ವಿಜಯನಗರ | 12ನೇ ಶತಮಾನದ ಶರಣರು ಕಾಯಕವನ್ನೇ ತಮ್ಮ ಕ್ರಿಯೆ‌, ಅರಿವಿನ ಸತ್ಯವನ್ನಾಗಿಸಿಕೊಂಡಿದ್ದರು: ವಿರೇಶ್ ಬಡಿಗೇರ

Date:

12ನೇ ಶತಮಾನದ ಶರಣರು ಕಾಯಕವನ್ನೇ ತಮ್ಮ ಕ್ರಿಯೆ‌, ಅರಿವಿನ ಸತ್ಯವನ್ನಾಗಿಸಿಕೊಂಡಿದ್ದರು. ಕಾಯಕ ಸಂಸ್ಕೃತಿಯ ಮೂಲಕ ವೃತ್ತಿ ಮತ್ತು ವ್ಯಕ್ತಿ ಗೌರವಗಳಿಗೆ ಸಾಮಾಜಿಕ ಮನ್ನಣೆ ಸಿಗುವಂತೆ ಮಾಡಿದವರೇ ಶ್ರಮ ಸಂಸ್ಕೃತಿಯ ವಚನಕಾರರು ಎಂದು ಹಸ್ತಪ್ರತಿಶಾಸ್ತ್ರ ವಿಭಾಗದ ಹಿರಿಯ ಪ್ರಾಧ್ಯಾಪಕ ಡಾ. ವೀರೇಶ್ ಬಡಿಗೇರ ಅಭಿಪ್ರಾಯಪಟ್ಟರು.

- Advertisement -

ವಿಜಯನಗರ ಜಿಲ್ಲೆಯ ಕನ್ನಡ ವಿಶ್ವವಿದ್ಯಾಲಯ ಹಸ್ತಪ್ರತಿಶಾಸ್ತ್ರ ವಿಭಾಗದಲ್ಲಿ ಫೆಬ್ರವರಿ 25ರಂದು ಹಳೆಯ ಹೊನ್ನು-105ನೇ(ಹಳಗನ್ನಡ ಸಾಹಿತ್ಯ ಚಿಂತನ ವೇದಿಕೆ) ಕಾರ್ಯಕ್ರಮದಡಿ ನಡೆದ ‘ಕನ್ನಡಿ ಕಾಯಕದ ಶರಣ-ಶರಣೆಯರು’ ಎಂಬ ವಿಷಯದ ಕುರಿತು ಮಾತನಾಡಿದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಸುದ್ದಿ ವಿವರ | ಇವಿಎಂ vs ಬ್ಯಾಲೆಟ್‌ ಪೇಪರ್‌:...

ಇವಿಎಂ ಮೇಲಿನ ವಿಶ್ವಾಸದ ಪ್ರಶ್ನೆ ಮತ್ತೆ ದೇಶದ ಚುನಾವಣಾ ಚರ್ಚಾ ಕೇಂದ್ರವಾಗಿದೆ. ಪಾರದರ್ಶಕತೆ ಮತ್ತು ಮತದಾರರ ನಂಬಿಕೆಯನ್ನು ಮುಂದಿಟ್ಟುಕೊಂಡು, ಬ್ಯಾಲೆಟ್‌ ಪೇಪರ್ ವ್ಯವಸ್ಥೆಗೆ ಮರಳಬೇಕೆಂಬ ಬೇಡಿಕೆಯನ್ನು ವಿಪಕ್ಷಗಳು ಮುಂದೆ ತಂದಿವೆ. ಬುಧವಾರ (ಸೆ.30), ದೆಹಲಿಯಲ್ಲಿ...

ಪೈಲಟ್ ಗಾಯಗೊಂಡ ನಂತರ ʼಫ್ಲೈದುಬೈʼ ವಿಮಾನ ನಡೆಸಿದವರು ಯಾರು?...

ಬುಧವಾರ ದುಬೈನಿಂದ ಇಸ್ರೇಲ್‌ನ ಟೆಲ್ ಅವೀವ್‌ಗೆ ಹಾರಾಟದಲ್ಲಿದ್ದ FZ1073 ವಿಮಾನದಲ್ಲಿ ನಡೆದ ಪ್ರಕರಣವು ಕಾಕ್‌ಪಿಟ್‌ನೊಳಗಿನ ಸುರಕ್ಷತೆ ಕುರಿತು ಪ್ರಶ್ನೆಗಳನ್ನು ಹುಟ್ಟಿ ಹಾಕಿದೆ.ಈ ವಿಮಾನದ ಯೆಮೆನ್ ಮೂಲದ ಸಹ-ಪೈಲಟ್‌, ಹರಿತ ವಸ್ತುವಿನಿಂದ ಪೈಲಟ್ ಮೇಲೆ...

ಜಾಗತಿಕ ಬಿಕ್ಕಟ್ಟಿನ ನೆಪ, ಮರೆಯಾದ ದೇಶದ ಹಿತ: ಜೈಶಂಕರ್...

ಬೆಲೆ ಏರಿಕೆಯ ಬೇಗೆಯಲ್ಲಿ ಜನಸಾಮಾನ್ಯರು ನರಳುತ್ತಿದ್ದರೆ, ಗದ್ದೆಯಲ್ಲಿ ರೈತ ರಸಗೊಬ್ಬರಕ್ಕಾಗಿ ಕಣ್ಣೀರು ಸುರಿಸುತ್ತಿದ್ದಾನೆ. ಆದರೆ, ಇದಕ್ಕೆ ಸ್ಪಂದಿಸಬೇಕಾದ ಮೋದಿ ಸರ್ಕಾರ, ವಿದೇಶಾಂಗ ಸಚಿವ ಎಸ್. ಜೈಶಂಕರ್ ಮೂಲಕ ಜಾಗತಿಕ ವೇದಿಕೆಗಳಲ್ಲಿ ವಿದೇಶಿ ಯುದ್ಧಗಳತ್ತ...
ಹಸ್ತಪ್ರತಿ ವಿಭಾಗದ ವಿದ್ಯಾರ್ಥಿನಿ

“ಸಾಮಾನ್ಯವಾಗಿ ಶರಣರು ತಮ್ಮ ಹೆಸರಿಗೂ ಮೊದಲು ಕಾಯಕವನ್ನು ಪ್ರಸ್ತಾಪಿಸುವಲ್ಲಿಯೇ ವ್ಯಕ್ತಿ ಮತ್ತು ವೃತ್ತಿ ಗೌರವವನ್ನು ಎತ್ತಿ ಹಿಡಿಯುತ್ತಾರೆ. ಕಾಯಕವೇ ಕೈಲಾಸ ಎನ್ನುವ ಶರಣರ ನಂಬಿಕೆಯ ಮೂಲವೇ ಇದಾಗಿತ್ತು” ಎಂದು ಹಸ್ತಪ್ರತಿಶಾಸ್ತ್ರ ವಿಭಾಗದ ಸಂಶೋಧನ ವಿದ್ಯಾರ್ಥಿ ಆರ್ ಕಾವೇರಿ ವಿವರಿಸಿದರು.

“ಕನ್ನಡಿ ಕಾಯಕವೆಂದರೆ ಅಲಂಕಾರ ಮಾಡುವ ಕಾಯಕ, ಕನ್ನಡಿ ತಯಾರಿಸುವ ಕಾಯಕ ಅಥವಾ ಕ್ಷೌರಿಕ ಕಸುಬು ಮಾಡುವ ಕಾಯಕ. ಮನಸ್ಸಿನ ಶುದ್ಧತೆಯನ್ನು ಕನ್ನಡಿಯ ಶುಭ್ರತೆಯೊಂದಿಗೆ ಹೇಗೆ ಕಾಪಾಡಿಕೊಳ್ಳಬೇಕೆಂಬುದನ್ನು ಪರಿಚಯಿಸುವುದೂ ಆಗಿದೆ. ಪ್ರಮುಖವಾಗಿ 7 ಮಂದಿ ಶರಣರನ್ನು ಇಲ್ಲಿ ನೋಡುವುದಾದರೆ ಹಡಪದ ಅಪ್ಪಣ್ಣ, ಹಡಪದ ಲಿಂಗಮ್ಮ, ಹಡಪದ ರೇಚಣ್ಣ, ಅಮ್ಮಿಗಿದೇವಯ್ಯ, ಕನ್ನಡಿ ಕಾಯಕದ ರೇವಮ್ಮ, ಕನ್ನಡಿ ಕಾಯಕದ ತಿಮ್ಮಪ್ಪ ಇವರುಗಳೇ ಉದಾಹರಣೆ” ಎಂದು ಹೇಳಿದರು.

ಈ ಸುದ್ದಿ ಓದಿದ್ದೀರಾ? ರಾಯಚೂರು | ಕುಡಿಯುವ ನೀರಿನ ಸಮಸ್ಯೆ ನಿವಾರಣೆಗೆ ಮುಂಜಾಗೃತಾ ಕ್ರಮ ವಹಿಸಬೇಕು: ಕುಮಾರ್ ನಾಯ್ಕ

ವಿಭಾಗದ ಮುಖ್ಯಸ್ಥ ಡಾ. ವೀರೇಶ ಬಡಿಗೇರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, “ಸಾಧನ ಮತ್ತು ಉಪಕರಣಗಳು ಮನುಷ್ಯನ ಉಪಜೀವನಕ್ಕೆ ಬೇಕಾದ ಸಂಸ್ಕೃತಿಯ ಪ್ರತಿಬಿಂಬಗಳು. ದೇಹ ಮತ್ತು ಆತ್ಮಗಳ ಅಭೇದತೆ ಕ್ರಿಯೆ ಮತ್ತು ಅರಿವಿನ ದಾರಿ. ಇವುಗಳಲ್ಲಿನ ಭೇದವು ಮನುಷ್ಯನ ಸಂಪೂರ್ಣ ಶ್ರಮವನ್ನು ನಾಶಮಾಡಿ ಅಧೀನತೆಗೆ ತಳ್ಳುತ್ತದೆ. ವೃತ್ತಿ ಮತ್ತು ವ್ಯಕ್ತಿ ಗೌರವವನ್ನು ಎತ್ತಿಹಿಡಿಯುವ ಮೂಲಕ ಶರಣರು ಬೆವರಿನ ಬದುಕಿಗೆ ಸಾಮಾಜಿಕ ಮೌಲ್ಯ ಸಿಗುವಂತೆ ಮಾಡಿದರು” ಎಂದು ಹೇಳಿದರು.

ವಿಭಾಗದ ಪ್ರಾಧ್ಯಾಪಕ ಡಾ. ಎಸ್ ಆರ್‌ ಚನ್ನವೀರಪ್ಪ, ಹಳೆಯ ಹೊನ್ನು ಕಾರ್ಯಕ್ರಮದ ಸಂಚಾಲಕ ಲಿಂಗರಾಜ ಯು ಇದ್ದರು.

ಸಂಶೋಧನಾ ವಿದ್ಯಾರ್ಥಿಗಳಾದ ಸುಮ ಕಮ್ಮಾರ ಪ್ರಾರ್ಥಿಸಿದರು, ಮಧುಕರ ಹೆಚ್ ಸ್ವಾಗತಿಸಿದರು, ರವಿ ಕಂಬಳಿ ವಂದಿಸಿದರು, ಸುನೀಲ್ ಐ ಎಸ್ ಇವರು ಕಾರ್ಯಕ್ರಮ ನಿರೂಪಣೆ ಮಾಡಿದರು.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಕೋಲಾರ | ತಡೆಹಿಡಿದಿದ್ದ ಯುವ ಕಾಂಗ್ರೆಸ್ ಜಿಲ್ಲಾಧ್ಯಕ್ಷರ ಮರುಸ್ಥಾಪನೆ

ಕೋಲಾರ ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಸೈಯದ್ ಅಫ್ರೀದ್ ಪಾಷಾ ಅವರ...

ಉಡುಪಿ | ಹಿರಿಯ ನಾಗರಿಕರನ್ನು ಗೌರವಯುತವಾಗಿ ನೋಡಿಕೊಳ್ಳಿ: ಎಂ.ಎ. ಗಫೂರ್

ಸಮಾಜದಲ್ಲಿ ಹಿರಿಯ ನಾಗರಿಕರು ತಮ್ಮದೇ ಆದ ಸ್ಥಾನಮಾನ ಹೊಂದಿದ್ದು, ಅವರನ್ನು ಗೌರವಯುತವಾಗಿ...

ಎಂಆರ್‌ಪಿಎಲ್ ದುರಂತ: ಮೃತ ಮನೀಶ್ ಕುಟುಂಬಕ್ಕೆ ₹1.20 ಕೋಟಿ ಪರಿಹಾರ

ಎಂಆರ್‌ಪಿಎಲ್‌ನ ಕೋಕರ್ ಹೈಡ್ರೋಟ್ರೀಟರ್ ಯುನಿಟ್ (ಸಿಎಚ್‌ಟಿಯು)ನಲ್ಲಿ ಬುಧವಾರ ಸಂಭವಿಸಿದ ದುರಂತದಲ್ಲಿ ಮೃತಪಟ್ಟ...

ಅಂಕೋಲಾ | ಬಸ್-ಲಾರಿ ಡಿಕ್ಕಿ: ಒಂದೂವರೆ ವರ್ಷದ ಮಗು ಸಾವು, 10ಕ್ಕೂ ಹೆಚ್ಚು ಮಂದಿಗೆ ಗಾಯ

ಅಂಕೋಲಾ: ತಾಲೂಕಿನ ಬೆಳಸೆ ಗ್ರಾಮದ ಸಮೀಪ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಗುರುವಾರ...