ಗಾಜಾದ ಮಕ್ಕಳಿಗೆ ಲಸಿಕೆ ಹಾಕಲು ಅಗತ್ಯವಿರುವ 16 ಲಕ್ಷ ಸಿರಿಂಜ್‌ಗಳಿಗೆ ಇಸ್ರೇಲ್ ನಿರ್ಬಂಧ

Date:

ಮಕ್ಕಳಿಗೆ ಲಸಿಕೆ ಹಾಕಲು ಅಗತ್ಯವಿರುವ ಸಿರಿಂಜ್‌ಗಳು, ನವಜಾತ ಶಿಶುಗಳಿಗೆ ಹಾಲು ಕುಡಿಸಲು ಬಳಸುವ ಬಾಟಲಿಗಳು ಸೇರಿದಂತೆ ಅಗತ್ಯದ ವಸ್ತುಗಳು ಗಾಝಾಕ್ಕೆ ಪ್ರವೇಶಿಸುವುದನ್ನು ಇಸ್ರೇಲ್ ತಡೆಯುತ್ತಿದೆ ಎಂದು ವಿಶ್ವಸಂಸ್ಥೆಯ ಮಕ್ಕಳ ನಿಧಿ(ಯುನಿಸೆಫ್) ಕಳವಳ ವ್ಯಕ್ತಪಡಿಸಿದೆ.

- Advertisement -

ಯುದ್ಧದಿಂದ ಜರ್ಜರಿತಗೊಂಡ ಪ್ರದೇಶದಲ್ಲಿ ಅಗತ್ಯವಿರುವವರಿಗೆ ನೆರವುಗಳು ತಲುಪುವುದಕ್ಕೆ ಇಸ್ರೇಲ್ ತಡೆಯೊಡ್ಡಿದೆ. ಗಾಜಾದಲ್ಲಿ ಅಸ್ಥಿರ ಕದನ ವಿರಾಮ ಜಾರಿಯಲ್ಲಿರುವಂತೆಯೇ ಯುನಿಸೆಫ್ ಮಕ್ಕಳ ಸಾಮೂಹಿಕ ಲಸಿಕಾ ಅಭಿಯಾನ ಕೈಗೊಂಡಿದೆ. ಆದರೆ 16 ಲಕ್ಷ ಸಿರಿಂಜ್ ಗಳು ಹಾಗೂ ಲಸಿಕೆ ಬಾಟಲಿಗಳನ್ನು ಸಂಗ್ರಹಿಸಲು ಅಗತ್ಯವಿರುವ ಸೌರಶಕ್ತಿ ಚಾಲಿತ ಫ್ರಿಜ್ ಗಳನ್ನು ಗಾಜಾಕ್ಕೆ ಸಾಗಿಸುವುದಕ್ಕೆ ಗಂಭೀರ ಸವಾಲು ಎದುರಾಗಿದೆ. ಸಿರಿಂಜ್‌ಗಳು ಕಸ್ಟಮ್ಸ್ ಕ್ಲಿಯರೆನ್ಸ್ಗಾಗಿ ಆಗಸ್ಟ್ನಿಂದ ಕಾಯುತ್ತಿವೆ . ಸಿರಿಂಜ್‌ಗಳು ಹಾಗೂ ರೆಫ್ರಿಜರೇಟರ್‌ಗಳನ್ನು ಇಸ್ರೇಲ್ ದ್ವಿ-ಬಳಕೆ ಎಂದು ಪರಿಗಣಿಸುತ್ತಿರುವುದರಿಂದ ಈ ವಸ್ತುಗಳು ಕಸ್ಟಮ್ಸ್ ಕ್ಲಿಯರೆನ್ಸ್ ಮತ್ತು ತಪಾಸಣೆಯ ಹಂತವನ್ನು ದಾಟಲು ತೊಡಕಾಗಿದೆ. ಆದರೆ ಇವು ಅತ್ಯಂತ ತುರ್ತು ಅಗತ್ಯದ ವಸ್ತುಗಳಾಗಿವೆ ಎಂದು ಯುನಿಸೆಫ್‌ ವಕ್ತಾರ ರಿಕಾರ್ಡೊ ಪಿರೆಸ್ ಹೇಳಿದ್ದಾರೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಬೆಟ್ಟದಷ್ಟಾದ ಅತ್ಯಾಚಾರ ಪ್ರಕರಣಗಳು – ತೆವಳುತ್ತಿರುವ ನ್ಯಾಯದಾನ

ಪೊಲೀಸರೆಂದು ನಟಿಸಿ ಬೆದರಿಸುವುದು, ನಿರ್ಜನ ಪ್ರದೇಶಗಳಲ್ಲಿ ತೋಳಗಳಂತೆ ಕಾದು ಹಲ್ಲೆಗೈದು ಸಾಮೂಹಿಕ ಅತ್ಯಾಚಾರ ನಡೆಸಿ ಕೊಂದೆಸೆಯುವುದು, ಕಿಂಚಿತ್ತೂ ಭಯವಿಲ್ಲದೆ ಕೃತ್ಯದ ವಿಡಿಯೋ ತುಣುಕುಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡುವುದಲ್ಲದೆ, ಸಂತ್ರಸ್ತರ ಗುರುತು ಬಹಿರಂಗಪಡಿಸುವ ಪ್ರವೃತ್ತಿ...

ಶಾಮನೂರು ಫ್ಯಾಮಿಲಿಗೆ ಸಚಿವ ಬಸವಂತಪ್ಪ ಕೈ ಮುಗಿಯುವ ಅಗತ್ಯವಿದೆಯೇ?

ಬಸವಂತಪ್ಪನವರನ್ನು ಗೆಲ್ಲಿಸಿದ್ದು, ಕಾಂಗ್ರೆಸ್ಸಿನ ಸಾಂಪ್ರದಾಯಿಕ ಮತದಾರರು. ಶಾಮನೂರು ಕುಟುಂಬದ ಸುತ್ತ ಕಟ್ಟಿರುವ ಕಲ್ಪಿತ ಬಲವನ್ನು ಮೀರಿ, ಬಸವಂತಪ್ಪ ಬೆಳೆಯಬೇಕು ಎಂಬುದು ಕ್ಷೇತ್ರದ ಮತದಾರರ ಅಭಿಪ್ರಾಯ. ಪೌರಕಾರ್ಮಿಕರ ಮಗನಾಗಿ ಹುಟ್ಟಿ, ಸಚಿವ ಸ್ಥಾನದವರೆಗೆ ಬೆಳೆದವರು ಕೆ.ಎಸ್....

ಪಾಕ್‌ಗೆ ತಕ್ಕ ಉತ್ತರ ನೀಡಿದ್ದಾಗಿ ಎದೆ ತಟ್ಟಿಕೊಳ್ಳುವ ಮೋದೀಜಿ,...

ಬಾಲಾಕೋಟ್‌ನಿಂದ ಇತ್ತೀಚಿನ 'ಆಪರೇಷನ್ ಸಿಂಧೂರ್'ವರೆಗೆ ಪಾಕಿಸ್ತಾನಕ್ಕೆ ತಕ್ಕ ಉತ್ತರ ನೀಡಿದ್ದಾಗಿ ಪ್ರಧಾನಿ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಎದೆ ತಟ್ಟಿಕೊಳ್ಳುತ್ತಿದೆ. ಶತೃ ದೇಶವನ್ನು ಮಣಿಸುವುದು ಯಾರಿಗಾದರೂ ಹೆಮ್ಮೆಯೇ. ಆದರೆ, ದೇಶದ ಅಖಂಡತೆಗೆ ಅತಿ...

ದ್ವಿ-ಬಳಕೆ ವಸ್ತುಗಳು ಎಂದರೆ ಮಿಲಿಟರಿ ಮತ್ತು ನಾಗರಿಕರ ಬಳಕೆಗೆ ಲಭಿಸುವ ವಸ್ತುಗಳು ಎಂದು ಇಸ್ರೇಲ್ ಪರಿಗಣಿಸುತ್ತದೆ. ಹಮಾಸ್ ಮಾನವೀಯ ನೆರವಿನ ಪೂರೈಕೆಗಳನ್ನು ಲೂಟಿ ಮಾಡುತ್ತಿರುವುದರಿಂದ ಆಹಾರ, ನೀರು, ವೈದ್ಯಕೀಯ ಸರಬರಾಜು ಹಾಗೂ ಡೇರೆ ಮತ್ತಿತರ ವಸ್ತುಗಳು ಸೀಮಿತ ಪ್ರಮಾಣದಲ್ಲಿ ಗಾಜಾಕ್ಕೆ ಪ್ರವೇಶಿಸಲು ಅವಕಾಶ ನೀಡುತ್ತಿರುವುದಾಗಿ ಗಾಜಾಕ್ಕೆ ನೆರವು ಪೂರೈಕೆಯ ಮೇಲುಸ್ತುವಾರಿ ವಹಿಸಿರುವ ಇಸ್ರೇಲ್ ಮಿಲಿಟರಿಯ ವಿಭಾಗ `ಕೊಗ್ಯಾಟ್’ ಹೇಳಿದೆ.

ಇದನ್ನು ಓದಿದ್ದೀರಾ? ಈ ದಿನ ಸಂಪಾದಕೀಯ | ಮೋದಿಯಡಿ ದೇಶ ಸುರಕ್ಷಿತವೆಂಬ ಸುಳ್ಳುಗುಳ್ಳೆಯ ಒಡೆದ ಸ್ಫೋಟ

ಗಾಜಾದಲ್ಲಿ ಎರಡು ವರ್ಷಗಳ ಯುದ್ಧದ ಹಿನ್ನೆಲೆಯಲ್ಲಿ ಪೋಲಿಯೊ, ದಡಾರ ಮತ್ತು ನ್ಯುಮೋನಿಯಾದ ವಿರುದ್ಧದ ವಾಡಿಕೆಯ ಲಸಿಕೆಗಳಿಂದ ವಂಚಿತರಾಗಿರುವ ಗಾಜಾದ 40,000ಕ್ಕೂ ಅಧಿಕ ಮಕ್ಕಳಿಗೆ(3 ವರ್ಷದೊಳಗಿನವರು) ಲಸಿಕೆ ಹಾಕುವ ಮೂರು ಹಂತದ ಕಾರ್ಯಕ್ರಮಕ್ಕೆ ಯುನಿಸೆಫ್ ಭಾನುವಾರ ಚಾಲನೆ ನೀಡಿದೆ.

ಪ್ರಥಮ ದಿನದ ಅಭಿಯಾನದಲ್ಲಿ 2,400 ಮಕ್ಕಳಿಗೆ ಲಸಿಕೆ ನೀಡಲಾಗಿದೆ. ಲಸಿಕೆ ಹಾಕುವ ಅಭಿಯಾನಕ್ಕೆ ಚಾಲನೆ ನೀಡಿದ್ದು ಇನ್ನೂ ಎರಡು ಸುತ್ತಿನ ಪ್ರಕ್ರಿಯೆ ಬಾಕಿಯಿರುವುದರಿಂದ ಇನ್ನಷ್ಟು ಲಸಿಕೆ, ಸಿರಿಂಜ್ ಗಳ ತುರ್ತು ಅಗತ್ಯವಿದೆ.

ಅಕ್ಟೋಬರ್ 10ರಂದು ಜಾರಿಗೆ ಬಂದಿರುವ ಕದನ ವಿರಾಮ ಒಪ್ಪಂದವು ಗಾಜಾ ಪ್ರದೇಶದಾದ್ಯಂತ ಹೆಚ್ಚಿನ ಪ್ರಮಾಣದಲ್ಲಿ ನೆರವು ಪೂರೈಸುವ ಅಂಶವನ್ನು ಒಳಗೊಂಡಿದೆ. ಆದರೆ ಸ್ಥಳಾಂತರಗೊಂಡಿರುವ ಮತ್ತು ಅಪೌಷ್ಠಿಕತೆಯಿಂದ ಬಳಲುತ್ತಿರುವ ಸುಮಾರು 2 ದಶಲಕ್ಷ ಜನರಿಗೆ ಅಗತ್ಯವಿರುವ ನೆರವು ಸಾಕಷ್ಟು ಪ್ರಮಾಣದಲ್ಲಿ ಪೂರೈಕೆಯಾಗುತ್ತಿಲ್ಲ ಎಂದು ನೆರವು ಪೂರೈಸುವ ಸಂಸ್ಥೆಗಳು ಕಳವಳ ವ್ಯಕ್ತಪಡಿಸಿವೆ.

WhatsApp Image 2025 11 17 at 3.21.17 PM
ಈ ದಿನ ಡೆಸ್ಕ್
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ವಿಶ್ವಸಂಸ್ಥೆಯಲ್ಲಿ ನೆತನ್ಯಾಹು ಭಾಷಣಕ್ಕೆ ಜಾಗತಿಕ ಬಹಿಷ್ಕಾರ: ಖುರ್ಚಿಗೆ ಅಂಟಿಕೊಂಡ ಭಾರತದ ಧೋರಣೆಗೆ ಖಂಡನೆ

ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ (UNGA) ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಭಾಷಣ...

CNN, MS NOW, Politicoಗೆ ಶ್ವೇತಭವನ ಪ್ರವೇಶ ನಿರ್ಬಂಧ; ಟ್ರಂಪ್ ಆದೇಶಕ್ಕೆ ಫೆಡರಲ್ ಕೋರ್ಟ್ ತಡೆ

CNN, MS NOW ಮತ್ತು Politico ಸುದ್ದಿ‌ ಸಂಸ್ಥೆಗಳ ಪತ್ರಕರ್ತರಿಗೆ ಶ್ವೇತಭವನ...

ಸೂಚನೆಯಿಲ್ಲದೆ ಆಸ್ಟ್ರೇಲಿಯಾದ ಸರ್ಕಾರಿ ವೆಬ್‌ಸೈಟ್ ಹ್ಯಾಕ್ ಮಾಡಿದ ‘OpenAI’

ಆಸ್ಟ್ರೇಲಿಯಾದ ಸರ್ಕಾರಿ ಆರೋಗ್ಯ ಇಲಾಖೆಯ ವೆಬ್‌ಸೈಟ್‌ ಒಂದನ್ನು ಕೃತಕ ಬುದ್ಧಿಮತ್ತೆ (AI)...

10 ಸಾವಿರ ಸಂಸ್ಥೆಗಳ ಇ-ಮೇಲ್ ಹ್ಯಾಕ್: ಸೈಬರ್ ವಂಚಕರ ‘ಎಐ ಚಾಟ್‌ಬಾಟ್’ ಸ್ಥಗಿತಗೊಳಿಸಿದ ಮೈಕ್ರೋಸಾಫ್ಟ್

ವಿಶ್ವಾದ್ಯಂತ 10,000ಕ್ಕೂ ಹೆಚ್ಚು ಸಂಸ್ಥೆಗಳಿಗೆ ಸೇರಿದ 12,000ಕ್ಕೂ ಅಧಿಕ ಇ-ಮೇಲ್ ಖಾತೆಗಳನ್ನು...