ದಾಖಲೆ ಮೀನು ಉತ್ಪಾದನೆಯಾದರೂ… ಸುಧಾರಿಸದ ಮೀನುಗಾರರ ಬದುಕು

Date:

ಒಂದು ಕಡೆ ರಾಜ್ಯ ಮತ್ತು ದೇಶದ ಆರ್ಥಿಕತೆಗೆ ವಿದೇಶಿ ವಿನಿಮಯ ತಂದುಕೊಡುವ ಕ್ಷೇತ್ರವಾಗಿ ಮೀನುಗಾರಿಕೆ ಬೆಳೆಯುತ್ತಿದೆ. ಇನ್ನೊಂದು ಕಡೆ ದಾಖಲೆ ಪ್ರಮಾಣದ ಮೀನು ಉತ್ಪಾದನೆ ಮಾಡಿದ ಮೀನುಗಾರರೇ ತಮ್ಮ ಬದುಕಿಗಾಗಿ ಹೋರಾಡುತ್ತಿದ್ದಾರೆ. ಸಮುದ್ರ ಸಂಪತ್ತಿನ ಮೇಲೆ ಬದುಕು ಕಟ್ಟಿಕೊಂಡಿರುವ ಕರಾವಳಿಯ ಜನರ ಪ್ರಶ್ನೆ ಈಗ ಒಂದೇ – ʼನಾವು ಹೆಚ್ಚು ಮೀನು ಹಿಡಿದರೂ, ನಮ್ಮ ಬದುಕು ಯಾಕೆ ಸುಧಾರಿಸುತ್ತಿಲ್ಲ?ʼ ಎನ್ನುವುದು..

ಉತ್ತರ ಕನ್ನಡ ಜಿಲ್ಲೆಯ ಆಳ ಸಮುದ್ರ ಮೀನುಗಾರಿಕೆ ಕ್ಷೇತ್ರವು 2025-26ನೇ ಸಾಲಿನಲ್ಲಿ ಐತಿಹಾಸಿಕ ಸಾಧನೆ ಮಾಡಿದೆ. ಕಳೆದ ಹತ್ತು ತಿಂಗಳಲ್ಲಿ ಜಿಲ್ಲೆಯ ಮೀನುಗಾರರು 1.20 ಲಕ್ಷ ಟನ್‌ಗಿಂತ ಅಧಿಕ ಮೀನು ಉತ್ಪಾದನೆ ಮಾಡಿ ಹೊಸ ದಾಖಲೆಯನ್ನು ನಿರ್ಮಿಸಿದ್ದಾರೆ. ಆದರೆ, ಈ ಸಾಧನೆಯ ಹಿಂದೆ ಅಡಗಿರುವ ವಾಸ್ತವ ಚಿತ್ರ ಮಾತ್ರ ಆತಂಕಕಾರಿ. ಮೀನುಗಳ ಪ್ರಮಾಣ ಹೆಚ್ಚಾದರೂ ಮೀನುಗಾರರ ಆದಾಯ ಮಾತ್ರ ಕುಸಿದಿದ್ದು, ಕರಾವಳಿ ಭಾಗದ ಸಾವಿರಾರು ಕುಟುಂಬಗಳು ಆರ್ಥಿಕ ಸಂಕಷ್ಟದ ಸುಳಿಯಲ್ಲಿ ಸಿಲುಕಿವೆ.

- Advertisement -

ಜಿಲ್ಲೆಯ ಆಳ ಸಮುದ್ರ ಮೀನುಗಾರಿಕೆಯಲ್ಲಿ 2018-19ರಲ್ಲಿ ದಾಖಲಾಗಿದ್ದ 1,20,271 ಟನ್ ಉತ್ಪಾದನೆಯ ದಾಖಲೆಯನ್ನು ಈ ವರ್ಷ 1,20,933 ಟನ್ ಮೀನು ಉತ್ಪಾದನೆಯ ಮೂಲಕ ಮೀರಿ ಹೊಸ ಇತಿಹಾಸ ನಿರ್ಮಿಸಲಾಗಿದೆ. ಆಗಸ್ಟ್‌ನಿಂದ ಮೇ ತಿಂಗಳವರೆಗೆ ನಡೆದ ಮೀನುಗಾರಿಕೆ ಹಂಗಾಮಿನಲ್ಲಿ ಉತ್ತಮ ಉತ್ಪಾದನೆ ಕಂಡುಬಂದಿದೆ. ಮುಂಗಾರು ವಿಳಂಬವಾದ ಕಾರಣ ಮೇ ತಿಂಗಳ ಪೂರ್ತಿ ಸಮುದ್ರಕ್ಕೆ ತೆರಳಲು ಅವಕಾಶ ದೊರೆತಿದ್ದು, ಉತ್ಪಾದನೆ ಹೆಚ್ಚಲು ಪ್ರಮುಖ ಕಾರಣವಾಗಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

SIR ಅಕ್ರಮ | ಗ್ಯಾನೇಶ್‌ ಕುಮಾರ್ ‘ಅಪರಾಧಿ’ಯಾದ್ರೆ, ಮೋದಿ-ಅಮಿತ್...

ಭಾರತೀಯ ಪ್ರಜಾಪ್ರಭುತ್ವದ ಇತಿಹಾಸದಲ್ಲೇ ಅತ್ಯಂತ ಕರಾಳ ಅಧ್ಯಾಯವೊಂದು ಈಗ ಜಗಜ್ಜಾಹೀರಾಗಿದೆ. ಪ್ರತಿಯೊಬ್ಬ ನಾಗರಿಕನ ಅತಿ ದೊಡ್ಡ ರಾಜಕೀಯ ಶಕ್ತಿಯಾಗಿರುವ 'ಮತದಾನದ ಹಕ್ಕು' ಮತ್ತು ಅದನ್ನು ಕಾಯಬೇಕಾದ ಸಾಂವಿಧಾನಿಕ ಸಂಸ್ಥೆಯನ್ನೇ ಆಡಳಿತಾರೂಢ ಮೋದಿ-ಅಮಿತ್ ಶಾ...

7 ದಿನಗಳಲ್ಲಿ 8 ಇ-ಮೇಲ್‌ಗಳು; ಆದರೂ ಮತಪಟ್ಟಿಯಲ್ಲಿ ಉಳಿಯಲಿಲ್ಲ...

90 ಕೋಟಿಗೂ ಹೆಚ್ಚು ಮತದಾರರನ್ನು ಹೊಂದಿರುವ ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವದಲ್ಲಿ 97 ಮತದಾರರು ಎಂಬ ಸಂಖ್ಯೆ ಅತಿ ಚಿಕ್ಕದಾಗಿ ಕಾಣಬಹುದು. ಆದರೆ, ಗೋವಾದ ಈ 97 ಮತದಾರರ ಪ್ರಕರಣವು ಚುನಾವಣಾ ಆಯೋಗದ ಕಾರ್ಯವಿಧಾನ,...

ಮತದಾರರ ಪಟ್ಟಿ: ನಿರ್ಧಾರ ತೆಗೆದುಕೊಳ್ಳುವುದು, ಜಾರಿಗೆ ತರುವುದು ಯಾರು?

ಗೋವಾದ 97 ಮತದಾರರ ಪ್ರಕರಣ ಚುನಾವಣಾ ವ್ಯವಸ್ಥೆಯ ಮುಂದಿರುವ ಒಂದು ಮಹತ್ವದ ಪ್ರಶ್ನೆಯನ್ನು ಎದುರುತರುತ್ತದೆ: ಸ್ಥಳೀಯ ಮಟ್ಟದ ಮತದಾರರ ನೋಂದಣಿ ಅಧಿಕಾರಿಗಳು (ERO) ದಾಖಲೆಗಳನ್ನು ಪರಿಶೀಲಿಸಿ ಅಂತಿಮ ಪಟ್ಟಿಯಲ್ಲಿ ಸೇರಿಸಲು ಅರ್ಹರೆಂದು ಕಂಡುಕೊಂಡ...

ಆದರೆ ಮೀನುಗಾರರ ಸಂತಸ ಹೆಚ್ಚು ದಿನ ಉಳಿಯಲಿಲ್ಲ. ಮೀನುಗಾರಿಕೆಯ ಪ್ರಮುಖ ವೆಚ್ಚವಾದ ಡೀಸೆಲ್ ದರ ನಿರಂತರವಾಗಿ ಏರಿಕೆಯಾಗಿದ್ದು, ಮೀನುಗಾರರ ಲಾಭದ ಬಹುಪಾಲನ್ನು ನುಂಗುತ್ತಿದೆ. ಆಳ ಸಮುದ್ರಕ್ಕೆ ತೆರಳುವ ಯಾಂತ್ರೀಕೃತ ಬೋಟುಗಳಿಗೆ ಒಂದೇ ಪ್ರವಾಸಕ್ಕೆ ಸಾವಿರಾರು ಲೀಟರ್ ಡೀಸೆಲ್ ಅಗತ್ಯವಾಗುತ್ತದೆ. ಇದರ ಜತೆಗೆ ಐಸ್, ಆಹಾರ ಸಾಮಗ್ರಿ, ಬಲೆ, ಎಂಜಿನ್ ನಿರ್ವಹಣೆ, ಕಾರ್ಮಿಕರ ವೇತನ ಸೇರಿದಂತೆ ಎಲ್ಲ ವೆಚ್ಚಗಳೂ ಗಣನೀಯವಾಗಿ ಹೆಚ್ಚಿವೆ.

ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಯುದ್ಧದ ಪರಿಣಾಮ ತೈಲ ಮಾರುಕಟ್ಟೆಯಲ್ಲೂ ಅಸ್ಥಿರತೆ ಉಂಟಾಗಿದೆ. ಇದರ ನೇರ ಪರಿಣಾಮ ಕರಾವಳಿಯ ಮೀನುಗಾರರ ಮೇಲೆ ಬಿದ್ದಿದೆ. ಮತ್ತೊಂದೆಡೆ ಮೀನು ಸಂಸ್ಕರಣಾ ಘಟಕಗಳಿಗೆ ಅಗತ್ಯವಿರುವ ಗ್ಯಾಸ್ ಕೊರತೆ ಮತ್ತು ರಫ್ತು ಮಾರುಕಟ್ಟೆಯ ಅನಿಶ್ಚಿತತೆ ಮೀನು ಬೆಲೆ ಕುಸಿತಕ್ಕೆ ಕಾರಣವಾಗಿದೆ. ಹೀಗಾಗಿ ಸಮುದ್ರದಿಂದ ಹೆಚ್ಚಿನ ಪ್ರಮಾಣದ ಮೀನು ತಂದರೂ ಮಾರುಕಟ್ಟೆಯಲ್ಲಿ ನಿರೀಕ್ಷಿತ ಬೆಲೆ ದೊರೆಯುತ್ತಿಲ್ಲ.

ಉತ್ತರ ಕನ್ನಡ ಜಿಲ್ಲೆಯಲ್ಲಿ 16,538 ಕುಟುಂಬಗಳು ಸಂಪೂರ್ಣವಾಗಿ ಹಾಗೂ 20,386 ಕುಟುಂಬಗಳು ಅರೆಕಾಲಿಕವಾಗಿ ಮೀನುಗಾರಿಕೆಯನ್ನು ಅವಲಂಬಿಸಿವೆ. 135ಕ್ಕೂ ಹೆಚ್ಚು ಕರಾವಳಿ ಗ್ರಾಮಗಳ ಜೀವನಾಧಾರ ಮೀನುಗಾರಿಕೆಯೇ ಆಗಿದೆ. ಹೀಗಾಗಿ ಮೀನುಗಾರಿಕೆಯ ಲಾಭ ಕುಸಿತ ಕೇವಲ ಒಂದು ವೃತ್ತಿಯ ಸಮಸ್ಯೆಯಲ್ಲ; ಇದು ಸಾವಿರಾರು ಕುಟುಂಬಗಳ ಬದುಕಿಗೆ ಸಂಬಂಧಿಸಿದ ಸಾಮಾಜಿಕ ಮತ್ತು ಆರ್ಥಿಕ ಪ್ರಶ್ನೆಯಾಗಿದೆ.

ಜಿಲ್ಲೆಯಲ್ಲಿ ಒಟ್ಟು 3,176 ನೋಂದಾಯಿತ ಮೀನುಗಾರಿಕಾ ದೋಣಿಗಳು ಕಾರ್ಯನಿರ್ವಹಿಸುತ್ತಿವೆ. ನೂರಾರು ಯಾಂತ್ರೀಕೃತ ಬೋಟುಗಳು ಪ್ರತಿದಿನ ಸಮುದ್ರಕ್ಕೆ ಇಳಿಯುತ್ತಿವೆ. ಆದರೆ ಇಂಧನ ವೆಚ್ಚವೇ ಆದಾಯದ ದೊಡ್ಡ ಪಾಲನ್ನು ತೆಗೆದುಕೊಳ್ಳುತ್ತಿರುವುದರಿಂದ ಮೀನುಗಾರರು ಸಾಲದ ಹೊರೆ ಹೊತ್ತು ಬದುಕುವ ಪರಿಸ್ಥಿತಿ ನಿರ್ಮಾಣವಾಗಿದೆ.

ತಜ್ಞರ ಪ್ರಕಾರ ಮೀನುಗಾರಿಕೆಗೆ ಕೃಷಿಯ ಮಾದರಿಯಲ್ಲೇ ವಿಶೇಷ ಇಂಧನ ಸಬ್ಸಿಡಿ ವ್ಯವಸ್ಥೆ ಜಾರಿಗೊಳಿಸುವುದು ಕಾಲದ ಅಗತ್ಯವಾಗಿದೆ. ಡೀಸೆಲ್ ದರ ಏರಿಕೆಗೆ ಅನುಗುಣವಾಗಿ ಸಬ್ಸಿಡಿ ಹೆಚ್ಚಿಸುವುದು, ಮೀನು ಸಂಸ್ಕರಣಾ ಘಟಕಗಳಿಗೆ ನಿರಂತರ ಗ್ಯಾಸ್ ಪೂರೈಕೆ ಖಚಿತಪಡಿಸುವುದು ಮತ್ತು ರಫ್ತು ಮಾರುಕಟ್ಟೆ ವಿಸ್ತರಣೆ ಮಾಡುವ ಮೂಲಕ ಮಾತ್ರ ಈ ಕ್ಷೇತ್ರವನ್ನು ಉಳಿಸಬಹುದಾಗಿದೆ.

ದಾಖಲೆಗಳ ಹಿಂದೆ ಮರೆತಿರುವ ಪ್ರಶ್ನೆ

ಒಂದು ಕಡೆ ರಾಜ್ಯ ಮತ್ತು ದೇಶದ ಆರ್ಥಿಕತೆಗೆ ವಿದೇಶಿ ವಿನಿಮಯ ತಂದುಕೊಡುವ ಕ್ಷೇತ್ರವಾಗಿ ಮೀನುಗಾರಿಕೆ ಬೆಳೆಯುತ್ತಿದೆ. ಇನ್ನೊಂದು ಕಡೆ ದಾಖಲೆ ಪ್ರಮಾಣದ ಮೀನು ಉತ್ಪಾದನೆ ಮಾಡಿದ ಮೀನುಗಾರರೇ ತಮ್ಮ ಬದುಕಿಗಾಗಿ ಹೋರಾಡುತ್ತಿದ್ದಾರೆ. ಸಮುದ್ರ ಸಂಪತ್ತಿನ ಮೇಲೆ ಬದುಕು ಕಟ್ಟಿಕೊಂಡಿರುವ ಕರಾವಳಿಯ ಜನರ ಪ್ರಶ್ನೆ ಈಗ ಒಂದೇ – ʼನಾವು ಹೆಚ್ಚು ಮೀನು ಹಿಡಿದರೂ, ನಮ್ಮ ಬದುಕು ಯಾಕೆ ಸುಧಾರಿಸುತ್ತಿಲ್ಲ?ʼ ಎನ್ನುವುದು..

ಇದನ್ನೂ ಓದಿದ್ದೀರಾ? ಬೆಳಗಾವಿ | ಮುಂಗಾರು ವಿಳಂಬದಿಂದ ಬೆಳೆ ಒಣಗುವ ಭೀತಿ: ಆಕಾಶದತ್ತ ಮುಖಮಾಡಿದ ರೈತರು

ಸರ್ಕಾರ, ಮೀನುಗಾರ ಸಹಕಾರ ಸಂಘಗಳು ಮತ್ತು ಖಾಸಗಿ ಸಂಸ್ಥೆಗಳು ಒಟ್ಟಾಗಿ ಕಾರ್ಯಪ್ರವೃತ್ತರಾಗಿ, ನೇರ ಮಾರುಕಟ್ಟೆ ವ್ಯವಸ್ಥೆ, ಬೆಂಬಲ ಬೆಲೆ, ತಂತ್ರಜ್ಞಾನ ಆಧಾರಿತ ಮಾರಾಟ ಮತ್ತು ಸಮುದಾಯ ಆಧಾರಿತ ಸಂಸ್ಥೆಗಳನ್ನು ಬಲಪಡಿಸುವ ಮೂಲಕ ಮೀನುಗಾರರ ನಿಜವಾದ ಅಭಿವೃದ್ಧಿಯನ್ನು ಖಚಿತಪಡಿಸುವುದು ಅಗತ್ಯವಾಗಿದೆ. ಇಲ್ಲದಿದ್ದರೆ, ಸಮುದ್ರದ ಆಳದಲ್ಲಿ ಹೆಚ್ಚುತ್ತಿರುವ ಮೀನುಗಳ ಪ್ರಮಾಣಕ್ಕೆ ವ್ಯತಿರಿಕ್ತವಾಗಿ, ಕರಾವಳಿ ಕುಟುಂಬಗಳು ಆರ್ಥಿಕ ದುಃಸ್ಥಿತಿಗೆ ತಲುಪುವ ಅಪಾಯವಿದೆ.

987638ca8c89079659d0147ec8165bb4e02be67aff4a7af8f502ae66e86a5a1e?s=150&d=mp&r=g
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಮತದಾರರ ಪಟ್ಟಿ: ನಿರ್ಧಾರ ತೆಗೆದುಕೊಳ್ಳುವುದು, ಜಾರಿಗೆ ತರುವುದು ಯಾರು?

ಗೋವಾದ 97 ಮತದಾರರ ಪ್ರಕರಣ ಚುನಾವಣಾ ವ್ಯವಸ್ಥೆಯ ಮುಂದಿರುವ ಒಂದು ಮಹತ್ವದ...

ಸಿಇಸಿ ಗ್ಯಾನೇಶ್ ದೇಶದ್ರೋಹಿ; ಕೂಡಲೇ ರಾಜೀನಾಮೆ ನೀಡಲಿ: ಸಿಜೆಪಿ ಸಂಸ್ಥಾಪಕ ಅಭಿಜೀತ್ ದೀಪ್ಕೆ

ಚುನಾವಣಾ ಆಯುಕ್ತ ಗ್ಯಾನೇಶ್ ಕುಮಾರ್ ಅತಿ ದೊಡ್ಡ ದೇಶದ್ರೋಹಿ ಎಂಬುದು ಬಹಿರಂಗವಾಗಿದೆ....

ಗ್ಯಾನೇಶ್‌ ಕುಮಾ‌ರ್ – ಮೇಧಾ ರೂಪಂ: ತಪ್ಪು ಕಾರಣಗಳಿಗಾಗಿ ಸುದ್ದಿಯ ಸುಳಿಯಲ್ಲಿ ಐಎಎಸ್ ಅಪ್ಪ-ಮಗಳ ಜೋಡಿ

ಉನ್ನತ ಸಾಂವಿಧಾನಿಕ ಹಾಗೂ ಆಡಳಿತಾತ್ಮಕ ಹುದ್ದೆಗಳನ್ನು ಅಲಂಕರಿಸಿರುವ ಐಎಎಸ್ ಅಧಿಕಾರಿಗಳಾದ ಅಪ್ಪ–ಮಗಳ...

IIT ಬಾಂಬೆ ವಿದ್ಯಾರ್ಥಿ ಸಾಹಿಲ್‌ ಆತ್ಮಹತ್ಯೆ ಪ್ರಕರಣ | ಪೋಷಕರ ಬೆಂಬಲಕ್ಕೆ ನಿಂತ ರಾಹುಲ್‌ ಗಾಂಧಿ

IIT ಬಾಂಬೆ ವಿದ್ಯಾರ್ಥಿ ಸಾಹಿಲ್‌ ವಕೋಡೆ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್‌...