ಅಲ್-ಇಬಾದಾ ಇಂಡಿಯನ್ ಸ್ಕೂಲ್‌ಗೆ ಸೇರಿದ ಬಸ್‌ವೊಂದು ಗುರುವಾರ ಬೆಳಿಗ್ಗೆ ಮಣಿಪಾಲದ ಸಿನಿಗ್ಯಾಲಕ್ಸಿ (ಐನಾಕ್ಸ್) ಮುಂಭಾಗ ಅಪಘಾತಕ್ಕೀಡಾಗಿ ಹೆದ್ದಾರಿಯ ಡಿವೈಡರ್ ಮೇಲೇರಿ ನಿಂತ ಘಟನೆ ನಡೆದಿದೆ.
ಮಣಿಪಾಲ ಟ್ರಾಫಿಕ್ ಸಿಗ್ನಲ್‌ನಿಂದ ಲಕ್ಷ್ಮೀಂದ್ರನಗರ ಕಡೆಗೆ ಸಾಗುವ ತಿರುವಿನಲ್ಲಿ ಈ ಅಪಘಾತ ಸಂಭವಿಸಿದೆ. ನಿಯಂತ್ರಣ ತಪ್ಪಿದ ಬಸ್ ರಸ್ತೆ ವಿಭಜಕದ ಮೇಲೇರಿ ನಿಂತಿದ್ದು, ಅಪಘಾತದ ಪರಿಣಾಮ ತಡೆಬೇಲಿ ಹಾಗೂ ಬಸ್‌ನ ಮುಂಭಾಗಕ್ಕೆ ಹಾನಿಯಾಗಿದೆ.
ಘಟನೆಯಲ್ಲಿ ಯಾವುದೇ ಪ್ರಾಣಾಪಾಯ ಅಥವಾ ಗಂಭೀರ ಗಾಯಗಳ ಬಗ್ಗೆ ವರದಿಯಾಗಿಲ್ಲ. ಬಸ್‌ನಲ್ಲಿದ್ದ ಪ್ರಯಾಣಿಕರು ಸುರಕ್ಷಿತರಾಗಿದ್ದು, ಸಂಭವಿಸಬಹುದಾಗಿದ್ದ ದೊಡ್ಡ ಅನಾಹುತವೊಂದು ತಪ್ಪಿದಂತಾಗಿದೆ.
ಅಪಘಾತಕ್ಕೆ ನಿಖರ ಕಾರಣ ಏನು ಎಂಬುದು ಇನ್ನಷ್ಟೇ ತಿಳಿದುಬರಬೇಕಿದ್ದು, ಸಂಬಂಧಿತ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪ್ರಕರಣದ ಕುರಿತು ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.






