SIR | ಮತದ ಹಕ್ಕು ಕಳೆದುಕೊಂಡಿದ್ದ ವ್ಯಕ್ತಿಗೆ ಮರುಸೇರ್ಪಡೆಯ ಭರವಸೆ; ಶೀಘ್ರ ಇತ್ಯರ್ಥಕ್ಕೆ ಸುಪ್ರೀಂ ನಿರ್ದೇಶನ

Date:

ಪಶ್ಚಿಮ ಬಂಗಾಳದಲ್ಲಿ ಇತ್ತೀಚೆಗೆ ನಡೆದ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ಪ್ರಕ್ರಿಯೆಯಲ್ಲಿ ಬರೋಬ್ಬರಿ 90 ಲಕ್ಷ ಮತದಾರರ ಹೆಸರುಗಳನ್ನು ಪಟ್ಟಿಯಿಂದ ಹೊರಹಾಕಲಾಗಿದೆ. ಈ ಬೃಹತ್ ಪ್ರಕ್ರಿಯೆಯ ನಡುವೆ ಮತದಾನದ ಹಕ್ಕು ಕಳೆದುಕೊಂಡಿರುವ ಮುರ್ಷಿದಾಬಾದ್‌ನ ವಕೀಲರೊಬ್ಬರು (75) ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿದ್ದರು. ಅವರ ಅರ್ಜಿಯ ವಿಚಾರಣೆ ನಡೆಸಿರುವ ಸುಪ್ರೀಂ ಕೋರ್ಟ್, “ಮೇಲ್ನೋಟಕ್ಕೆ ಅವರು ಪಶ್ಚಿಮ ಬಂಗಾಳದ ನಿಜವಾದ ಮತ್ತು ವಿಶ್ವಾಸಾರ್ಹ ನಾಗರಿಕನಂತೆ ಕಂಡುಬರುತ್ತಿದ್ದಾರೆ. ಇನ್ನೆರಡು ತಿಂಗಳೊಳಗೆ ಅವರ ಪ್ರಕರಣವನ್ನು ಇತ್ಯಾರ್ಥ ಪಡಿಸಬೇಕು” ಎಂದು ಅಪೀಲು ನ್ಯಾಯಮಂಡಳಿಗೆ ನಿರ್ದೇಶನ ನೀಡಿದೆ.

- Advertisement -

ಲೈವ್‌ಲಾ ವರದಿಯ ಪ್ರಕಾರ, ಮತದಾರರ ಪಟ್ಟಿಯಿಂದ ತಮ್ಮ ಹೆಸರು ಕೈಬಿಟ್ಟಿರುವುದನ್ನು ಪ್ರಶ್ನಿಸಿ ಹಿರಿಯ ವಕೀಲರು ಸಲ್ಲಿಸಿರುವ ಮೇಲ್ಮನವಿಯ ತುರ್ತು ವಿಚಾರಣೆಗೆ ಸುಪ್ರೀಂ ಕೋರ್ಟ್ ಒಪ್ಪಿಗೆ ನೀಡಿದೆ. ರಾಜ್ಯದಲ್ಲಿ ವಿಧಾನಸಭಾ ಚುನಾವಣೆ ಮುಗಿದು ಹೊಸ ಸರ್ಕಾರ ರಚನೆಯಾದ ಒಂದು ತಿಂಗಳ ನಂತರ ಈ ವಿಚಾರಣೆ ನಡೆಯುತ್ತಿರುವುದು ಗಮನಾರ್ಹವೂ ಆಗಿದೆ. ಮತದಾರರ ಪಟ್ಟಿಯಲ್ಲಿ ಹೆಸರು ಕಳೆದುಕೊಂಡಿರುವ ಬಂಗಾಳದ 27 ಲಕ್ಷ ಮತದಾರರು ಅಕ್ಷೇಪಣೆಗಳನ್ನು ಸಲ್ಲಿಸಿದ್ದು, ತೀರ್ಪಿಗಾಗಿ ಕಾಯುತ್ತಿದ್ದಾರೆ. ಇದೇ ಸಮಯದಲ್ಲಿ, ನ್ಯಾಯಾಲಯದಿಂದ ಈ ಸೂಚನೆ ಬಂದಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಮತದಾರರ ಪಟ್ಟಿ: ನಿರ್ಧಾರ ತೆಗೆದುಕೊಳ್ಳುವುದು, ಜಾರಿಗೆ ತರುವುದು ಯಾರು?

ಗೋವಾದ 97 ಮತದಾರರ ಪ್ರಕರಣ ಚುನಾವಣಾ ವ್ಯವಸ್ಥೆಯ ಮುಂದಿರುವ ಒಂದು ಮಹತ್ವದ ಪ್ರಶ್ನೆಯನ್ನು ಎದುರುತರುತ್ತದೆ: ಸ್ಥಳೀಯ ಮಟ್ಟದ ಮತದಾರರ ನೋಂದಣಿ ಅಧಿಕಾರಿಗಳು (ERO) ದಾಖಲೆಗಳನ್ನು ಪರಿಶೀಲಿಸಿ ಅಂತಿಮ ಪಟ್ಟಿಯಲ್ಲಿ ಸೇರಿಸಲು ಅರ್ಹರೆಂದು ಕಂಡುಕೊಂಡ...

ಸೆ.23 ‘ಭೀಮ ಸಂಕಲ್ಪ ದಿನ’: ಡಾ ಬಿ ಆರ್...

1917ರ ಸೆಪ್ಟೆಂಬರ್ 23ರಂದು ವಡೋದರದ ಆಲದ ಮರದ ಕೆಳಗೆ ಕುಳಿತಿದ್ದ ಯುವ ಅಂಬೇಡ್ಕರ್ ಅವರ ಬಳಿ ಅಧಿಕಾರವಿರಲಿಲ್ಲ, ದೊಡ್ಡ ಸಂಘಟನೆಯಿರಲಿಲ್ಲ. ಆದರೆ ಅನ್ಯಾಯವನ್ನು ಒಪ್ಪಿಕೊಳ್ಳದ ಮನಸ್ಸು ಮತ್ತು ಸಮಾಜವನ್ನು ಬದಲಿಸಬೇಕೆಂಬ ದೃಢ ಸಂಕಲ್ಪವಿತ್ತು....

ಸೌಜನ್ಯ ಪ್ರಕರಣ: ಪ್ರಭಾವಿಗಳ ಜೊತೆ ಲಜ್ಜೆ ಬಿಟ್ಟು ಹೆಜ್ಜೆ...

ತನಿಖಾಧಿಕಾರಿಗಳು ಹಣದ ಆಮಿಷಕ್ಕೆ ಒಳಗಾಗಿದ್ದರೇ ಅಥವಾ ಬಲಾಢ್ಯರ ಒತ್ತಡಕ್ಕೆ ಮಣಿದು ಸಾಕ್ಷ್ಯ ನಾಶ ಮಾಡಿ ಅಪರಾಧಿಗಳ ರಕ್ಷಣೆಗೆ ನಿಂತರೇ ಎಂಬ ಅನುಮಾನ ಸಾಮಾನ್ಯ ಜನರಿಗೂ ಬರುತ್ತಿರುವಾಗ ಕರ್ನಾಟಕದ ಬಹುತೇಕ ಸುದ್ದಿ ಮಾಧ್ಯಮಗಳು ಈ...

ಅರ್ಜಿದಾರ ವಕೀಲ ಮೊಹಮ್ಮದ್ ಯಾನ್ ಅಲಿ ಅವರ ಪರವಾಗಿ ನ್ಯಾಯಾಲಯಕ್ಕೆ ಹಾಜರಾದ ವಕೀಲ ಶಕೀಲ್ ಶೇಖ್ ಅವರು, “ನಮ್ಮ ಕಕ್ಷಿದಾರ ಮೊಹಮ್ಮದ್ ಯಾನ್ ಅಲಿ ಅವರು ಕಳೆದ ಐದು ದಶಕಗಳಿಗೂ ಹೆಚ್ಚು ಕಾಲದಿಂದ ದೇಶದಲ್ಲಿ ಸಕ್ರಿಯವಾಗಿ ಮತದಾನದ ಹಕ್ಕನ್ನು ಚಲಾಯಿಸುತ್ತಾ ಬಂದಿದ್ದಾರೆ. ಕೊನೆಯ ಬಾರಿ ತೀವ್ರ ಪರಿಷ್ಕರಣೆ ನಡೆದ 2002ಕ್ಕಿಂತ ಮುಂಚಿನಿಂದಲೂ ಅಲಿ ಅವರು ಕಾನೂನುಬದ್ಧ ಮತದಾರರಾಗಿದ್ದಾರೆ. ಅವರ ಮತದಾರರ ಅರ್ಹತೆಯ ಬಗ್ಗೆ ಇದುವರೆಗೆ ಯಾವುದೇ ಇಲಾಖೆಯಾಗಲಿ ಅಥವಾ ಸಂಸ್ಥೆಯಾಗಲಿ ತನಿಖೆ ನಡೆಸಿರಲಿಲ್ಲ” ಎಂದು ನ್ಯಾಯಾಲಯಕ್ಕೆ ತಿಳಿಸಿದರು.

“ಅಲಿ ಅವರು ಮತದಾರರ ಪಟ್ಟಿಯಿಂದ ಹೆಸರು ಕೈಬಿಟ್ಟಿರುವುದರ ವಿರುದ್ಧ ಪ್ರಜಾಪ್ರತಿನಿಧಿ ಕಾಯ್ದೆ 1950ರ ಅಡಿಯಲ್ಲಿ 2026ರ ಮಾರ್ಚ್ 27ರಂದೇ ಮೇಲ್ಮನವಿ ಸಲ್ಲಿಸಿದ್ದರು. ಆದರೆ, ಮೇಲ್ಮನವಿ ಸಲ್ಲಿಸಿ ಮೂರು ತಿಂಗಳು ಕಳೆದಿದ್ದರೂ ಅವರಿಗೆ ಇದುವರೆಗೆ ತಮ್ಮ ವಾದ ಮಂಡಿಸಲು ಒಂದೇ ಒಂದು ಬಾರಿಯೂ ವಿಚಾರಣೆಯ ಅವಕಾಶವನ್ನು ನೀಡಲಾಗಿಲ್ಲ” ಎಂದು ನ್ಯಾಯಾಲಯದ ಗಮನಕ್ಕೆ ವಕೀಲ ಶಕೀಲ್ ತಂದರು.

ವಾದ ಆಲಿಸಿದ ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್ ಮತ್ತು ನ್ಯಾಯಮೂರ್ತಿ ವಿ. ಮೋಹನ ಅವರನ್ನೊಳಗೊಂಡ ದ್ವಿಪೀಠವು ಪ್ರಕರಣದ ಗಂಭೀರತೆಯನ್ನು ಪರಿಗಣಿಸಿದೆ. ಅರ್ಜಿದಾರರು 1977 ರಿಂದಲೇ ವಕೀಲ ವೃತ್ತಿ ಮಾಡುತ್ತಿರುವುದನ್ನು ಮತ್ತು ಅವರು ದೀರ್ಘಕಾಲದಿಂದ ಇದೇ ರಾಜ್ಯದ ನಿವಾಸಿಯಾಗಿರುವುದನ್ನು ನ್ಯಾಯಾಲಯ ಗುರುತಿಸಿದೆ.

“ಮೇಲ್ನೋಟಕ್ಕೆ ನೀವು ಪಶ್ಚಿಮ ಬಂಗಾಳದ ನಿಜವಾದ ಮತ್ತು ವಿಶ್ವಾಸಾರ್ಹ ನಾಗರಿಕರಂತೆ ಕಂಡುಬರುತ್ತೀರಿ ಎಂಬ ನಿಮ್ಮ ವಾದವನ್ನು ನಾವು ಒಪ್ಪಿಕೊಳ್ಳುತ್ತೇವೆ” ಎಂದು ಮುಖ್ಯ ನ್ಯಾಯಮೂರ್ತಿಗಳು ಹೇಳಿದರು. ಆದಾಗ್ಯೂ, ಕಾನೂನು ಪ್ರಕ್ರಿಯೆಗಳು ಬಾಕಿ ಇರುವುದರಿಂದ ನ್ಯಾಯಾಲಯವು ತಕ್ಷಣವೇ ಅಲಿ ಅವರ ಹೆಸರನ್ನು ಮತದಾರರ ಪಟ್ಟಿಗೆ ಮರುಸೇರ್ಪಡೆ ಮಾಡಲು ಆದೇಶಿಸಿಲ್ಲ.

ಈ ಲೇಖನ ಓದಿದ್ದೀರಾ?: ಕಾಂಗ್ರೆಸ್ ಕಾಲಾಳು ಹರಿಪ್ರಸಾದ್ ಈಗ ಪಿಸಿಸಿ ತಲೆಯಾಳು; ಕುತೂಹಲ ಮೂಡಿಸಿದ ನೇಮಕ

ಎಸ್‌ಐಆರ್‌ಗೆ ಸಂಬಂಧಿಸಿದ ಪ್ರಕರಣಗಳನ್ನು ನಿರ್ವಹಿಸಲು ರಚಿಸಲಾದ ನ್ಯಾಯಾಂಗ ಅಧಿಕಾರಿಗಳ ನ್ಯಾಯಮಂಡಳಿ ಕುರಿತು ಉಲ್ಲೇಖಿಸಿದ ಸೂರ್ಯಕಾಂತ್, “ಪ್ರಸ್ತುತ ಅಪೀಲು ನ್ಯಾಯಮಂಡಳಿಗಳ ಮುಂದೆ ಭಾರಿ ಸಂಖ್ಯೆಯ ಮೇಲ್ಮನವಿಗಳು ಬಾಕಿ ಉಳಿದಿವೆ. ಈ ಪ್ರಕರಣಗಳ ಇತ್ಯರ್ಥಕ್ಕಾಗಿ ಹೆಚ್ಚಿನ ಸಮಯದ ಅಗತ್ಯವಿದೆ” ಎಂದು ಹೇಳಿದರು.

ಈ ಹಿನ್ನೆಲೆಯಲ್ಲಿ ಅರ್ಜಿದಾರ ವಕೀಲ ಮೊಹಮ್ಮದ್ ಯಾನ್ ಅಲಿ ಅವರಿಗೆ ಸಮಾಧಾನಕರ ನಿರ್ದೇಶನ ನೀಡಿದ ಮುಖ್ಯ ನ್ಯಾಯಮೂರ್ತಿಗಳು, “ನಿಮ್ಮ ಪ್ರಕರಣದಲ್ಲಿ, ನಿಮಗೆ ಆದ್ಯತೆಯ ಮೇರೆಗೆ ವಿಚಾರಣೆ ನಡೆಸಿ, ವಿಷಯವನ್ನು ಇನ್ನೆರಡು ತಿಂಗಳೊಳಗೆ ಇತ್ಯರ್ಥಪಡಿಸುವಂತೆ ನಾವು ಮೇಲ್ಮನವಿ ಟ್ರಿಬ್ಯುನಲ್‌ಗೆ ಆದೇಶ ಹೊರಡಿಸುತ್ತಿದ್ದೇವೆ” ಎಂದು ತಿಳಿಸಿದರು.

ಇಂತಹ 27 ಲಕ್ಷ ಪ್ರಕರಣಗಳು ಪರಿಶೀಲನೆಗಾಗಿ ನ್ಯಾಯಾಂಗ ಅಧಿಕಾರಿಗಳ ಮುಂದೆ ಇರುವಾಗಲೇ, ಬಂಗಾಳ ವಿಧಾನಸಭಾ ಚುನಾವಣೆ ನಡೆದಿದ್ದು, ಬಿಜೆಪಿ ಜಯಗಳಿಸಿ ಅಧಿಕಾರ ಹಿಡಿದಿದೆ. ಇತ್ತೀಚೆಗೆ, ‘ದಿ ವೈರ್’ ಸುದ್ದಿ ಸಂಸ್ಥೆ ನಡೆಸಿದ ವಿಶ್ಲೇಷಣೆಗಳ ಪ್ರಕಾರ, ಮುರ್ಷಿದಾಬಾದ್ ಸೇರಿದಂತೆ ಅಲ್ಪಸಂಖ್ಯಾತರು ಹೆಚ್ಚಿನ ಸಂಖ್ಯೆಯಲ್ಲಿರುವ ಪ್ರದೇಶಗಳಲ್ಲಿ ವ್ಯವಸ್ಥಿತವಾಗಿ ಮತದಾರರ ಹೆಸರುಗಳನ್ನು ಕೈಬಿಟ್ಟಿರುವುದು ಚುನಾವಣಾ ಫಲಿತಾಂಶದ ಮೇಲೆ ಭಾರೀ ಪರಿಣಾಮ ಬೀರಿದೆ ಎಂದು ತಿಳಿದುಬಂದಿದೆ.

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಈ ದಿನ ಸಂಪಾದಕೀಯ | ಬಿಜೆಪಿ, ಭಕ್ತರು ಮತ್ತು ಸಾರ್ವಜನಿಕ ಸಭ್ಯತೆ

ದೇಶದ ರಾಜಕೀಯ ಇತಿಹಾಸವನ್ನು ತಿಳಿಯದ, ಮಹನೀಯರ ನಡೆ-ನುಡಿಗಳನ್ನು ಅರಿಯದ; ಅರಿತರೂ ಅಳವಡಿಸಿಕೊಳ್ಳದ...

ಹೆರಿಗೆಯ ನಂತರ ಲೈಂಗಿಕ ದೌರ್ಜನ್ಯ ಪ್ರಕರಣ ಬಯಲಿಗೆ! ಬಾಲಕನ ವಿರುದ್ಧ ಪೋಕ್ಸೋ ದಾಖಲು

ದಕ್ಷಿಣ ಕನ್ನಡ ಜಿಲ್ಲೆಯ ವಿಟ್ಲದಲ್ಲಿ ಕೇರಳ ಮೂಲದ ಬಾಲಕನೊಬ್ಬ ಅಪ್ರಾಪ್ತ ಬಾಲಕಿಯೊಂದಿಗೆ...

ಸತ್ಯ ಬರೆದ ಪತ್ರಕರ್ತನ ಹತ್ಯೆ, ಮಗನ ಒಂಟಿ ಹೋರಾಟ: ಪೆರೋಲ್ ಮೋಜಿನಲ್ಲಿ ಅತ್ಯಾಚಾರಿ ರಾಮ್ ರಹೀಮ್

ಸಾಧ್ವಿಗಳ ಮೇಲಿನ ಅತ್ಯಾಚಾರ ಮತ್ತು ಹತ್ಯೆ ಪ್ರಕರಣಗಳಲ್ಲಿ ಶಿಕ್ಷೆಗೊಳಗಾಗಿರುವ ಡೇರಾ ಸಚ್ಚಾ...