ಉತ್ತರ ಕನ್ನಡ | ಮುಂಡಗೋಡ–ಹೊನ್ನಾವರದಲ್ಲಿ ಇಸ್ಪೀಟ್ ಅಡ್ಡೆ ಮೇಲೆ ದಾಳಿ; ಒಟ್ಟು 19 ಮಂದಿಯ ವಿರುದ್ಧ ಪ್ರಕರಣ ದಾಖಲು

Date:

ಉತ್ತರ ಕನ್ನಡ: ಜಿಲ್ಲೆಯ ಮುಂಡಗೋಡ ಮತ್ತು ಹೊನ್ನಾವರ ತಾಲ್ಲೂಕುಗಳಲ್ಲಿ ಖಚಿತ ಮಾಹಿತಿಯ ಮೇರೆಗೆ ಪೊಲೀಸರು ನಡೆಸಿದ ದಾಳಿಯಲ್ಲಿ, ಸಾರ್ವಜನಿಕ ಸ್ಥಳದಲ್ಲಿ ಇಸ್ಪೀಟ್ ಜೂಜಾಟದಲ್ಲಿ ತೊಡಗಿದ್ದ 19 ಮಂದಿಯ ವಿರುದ್ಧ ಪ್ರಕರಣ ದಾಖಲಾಗಿದೆ.

- Advertisement -

ಮುಂಡಗೋಡ ಘಟನೆಯ ವಿವರ: ನವೆಂಬರ್ 8ರ ರಾತ್ರಿ 11 ಗಂಟೆ ಸುಮಾರಿಗೆ ಮುಂಡಗೋಡ ತಾಲೂಕಿನ ಕಾಳಗನಕೊಪ್ಪ ಗ್ರಾಮದ ಮರಿಯಮ್ಮ ದೇವಸ್ಥಾನದ ಹತ್ತಿರ ಕೆಲವರು ಹಣವನ್ನು ಪಂಥವಾಗಿ ಕಟ್ಟಿ ಇಸ್ಪೀಟ್ ಎಲೆಗಳ ಮೇಲೆ ಜೂಜಾಟ ನಡೆಸುತ್ತಿದ್ದರೆಂಬ ಸುಳಿವಿನ ಮೇರೆಗೆ ಪೊಲೀಸರು ದಾಳಿ ನಡೆಸಿದ್ದಾರೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಬೆಟ್ಟದಷ್ಟಾದ ಅತ್ಯಾಚಾರ ಪ್ರಕರಣಗಳು – ತೆವಳುತ್ತಿರುವ ನ್ಯಾಯದಾನ

ಪೊಲೀಸರೆಂದು ನಟಿಸಿ ಬೆದರಿಸುವುದು, ನಿರ್ಜನ ಪ್ರದೇಶಗಳಲ್ಲಿ ತೋಳಗಳಂತೆ ಕಾದು ಹಲ್ಲೆಗೈದು ಸಾಮೂಹಿಕ ಅತ್ಯಾಚಾರ ನಡೆಸಿ ಕೊಂದೆಸೆಯುವುದು, ಕಿಂಚಿತ್ತೂ ಭಯವಿಲ್ಲದೆ ಕೃತ್ಯದ ವಿಡಿಯೋ ತುಣುಕುಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡುವುದಲ್ಲದೆ, ಸಂತ್ರಸ್ತರ ಗುರುತು ಬಹಿರಂಗಪಡಿಸುವ ಪ್ರವೃತ್ತಿ...

ಶಾಮನೂರು ಫ್ಯಾಮಿಲಿಗೆ ಸಚಿವ ಬಸವಂತಪ್ಪ ಕೈ ಮುಗಿಯುವ ಅಗತ್ಯವಿದೆಯೇ?

ಬಸವಂತಪ್ಪನವರನ್ನು ಗೆಲ್ಲಿಸಿದ್ದು, ಕಾಂಗ್ರೆಸ್ಸಿನ ಸಾಂಪ್ರದಾಯಿಕ ಮತದಾರರು. ಶಾಮನೂರು ಕುಟುಂಬದ ಸುತ್ತ ಕಟ್ಟಿರುವ ಕಲ್ಪಿತ ಬಲವನ್ನು ಮೀರಿ, ಬಸವಂತಪ್ಪ ಬೆಳೆಯಬೇಕು ಎಂಬುದು ಕ್ಷೇತ್ರದ ಮತದಾರರ ಅಭಿಪ್ರಾಯ. ಪೌರಕಾರ್ಮಿಕರ ಮಗನಾಗಿ ಹುಟ್ಟಿ, ಸಚಿವ ಸ್ಥಾನದವರೆಗೆ ಬೆಳೆದವರು ಕೆ.ಎಸ್....

ಪಾಕ್‌ಗೆ ತಕ್ಕ ಉತ್ತರ ನೀಡಿದ್ದಾಗಿ ಎದೆ ತಟ್ಟಿಕೊಳ್ಳುವ ಮೋದೀಜಿ,...

ಬಾಲಾಕೋಟ್‌ನಿಂದ ಇತ್ತೀಚಿನ 'ಆಪರೇಷನ್ ಸಿಂಧೂರ್'ವರೆಗೆ ಪಾಕಿಸ್ತಾನಕ್ಕೆ ತಕ್ಕ ಉತ್ತರ ನೀಡಿದ್ದಾಗಿ ಪ್ರಧಾನಿ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಎದೆ ತಟ್ಟಿಕೊಳ್ಳುತ್ತಿದೆ. ಶತೃ ದೇಶವನ್ನು ಮಣಿಸುವುದು ಯಾರಿಗಾದರೂ ಹೆಮ್ಮೆಯೇ. ಆದರೆ, ದೇಶದ ಅಖಂಡತೆಗೆ ಅತಿ...

ದಾಳಿಯ ವೇಳೆ ಕಾಳಗನಕೊಪ್ಪದ ಕಿರಣ ಮೈಲಾರಿ ಕುರುಬರ (22) ಮತ್ತು ಮುಂಡಗೋಡ ತಾಲೂಕಿನ ದೇಶಪಾಂಡೆ ನಗರದ ಚಂದ್ರಶೇಖರ ದುರ್ಗಪ್ಪ ವಡ್ಡರ (24) ಬಂಧಿತರಾಗಿದ್ದಾರೆ, ಬಸವರಾಜ ಮಹಾದೇವ ತಿಮ್ಮಾಪುರ, ಕಾಳಗನಕೊಪ್ಪ(23), ಬಸವರಾಜ ಗೋವಿಂದ ಬೆಳವಟ್ಟಿ, ಕಾಳಗನಕೊಪ್ಪ (27), ಸುರೇಶ ಹಳೆಪ್ಪ ಉಪ್ಪಾರ, ಕಾಳಗನಕೊಪ್ಪ (35), ಏಕನಾಥ ಉಪ್ಪಾರ, ಮಂಜುನಾಥ ಉಪ್ಪಾರ, ಕಾಳಗನಕೊಪ್ಪ, ವಿಜಯ ಈರಪ್ಪ ಆಲಳ್ಳಿ, ರಮೇಶ ಗೋಸಾವಿ ಸಾ. ಮಲವಳ್ಳಿ ಹಾಗೂ ಪರಶುರಾಮ ಚಲವಾದಿ ಮುಂಡಗೋಡ ತಾಲೂಕಿನ ಗಾಂಧಿನಗರ ಪರಾರಿಯಾಗಿದ್ದಾರೆ. ಸ್ಥಳದಿಂದ ₹14,150 ನಗದು ಮತ್ತು 52 ಇಸ್ಪೀಟ್ ಎಲೆಗಳನ್ನು ವಶಪಡಿಸಿಕೊಳ್ಳಲಾಗಿದೆ. ಈ ಕುರಿತು ಮುಂಡಗೋಡ ಪೊಲೀಸ್ ಠಾಣೆಯಲ್ಲಿ ಕಲಂ 87 ಕೆ.ಪಿ. ಆಕ್ಟ್ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಈ ಸುದ್ದಿ ಓದಿದ್ದೀರಾ? ಯಲ್ಲಾಪುರ | ಆಸ್ತಿ ವಿಚಾರಕ್ಕೆ ನಡೆದ ಕಲಹದಲ್ಲಿ ತಂದೆಯನ್ನೆ ಕೊಡಲಿಯಿಂದ ಕೊಚ್ಚಿ ಕೊಲೆ ಮಾಡಿದ ಮಗ

ಹೊನ್ನಾವರ ಘಟನೆಯ ವಿವರ: ರವಿವಾರ ದಿನ ಬೆಳಗಿನ ಜಾವ 12.20 ಗಂಟೆಯ ಸುಮಾರಿಗೆ ಹೊನ್ನಾವರ ತಾಲೂಕಿನ ಕರ್ಕಿ ಗ್ರಾಮದ ರಾಮೇಶ್ವರಕಂಬಿ ಅಶ್ವತ್ಕಟ್ಟೆ ಹತ್ತಿರ ಸಾರ್ವಜನಿಕ ರಸ್ತೆಯಲ್ಲಿ ಜೂಜಾಟ ನಡೆಯುತ್ತಿದ್ದೆ ಎಂಬ ಮಾಹಿತಿ ಮೇರೆಗೆ ಪಿಎಸ್‌ಐ ಸಿದ್ದರಾಮೇಶ್ವರ ಎಸ್. ಅವರ ನೇತೃತ್ವದಲ್ಲಿ ಪೊಲೀಸರು ದಾಳಿ ನಡೆಸಿದ್ದಿರೆ.

ದಾಳಿಯ ವೇಳೆ ಗೋಪಾಲ ಜಟ್ಟಿ ನಾಯ್ಕ (63) ಸಾ. ರಾಮಶ್ವೇರಕಂಟಿ, ಸುನೀಲ ಮಾಸ್ತಿ ಮುಕ್ರಿ (26) ಸಾ, ರಾಮೇಶ್ವರ ಕಂಟಿ, ರಾಮಚಂದ್ರ ನಾರಾಯಣ ಮುಕ್ರಿ (33) ಸಾ. ರಾಮಶ್ವೇರ ಕಂಟಿ, ಬಂಧಿತರಾಗಿದ್ದು, ಮಣಿ, ಸಂತೋಷ, ಸುರೇಶ, ಗುರುಪ್ರಸಾದ ಮುಕ್ರಿ, ವಿನಾಯಕ, ಸಂಕೇತ ಮತ್ತು ಇತರರು ಸ್ಥಳದಿಂದ ಪರಾರಿಯಾಗಿದ್ದಾರೆ. ಸ್ಥಳದಿಂದ ₹4,170 ನಗದು, 52 ಇಸ್ಪೀಟ್ ಎಲೆಗಳು, ಮೊಬೈಲ್ ಫೋನ್‌ಗಳು, ರೆಕ್ಸಿನ್ ಮಂಡ ಹಾಗೂ ನಾಲ್ಕು ಮೋಟಾರ್ ಸೈಕಲ್‌ಗಳು ಮತ್ತು ಒಂದು ಸ್ಕೂಟರ್ ಸೇರಿದಂತೆ ಒಟ್ಟು ಸುಮಾರು ₹78,000 ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.ಈ ಸಂಬಂಧ ಹೊನ್ನಾವರ ಪೊಲೀಸ್ ಠಾಣೆಯಲ್ಲಿ, ಕಲಂ 87 ಕೆ.ಪಿ. ಆಕ್ಟ್ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಚಿಕ್ಕಮಗಳೂರು | ಚೇತನ್ ಗೊಡ್ಲುಮನೆ ಅವರಿಗೆ ಪಿಎಚ್‌ಡಿ ಪದವಿ ಪ್ರದಾನ 

ಗೊಡ್ಲುಮನೆ ಹೆಚ್.ಹೆಚ್. ರಮೇಶ್ ಗೌಡ ಹಾಗೂ ಹೆಚ್.ಆರ್. ಜಯಲಕ್ಷ್ಮಿ ದಂಪತಿಯ ಹಿರಿಯ...

ಹಾವೇರಿ | ಪಿಎಫ್ ಹೊಸ ನೀತಿ: ವಿರೋಧಿಸಿ ಮಹಿಳಾ ಉದ್ಯೋಗಿಗಳು ದಿಡೀರ್ ಹೆದ್ದಾರಿ ತಡೆದು ಪ್ರತಿಭಟನೆ

"ಕೇಂದ್ರ ಸರ್ಕಾರವು ಭವಿಷ್ಯನಿಧಿ (ಪಿಎಫ್) ಸೌಲಭ್ಯದಲ್ಲಿ ಹೊಸ ಆದೇಶ ಮಾಡಿರುವುದು ಗಾರ್ಮೆಂಟ್ಸ್...

ಚಿಕ್ಕಮಗಳೂರು | ರಾಷ್ಟ್ರೀಯ ಹೆದ್ದಾರಿ: ಮರಗಳ ಕಟಾವು ತನಿಖೆಗೆ ಒತ್ತಾಯ

ಮೂಡಿಗೆರೆ ಚಿಕ್ಕಮಗಳೂರು ರಾಷ್ಟ್ರೀಯ ಹೆದ್ದಾರಿ ಅಗಲೀಕರಣಕ್ಕೆ ಕೆಳಗೂರು ಸಮೀಪದ ಸಾಲು ಮರ...

ಬಾಗಲಕೋಟೆ | ಸರ್ಕಾರಿ ನೌಕರರ ಸೇವಾ ಪ್ರಶಸ್ತಿಗೆ ನಾಮನಿರ್ದೇಶನ ಆಹ್ವಾನ

ರಾಜ್ಯ ಸರ್ಕಾರದ ವಿವಿಧ ಇಲಾಖೆಯಲ್ಲಿ ಕರ್ತವ್ಯನಿಷ್ಠೆ, ಪ್ರಾಮಾಣಿಕತೆ ಹಾಗೂ ಗಮನಾರ್ಹ ಸೇವೆ...