ತುರುವೇಕೆರೆ | ನೀರಿನ ಗುಂಡಿಯಲ್ಲೇ ದಲಿತ ಮಹಿಳೆ ಶವ ಸಂಸ್ಕಾರ : ತಾಲೂಕು ಆಡಳಿತಕ್ಕೆ ಹಿಡಿಶಾಪ

Date:

 ಸತ್ತು ಹೋದ ವ್ಯಕ್ತಿಯ ಶವವನ್ನು ನೀರು ತುಂಬಿದ ಗುಂಡಿಯಲ್ಲೇ ಹೂಳುವ ಹೀನಾಯ ಸ್ಥಿತಿ ತಾಲೂಕಿನ ದಂಡಿನಶಿವರದ ಪರಿಶಿಷ್ಠ ಜನಾಂಗದ ಜನತೆಗೆ ಬಂದೊದಗಿರುವುದು ವಿಷಾದನೀಯ ಸಂಗತಿ.

- Advertisement -

 ದಂಡಿನಶಿವರ ಹೋಬಳಿ ಕೇಂದ್ರ. ಇಲ್ಲಿ ಬಹುಪಾಲು ಹಿಂದುಳಿದ ವರ್ಗದವರು, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರೇ ಇದ್ದಾರೆ. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಸಮುದಾಯದವರಲ್ಲಿ ಬಹುಮಂದಿಗೆ ಸ್ವಂತ ಜಮೀನು ಇಲ್ಲ. ಜಮೀನು ಇರುವವರು ತಮ್ಮ ಕುಟುಂಬದವರಲ್ಲಿ ಮೃತಪಟ್ಟವರ ಶವ ಸಂಸ್ಕಾರವನ್ನು ತಮ್ಮ ಜಮೀನಿನಲ್ಲೇ ಮಾಡುತ್ತಾರೆ. ಆದರೆ ಜಮೀನು ಇಲ್ಲದವರ ಪಾಡು ಹೇಳತೀರದು. 

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಬೆಟ್ಟದಷ್ಟಾದ ಅತ್ಯಾಚಾರ ಪ್ರಕರಣಗಳು – ತೆವಳುತ್ತಿರುವ ನ್ಯಾಯದಾನ

ಪೊಲೀಸರೆಂದು ನಟಿಸಿ ಬೆದರಿಸುವುದು, ನಿರ್ಜನ ಪ್ರದೇಶಗಳಲ್ಲಿ ತೋಳಗಳಂತೆ ಕಾದು ಹಲ್ಲೆಗೈದು ಸಾಮೂಹಿಕ ಅತ್ಯಾಚಾರ ನಡೆಸಿ ಕೊಂದೆಸೆಯುವುದು, ಕಿಂಚಿತ್ತೂ ಭಯವಿಲ್ಲದೆ ಕೃತ್ಯದ ವಿಡಿಯೋ ತುಣುಕುಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡುವುದಲ್ಲದೆ, ಸಂತ್ರಸ್ತರ ಗುರುತು ಬಹಿರಂಗಪಡಿಸುವ ಪ್ರವೃತ್ತಿ...

ಶಾಮನೂರು ಫ್ಯಾಮಿಲಿಗೆ ಸಚಿವ ಬಸವಂತಪ್ಪ ಕೈ ಮುಗಿಯುವ ಅಗತ್ಯವಿದೆಯೇ?

ಬಸವಂತಪ್ಪನವರನ್ನು ಗೆಲ್ಲಿಸಿದ್ದು, ಕಾಂಗ್ರೆಸ್ಸಿನ ಸಾಂಪ್ರದಾಯಿಕ ಮತದಾರರು. ಶಾಮನೂರು ಕುಟುಂಬದ ಸುತ್ತ ಕಟ್ಟಿರುವ ಕಲ್ಪಿತ ಬಲವನ್ನು ಮೀರಿ, ಬಸವಂತಪ್ಪ ಬೆಳೆಯಬೇಕು ಎಂಬುದು ಕ್ಷೇತ್ರದ ಮತದಾರರ ಅಭಿಪ್ರಾಯ. ಪೌರಕಾರ್ಮಿಕರ ಮಗನಾಗಿ ಹುಟ್ಟಿ, ಸಚಿವ ಸ್ಥಾನದವರೆಗೆ ಬೆಳೆದವರು ಕೆ.ಎಸ್....

ಪಾಕ್‌ಗೆ ತಕ್ಕ ಉತ್ತರ ನೀಡಿದ್ದಾಗಿ ಎದೆ ತಟ್ಟಿಕೊಳ್ಳುವ ಮೋದೀಜಿ,...

ಬಾಲಾಕೋಟ್‌ನಿಂದ ಇತ್ತೀಚಿನ 'ಆಪರೇಷನ್ ಸಿಂಧೂರ್'ವರೆಗೆ ಪಾಕಿಸ್ತಾನಕ್ಕೆ ತಕ್ಕ ಉತ್ತರ ನೀಡಿದ್ದಾಗಿ ಪ್ರಧಾನಿ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಎದೆ ತಟ್ಟಿಕೊಳ್ಳುತ್ತಿದೆ. ಶತೃ ದೇಶವನ್ನು ಮಣಿಸುವುದು ಯಾರಿಗಾದರೂ ಹೆಮ್ಮೆಯೇ. ಆದರೆ, ದೇಶದ ಅಖಂಡತೆಗೆ ಅತಿ...

 ಇಲ್ಲಿಯ ದಲಿತರು ಹತ್ತಾರು ವರ್ಷಗಳಿಂದ ಶವ ಸಂಸ್ಕಾರಕ್ಕಾಗಿ ಭೂಮಿ ಕೊಡಿ ಎಂದು ಹಗಲು ರಾತ್ರಿ ಎನ್ನದೇ ಹೋರಾಟ ಮಾಡಿದ್ದಾರೆ. ಅವರ ಹೋರಾಟದ ಫಲವೇನೋ ಎಂಬಂತೆ ಕಳೆದ ಒಂದೆರೆಡು ವರ್ಷಗಳ ಹಿಂದೆ ಗ್ರಾಮದ ಕೆರೆಯ ಬಳಿ ಸುಮಾರು 20 ಗುಂಟೆ ಜಮೀನನ್ನು ಸ್ವಶಾನಕ್ಕೆಂದು ಗುರುತಿಸಲಾಯಿತು. ಸುಮಾರು 13 ಲಕ್ಷ ರು ವೆಚ್ಚದಲ್ಲಿ ಅದರ ಅಭಿವೃದ್ಧಿಗೆಂದು ನಿರ್ಮಿತಿ ಕೇಂದ್ರಕ್ಕೆ ವಹಿಸಲಾಗಿತ್ತು. ಆದರೆ ನಿರ್ಮಿತಿ ಕೇಂದ್ರದವರು 20 ಗುಂಟೆ ಜಮೀನಿನಲ್ಲಿರುವ ನೂರಾರು ಗುಂಡಿಗಳನ್ನು ಮುಚ್ಚಲು ನಮಗೆ ಆದೇಶಿಸಿಲ್ಲ. ಕೇವಲ ಬೇಲಿ, ಶವ ಇಡುವ ಸ್ಥಳ ಸೇರಿದಂತೆ ಇನ್ನಿತರ ಕಾಮಗಾರಿಗಳನ್ನಷ್ಠೇ ಮಾಡಲು ತಿಳಿಸಲಾಗಿದೆ ಎಂದು ಹೇಳಿ ಕೈ ತೊಳೆದುಕೊಂಡಿದೆ. 20 ಗುಂಟೆ ಜಮೀನಿನಲ್ಲಿ ನೂರಾರು ಆಳುದ್ದದ ಗುಂಡಿಗಳಿವೆ. ಅವುಗಳನ್ನು ಸಮತಟ್ಟು ಮಾಡದ ವಿನಃ ಸ್ವಶಾನದ ಅಭಿವೃದ್ಧಿ ಸಾಧ್ಯವಿಲ್ಲ. 

 ಬುಧವಾರ ದಂಡಿನಶಿವರ ಗ್ರಾಮದ ಹೊಸ ಕಾಲೋನಿಯ ಸಿದ್ದಮ್ಮ ಎಂಬ ವಯೋವೃದ್ಧರೊಬ್ಬರು ಮರಣ ಹೊಂದಿದ್ದರು. ಇವರ ಶವಸಂಸ್ಕಾರ ಮಾಡಲು ಆ ಕುಟುಂಬದ ಸದಸ್ಯರು ದಲಿತರಿಗಾಗಿ ಮೀಸಲಿಟ್ಟಿದ್ದ ಪ್ರದೇಶಕ್ಕೆ ಶವ ತಂದರು. ಶವ ಹೂಳಲು ಅಗೆದಂತೆಲ್ಲಾ ನೀರು ಜಿನುಗುತ್ತಿತ್ತು. ಎಷ್ಟು ನೀರು ಹೊರಗೆ ಚೆಲ್ಲಿದರೂ ನೀರು ಬರುತ್ತಲೇ ಇತ್ತು. ಬೇರೊಂದು ಗುಂಡಿ ತೆಗೆಯಲ ಪ್ರಯತ್ನಿಸಿದರೂ ಸಹ ಇದಕ್ಕಿಂತ ಭಿನ್ನವೇನಿಲ್ಲ. ಕೊನೆಗೆ ವಿಧಿ ಇಲ್ಲದೇ ನೀರು ತುಂಬಿದ ಗುಂಡಿಯಲ್ಲೇ ಸಿದ್ದಮ್ಮನವರ ಶವವನ್ನು ಹೂಳಲಾಯಿತು. ಈ ದುಃಸ್ಥಿತಿ ಕಂಡು ಶವ ಸಂಸ್ಕಾರಕ್ಕೆ ಬಂದಿದ್ದ ಕುಟುಂಬದ ಸದಸ್ಯರು ತಾಲೂಕು ಆಡಳಿತಕ್ಕೆ ಹಿಡಿಶಾಪ ಹಾಕಿದರು.

  ದಂಡಿನಶಿವರ ಹೋಬಳಿ ಒಂದೇ ಅಲ್ಲ. ತಾಲೂಕಿನ ಬಹತೇಕ ಗ್ರಾಮಗಳಲ್ಲಿ ದಲಿತರಿಗೆ ಸ್ಮಶಾನ ಇಲ್ಲವೇ ಇಲ್ಲ. ಶವ ಹೂಳುವ ಸಂದರ್ಭ ಬಂದಲ್ಲಿ ಸ್ವಾತಂತ್ರ್ಯ ಬಂದು ಇಷ್ಟು ವರ್ಷವಾದರೂ ಇನ್ನೂ ಹೀಗೆ ಹೀನಾಯವಾಗಿ ಬದುಕುತ್ತಿದ್ದೇವಲ್ಲಾ ಎಂಬ ನಾಚಿಕೆಯಾಗುತ್ತದೆ ಎಂದು ಡಿಎಸ್‌ ಎಸ್‌ ನ ಜಿಲ್ಲಾ ಸಂಘಟನಾ ಸಂಚಾಲಕ ದಂಡಿನಶಿವರ ಕುಮಾರ್‌ ವಿಷಾದ ವ್ಯಕ್ತಪಡಿಸಿದ್ದಾರೆ.

 ಗ್ರಾಮ ಪಂಚಾಯಿತಿಯಿಂದ ಸುಮಾರು 6 ಲಕ್ಷ ರೂಗಳಲ್ಲಿ 20 ಗುಂಟೆ ಜಮೀನಿನಲ್ಲಿರುವ ಗುಂಡಿಗಳನ್ನು ಮುಚ್ಚಿಸಲು ಕ್ರಮ ಕೈಗೊಳ್ಳಲಾಗಿತ್ತು. ಅದರೆ ಕಾಮಗಾರಿ ಅರ್ಧಂಬರ್ಧ ಆಗಿದೆ. ಆಗಿರುವ ಕಾಮಗಾರಿಯೂ ಕೆಲಸಕ್ಕೆ ಬಾರದಾಗಿದೆ. ಹಣ ಮಾತ್ರ ಖರ್ಚಾಗಿದೆ. ದಲಿತರಿಗೆ ಪ್ರಾತಿನಿಧ್ಯ ನೀಡುತ್ತೇವೆಂದು ಹೇಳುವ ಜನಪ್ರತಿನಿದೀಗಳು ತಮ್ಮ ಹೀನಾಯ ಸ್ಥಿತಿಯನ್ನೊಮ್ಮೆ ನೋಡಲಿ ಎಂದು ದಂಡಿನಶಿವರ ಕುಮಾರ್‌ ಸವಾಲು ಹಾಕಿದ್ದಾರೆ. 

 ಶೀಘ್ರದಲ್ಲೇ ದಂಡಿನಶಿವರದ ದಲಿತರ ಸ್ಮಶಾನವನ್ನು ಸರಿದಾರಿಗೆ ತರಬೇಕು. ಅಲ್ಲದೇ ತಾಲೂಕಿನ ಎಲ್ಲೆಡೆ ದಲಿತರಿಗೆ ಸ್ಮಶಾನ ಕಲ್ಪಿಸಬೇಕು. ತಪ್ಪಿದಲ್ಲಿ ತಾಲೂಕು ಕಛೇರಿ ಮುಂದೆ ಬೃಹತ್‌ ಪ್ರತಿಭಟನೆ ಹಮ್ಮಿಕೊಳ್ಳುವುದು ಅನಿವಾರ್ಯವಾಗಲಿದೆ ಎಂದು ತಾಲೂಕು ಆಡಳಿತಕ್ಕೆ ದಂಡಿನಶಿವರ ಕುಮಾರ್‌ ಎಚ್ಚರಿಕೆ ನೀಡಿದ್ದಾರೆ. 

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ರಾಯಚೂರು | ತೆರಿಗೆ ವಸೂಲಾತಿಯಲ್ಲಿ ಲೋಪ: ಇಬ್ಬರು ಪಿಡಿಓ ಅಮಾನತು, ಮೂವರು ಕರವಸೂಲಿಗಾರರ ವಜಾಕ್ಕೆ ವಿಚಾರಣೆ

ತೆರಿಗೆ ವಸೂಲಾತಿಯಲ್ಲಿ ನಿರ್ಲಕ್ಷ್ಯ ಹಾಗೂ ಕರ್ತವ್ಯ ಲೋಪ ಎಸಗಿರುವುದು ಪತ್ತೆಯಾದ ಹಿನ್ನೆಲೆಯಲ್ಲಿ...

ಹಾವೇರಿ | ಪುಸ್ತಕ ಓದಿನ ಪರಂಪರೆಯನ್ನು ಮರು ಕಟ್ಟಬೇಕಾಗಿದೆ: ಶೋಭಾ ಜಾಗಟಗೇರಿ

"ಮುಷ್ಠಿಯಲ್ಲಿ ಇರುವ ಮೊಬೈಲ್ ಜೀವನ ಪಾಠವನ್ನ್ನು ಕಲಿಸುವುದಕ್ಕಿಂತ ದಾರಿ ತಪ್ಪಿಸುವ ಕೆಲಸ...

ತುಮಕೂರು | ರೈತರ ಸಂಕಷ್ಟಕ್ಕೆ ಸ್ಪಂದಿಸಿ : ವೈಜ್ಞಾನಿಕ ಬರ ಪರಿಹಾರಕ್ಕೆ ಆಗ್ರಹ

ಭೀಕರ ಬರಗಾಲದಿಂದ ರೈತರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದರೂ ಕೇಂದ್ರ ಮತ್ತು ರಾಜ್ಯ...

ತುಮಕೂರು | ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ರಾಜೀನಾಮೆಗೆ ಆಗ್ರಹಿಸಿ ಕಾಂಗ್ರೆಸ್ ಪ್ರತಿಭಟನೆ

ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ರಾಜೀನಾಮೆ ಪಡೆಯಬೇಕು ಹಾಗೂ ಇದುವರೆಗೆ...