ಮಹಿಳೆಯರು ಮನೆಯಿಂದ ಹೊರಬಂದು ಸಮಾಜಮುಖಿಯಾಗಿ ಬೆಳೆಯಬೇಕು, ಆರ್ಥಿಕವಾಗಿ ಸದೃಢರಾಗಬೇಕು ಎಂದು ಕಾಂಗ್ರೆಸ್ ನಾಯಕಿ ಸರಳ ಕಾಂಚನ್ ಹೇಳಿದರು.
ಉಡುಪಿ ನಗರದ ತೋನ್ಸೆ ಮಹಿಳಾ ಮಂಡಳಿ ಕೆಮ್ಮಣ್ಣು ವತಿಯಿಂದ ಹಮ್ಮಿಕೊಂಡಿದ್ದ ʼಆಟಿಡೊಂಜಿ ದಿನʼ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಕಾಂಗ್ರೆಸ್ ಪಕ್ಷದ ಹಿರಿಯ ನಾಯಕಿ ಸರಳ ಕಾಂಚನ್ ಅವರು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ವೇಯ್ಟ್ ಲಿಫ್ಟಿಂಗ್‌ನಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಪದಕ ಪಡೆದ ಪ್ರತೀಕ್ಷಾ ಶೆಟ್ಟಿ ಹಾಗೂ ಬಾಕ್ಸಿಂಗ್‌ನಲ್ಲಿ ರಾಷ್ಟ್ರಮಟ್ಟದಲ್ಲಿ ಪದಕ ಪಡೆದ ಜಾಯಿಲಿನ್ ಎಂಬುವವರನ್ನು ಸನ್ಮಾನಿಸಲಾಯಿತು. ಕಂಡಾಳ ಬಬ್ಬುಸ್ವಾಮಿ ದೈವಸ್ಥಾನದ ಆಡಳಿತ ಮೊಕ್ತೇಸರರಾದ ರಘುರಾಮ್ ಶೆಟ್ಟಿ ಅವರು ಆಟಿಯ ಮಹತ್ವ, ಆಚರಣೆಗಳ ಬಗ್ಗೆ ತಿಳಿಸಿದರು.
ಈ ಸುದ್ದಿ ಓದಿದ್ದೀರಾ? ಕೋಲಾರ | ದೋಸೆ ಸೇವಿಸಿ 20 ಮಂದಿ ವಿದ್ಯಾರ್ಥಿಗಳು ಅಸ್ವಸ್ಥ; ಅಡುಗೆ ನೌಕರ ನರಸಿಂಹಪ್ಪ ಅಮಾನತು
ಕಾರ್ಯಕ್ರಮದಲ್ಲಿ ಮಾಜಿ ತಾಲೂಕು ಪಂಚಾಯತ್ ಅಧ್ಯಕ್ಷ ವೆರೋನಿಕಾ ಕಾರ್ನೆಲಿಯೋ, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಕುಸುಮ, ಬಡಾನಿಡಿಯೂರು ಮಹಿಳಾ ಮಂಡಳಿಯ ಅಧ್ಯಕ್ಷರಾದ ಪುಷ್ಪ, ಫೌಜಿಯ, ಯಶೋಧ, ಸುಜಾನ್ನ, ಸರೋಜಾ, ಹೇಮಶ್ರೀ, ರೇಖಾ, ಸಾಧಿಕ್, ಸುಂದರ್ ಶೆಟ್ಟಿ ಹಾಗೂ ಇತರ ಸದಸ್ಯರು ಪಾಲ್ಗೊಂಡಿದ್ದರು.