ಉಡುಪಿ | ಬಳ್ಕೂರಿನಲ್ಲಿ ಡಿ. ಎಚ್. ಎಸ್. ನಿಂದ ಜನಜಾಗೃತಿ ಸಭೆ

Date:

ಕುಂದಾಪುರ ತಾಲೂಕು ಬಳ್ಕೂರು ಗ್ರಾಮದ ಬಿಎಚ್ ರಸ್ತೆಯ ಹತ್ತಿರದ ತುಳಸಿ ಕಾಂಪ್ಲೆಕ್ಸ್ ಹಾಲಿನಲ್ಲಿ ಭಾನುವಾರ ದಲಿತ ಹಕ್ಕುಗಳ ಸಮಿತಿ (DHS) ವತಿಯಿಂದ ಜನಜಾಗೃತಿಸಭೆ ನಡೆಯಿತು.

- Advertisement -

ದಲಿತ ಹಕ್ಕುಗಳ ಸಮಿತಿಯ ಜಿಲ್ಲಾಧ್ಯಕ್ಷರಾದ ಶ್ರೀ ಸಂಜೀವ ಬಳ್ಕೂರು ಅಧ್ಯಕ್ಷತೆ ವಹಿಸಿದ್ಧರು. ಸಿಐಟಿಯು ನ ರಾಜ್ಯ ಕಾರ್ಯದರ್ಶಿ ಶ್ರೀ ಸುರೇಶ್ ಕಲ್ಲಾಗರವರು ದಲಿತರು ಹಾಗೂ ದಲಿತೇತರು ಸೇರಿ ಬಲಿಷ್ಠ ಸಮಾಜದ ರಚನೆಗೆ ಒಗ್ಗಟ್ಟಿನಿಂದ ಸಂಘಟಿತರಾಗಬೇಕು ಎಂದು ಕರೆ ನೀಡಿದರು. ಹಾಗೂ ಕಾರ್ಮಿಕ ಕಾರ್ಡುಗಳ ಮಹತ್ವದ ಬಗ್ಗೆ ವಿವರಿಸುತ್ತಾ ಸರ್ಕಾರದಿಂದ ಸಿಗುವ ಯಾವುದೇ ಸೌಲಭ್ಯವನ್ನು ಪಡೆದುಕೊಳ್ಳಲು ಕಾರ್ಮಿಕರು ತಪ್ಪದೆ ಕಾರ್ಮಿಕ ಕಾರ್ಡುಗಳನ್ನು ಕಾಲಕಾಲಕ್ಕೆ ರಿನಿವಲ್ ಮಾಡುತ್ತಾ ಇರಬೇಕು ಅಲ್ಲದೆ ರಾಜ್ಯದಲ್ಲಿ ಜಾರಿಗೆ ಬಂದ ಕಾರ್ಮಿಕರ ಕನಿಷ್ಠ ವೇತನ ರೂಪಾಯಿ 25,000 ಇದು ಕಡಿಮೆ ಮೊತ್ತವಾಗಿದ್ದು ಸಿಐಟಿಯು ಸಂಘಟನೆ ಕಾರ್ಮಿಕರ ಕನಿಷ್ಠ ಕೂಲಿ ತಿಂಗಳಿಗೆ 36,000 ಸಿಗಬೇಕೆಂದು ರಾಜ್ಯ ಸರ್ಕಾರವನ್ನು ಒತ್ತಾಯಿಸುತ್ತಿದ್ದಾರೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಡಾ. ಟಿ.ಎಸ್.‌ ಚನ್ನೇಶ್‌ ಸರಣಿ | ವೈದ್ಯಕೀಯ ನೊಬೆಲ್‌...

ನಮ್ಮ ಮೆದುಳು, ಭಾವನೆಗಳನ್ನು, ವರ್ತನೆಗಳನ್ನು ಮತ್ತು ದೈಹಿಕ ಕಾರ್ಯಗಳನ್ನು ಹೇಗೆ ನಿಯಂತ್ರಿಸುತ್ತದೆ ಎಂಬುದನ್ನು ಸಂಶೋಧನೆಯಿಂದ ಬಿಡಿಸಿಟ್ಟು 2026ರ ವೈದ್ಯಕೀಯ ನೊಬೆಲ್‌ ಪ್ರಶಸ್ತಿಗೆ ಪಾತ್ರರಾದ ಮೂವರು ಸಂಶೋಧಕರು ಮತ್ತು ಸಂಶೋಧನೆಯ ಸುತ್ತಲಿನ ವಿಶ್ಲೇಷಣಾತ್ಮಕ ಬರಹ ಈ...

ಪೊಲೀಸ್ ಸುಧಾರಣೆ | ಹೈಟೆಕ್ ಪೊಲೀಸಿಂಗ್ Vs ವಾಸ್ತವ:...

ಪೊಲೀಸ್‌ ಇಲಾಖೆಯನ್ನು ಆಧುನೀಕರಿಸಲು AI, ಸೈಬರ್‌ ತಂತ್ರಜ್ಞಾನ, ಡಿಜಿಟಲ್‌ ತನಿಖೆ, ಸಿಸಿಟಿವಿ, ಬಾಡಿ ಕ್ಯಾಮೆರಾ ಸೇರಿದಂತೆ ಹಲವು ತಂತ್ರಜ್ಞಾನಗಳು ಪ್ರವೇಶಿಸುತ್ತಿವೆ. ಆದರೆ ಹೈಟೆಕ್‌ ಆಗುತ್ತಿರುವ ಪೊಲೀಸ್‌ ವ್ಯವಸ್ಥೆ ಜನರ ಬದುಕಿಗೆ ಎಷ್ಟು ಹತ್ತಿರವಾಗುತ್ತಿದೆ?...

ಐದು ಭಾಷೆ, ಆರು ದಶಕ, ಅನಂತ ಪ್ರಯೋಗ: ಭಾರತೀಯ...

ಬದುಕಿನ ಕೊನೆಯ ಉಸಿರಿನವರೆಗೂ ಕೇವಲ ಸಿನಿಮಾವನ್ನೇ ಶ್ವಾಸವಾಗಿಸಿಕೊಂಡಿದ್ದ, 95ನೇ ವಯಸ್ಸಿನಲ್ಲೂ ಹೊಸ ಕಥೆಯ ಕನಸು ಕಾಣುತ್ತಿದ್ದ ಭಾರತೀಯ ಚಿತ್ರರಂಗದ ಅಪ್ರತಿಮ ದಾರ್ಶನಿಕ ಸಿಂಗೀತಂ ಶ್ರೀನಿವಾಸರಾವ್ ನಮ್ಮೊಂದಿಗಿಲ್ಲ. ಆರು ದಶಕಗಳ ಕಾಲ ತಮ್ಮ ಅನಂತ...
1011615907

ಆದ್ದರಿಂದ ತಾವೆಲ್ಲರೂ ಸಂಘಟನೆಯ ಮಹತ್ವವನ್ನು ತಿಳಿದು ಸಂಘಟಿತರಾಗಬೇಕು ಎಂದು ಕರೆ ನೀಡಿದರು. ದಲಿತ ಹಕ್ಕುಗಳ ಸಮಿತಿಯ ಜಿಲ್ಲಾ ಕಾರ್ಯದರ್ಶಿ ರವಿ ವಿ.ಎಂ. ಮಾತನಾಡುತ್ತಾ ಎಲ್ಲರೂ ಸಮಿತಿಯ ಹೋರಾಟದಲ್ಲಿ ಸಕ್ರಿಯವಾಗಿ ಭಾಗವಹಿಸಬೇಕು ಸಂಘಟನೆ ಹೋರಾಟ, ಸರಕಾರಿ ಸೌಲಭ್ಯಗಳು, ದಲಿತ ಸಬಲೀಕರಣ ಇತ್ಯಾದಿ ವಿಷಯಗಳ ಬಗ್ಗೆ ಸಂದರ್ಭೋಚಿತವಾಗಿ ಮಾತನಾಡಿದರು.

ಅಧ್ಯಕ್ಷತೆ ವಹಿಸಿದ ಸಂಜೀವ ಬಳ್ಕೂರವರು ಈ ಜಿಲ್ಲೆಯಲ್ಲಿ ಸಂಘಟನೆ ನಡೆಸಿದ ಭೂಮಿಯ ಹಕ್ಕಿನ ಹೋರಾಟದ ಬಗ್ಗೆ ವಿವರಿಸುತ್ತಾ ಸರಕಾರ ದಲಿತರ ಅಭಿವೃದ್ಧಿಗೆ ಮೀಸಲಿಟ್ಟ ಹಣವನ್ನು ಅನ್ಯ ಯೋಜನೆಗಳಿಗೆ ಬಳಸಿ ದಲಿತರ ಕುಟುಂಬದ ವೈಯಕ್ತಿಕ ಅಭಿವೃದ್ಧಿಗೆ ವಂಚಿಸಿದೆ. ಹಾಗೂ ಸರಕಾರಿ ಸಂಸ್ಥೆಗಳೆಲ್ಲವೂ ಇಂದು ಕೇಂದ್ರ ಸರ್ಕಾರದ ಖಾಸಗಿಕರಣದ ನೀತಿಯಿಂದ ಸರಕಾರಿ ಆಸ್ತಿಗಳೆಲ್ಲವೂ ಅದಾನಿ ಅಂಬಾನಿ ಯವರ ವಶಕ್ಕೆ ಒಪ್ಪಿಸಿ ಮೀಸಲಾತಿ ನೀತಿಯನ್ನು ದುರ್ಬಲಗೊಳಿಸಿದೆ. ಆದ್ದರಿಂದ ದಲಿತ ಹಕ್ಕುಗಳ ಸಮಿತಿ ಮುಂದಿನ ದಿನಗಳಲ್ಲಿ ಖಾಸಗಿ ಕ್ಷೇತ್ರದಲ್ಲಿ ಮೀಸಲಾತಿ ಕೊಡಬೇಕೆಂಬ ಹೋರಾಟವನ್ನು ಹಮ್ಮಿಕೊಳ್ಳ ಬೇಕಾಗುತ್ತದೆ ಎಂದರು.

ಆರಂಭದಲ್ಲಿ ಜಿಲ್ಲಾ ಸಮಿತಿಯ ಸದಸ್ಯರಾದ ಸುಶೀಲ ಬಳ್ಕೂರುರವರು ಸ್ವಾಗತಿಸಿ ಘಟಕದ ಅಧ್ಯಕ್ಷರಾದ ಅಣ್ಣಪ್ಪ ಬಳ್ಕೂರು ವಂದಿಸಿದರು. ಘಟಕದ ಸಹ ಸಂಚಾಲಕರಾದ ವಿಜಯ್ ಕುಮಾರ್ ಬಳ್ಕೂರು ಸಭೆಯನ್ನು ಆಯೋಜಿಸಿದರು. ಸಭೆಯಲ್ಲಿ ಹಿರಿಯ ಮುಖಂಡರಾದ ಬಾಬು ಬಳ್ಕೂರು ಹಾಗೂ ಸಂಹಿತ್ ಸುಜಯ್ ಬಳ್ಕೂರ್ ಉಪಸ್ಥಿತರಿದ್ದರು

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಉಡುಪಿ | SIR ಫಾರಂ–7 ದುರ್ಬಳಕೆ ತಡೆಗೆ ಮುಸ್ಲಿಮ್ ಒಕ್ಕೂಟ ಆಗ್ರಹ

ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆ (ಎಸ್‌ಐಆರ್) ಪ್ರಕ್ರಿಯೆಯಲ್ಲಿ ಮತದಾರರ ಹೆಸರುಗಳನ್ನು ತೆಗೆದುಹಾಕಲು...

ವಿಜಯಪುರ | ಬರಪೀಡಿತ ಪ್ರದೇಶಗಳಿಗೆ ಡಿಸಿಎಂ ಪರಮೇಶ್ವರ್‌ ಭೇಟಿ

ಉಪಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ್‌ ಅವರು ಅ.8 ಹಾಗೂ 9ರಂದು ವಿಜಯಪುರ ಮತ್ತು...

ಗದಗ | ಬಂಜಾರ ಸಮುದಾಯ ಒಗ್ಗಟಾದರೆ ನಮ್ಮ ಹಕ್ಕು ಪಡೆಯಲು ಸಾಧ್ಯ: ವಿಜಯ ಜಾಧವ

"ಆಲ್ ಇಂಡಿಯಾ ಬಂಜಾರ ಸೇವಾ ಸಂಘ ಏಕೈಕ ಗಟ್ಟಿಯಾದ ಸಂಘಟನೆ ಇದಾಗಿದೆ....

ವಿಜಯಪುರ | ಮತದಾರರ ಹೆಸರಳಿಸಲು ನಕಲಿ ಮರಣ ಪ್ರಮಾಣಪತ್ರ ಬಳಕೆ; ತನಿಖೆಗೆ ಕಾಂಗ್ರೆಸ್ ಒತ್ತಾಯ

ವಿಜಯಪುರ ನಗರ ವಿಧಾನಸಭಾ ಕ್ಷೇತ್ರದಲ್ಲಿ ಜೀವಂತ ಮತದಾರರನ್ನು ಮೃತಪಟ್ಟಿದ್ದಾರೆಂದು ತೋರಿಸಿ ಮತದಾರರ...