ಕಾಂಗ್ರೆಸ್‌ಗೂ ಬಂತು ಹೆಸರು ಬದಲಿಸುವ ಖಯಾಲಿ; ವಿಜಯಪುರ ಮರುನಾಮಕರಣಕ್ಕೆ ಮುಂದಾದ ಸರ್ಕಾರ

Date:

2014ರಲ್ಲಿ ಬಿಜಾಪುರವನ್ನು ವಿಜಯಪುರ ಎಂದು ಮರುನಾಮಕರಣ ಮಾಡಿದ್ದ ಕಾಂಗ್ರೆಸ್ ಸರ್ಕಾರ, ಇದೀಗ ಮತ್ತೆ ಜಿಲ್ಲೆಗೆ ಮರುನಾಮಕರಣ ಮಾಡಲು ಮುಂದಾಗಿದೆ. ಜಿಲ್ಲೆಯ ಬಸವನ ಬಾಗೇವಾಡಿಯಲ್ಲಿ ಜನಿಸಿದ ವಚನ ಚಳುವಳಿಯ ನೇತಾರ ಬಸವಣ್ಣನವರ ಹೆಸರನ್ನು ವಿಜಯಪುರಕ್ಕೆ ಮರುನಾಮಕರಣ ಸರ್ಕಾರ ಚಿಂತಿಸುತ್ತಿದೆ.

- Advertisement -

ಜಿಲ್ಲೆಯ ಹೆಸರು ಬದಲಿಸುವ ಸಂಬಂಧ ಸರ್ಕಾರ ಅಧಿಸೂಚನೆ ಹೊರಡಿಸಿದೆ ಎಂದು ಜಿಲ್ಲಾಧಿಕಾರಿ ಟಿ ಭೂಬಾಲನ್ ತಿಳಿಸಿದ್ದಾರೆ. ಸಮಾನತೆ ಮತ್ತು ಸಾಮಾಜಿಕ ನ್ಯಾಯಕ್ಕಾಗಿ ಶ್ರಮಿಸಿದ ಬಸವಣ್ಣನವರ ಹೆಸರನ್ನು ಜಿಲ್ಲೆಗೆ ಮರುನಾಮಕರಣ ಮಾಡಲು ಸರ್ಕಾರ ಮುಂದಾಗಿದೆ ಎಂದು ಅಧಿಸೂಚನೆಯಲ್ಲಿ ಹೇಳಲಾಗಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಏಷ್ಯನ್ ಗೇಮ್ಸ್ : ತಂಡಗಳ ಯಶಸ್ಸಿನ ನಡುವೆ ವೈಯಕ್ತಿಕ...

ಭಾರತದ ಸಾಂಪ್ರದಾಯಿಕ ಕ್ರೀಡಾ ಶಕ್ತಿಗಳಾದ ಅಥ್ಲೆಟಿಕ್ಸ್ ಮತ್ತು ಶೂಟಿಂಗ್ ವಿಭಾಗಗಳು ಈ ಬಾರಿ ನಿರೀಕ್ಷಿತ ಮಟ್ಟದಲ್ಲಿ ಮಿಂಚದೆ ಹಿನ್ನಡೆ ಅನುಭವಿಸಿವೆ. ಕಳೆದ ಹಾಂಗ್‌ಝೌ ಏಷ್ಯನ್ ಗೇಮ್ಸ್‌ನಲ್ಲಿ ಈ ಎರಡು ವಿಭಾಗಗಳಿಂದ ಬರೋಬ್ಬರಿ 51...

ಹೊಸ ಓದು | ಬಿ. ಚಂದ್ರೇಗೌಡರ ‘ಕಾಳ ಮಾವನ...

ಬಿ. ಚಂದ್ರೇಗೌಡರ 'ಬಯಲು ಸೀಮೆಯ ಕಟ್ಟೆಪುರಾಣ' ಅಂಕಣ ಬರಹದಿಂದ ಎದ್ದುಬಂದ ಕಾಳಮಾವ ಈಗ ತನ್ನ ಕಡೇ ದಿನಗಳಲ್ಲಿದ್ದಾರೆ. ಅವರು ಕಣ್ಣುಮುಚ್ಚುವ, ಕಾಲುಮಡಚುವ ದೃಶ್ಯಗಳು ಭಾರತದ ಆತ್ಮಸಾಕ್ಷಿಯ ಅಂತ್ಯಸಂಸ್ಕಾರವನ್ನು ಸಂಕೇತಿಸುವಂತಿವೆ. ನಮ್ಮ ನೆಲದ ನಾಲಿಗೆನಿಷ್ಠೆ...

ಬ್ರಿಟಿಷ್ ಕಾಲದ ʼಗುಲಾಮಗಿರಿʼ ಕಾನೂನುಗಳೇ ಇಂದಿನ ಪೊಲೀಸ್‌ ವ್ಯವಸ್ಥೆಯ...

ಸ್ವಾತಂತ್ರ್ಯ ಬಂದು ದಶಕಗಳೇ ಕಳೆದಿದ್ದರೂ, ನಾವಿನ್ನೂ ಬ್ರಿಟಿಷರು ಭಾರತೀಯರನ್ನು ದಮನ ಮಾಡಲು ರೂಪಿಸಿದ 1861ರ ಪೊಲೀಸ್ ಕಾಯಿದೆಯ ನೆರಳಿನಲ್ಲೇ ಬದುಕುತ್ತಿದ್ದೇವೆಯೇ? ಖಾಕಿ ಪಡೆಯನ್ನು 'ಪ್ರಜೆಗಳ ರಕ್ಷಕ'ನಾಗಿಸಬೇಕಿದ್ದ ವ್ಯವಸ್ಥೆ, ಇಂದಿಗೂ ರಾಜಕಾರಣಿಗಳ ಕೈಗೊಂಬೆಯಾಗಿ ಉಳಿದುಕೊಳ್ಳಲು...

ಬಸವಣ್ಣನವರ ಕೊಡುಗೆಗಳನ್ನು ಪರಿಗಣಿಸಿ ಸರ್ಕಾರವು ಜಿಲ್ಲೆಯನ್ನು ‘ಬಸವೇಶ್ವರ ಜಿಲ್ಲೆ’ ಅಥವಾ ‘ಬಸವ ಜಿಲ್ಲೆ’ ಎಂದು ಮರುನಾಮಕರಣ ಮಾಡಲು ಬಯಸಿದೆ. ಈ ನಿಟ್ಟಿನಲ್ಲಿ ಸರ್ಕಾರವು ಚುನಾಯಿತ ಪ್ರತಿನಿಧಿಗಳು, ಗಣ್ಯರು, ಎನ್‌ಜಿಒಗಳು ಮತ್ತು ಸಾರ್ವಜನಿಕರ ಅಭಿಪ್ರಾಯವನ್ನು ಕೇಳಿದೆ. 15 ದಿನಗಳೊಳಗೆ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳುವಂತೆ ಸರ್ಕಾರ ಜನರಲ್ಲಿ ಮನವಿ ಮಾಡಿದೆ.

ಜಿಲ್ಲೆಗೆ ಮತ್ತೆ ಮರುನಾಮಕರಣ ಮಾಡುವ ವಿಚಾರವನ್ನು ಬೆಂಬಲಿಸುವುದಿಲ್ಲ ದಲಿತ ಸಮುದಾಯದ ಕೆಲವರು ಸೇರಿದಂತೆ ಹಲವು ಮುಖಂಡರು, ಇತಿಹಾಸಕಾರರು ಎಂದು ಹೇಳಿದ್ದಾರೆ. ಹೆಸರು ಬದಲಿಸುವ ಪ್ರಕ್ರಿಯೆ ಅನಗತ್ಯ. ಜಿಲ್ಲೆಯ ಹೆಸರನ್ನು ಮರುನಾಮಕರಣ ಮಾಡುವ ಬದಲು ಸರ್ಕಾರ ಅಭಿವೃದ್ಧಿಗೆ ಆದ್ಯತೆ ನೀಡಬೇಕು ಎಂದು ಅವರೆಲ್ಲರೂ ಹೇಳುತ್ತಿದ್ದಾರೆ.

“ಜಿಲ್ಲೆಯ ಹೆಸರನ್ನು ಮತ್ತೆ ಮರುನಾಮಕರಣ ಮಾಡುವ ಅಗತ್ಯವಿಲ್ಲ….” ಎಂದು ಇತಿಹಾಸಕಾರ, ಲೇಖಕ ಮತ್ತು ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಕೃಷ್ಣ ಕೊಲ್ಹಾರ ಕುಲಕರ್ಣಿ ಹೇಳಿದ್ದಾರೆ.

ಈ ಸುದ್ದಿ ಓದಿದ್ದೀರಾ?: ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನ: ಶೋಭಕ್ಕ ಅಥವಾ ವಿಜಯೇಂದ್ರ – ಯಾರು ಹಿತವರು ಈ ಸಂದಿಗ್ಧದೊಳಗೆ?

“ಬಿಜಾಪುರ ಹೆಸರನ್ನು ವಿಜಯಪುರ ಎಂದು ಬದಲಾಯಿಸುವ ಸರ್ಕಾರದ ನಿರ್ಧಾರವನ್ನು ನಾನು ವಿರೋಧಿಸಿದ್ದೆ. ಮೂರು ಶತಮಾನಗಳಿಂದ ಈ ಪ್ರದೇಶವನ್ನು ಬಿಜಾಪುರ ಎಂದು ಗುರುತಿಸಲಾಗಿದೆ. ವಿನಾಕಾರಣ ವಿಜಯಪುರ ಎಂದು ಹೆಸರು ಬದಲಿಸಲಾಗಿದೆ. ಸರ್ಕಾರವು ಜಿಲ್ಲೆಯ ಹೆಸರನ್ನು ಮತ್ತೆ ಬದಲಾಯಿಸಲು ಬಯಸಿದೆ, ಇದು ಅಪ್ರಾಯೋಗಿಕ” ಎಂದು ಅವರು ವಿರೋಧಿಸಿರುವುದಾಗಿ ಟಿಎನ್‌ಐಇ ವರದಿ ಮಾಡಿದೆ.

“ಬಸವಣ್ಣ ಹುಟ್ಟಿದ ಬಸವನಬಾಗೇವಾಡಿ ತಾಲೂಕನ್ನು ಅಭಿವೃದ್ಧಿ ಪಡಿಸಬಹುದು. ಅವರ ಹೆಸರಲ್ಲಿ ಈಗಾಗಲೇ ‘ಬಸವ ಎಕ್ಸ್‌ಪ್ರೆಸ್’ ರೈಲು ಇದ್ದು, ಇಲ್ಲಿನ ಹೊಸ ವಿಮಾನ ನಿಲ್ದಾಣಕ್ಕೆ ಬಸವಣ್ಣನವರ ಹೆಸರಿಡುವ ಪ್ರಸ್ತಾವನೆ ಇದೆ. ಹೀಗಾಗಿ, ಮತ್ತೆ ಜಿಲ್ಲೆಯ ಹೆಸರನ್ನು ಬದಲಾಯಿಸುವ ಅಗತ್ಯವಿಲ್ಲ,” ಎಂದು ಹೇಳಿದ್ದಾರೆ.

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಚಿಕ್ಕಮಗಳೂರು | ದೊಡ್ಡ ಗುಂಡಿಗಳನ್ನು ಮುಚ್ಚಿದ ಶಾಲಾ ಮಕ್ಕಳು 

ಚಿಕ್ಕಮಗಳೂರು ಜಿಲ್ಲೆಯ ಕಳಸ ತಾಲೂಕಿನ ಹಳವಳ್ಳಿ ಗ್ರಾಮದಲ್ಲಿ ರಸ್ತೆಯ ದೊಡ್ಡ ದೊಡ್ಡ...

ಚಿಕ್ಕಮಗಳೂರು | ಮತದಾರರ ಪಟ್ಟಿಗೆ ಸಲ್ಲಿಸಿದ್ದ ಆಕ್ಷೇಪಣೆಗಳನ್ನು ಹಿಂಪಡೆದ ಹೆಚ್.ಕೆ ದಿನೇಶ್

ಕೊಪ್ಪ ತಾಲ್ಲೂಕಿನ ಮತದಾರರ ಪಟ್ಟಿಗೆ ಸಂಬಂಧಿಸಿದಂತೆ ನಮೂನೆ–7ರ ಮೂಲಕ ಈ ಹಿಂದೆ...

ಧಾರವಾಡ | ಜನರು ಬೀದಿಗಳಿದು ಪ್ರತಿರೋಧ ವ್ಯಕ್ತಪಡಿಸಬೇಕು: ಬಹುಭಾಷಾ ನಟ ಪ್ರಕಾಶ್ ರೈ

"ಇದು ಸಂವಿಧಾನದ ಉಳಿವು–ಅಳಿವಿನ ಪ್ರಶ್ನೆ, ಪ್ರಜಾಪ್ರಭುತ್ವದ ಪ್ರಶ್ನೆ ಹಾಗೂ ಸ್ವಾತಂತ್ರ್ಯವನ್ನು ರಕ್ಷಿಸುವ...

ಚಿಕ್ಕಮಗಳೂರು | ಚಲಿಸುತ್ತಿದ್ದ ಕಾರು ಕೆರೆಗೆ; ಮೂವರು ಪಾರು 

ಚಲಿಸುತ್ತಿದ್ದ ಕಾರಿನ ಟೈರ್ ಬ್ಲಾಸ್ಟ್ ಆಗಿ ಕಾ‌ರ್ ಕೆರೆಗೆ ಬಿದ್ದ ಪರಿಣಾಮ...