ವಿಜಯಪುರ |ಮಧುಮೇಹಿಗಳೇ ಎಚ್ಚರ: ಪಾದದ ಆರೈಕೆ ನಿರ್ಲಕ್ಷಿಸಿದರೆ ಕಾಲು ಕಳೆದುಕೊಳ್ಳುವ ಅಪಾಯ!

Date:

ಮಧುಮೇಹದಿಂದ ನರಗಳ ಕಾರ್ಯಕ್ಷಮತೆ ಮತ್ತು ರಕ್ತಸಂಚಾರಕ್ಕೆ ತೊಂದರೆಯಾಗಿ ಪಾದಗಳಲ್ಲಿ ಗಾಯ, ಹುಣ್ಣು ಕಾಣಿಸಿಕೊಳ್ಳಬಹುದು. ಆರಂಭದಲ್ಲೇ ಚಿಕಿತ್ಸೆ ಪಡೆಯದಿದ್ದರೆ ಕಾಲು ಕಳೆದುಕೊಳ್ಳುವ ಪರಿಸ್ಥಿತಿಯೂ ಎದುರಾಗಬಹುದು. ಹೀಗಾಗಿ ಮಧುಮೇಹಿಗಳು ಪಾದಗಳ ಆರೋಗ್ಯದ ಬಗ್ಗೆ ನಿರ್ಲಕ್ಷ್ಯ ವಹಿಸಬಾರದು ಎಂದು ವೈದ್ಯರು ಎಚ್ಚರಿಸಿದರು.

- Advertisement -

ವಿಶ್ವ ಮಧುಮೇಹ ದಿನದ ಅಂಗವಾಗಿ ವಿಜಯಪುರ ನಗರದ ಬಿಎಲ್‌ಡಿಇ ಆಸ್ಪತ್ರೆಯಲ್ಲಿ ನ.9ರಿಂದ 14ರವರೆಗೆ ಆಯೋಜಿಸಿದ್ದ ಉಚಿತ ಮಧುಮೇಹ ಪಾದರೋಗ ತಪಾಸಣೆ ಮತ್ತು ಚಿಕಿತ್ಸಾ ಶಿಬಿರದ ಸಮಾರೋಪದಲ್ಲಿ ವೈದ್ಯರು ಮಾತನಾಡಿದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಸ್ಮರಣೆ | ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳಿಗೇ ಜೈಲುಶಿಕ್ಷೆ ವಿಧಿಸಿ,...

ನ್ಯಾಯಮೂರ್ತಿಗಳ ವಿರುದ್ಧ ಜಾತಿ ತಾರತಮ್ಯದ ಆರೋಪ ಮಾಡಿ, ನ್ಯಾಯಾಂಗದೊಂದಿಗಿನ ಸಂಘರ್ಷ ನಡೆಸಿ, ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿಗೇ ಐದು ವರ್ಷಗಳ ಶಿಕ್ಷೆಯ ಆದೇಶ ಹೊರಡಿಸಿ, ಕೊನೆಗೆ ತಾವೇ ಆರು ತಿಂಗಳ ಜೈಲುವಾಸ ಅನುಭವಿಸಿದ್ದವರು,...

ಡಿ.ಡಿ. ಕೋಸಾಂಬಿ | ಜ್ಞಾನದ ಹಲವು ಜಗತ್ತುಗಳನ್ನು ಶೋಧಿಸಿದ...

ಡಿ.ಡಿ. ಕೋಸಾಂಬಿಯವರ ಬದುಕು ಕೇವಲ ಯಶಸ್ಸಿನ ಕಥೆಯಷ್ಟೇ ಅಲ್ಲ; ಅದು ಅಸಾಧಾರಣ ಪ್ರತಿಭೆ ಹಾಗೂ ಮನುಷ್ಯ ಸಹಜ ಭಾವನೆಗಳ ನಡುವಿನ ಸುಂದರ ಪಯಣ. ತಮಿಳು ಇತಿಹಾಸಕಾರ ಎ.ಆರ್. ವೆಂಕಟಾಚಲಪತಿ ಅವರಂತಹ ವಿಮರ್ಶಕರು ಈ...

ಒಂದು ಬದಿ ಅಧಿಕಾರ ನಿರಾಕರಣೆ, ಮತ್ತೊಂದು ಬದಿ ಕರ್ತವ್ಯದ...

ಸೋನಿಯಾ ಗಾಂಧಿ ಅವರ ಈ ಆತ್ಮಕಥೆಯ ಆಯ್ದ ಭಾಗಗಳು ಕೇವಲ ರಾಜಕೀಯ ಇತಿಹಾಸದ ದಾಖಲೆಯಷ್ಟೇ ಅಲ್ಲ, ಬದಲಿಗೆ ಮನುಷ್ಯನ ಮನಸ್ಸಿನ ಆಳದ ಸಂವೇದನೆಗಳ ಕನ್ನಡಿ. ಅಧಿಕಾರ ಸಿಕ್ಕ ಕೂಡಲೇ ಅದನ್ನು ಬಾಚಿಕೊಳ್ಳಲು ಹಾತೊರೆಯುವ...

ಶಿಬಿರದ ಸಂಚಾಲಕ ಡಾ. ಮಂಜುನಾಥ ಕೋಟೆಣ್ಣವರ ಮಾತನಾಡಿ, ಪ್ರತಿ ವರ್ಷ ಶೇ.15ರಷ್ಟು ಮಧುಮೇಹಿಗಳು ಪಾದದ ಸಮಸ್ಯೆ ಎದುರಿಸುತ್ತಿದ್ದಾರೆ. ನಿಯಂತ್ರಿತ ಆಹಾರ, ಲಘು ವ್ಯಾಯಾಮ, ನಿಯಮಿತ ತಪಾಸಣೆ ಮತ್ತು ವೈದ್ಯರು ಸೂಚಿಸಿದ ಔಷಧೋಪಚಾರದಿಂದ ರಕ್ತದಲ್ಲಿನ ಸಕ್ಕರೆ ಪ್ರಮಾಣ ನಿಯಂತ್ರಿಸಬೇಕು. ಬರಿಗಾಲಿನಲ್ಲಿ ನಡೆಯದೆ, ಸೂಕ್ತ ಪಾದರಕ್ಷೆ ಧರಿಸಬೇಕು. ಪ್ರತಿದಿನ ಪಾದಗಳನ್ನು ಪರಿಶೀಲಿಸಿ, ಗಾಯ ಅಥವಾ ಹುಣ್ಣು ಕಂಡುಬಂದರೆ ತಕ್ಷಣ ವೈದ್ಯರನ್ನು ಸಂಪರ್ಕಿಸಬೇಕು ಎಂದು ಸಲಹೆ ನೀಡಿದರು.

ಡಾ.ರಮಾಕಾಂತ ಬಳೂರಕರ ಮಾತನಾಡಿ, ಬಿಎಲ್‌ಡಿಇ ಆಸ್ಪತ್ರೆಯಲ್ಲಿ ಮಧುಮೇಹ ಪಾದರೋಗಕ್ಕೆ ಅತ್ಯಾಧುನಿಕ ಚಿಕಿತ್ಸಾ ಸೌಲಭ್ಯಗಳು ಕೈಗೆಟುಕುವ ದರದಲ್ಲಿ ಲಭ್ಯವಿದ್ದು, ಸಾರ್ವಜನಿಕರು ಇದರ ಪ್ರಯೋಜನ ಪಡೆಯಬೇಕು ಎಂದರು.ಶಿಬಿರದಲ್ಲಿ 120ಕ್ಕೂ ಹೆಚ್ಚು ಮಧುಮೇಹಿಗಳಿಗೆ ಉಚಿತವಾಗಿ ರಕ್ತದಲ್ಲಿನ ಸಕ್ಕರೆ ಪ್ರಮಾಣ, ಸ್ಪರ್ಶಜ್ಞಾನ, ಕಂಪನಜ್ಞಾನ ಹಾಗೂ ಪಾದದ ಒತ್ತಡ ಪರೀಕ್ಷೆ ನಡೆಸಿ ಅಗತ್ಯ ಚಿಕಿತ್ಸೆ ಮತ್ತು ಸಲಹೆ ನೀಡಲಾಯಿತು.

ಕಾರ್ಯಕ್ರಮದಲ್ಲಿ ಡಾ. ತೇಜಸ್ವಿನಿ ವಲ್ಲಭ, ಡಾ. ಸಂಜೀವ ಬೆಂಟೂರ ಸೇರಿದಂತೆ ವಿವಿಧ ವಿಭಾಗಗಳ ವೈದ್ಯರು ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.

WhatsApp Image 2025 11 17 at 3.21.17 PM
ಈ ದಿನ ಡೆಸ್ಕ್
+ posts

<p><iframe src="https://www.youtube.com/embed/8qwx4L0lKFQ?autoplay=1&mute=1&loop=1&playlist=8qwx4L0lKFQ&controls=0&modestbranding=1&showinfo=0" width="560" height="315" frameborder="0" allowfullscreen="allowfullscreen"></iframe></p>

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಧಾರವಾಡ | ತಂದೆ-ತಾಯಿ, ಶಿಕ್ಷಕರನ್ನು ಗೌರವದಿಂದ ಕಾಣಬೇಕು: ಅಧ್ಯಕ್ಷ ಗೋಪಾಲ್ ದೊಡ್ಡಮನಿ

"ಮಕ್ಕಳಾದವರು ತಂದೆ-ತಾಯಿ ಹಾಗೂ ಶಿಕ್ಷಕರನ್ನು ಗೌರವದಿಂದ ಕಾಣಬೇಕು. ಉತ್ತಮ ಶಿಕ್ಷಣ ಪಡೆದು...

ರಾಯಚೂರು | ದೇವಸುಗೂರಿನಲ್ಲಿ ಶಾಸಕ ಬಸನಗೌಡ ದದ್ದಲ್ ನೇತೃತ್ವದಲ್ಲಿ ಪ್ರಜಾ ಸೇವೆ ಕಾರ್ಯಕ್ರಮ

ಗ್ರಾಮೀಣ ಶಾಸಕ ಬಸನಗೌಡ ದದ್ದಲ್ ಅವರ ನೇತೃತ್ವದಲ್ಲಿ ಜನರ ಮನೆಬಾಗಿಲಿಗೆ ಆಡಳಿತವನ್ನು...

ತುಂಗಭದ್ರಾ ಎಡದಂಡೆ ನಾಲೆಗೆ ನೀರು ಹರಿಸಿ ಇಲ್ಲವೇ ಎಕರೆಗೆ 50,000 ಪರಿಹಾರ ನೀಡಿ: ರೈತರ ಒತ್ತಾಯ

ತುಂಗಭದ್ರಾ ಜಲಾಶಯದಿಂದ ರೈತರ ಕೃಷಿ ಬೆಳೆಗಳ ರಕ್ಷಣೆಗಾಗಿ ಡಿಸೆಂಬರ್ 31ರವರೆಗೆ ತುಂಗಭದ್ರಾ...

ಬಾಗೇಪಲ್ಲಿ | ಮಾದಕ ವಸ್ತುಗಳ ವಿರುದ್ಧ ವಿದ್ಯಾರ್ಥಿಗಳು ಜಾಗೃತರಾಗಬೇಕು

ಸಮಾಜದಲ್ಲಿ ಮಾದಕ ವಸ್ತುಗಳ ಬಳಕೆ ಮತ್ತು ಅಕ್ರಮ ಸಾಗಾಟ ತಡೆಗಟ್ಟುವಲ್ಲಿ ಪೊಲೀಸ್...