ಉತ್ತರ ಕನ್ನಡ | ದೇವಭಾಗ್ ಬೀಚ್‌ನಲ್ಲಿ ಮತ್ತೆ ‘ಮೀನಿನ ಮಳೆ’!

Date:

ಉತ್ತರ ಕನ್ನಡ ಜಿಲ್ಲೆಯ ಮೀನುಗಾರರಿಗೆ ಮತ್ತೊಮ್ಮೆ ಅಚ್ಚರಿಯ ಲಾಟರಿ ಸಿಕ್ಕಂತಾಗಿದೆ. ಇಂದು ಬೆಳಗ್ಗೆ ಕಾರವಾರ ತಾಲೂಕಿನ ದೇವಭಾಗ್ ಕಡಲತೀರದಲ್ಲಿ ಆಶ್ಚರ್ಯಕರ ದೃಶ್ಯವೊಂದು ಕಾಣಿಸಿಕೊಂಡಿದೆ. ಇಂದು ಸಮುದ್ರದ ಅಲೆಗಳು ತನ್ನ ಜೊತೆ ಮೀನುಗಳ ದೊಡ್ಡ ಗುಂಪನ್ನೇ ದಡಕ್ಕೆ ತಂದು ಹಾಕಿದೆ.

- Advertisement -

ಈ ಅಪರೂಪದ ಘಟನೆ ಸ್ಥಳೀಯರಲ್ಲಿ, ವಿಶೇಷವಾಗಿ ಮೀನುಗಾರ ಸಮುದಾಯದಲ್ಲಿ, ಅಪಾರ ಸಂತೋಷ ಮತ್ತು ಸಂಭ್ರಮಕ್ಕೆ ಕಾರಣವಾಗಿದೆ. ಬೆಳಗಿನ ಜಾವ ಕಡಲತೀರದಲ್ಲಿ ನೂರಾರು ಮೀನುಗಳು ಅಲೆಗಳ ಹೊಡೆತಕ್ಕೆ ಸಿಲುಕಿ ದಡದಲ್ಲಿ ಬಿದ್ದಿರುವುದನ್ನು ಕಂಡ ದೇವಭಾಗ್ ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರು ತಕ್ಷಣವೇ ಬೀಚ್ ಕಡೆ ಧಾವಿಸಿದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಬ್ರಿಟಿಷ್ ಕಾಲದ ʼಗುಲಾಮಗಿರಿʼ ಕಾನೂನುಗಳೇ ಇಂದಿನ ಪೊಲೀಸ್‌ ವ್ಯವಸ್ಥೆಯ...

ಸ್ವಾತಂತ್ರ್ಯ ಬಂದು ದಶಕಗಳೇ ಕಳೆದಿದ್ದರೂ, ನಾವಿನ್ನೂ ಬ್ರಿಟಿಷರು ಭಾರತೀಯರನ್ನು ದಮನ ಮಾಡಲು ರೂಪಿಸಿದ 1861ರ ಪೊಲೀಸ್ ಕಾಯಿದೆಯ ನೆರಳಿನಲ್ಲೇ ಬದುಕುತ್ತಿದ್ದೇವೆಯೇ? ಖಾಕಿ ಪಡೆಯನ್ನು 'ಪ್ರಜೆಗಳ ರಕ್ಷಕ'ನಾಗಿಸಬೇಕಿದ್ದ ವ್ಯವಸ್ಥೆ, ಇಂದಿಗೂ ರಾಜಕಾರಣಿಗಳ ಕೈಗೊಂಬೆಯಾಗಿ ಉಳಿದುಕೊಳ್ಳಲು...

ಯಾರು ಹಿತವರು ಈ ಇಬ್ಬರೊಳಗೆ? ನೇಹಾ ಬೋರಾ ಅಭಿಜಿತ್...

“ಹೋಲಿಕೆ ಬೇಡ, ಒಗ್ಗಟ್ಟು ಬೇಕು. ನಾವೆಲ್ಲರೂ ಒಟ್ಟಾಗಿ ಚುನಾವಣಾ ಆಯೋಗದ ಅಕ್ರಮಗಳ ವಿರುದ್ಧ ಹೋರಾಡಬೇಕು” ಎಂದು ನೇಹಾ ಬರೆದರೆ, ಅದಕ್ಕೆ ಅಭಿಜೀತ್ ಉತ್ತರ- “ಇಂಕ್ವಿಲಾಬ್ ಜಿಂದಾಬಾದ್” ನೇಹಾ ಬೋರಾ ಮತ್ತು ಅಭಿಜಿತ್ ದೀಪ್ಕೆ ನಡುವೆ...

ಸ್ವತಂತ್ರ ಸಾಂವಿಧಾನಿಕ ಸಂಸ್ಥೆಗಳ ಮೇಲಿನ ನಂಬಿಕೆಯನ್ನು ಕಸಿದುಕೊಳ್ಳುತ್ತಿರುವ ಚುನಾವಣಾ...

ನ್ಯಾಯಾಲಯ ಮತ್ತು ಚುನಾವಣಾ ಆಯೋಗಗಳ 'ಸ್ವತಂತ್ರತೆ' ಎಂಬ ಮುಖವಾಡವೇ ಈಗ ಸರ್ಕಾರಕ್ಕೆ ರಕ್ಷಣಾ ಕವಚವಾಗಿ ಕೆಲಸ ಮಾಡುತ್ತಿದೆ. ಹೀಗಾಗಿ ಇವತ್ತು ವಿರೋಧ ಪಕ್ಷಗಳ ಆಕ್ರೋಶವೆಲ್ಲವೂ ಸಾಂವಿಧಾನಿಕ ಸಂಸ್ಥೆಗಳ ಕಡೆಗೆ ತಿರುಗಿದೆ. ಸರ್ಕಾರ ತೀರಾ...

ಯುವಕರು, ಮಹಿಳೆಯರು, ಮಕ್ಕಳು ಎನ್ನದೆ ಪ್ರತಿಯೊಬ್ಬರೂ ಬಲೆಗಳು, ಬುಟ್ಟಿಗಳು, ಬಟ್ಟೆಗಳು ಕೈಗೆ‌ ಸಿಕ್ಕಿದರಲ್ಲಿ ಮೀನುಗಳನ್ನು ಹಿಡಿಯಲು ಮುಂದಾದರು. ಕೆಲವರು ಬರಿಗೈಯಲ್ಲೇ ಮೀನು ಹಿಡಿದು ಸಂತೋಷದಿಂದ‌ ಬುಟ್ಟಿಯಲ್ಲಿ ತುಂಬಿಕೊಂಡರು.ಕೆಲವೇ ಗಂಟೆಗಳಲ್ಲಿ ಕಡಲತೀರ ಬಹುತೇಕ ಖಾಲಿಯಾಗಿದ್ದು, ಗ್ರಾಮಸ್ಥರು ಕೈತುಂಬಾ ಮೀನುಗಳನ್ನು ಮನೆಗೆ ಕೊಂಡೊಯ್ದರು.

ಈ ಸುದ್ದಿ ಓದಿದ್ದೀರಾ?: ಹೊನ್ನಾವರ | ಬಸ್ಸಿನಲ್ಲಿ ಚಿನ್ನಾಭರಣ ಕಳವು ಮಾಡಿದ ಮಹಿಳೆ ಬಂಧನ; ₹1 ಲಕ್ಷ ಮೌಲ್ಯದ ಸ್ವತ್ತು ವಶ

ಕೆಲವರು ಸ್ವಂತ ಬಳಕೆಗೆ ಮೀನು ಇಟ್ಟುಕೊಂಡರೆ, ಇತರರು ಸ್ಥಳೀಯ ಮಾರುಕಟ್ಟೆಯಲ್ಲಿ ಮಾರಾಟ ಮಾಡಲು ಸಿದ್ಧತೆ ಆರಂಭಿಸಿದರು.ಕಳೆದ ವಾರ ಅಂಕೋಲಾ ತಾಲ್ಲೂಕಿನ ಹಾರ್ವಾಡ ಕಡಲತೀರದಲ್ಲೂ ಇದೇ ರೀತಿಯ ಘಟನೆ ನಡೆದಿದೆ. ಇದೀಗ ದೇವಭಾಗ್ ಬೀಚ್‌ನಲ್ಲಿ ಎರಡನೇ ಬಾರಿ ಮೀನುಗಳ ರಾಶಿ ದಡಕ್ಕೆ ತಲುಪಿರುವುದು, ಈ ಭಾಗದ ಮೀನುಗಾರರಿಗೆ “ಶುಭಸಂಕೇತ”ವೆಂದು ಸ್ಥಳೀಯ ಮೀನುಗಾರರು ಹರ್ಷ ವ್ಯಕ್ತಪಡಿಸಿದ್ದಾರೆ.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಉಡುಪಿ | ಜನರ ಬಳಿಗೇ ಅಧಿಕಾರಿಗಳು ತೆರಳಿ ಸಮಸ್ಯೆ ಪರಿಹರಿಸಬೇಕು: ಗುರುರಾಜ್ ಶೆಟ್ಟಿ ಗಂಟಿಹೊಳೆ

ಪ್ರಜಾಸೇವಾ ಆಂದೋಲನ ಸಭೆಯು ಜನಪರ ಕಾಳಜಿಯ ಕಾರ್ಯಕ್ರಮವಾಗಿದ್ದು, ಸಾರ್ವಜನಿಕರು ಇದರ ಸದುಪಯೋಗ...

ಉಡುಪಿ | ನಿವೇಶನ ರಹಿತರಿಂದ ನಿವೇಶನಕ್ಕಾಗಿ ಅರ್ಜಿ ಆಹ್ವಾನ

ಉಡುಪಿ ಜಿಲ್ಲೆಯ ಸಾಲಿಗ್ರಾಮ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಸ್ವಂತ ನಿವೇಶನ ಹೊಂದಿಲ್ಲದ...

ಶಿವಮೊಗ್ಗ | ರಂಗದಸರಾ ಪ್ರಯುಕ್ತ ಜಿಲ್ಲಾ ಮಟ್ಟದ ಏಕಪಾತ್ರಾಭಿನಯ ಸ್ಪರ್ಧೆ ಕಾರ್ಯಕ್ರಮ

ಶಿವಮೊಗ್ಗ ಮಹಾನಗರ ಪಾಲಿಕೆಯು ದಸರಾ-2026ರ ಪ್ರಯುಕ್ತ ರಂಗ ದಸರಾ-2026ರ ಅಡಿಯಲ್ಲಿ 15...