ದಾಂಡೇಲಿ ಹಾಗೂ ಜೋಯಿಡಾ ತಾಲೂಕಿನ ವಿವಿಧೆಡೆ 11 ಕೆ.ವಿ ವಿದ್ಯುತ್ ಮಾರ್ಗ ಮತ್ತು ಟ್ರಾನ್ಸ್‌ಫಾರ್ಮರ್‌ಗಳ ತುರ್ತು ನಿರ್ವಹಣಾ ಕಾಮಗಾರಿ ಕೈಗೊಳ್ಳಲಾಗುತ್ತಿದ್ದು, ನ.20ರಂದು ಅಂದರೆ ನಾಳೆ ಬೆಳಗ್ಗೆ 9.30ರಿಂದ ಸಂಜೆ 6 ಗಂಟೆಯವರೆಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ.
ದಾಂಡೇಲಿ ತಾಲೂಕಿನ ನಗರ ಶಾಖೆಯ 11 ಕೆ.ವಿ ವನಶ್ರೀನಗರ ಫೀಡರ್ ವ್ಯಾಪ್ತಿಯ ಇಂಡಸ್ಟ್ರಿಯಲ್ ಏರಿಯಾ, ಅಂಬೇವಾಡಿ, ಗಣೇಶನಗರ, ಸಾಯಿನಗರ, ವನಶ್ರೀನಗರ, ಗಾಂಧಿನಗರ ಹಾಗೂ ವಿಜಯನಗರ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ.
ಈ ಸುದ್ದಿ ಓದಿದ್ದೀರಾ? ಕುಮಟಾ | ಎಸ್‌ಐಆರ್ ವಿರುದ್ಧ ಕಾಂಗ್ರೆಸ್ ಪ್ರತಿಭಟನೆ; ಮುಖ್ಯ ಚುನಾವಣಾ ಆಯುಕ್ತರ ರಾಜೀನಾಮೆಗೆ ಆಗ್ರಹ
ಜೋಯಿಡಾ ತಾಲೂಕಿನ ಜೋಯಿಡಾ ಶಾಖೆಯ 11 ಕೆ.ವಿ ಕ್ಷೇತ್ರಪಾಲ್ ಫೀಡರ್ ವ್ಯಾಪ್ತಿಯ ಮಲಕರ್ಣಿ, ಗಂಗೋಡಾ, ಕರಂಬಾಳ, ಕಂಬೇಗಾಳಿ ಮತ್ತು ಕುಂಬೇಲಿ ಗ್ರಾಮಗಳು ಹಾಗೂ ಗ್ರಾಮೀಣ ಶಾಖೆಯ 11 ಕೆ.ವಿ ಶ್ರೇಯಸ್ ಫೀಡರ್ ವ್ಯಾಪ್ತಿಯ ಕರಿಯಂಪಲ್ಲಿ ಮತ್ತು ಮೈನಾಳ ಪ್ರದೇಶಗಳಲ್ಲಿಯೂ ವಿದ್ಯುತ್ ಪೂರೈಕೆ ಸ್ಥಗಿತಗೊಳ್ಳಲಿದೆ.
ಅದೇ ರೀತಿ ರಾಮನಗರ ಶಾಖೆಯ 11 ಕೆ.ವಿ ರಾಮನಗರ ಟೌನ್ ಫೀಡರ್ ವ್ಯಾಪ್ತಿಯ ರಾಮನಗರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ರಾಮಲಿಂಗ ದೇವಸ್ಥಾನ, ಚರ್ಚ್ ಪ್ರದೇಶ, ಪೊಲೀಸ್ ಹಾಗೂ ಆಸ್ಪತ್ರೆ ಪ್ರದೇಶ ಮತ್ತು ಕೆಪಿಸಿ ಕಾಲೋನಿಯಲ್ಲಿಯೂ ವಿದ್ಯುತ್ ವ್ಯತ್ಯಯವಾಗಲಿದೆ.
ನಿರ್ವಹಣಾ ಕಾಮಗಾರಿಗೆ ಗ್ರಾಹಕರು ಸಹಕರಿಸುವಂತೆ ದಾಂಡೇಲಿ ಹೆಸ್ಕಾಂ ಉಪವಿಭಾಗದ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ (ವಿ) ಪ್ರಕಟಣೆಯಲ್ಲಿ ತಿಳಿಸಿದ್ದಾರೆ.



