ಹಿಟ್ಟಿದ್ದೆ ನಿಮ್ಮ ಅಪ್ಪ ಅಮ್ಮ ಯಾರು ? 1987 ರಿಂದ ಇಲ್ಲಿವರೆಗೆ ಮತದಾನ ಮಾಡಿರುವ ಬಗ್ಗೆ ಪ್ರಶ್ನೆ ಮಾಡುವುದು ಆಘಾತಕಾರಿಯಾದದ್ದು, ಇತ್ತೀಚೆಗೆ ನಡೆದ ಪಶ್ಚಿಮ ಬಂಗಾಳ ಇತರೆ ರಾಜ್ಯಗಳಲ್ಲಿ 1 ಕೋಟಿ ಜನರ ಮತವನ್ನು ಮತದಾನದಿಂದ ಹೊರಗಿಟ್ಟು ಚುನಾವಣೆ ನಡೆಸುವುದೆಂದರೇ ಇದು ಪ್ರಜಾಪ್ರಭುತ್ವದ ಕಗ್ಗೋಲೆಯಲ್ಲವೇ. ಬೇರೆ ರಾಜ್ಯಗಳಿಗೆ ಬಂದ ಪರಿಸ್ಥಿತಿ ಕನರ್ಾಟಕಕ್ಕೂ ಈ ಎಸ್ಐಆರ್ ನಿಂದ ಬಾರದಿರಲಿ, ಜನರ ಬದುಕಿನೊಂದಿಗೆ ಸರ್ಕಾರಗಳು ಚೆಲ್ಲಾಟವಾಡದಿರಲಿ ಎಂದು ಕಳವಳ ವ್ಯಕ್ತಪಡಿಸಿದರು.

ಟ್ರಾನ್ಸ್ಜೆಂಡರ್ ಸಮುದಾಯದ ದೀಪಿಕಾ ಮಾತನಾಡಿ ಎಸ್ಐಆರ್ ನಮ್ಮ ಸಾಂವಿಧಾನಿಕ ಗುರುತನ್ನು ಹೊಸಕಿ ಹಾಕುವ ಹುನ್ನಾರವಾಗಿದೆ, ತಂದೆ ತಾಯಿ ಸಮಾಜದಿಂದ ದೂರವಿರಿಸಿದ ನಮ್ಮಂತವರಿಗೆ ಸಂವಿಧಾನ ನೀಡಿರುವ ಮೂಲಭೂತ ಹಕ್ಕು ಅದೇ ಮತದಾನ, ಅಂತಹ ಹಕ್ಕನ್ನು ಎಸ್ಐಆರ್ ವಿಶೇಷ ಮತಪರಿಷ್ಟಕರಣೆ ನೆಪದಲ್ಲಿ ಕಸಿಯುತ್ತಿರುವುದು ಚುನಾವಣಾ ಆಯೋಗ ತಾರತಮ್ಯದ ನೀತಿಯಾಗಿದೆ. ಲಿಂಗತ್ವ ಅಲ್ಪಸಂಖ್ಯಾತರಾದ ನಾವು ತಂದೆ ತಾಯಿ ಬಿಟ್ಟು ಊರು ಬಿಟ್ಟು ವಲಸೆ ಸುತ್ತುವ ನಮ್ಮನ್ನು ನಿಮ್ಮ ತಂದೆ ಯಾರು.? ಎಲ್ಲಿಂದ ಬಂದಿರಿ,? ನಿಮ್ಮ ಹುಟ್ಟಿದ ಜನನ ಪ್ರಮಾಣ ಪತ್ರ ಕೊಡಿ ವಂಶವೃಕ್ಷ ಕೊಡಿ ಎಂಬ 11 ದಾಖಲೆಗಳು ಕೇಳಿದರೇ ಏನು ಮಾಡುವುದು.. ಇದು ಜನವಿರೋಧಿಯಾಗಿದೆ ಇಂತಹ ಎಸ್ಐಆರ್ ನಮಗೆ ಬೇಡ. ಎಂದರು.


ಇದೇ ಸಂದರ್ಭದಲ್ಲಿ ಎದ್ದೇಳು ಕರ್ನಾಟಕ ರಾಮಕೃಷ್ಣಪ್ಪ, ಎನ್.ಇಂದಿರಮ್ಮ, ವೆಲ್ಪೇರ್ ಪಾರ್ಟಿಯ ಜಿಲ್ಲಾಧ್ಯಕ್ಷರಾದ ತಾಜದ್ದೀನ್. ಸ್ಲಂ ಜನಾಂದೋಲನ ಕರ್ನಾಟಕದ ಅರುಣ್, ಆಮಾತೆ ಇಸ್ಲಾಮಿ ಅಸ್ರಾರ್ ಅಹ್ಮದ್, ಲೇಖಕಿಯರ ಸಂಘದ ಸುನಂದಮ್ಮ, ಜಾಗೃತ ಕರ್ನಾಟಕ ಮಂಜುಳಾ, ಕರ್ನಾಟಕ ರಾಜ್ಯ ರೈತಸಂಘದ ಬಿಸಿ ಶಂಕ್ರಪ್ಪ, ಎಐಎಂಎಸ್ಎಸ್ ಜಿಲ್ಲಾಧ್ಯಕ್ಷರಾದ ಎಂ.ವಿ ಕಲ್ಯಾಣಿ ಮುಂತಾದವರು ಪಾಲ್ಗೊಂಡಿದ್ದರು.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ತುಮಕೂರು ವಿವಿಯಿಂದ ವರುಣ್‌ರಾಜ್ ಜಿ ಅವರಿಗೆ ಪಿಎಚ್‌.ಡಿ. ಪದವಿ ಪ್ರದಾನ

ತುಮಕೂರು ವಿಶ್ವವಿದ್ಯಾನಿಲಯದ ಡಾ. ಡಿ.ವಿ. ಗುಂಡಪ್ಪ ಕನ್ನಡ ಅಧ್ಯಯನ ಕೇಂದ್ರದ ಪ್ರಾಧ್ಯಾಪಕ...

ಗುಬ್ಬಿ | ಸಿಂಹಾದ್ರಿ ಹತ್ಯೆ ಖಂಡಿಸಿ ದಲಿತಪರ ಸಂಘಟನೆಗಳ ಒಕ್ಕೂಟದಿಂದ ಪ್ರತಿಭಟನೆ

 ಮಧುಗಿರಿ ತಾಲ್ಲೂಕು ಕಾಸಾಪುರ ಗ್ರಾಮದಲ್ಲಿ ಗಣೇಶ ವಿಸರ್ಜನಾ ಮಹೋತ್ಸವದಲ್ಲಿ ದಲಿತ ಯುವಕ...

ತುಮಕೂರು | ರೈತರ ಸಂಕಷ್ಟಕ್ಕೆ ಸ್ಪಂದಿಸಿ : ವೈಜ್ಞಾನಿಕ ಬರ ಪರಿಹಾರಕ್ಕೆ ಆಗ್ರಹ

ಭೀಕರ ಬರಗಾಲದಿಂದ ರೈತರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದರೂ ಕೇಂದ್ರ ಮತ್ತು ರಾಜ್ಯ...

ತುಮಕೂರು | ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ರಾಜೀನಾಮೆಗೆ ಆಗ್ರಹಿಸಿ ಕಾಂಗ್ರೆಸ್ ಪ್ರತಿಭಟನೆ

ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ರಾಜೀನಾಮೆ ಪಡೆಯಬೇಕು ಹಾಗೂ ಇದುವರೆಗೆ...