ಯಾರ ನೆರಳಿನಲ್ಲಿ ನಿಂತಿದ್ದೀರಿ ಎನ್ನುವುದಲ್ಲ, ಏನು ಮಾಡಿದ್ದೀರಿ ಹೇಳಿ: ಯಶ್ಪಾಲ್ ಸುವರ್ಣಗೆ ಕೋಟ ನಾಗೇಂದ್ರ ಪುತ್ರನ್ ಪ್ರಶ್ನೆ

Date:

ಹಿಂದಿನ ನಾಯಕರ ಹೆಸರಿನ ನೆರಳಿನಲ್ಲಿ ರಾಜಕೀಯ ಮಾಡುವುದು ಮುಖ್ಯವಲ್ಲ, ಜನಪ್ರತಿನಿಧಿಯಾಗಿ ಸ್ವಂತ ಸಾಧನೆಯ ಮೂಲಕ ಗುರುತಿಸಿಕೊಳ್ಳುವುದು ಮುಖ್ಯ ಎಂದು ಕಾಂಗ್ರೆಸ್ ಉಡುಪಿ ಜಿಲ್ಲಾ ಹಿಂದುಳಿದ ವರ್ಗಗಳ ಉಪಾಧ್ಯಕ್ಷ ಕೋಟ ನಾಗೇಂದ್ರ ಪುತ್ರನ್ ಅವರು ಶಾಸಕ ಯಶ್ಪಾಲ್ ಸುವರ್ಣ ಅವರನ್ನು ಪ್ರಶ್ನಿಸಿದ್ದಾರೆ.

- Advertisement -

ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು, “ಯಾರ ಹೆಸರಿನ ನೆರಳಿನಲ್ಲಿ ನಿಂತಿದ್ದೇವೆ ಎನ್ನುವುದಕ್ಕಿಂತ, ಆ ಸ್ಥಾನದಲ್ಲಿ ನಿಂತು ನಾವು ಏನು ಮಾಡಿದ್ದೇವೆ ಎನ್ನುವುದೇ ಮುಖ್ಯ” ಎಂದು ಹೇಳಿದ್ದಾರೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಭದ್ರಾವತಿ | ಕಲುಷಿತ ಕುಡಿಯುವ ನೀರು ಸರಬರಾಜು; ರೋಗಭೀತಿಯಲ್ಲಿ...

ಭದ್ರಾವತಿ ತಾಲೂಕಿನ ಶಿವರಾಮನಗರ ಗ್ರಾಮದಲ್ಲಿ ನಗರಸಭೆ ಕಲುಷಿತ ಕುಡಿಯುವ ನೀರನ್ನು ಸರಬರಾಜು ಮಾಡುತ್ತಿರುವುದು ಗ್ರಾಮಸ್ಥರಲ್ಲಿ ತೀವ್ರ ಅಸಮಾಧಾನಕ್ಕೆ ಕಾರಣವಾಗಿದೆ. ಈ ವಿಷಯದಲ್ಲಿ ನಗರಸಭೆ ಆಡಳಿತ ಮತ್ತು ಆರೋಗ್ಯ ಇಲಾಖೆ ಕಣ್ಮುಚ್ಚಿ ಕುಳಿತಿರುವುದಾಗಿ ಸ್ಥಳೀಯರು...

15 ವರ್ಷಗಳಿಂದ ಪ್ಲಾಸ್ಟಿಕ್‌ ದೂರವಿಟ್ಟ ಗ್ರಾಮ; ನಮ್ಮೂರಿಗೂ ಇದು...

ಒಂದು ಗ್ರಾಮವೆಂದರೆ, ಇಂದಿಗೂ ಮಣ್ಣಿನ ರಸ್ತೆಗಳು, ಕಚ್ಚಾ ಮನೆಗಳು, ಹೊಲ-ಗದ್ದೆಗಳು ಮಾತ್ರ ನೆನಪಾಗುತ್ತವೆ. ಅಲ್ಲಿನ ಜನರ ಬದುಕಿನ ಶಿಸ್ತು, ಸಾರ್ವಜನಿಕ ಸ್ಥಳಗಳ ಮೇಲಿನ ಅವರ ಹೊಣೆಗಾರಿಕೆ ಮತ್ತು ಮುಂದಿನ ಪೀಳಿಗೆಯ ಬಗ್ಗೆ ಇರುವ...

ʼಹಿಂದೆ ಸರಿಯುವ ಮಾತೇ ಇಲ್ಲʼ; ದೆಹಲಿ ಬೀದಿಗಳಲ್ಲಿ ಅಬ್ಬರಿಸುತ್ತಿರುವ...

ಚುನಾವಣಾ ಆಯೋಗದ (ECI) ವಿಶೇಷ ತೀವ್ರ ಪರಿಷ್ಕರಣೆ (SIR) ವಿರುದ್ಧ ಮತ್ತು CEC ಗ್ಯಾನೇಶ್ ಕುಮಾರ್ ರಾಜೀನಾಮೆಗೆ ಆಗ್ರಹಿಸಿ INDIA ಬ್ಲಾಕ್ ಸಂಸತ್ ಸದಸ್ಯರು ದೆಹಲಿ ಬೀದಿಗಳಲ್ಲಿ ಬೃಹತ್‌ ಪ್ರತಿಭಟನೆ ನಡೆಸುತ್ತಿದ್ದಾರೆ. ಯುವಕರು...

ವಿ.ಎಸ್. ಆಚಾರ್ಯರಂತಹ ಹಿರಿಯ ನಾಯಕರನ್ನು ಗೌರವದಿಂದ ನೆನಪಿಸಿಕೊಳ್ಳುವುದರಲ್ಲಿ ತಪ್ಪಿಲ್ಲ. ಆದರೆ ಅವರ ಹೆಸರನ್ನು ಇಂದಿನ ಪ್ರಶ್ನೆಗಳಿಗೆ ಉತ್ತರವಾಗಿ ಬಳಸಿಕೊಳ್ಳಲು ಸಾಧ್ಯವಿಲ್ಲ. ಹಿಂದಿನ ನಾಯಕರ ಸಾಧನೆ ಅವರದ್ದು. ಇಂದಿನ ಜನಪ್ರತಿನಿಧಿಯ ಸಾಧನೆ ಅವರದೇ ಆಗಿರಬೇಕು ಎಂದು ತಿಳಿಸಿದ್ದಾರೆ.

ಶಾಸಕರಾಗಿ ಯಶ್ಪಾಲ್ ಸುವರ್ಣ ಅವರ ಅವಧಿಯಲ್ಲಿ ಉಡುಪಿಗೆ ತಂದ ಪ್ರಮುಖ ಅಭಿವೃದ್ಧಿ ಯೋಜನೆಗಳು ಯಾವುವು? ಎಷ್ಟು ಅನುದಾನ ಬಂದಿದೆ? ಎಷ್ಟು ಯೋಜನೆಗಳು ಪೂರ್ಣಗೊಂಡಿವೆ? ಅವುಗಳಿಂದ ಜನರಿಗೆ ನೇರವಾಗಿ ದೊರೆತ ಪ್ರಯೋಜನವೇನು? ಈ ಪ್ರಶ್ನೆಗಳಿಗೆ ದಾಖಲೆಗಳ ಸಹಿತ ಉತ್ತರ ನೀಡುವುದು ನಿಜವಾದ ನಾಯಕತ್ವದ ಮಾನದಂಡವಾಗಿದೆ ಎಂದು ಕೋಟ ನಾಗೇಂದ್ರ ಪುತ್ರನ್ ಹೇಳಿದ್ದಾರೆ.

Advertisements

ಕಾಂಗ್ರೆಸ್ ಸರ್ಕಾರದ ವಿರುದ್ಧ ಆಕ್ಷೇಪಗಳಿದ್ದರೆ ಪ್ರಶ್ನಿಸುವ ಹಕ್ಕು ಶಾಸಕರಿಗಿದೆ. ಆದರೆ ಕೇಂದ್ರದಲ್ಲಿ ತಮ್ಮದೇ ಸರ್ಕಾರವಿದ್ದು, ತಮ್ಮದೇ ಪಕ್ಷದ ಸಂಸದರು ಇರುವಾಗ ಉಡುಪಿ ಅಭಿವೃದ್ಧಿಗಾಗಿ ಕೇಂದ್ರದಿಂದ ಎಷ್ಟು ಅನುದಾನ ತರಲಾಗಿದೆ? ಸಂಸದರ ಬಳಿ ಈ ಕುರಿತು ಎಷ್ಟು ಬಾರಿ ಪ್ರಶ್ನೆ ಕೇಳಲಾಗಿದೆ? ಮೀನುಗಾರರು, ಸಹಕಾರಿ ಕ್ಷೇತ್ರ ಹಾಗೂ ಉಡುಪಿ ಜನರಿಗಾಗಿ ಏನು ಸಾಧಿಸಲಾಗಿದೆ ಎಂಬುದಕ್ಕೂ ಉತ್ತರ ನೀಡಬೇಕು ಎಂದು ಅವರು ಒತ್ತಾಯಿಸಿದ್ದಾರೆ.

ಮಹಾಲಕ್ಷ್ಮಿ ಕೋ-ಆಪರೇಟಿವ್ ಬ್ಯಾಂಕ್ ವಿಚಾರದಲ್ಲಿ ಆರೋಪ–ಪ್ರತ್ಯಾರೋಪಗಳಿಗಿಂತ ತನಿಖೆಯೇ ಮುಖ್ಯ. ಎಸ್‌ಐಟಿ ತನಿಖೆ ನಡೆಯಲಿ, ಸಂಬಂಧಿಸಿದ ದಾಖಲೆಗಳು ಹೊರಬರಲಿ ಹಾಗೂ ಸತ್ಯಾಂಶ ಜನರಿಗೆ ತಿಳಿಯಲಿ. “ನಾನು ತನಿಖೆಗೆ ಸಿದ್ಧ” ಎನ್ನುವುದು ಕೇವಲ ಮಾತಾಗದೆ, ತನಿಖೆಗೆ ಸಂಪೂರ್ಣ ಸಹಕಾರ ನೀಡುವುದು ಮತ್ತು ಅಗತ್ಯ ದಾಖಲೆಗಳನ್ನು ಪಾರದರ್ಶಕವಾಗಿ ಒದಗಿಸುವುದು ಜವಾಬ್ದಾರಿಯುತ ನಾಯಕತ್ವದ ಲಕ್ಷಣ ಎಂದು ಅವರು ಹೇಳಿದ್ದಾರೆ.

ಒಬ್ಬ ಶಾಲೆಯ ಮುಖ್ಯೋಪಾಧ್ಯಾಯರು ಪ್ರತಿದಿನ ತಮ್ಮ ಹಿಂದಿನ ಮುಖ್ಯೋಪಾಧ್ಯಾಯರು ಉತ್ತಮವಾಗಿ ಕೆಲಸ ಮಾಡಿದ್ದರು ಎಂದು ಹೇಳುವುದರಿಂದ ಮಾತ್ರ ಶಾಲೆಯ ಫಲಿತಾಂಶ ಸುಧಾರಿಸುವುದಿಲ್ಲ. ವಿದ್ಯಾರ್ಥಿಗಳ ಫಲಿತಾಂಶ, ಶಿಕ್ಷಕರ ಕಾರ್ಯಕ್ಷಮತೆ ಹಾಗೂ ಶಾಲೆಯ ಅಭಿವೃದ್ಧಿಯೇ ಅವರ ಕೆಲಸದ ಅಳತೆಯಾಗುತ್ತದೆ. ರಾಜಕೀಯದಲ್ಲಿಯೂ ಇದೇ ಮಾನದಂಡ ಅನ್ವಯಿಸುತ್ತದೆ ಎಂದು ಕೋಟ ನಾಗೇಂದ್ರ ಪುತ್ರನ್ ತಿಳಿಸಿದ್ದಾರೆ.

ಇಂದಿನ ಯುವ ಪೀಳಿಗೆಗೆ ಗದ್ದಲ, ಆವೇಶ ಅಥವಾ ವೈಯಕ್ತಿಕ ಟೀಕೆಗಳಿಗಿಂತ ದತ್ತಾಂಶ, ಅಭಿವೃದ್ಧಿಯ ಲೆಕ್ಕ, ಪಾರದರ್ಶಕತೆ ಹಾಗೂ ಜವಾಬ್ದಾರಿಯುತ ನಾಯಕತ್ವ ಅಗತ್ಯವಾಗಿದೆ. ಹಿಂದೂ ಧರ್ಮದ ಬಗ್ಗೆ ಮಾತನಾಡುವವರು ಸತ್ಯ, ಧರ್ಮ, ಶಿಸ್ತು, ಸೇವೆ ಮತ್ತು ಆತ್ಮಸಂಯಮದಂತಹ ಮೂಲ ಮೌಲ್ಯಗಳನ್ನು ಜೀವನದಲ್ಲೂ ಅಳವಡಿಸಿಕೊಳ್ಳಬೇಕು. ಕೇವಲ ಕೇಸರಿ ಬಟ್ಟೆ ಧರಿಸುವುದು ಅಥವಾ ಘೋಷಣೆ ಕೂಗುವುದರಿಂದ ಧರ್ಮದ ಪ್ರತಿನಿಧಿತ್ವ ಸಾಧ್ಯವಿಲ್ಲ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ತಮ್ಮ ಹೇಳಿಕೆ ಯಾರ ಮೇಲಿನ ದ್ವೇಷದಿಂದ ಕೂಡಿಲ್ಲ. ಜನಪ್ರತಿನಿಧಿಯನ್ನು ಪ್ರಶ್ನಿಸುವುದು ಪ್ರಜಾಪ್ರಭುತ್ವದ ಹಕ್ಕು. ಉಡುಪಿಯ ಜನರು ಇನ್ನು ಮುಂದೆ “ಯಾರ ಜೊತೆ ನಿಂತಿದ್ದೀರಿ?” ಎನ್ನುವುದಕ್ಕಿಂತ “ನಮ್ಮ ಜೊತೆ ನಿಂತು ನಮ್ಮಿಗಾಗಿ ಏನು ಮಾಡಿದ್ದೀರಿ?” ಎಂದು ಪ್ರಶ್ನಿಸಲಿದ್ದಾರೆ ಎಂದು ಕೋಟ ನಾಗೇಂದ್ರ ಪುತ್ರನ್ ಹೇಳಿದ್ದಾರೆ.

ಆಶ್ರಯದ ಹೆಸರು ಹೇಳುವುದು ನಾಯಕತ್ವವಲ್ಲ. ಸ್ವಂತ ಸಾಧನೆಯ ಮೂಲಕ ಹೆಸರು ಗಳಿಸುವುದೇ ನಿಜವಾದ ನಾಯಕತ್ವ. ಆದ್ದರಿಂದ ಶಾಸಕ ಯಶ್ಪಾಲ್ ಸುವರ್ಣ ಅವರು ತಮ್ಮ ಅವಧಿಯ ಅಭಿವೃದ್ಧಿ ಕಾರ್ಯಗಳ ಸಮಗ್ರ ಲೆಕ್ಕವನ್ನು ಜನರ ಮುಂದಿಡಬೇಕು ಎಂದು ಅವರು ಆಗ್ರಹಿಸಿದ್ದಾರೆ.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಉಡುಪಿ | ಮೇವಿನ ಬಿತ್ತನೆ ಬೀಜ ಉಚಿತ ಪೂರೈಕೆ; ರೈತರಿಂದ ಅರ್ಜಿ ಆಹ್ವಾನ

ಪ್ರಸಕ್ತ ಸಾಲಿನಲ್ಲಿ ರಾಜ್ಯದಲ್ಲಿ ಮಳೆಯ ಪ್ರಮಾಣ ತೀರಾ ಕಡಿಮೆಯಾಗಿರುವ ಹಿನ್ನೆಲೆಯಲ್ಲಿ ಜಾನುವಾರುಗಳಿಗೆ...

ಉಡುಪಿ | ಅ.11ರಿಂದ 21ರವರೆಗೆ ಉಚ್ಚಿಲ ದಸರಾ: ಅ.12ರಂದು ಮಹಿಳಾ ದಸರಾ ಉದ್ಘಾಟಿಸಲಿರುವ ಸಿಎಂ

ದಕ್ಷಿಣ ಕನ್ನಡ ಮೊಗವೀರ ಮಹಾಜನ ಸಂಘದ ವ್ಯವಸ್ಥಾಪನೆಯ ಉಚ್ಚಿಲ ಶ್ರೀ ಮಹಾಲಕ್ಷ್ಮೀ...

ಹಾವೇರಿ | ಅಂಚೆ ಇಲಾಖೆಯಲ್ಲಿ ನೇರ ಸಂದರ್ಶನ

ಭಾರತೀಯ ಅಂಚೆ ಇಲಾಖೆಯಲ್ಲಿ ಪೋಸ್ಟಲ್ ಲೈಫ್ ಇನ್ಸೂರೆನ್ಸ್ (ಪಿಎಲ್‌ಐ-ಅಂಚೆ ಜೀವವಿಮೆ) ಮತ್ತು...

ಬಸವನ ಬಾಗೇವಾಡಿ | ತಾಲೂಕು ಆಸ್ಪತ್ರೆಯಲ್ಲಿ ಔಷಧ ಕೊರತೆ: ಡಿಎಚ್‌ಒ ಸ್ಪಷ್ಟನೆಗೆ ರೈತ ಸಂಘ ಆಗ್ರಹ

ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿ ತಾಲೂಕು ಆಸ್ಪತ್ರೆಯಲ್ಲಿ ಬಡ ರೋಗಿಗಳಿಗೆ ಅಗತ್ಯ...