ಉಡುಪಿ‌ | ಜನಸೇವೆಯೇ ಅಂಬೇಡ್ಕರ್‌ರಿಗೆ ನೀಡುವ ನಿಜವಾದ ಗೌರವ : ಸುಂದರ ಮಾಸ್ತರ್

Date:

ಕಾಲಹರಣ ಮಾಡಿ ಮಾತನಾಡುವುದು ಬಿಟ್ಟು ಹಳ್ಳಿ ಹಳ್ಳಿಗೆ ಹೋಗಿ ಶೋಷಿತರ, ಬಡವರ ನೋವಿಗೆ, ಕಷ್ಟಗಳಿಗೆ ಸ್ಪಂದಿಸುವುದೇ ನಾವು ಅಂಬೇಡ್ಕರ್ ರವರಿಗೆ ಸಲ್ಲಿಸುವ ಅತೀ ದೊಡ್ಡ ಗೌರವ ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ (ರಿ) ಅಂಬೇಡ್ಕರ್ ವಾದ ಇದರ ರಾಜ್ಯ ಸಂಘಟನಾ ಸಂಚಾಲಕ ಸುಂದರ ಮಾಸ್ತರ್ ಹೇಳಿದರು.

- Advertisement -

ದ.ಸಂ.ಸ. ಅಂಬೇಡ್ಕರ್ ವಾದ ಸಂಘಟನೆಗೆ ಅದರದ್ದೇ ಆದ ಮೌಲ್ಯ ಮತ್ತು ವೈವಿಧ್ಯತೆ ಇದೆ ಇಡೀ ರಾಜ್ಯದಲ್ಲಿ ಅಣ್ಣಾ ಮಾವಳ್ಳಿ ಶಂಕರ್ ನೇತ್ರತ್ವದಲ್ಲಿ ನಿಜವಾದ ದಲಿತ ಚಳುವಳಿ ನಡೆಯುತ್ತಿದೆ. ಫ್ರೋಪೆಸರ್ ಕ್ರಷ್ಣಪ್ಪ ಅವರ ಶ್ರೀಮತಿ ಇಂದಿರಾ ಕ್ರಷ್ಣಪ್ಪ ಅವರು ನಮ್ಮ ರಾಜ್ಯ ಸಮಿತಿಯಲ್ಲಿ ಇದ್ದು ಅವರ ಮಾರ್ಗದಲ್ಲಿ ನಮ್ಮ ಅಂಬೇಡ್ಕರ್ ವಾದ ಸಂಘಟನೆ ಸಾಗುತ್ತಿದೆ ಎಂದು ಬಾಬಾಸಾಹೇಬ್ ಅಂಬೇಡ್ಕರ್ ರವರ 69 ನೇ ಪರಿನಿಬ್ಬಾಣ ದಿನದಂದು ಆದಿಉಡುಪಿ ಅಂಬೇಡ್ಕರ್ ಭವನದಲ್ಲಿ ನಡೆದ ಅಂಬೇಡ್ಕರ್ ಪರಿನಿಬ್ಬಾಣ ಕಾರ್ಯಕ್ರಮದಂದು ಗೌರವ ಸಲ್ಲಿಸಿ ನುಡಿದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಪೊಲೀಸ್ ಸುಧಾರಣೆ | ಹೈಟೆಕ್ ಪೊಲೀಸಿಂಗ್ Vs ವಾಸ್ತವ:...

ಪೊಲೀಸ್‌ ಇಲಾಖೆಯನ್ನು ಆಧುನೀಕರಿಸಲು AI, ಸೈಬರ್‌ ತಂತ್ರಜ್ಞಾನ, ಡಿಜಿಟಲ್‌ ತನಿಖೆ, ಸಿಸಿಟಿವಿ, ಬಾಡಿ ಕ್ಯಾಮೆರಾ ಸೇರಿದಂತೆ ಹಲವು ತಂತ್ರಜ್ಞಾನಗಳು ಪ್ರವೇಶಿಸುತ್ತಿವೆ. ಆದರೆ ಹೈಟೆಕ್‌ ಆಗುತ್ತಿರುವ ಪೊಲೀಸ್‌ ವ್ಯವಸ್ಥೆ ಜನರ ಬದುಕಿಗೆ ಎಷ್ಟು ಹತ್ತಿರವಾಗುತ್ತಿದೆ?...

ಐದು ಭಾಷೆ, ಆರು ದಶಕ, ಅನಂತ ಪ್ರಯೋಗ: ಭಾರತೀಯ...

ಬದುಕಿನ ಕೊನೆಯ ಉಸಿರಿನವರೆಗೂ ಕೇವಲ ಸಿನಿಮಾವನ್ನೇ ಶ್ವಾಸವಾಗಿಸಿಕೊಂಡಿದ್ದ, 95ನೇ ವಯಸ್ಸಿನಲ್ಲೂ ಹೊಸ ಕಥೆಯ ಕನಸು ಕಾಣುತ್ತಿದ್ದ ಭಾರತೀಯ ಚಿತ್ರರಂಗದ ಅಪ್ರತಿಮ ದಾರ್ಶನಿಕ ಸಿಂಗೀತಂ ಶ್ರೀನಿವಾಸರಾವ್ ನಮ್ಮೊಂದಿಗಿಲ್ಲ. ಆರು ದಶಕಗಳ ಕಾಲ ತಮ್ಮ ಅನಂತ...

ಸಂಪತ್ತು ಮತ್ತು ಮನುಷ್ಯನ ನೈತಿಕತೆ: ಅರ್ಥಶಾಸ್ತ್ರದ ಇಗ್ ನೊಬೆಲ್...

ಪ್ರತಿವರ್ಷ ನೊಬೆಲ್ ಪ್ರಶಸ್ತಿ ಘೋಷಣೆಯಾಗುವ ಕೆಲವೇ ದಿನಗಳ ಮೊದಲು ಹಾರ್ವರ್ಡ್ ವಿಶ್ವವಿದ್ಯಾಲಯದಲ್ಲಿ ನೊಬೆಲ್ ಪುರಸ್ಕೃತರ ಸಮ್ಮುಖದಲ್ಲೇ ಇಗ್ ನೊಬೆಲ್ ಪ್ರಶಸ್ತಿಗಳನ್ನು ಪ್ರದಾನ ಮಾಡಲಾಗುತ್ತದೆ. "ಮೊದಲು ಜನರನ್ನು ನಗಿಸಬೇಕು, ನಂತರ ಅವರನ್ನು ಆಳವಾಗಿ ಯೋಚಿಸುವಂತೆ...

ಸಂಘಟನೆ ಕಟ್ಟಿ ಪ್ರಾಮಾಣಿಕ ಕೆಲಸ ಮಾಡಿ ಜನರ ವಿಶ್ವಾಸ ಗಳಿಸುವುದು ಮುಖ್ಯ, ಅದನ್ನು ನಾವು ಮಾಡೋಣಾ, ಶೋಷಿತರ ಕಷ್ಟಗಳಿಗೆ ಕೂಡಲೇ ಸ್ಪಂದಿಸಿದಾಗ ಜನರು ನಮ್ಮ ಮೇಲೆ ವಿಶ್ವಾಸ ಇಟ್ಟು ದಲಿತ ಚಳುವಳಿಗೆ ಕೈ ಜೋಡಿಸುತ್ತಾರೆ. ಆದ್ದರಿಂದಲೇ ಹಿಂದುತ್ವದ ಪ್ರಯೋಗ ಶಾಲೆಯಾದ ಉಡುಪಿ ಜಿಲ್ಲೆಯ ಎಲ್ಲಾ ತಾಲೂಕುಗಳಲ್ಲಿ ಪೂರ್ಣ ಪ್ರಮಾಣದ ದ.ಸಂ.ಸ. ಅಂಬೇಡ್ಕರ್ ವಾದ ಶಾಖೆಯನ್ನು ತೆರೆಯಲು ಸಾಧ್ಯವಾಯಿತು.

ದೇಶಾದ್ಯಂತ ಪ್ರಗತಿಪರರು, ಜಾತ್ಯಾತೀತ ನಾಯಕರು, ದೇಶದ ಈ ಸ್ಥಿತಿಗೆ ಮತ್ತು ಸಂವಿಧಾನದ ಅಭದ್ರತೆಗೆ ಪ್ರತಿಕ್ರಯಿಸುತ್ತಿದ್ದಾರೆ, ಕರ್ನಾಟಕದಲ್ಲೂ ದಲಿತರು, ಶೋಷಿತರು ಆತಂಕಗೊಂಡಿದ್ದಾರೆ, ದೇಶವನ್ನು ಈ ದೀವಾಳಿ ಸ್ಥಿತಿಗೆ, ಸರ್ವಾಧಿಕಾರಿ ಧೋರಣೆಗೆ, ಬಹುತ್ವ ವಿರೋಧಿ ನೀತಿಗೆ ಎಳೆದುತಂದು ನಿಲ್ಲಿಸಿರುವ ಆರ್ ಎಸ್ ಎಸ್ ಮತ್ತು ಬಿಜೆಪಿಯ ನೀತಿಯನ್ನು ವಿರೋಧಿಸುವುದನ್ನು ಬಿಟ್ಟು ಕೆಲವೊಂದು ಸ್ವಯಂಘೋಷಿತ ದಲಿತ ನಾಯಕರು ದಲಿತ ವಿರೋಧಿಗಳೊಂದಿಗೆ, ಸಂಘ ಪರಿವಾರದವರೊಂದಿಗೆ ಶಾಮೀಲಾಗಿರುವಂತೆ ವರ್ತಿಸುತ್ತಿರುವುದು ನಮಗೆಲ್ಲಾ ಆಶ್ಚರ್ಯವನ್ನುಂಟು ಮಾಡುತ್ತಿದೆ. ನಾವೆಲ್ಲಾ ಸಮಾನ ಮನಸ್ಕರು ಅಂಬೇಡ್ಕರ್ ವಾದ ಸಂಘಟನೆಯನ್ನು ಒಂದು ನೈಜ ದಲಿತ ಚಳುವಳಿಯ ಪ್ರತಿರೂಪವಾಗಿ ಬೆಳೆಸೋಣಾ ಅದಕ್ಕಾಗಿ ನಮ್ಮ ಗ್ರಾಮ ಗ್ರಾಮಕ್ಕೆ ಹೋಗಿ ಅಂಬೇಡ್ಕರ್ ಸಿದ್ದಾಂತವನ್ನು ತಿಳಿಸೋಣ ಎಂದರು.

ಅಂಬೇಡ್ಕರ್ ಪರಿನಿಬ್ಬಾಣ ಕಾರ್ಯಕ್ರಮದಲ್ಲಿ ಮೈಸೂರು ವಿಭಾಗೀಯ ಸಂಘಟನಾ ಸಂಚಾಲಕರಾದ ಶ್ಯಾಮರಾಜ್ ಬಿರ್ತಿ, ಉಡುಪಿ ಜಿಲ್ಲಾ ಪ್ರಧಾನ ಸಂಚಾಲಕರಾದ ಮಂಜುನಾಥ ಗಿಳಿಯಾರು ಜಿಲ್ಲಾ ಸಂಘಟನಾ ಸಂಚಾಲಕರಾದ ಮಂಜುನಾಥ ನಾಗೂರು, ಬ್ರಹ್ಮಾವರ ತಾಲೂಕು ಸಂಚಾಲಕರಾದ ಶ್ಯಾಮಸುಂದರ ತೆಕ್ಕಟ್ಟೆ, ಬೈಂದೂರು ತಾಲೂಕು ಸಂಚಾಲಕರಾದ ಶಿವರಾಜ್ ಬೈಂದೂರು, ಸಂಘಟನೆಯ ವಿವಿಧ ಪದಾಧಿಕಾರಿಗಳಾದ ಕುಮಾರ್ ಕೋಟಾ, ವಿಜಯ ಗಿಳಿಯಾರು, ಶ್ರೀನಿವಾಸ್ ವಡ್ಡರ್ಸೆ, ಹರೀಶ್ಚಂದ್ರ ಕೆ. ಡಿ., ಬಿರ್ತಿ ಸುರೇಶ, ಸುರೇಶ ಬಾರ್ಕೂರು, ಕೃಷ್ಣ ಎಲ್ ಐ ಸಿ, ಪ್ರಕಾಶ್ ಹೇರೂರು, ದಿನೇಶ ಬಿರ್ತಿ, ಸುಧಾಮ ಹಂಗಾರಕಟ್ಟೆ, ಭಾಸ್ಕರ ಕೆರ್ಗಾಲ್, ಮತ್ತು ಬುದ್ದಿಸ್ಟ್ ಸೊಸೖಟಿ ಆಫ್ ಇಂಡಿಯಾದ ರಾಘವೇಂದ್ರ ಸಾಸ್ತಾನ, ಗೋಪಾಲಕೃಷ್ಣ ಕುಂದಾಪುರ, ವಿಠಲ ಸಾಲೀಕೇರಿ, ಮೊದಲಾದವರು ಉಪಸ್ಥಿತರಿದ್ದರು.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಯಾದಗಿರಿ | ಲಾರಿ ಡಿಕ್ಕಿಗೆ ಬೈಕ್ ಸವಾರ ಗಂಭೀರ ಗಾಯ

ಲಾರಿ ಹಾಗೂ ಬೈಕ್‌ ನಡುವೆ ಸಂಭವಿಸಿದ ಮುಖಾಮುಖಿ ಡಿಕ್ಕಿಯಲ್ಲಿ ಬೈಕ್‌ ಸವಾರ...

ಶಿರಸಿ | ಆಗಸ್ಟ್ 23ನ್ನು ‘ಕರ್ನಾಟಕ ಕಾಫಿ ಡೇ’ ಎಂದು ಘೋಷಿಸಲು ಪವನ್ ನಾಯ್ಕ್ ಆಗ್ರಹ

ಶಿರಸಿ: ಕಾಫಿ ಡೇ ಸಂಸ್ಥಾಪಕ ದಿವಂಗತ ವಿ.ಜಿ. ಸಿದ್ಧಾರ್ಥ ಹೆಗ್ಡೆ ಅವರ...

ಭದ್ರಾವತಿಯ VISL ಎಜಿಎಂ ಗೋವಿಂದರಾಜು ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ!

ಶಿವಮೊಗ್ಗ ಜಿಲ್ಲೆಯ ಭದ್ರಾವತಿಯಲ್ಲಿ ಬೆಚ್ಚಿಬೀಳಿಸುವ ಘಟನೆ ನಡೆದಿದ್ದು, VISL ಸಂಸ್ಥೆಯಲ್ಲಿ ಎಜಿಎಂ...

ಗದಗ | ಕರ್ನಾಟಕ ಏಕೀಕರಣಕ್ಕಾಗಿ ನಾರಾಯಣರಾವ್ ಕೋಡುಗೆ ಅಪಾರ: ಹನುಮಂತಪ್ಪ ಅಬ್ಬಿಗೇರಿ

"ಕರ್ನಾಟಕ ಏಕೀಕರಣಕ್ಕಾಗಿ ಗದಗ ಜಿಲ್ಲೆಯ ಹುಯಿಲಗೋಳ ನಾರಾಯಣರಾವ್ ಅವರ ಕೊಡುಗೆ ಅಪಾರವಾಗಿದೆ....