ಯಾದಗಿರಿ | ದಲಿತರ ಮೇಲೆ ಸುಳ್ಳು ಕೇಸು: ಸುರಪುರ ಇನ್ಸ್‌ಪೆಕ್ಟರ್‌ ಅಮಾನತಿಗೆ ಒತ್ತಾಯಿಸಿ ಪ್ರತಿಭಟನೆ

Date:

ನೀಲಿ ಧ್ವಜವನ್ನು ಕೆಳಗೆ ಇಳಿಸುವ ಮೂಲಕ ಧ್ವಜಕ್ಕೆ ಅವಮಾನಿಸಿರುವುದನ್ನು ಖಂಡಿಸಿ ಮತ್ತು ದಲಿತರ ಮೇಲೆ ಸುಳ್ಳು ಕೌಂಟರ್ ಕೇಸು ಮಾಡಿದ್ದಾರೆಂಬ ಹಿನ್ನೆಲೆಯಲ್ಲಿ ಸುರಪುರ ಇನ್ಸ್‌ಪೆಕ್ಟರ್‌ ಉಮೇಶ್ ಅವರನ್ನು ಅಮಾನತುಗೊಳಿಸುವಂತೆ ಒತ್ತಾಯಿಸಿ ಯಾದಗಿರಿ ಜಿಲ್ಲೆಯ ಸುರಪುರದಲ್ಲಿ ದಲಿತ ಸಂಘಟನೆಗಳ ವತಿಯಿಂದ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು.

- Advertisement -

ದಲಿತ ಸಾಮೂಹಿಕ ಸಂಘಟನೆಗಳ ಒಕ್ಕೂಟ ಸುರಪುರ ಮತ್ತು ಸಮಸ್ತ ದಲಿತ ಸಮಾಜ ಸುರಪುರ ವತಿಯಿಂದ ಬೃಹತ್ ಪ್ರತಿಭಟನೆ ಮೆರವಣಿಗೆಯ ಮೂಲಕ ಡಾ ಬಿ ಆರ್ ಅಂಬೇಡ್ಕರ್ ವೃತ್ತದಿಂದ ಮಾರ್ಕೆಟ್ ಮಾರ್ಗವಾಗಿ ಸುರಪುರ ತಹಶೀಲ್ದಾರ್ ಅವರ ಮುಖಾಂತರ ಸರ್ಕಾರಕ್ಕೆ ಮನವಿ ಸಲ್ಲಿಸಿದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಸೂಕ್ತ ಸಮಯಕ್ಕಾಗಿ ಕಾಯುತ್ತಲೇ ಇರುವ ಕುಮಾರಸ್ವಾಮಿ!

“ರಾಜ್ಯದಲ್ಲಿ ನಡೆಯುತ್ತಿರುವ ಅಕ್ರಮ, ಅವ್ಯವಹಾರದ ಬಗ್ಗೆ ಜನರ ಮುಂದೆ ಇಡುವುದರಲ್ಲಿ ಯಾವುದೇ ರಾಜಿಯಿಲ್ಲ. ರಾಜ್ಯದಲ್ಲಿನ ಘಟನೆ ಬಗ್ಗೆ ಬಾಯಿ ಮುಚ್ಚಿಕೊಂಡಿರಲು ಆಗಲ್ಲ" ಎಂದಿದ್ದಾರೆ ಕುಮಾರಸ್ವಾಮಿ. ಈ ಬಾರಿಯಾದರೂ ಅಲ್ಲೋಲ ಕಲ್ಲೋಲ ಸೃಷ್ಟಿಸುತ್ತಾರೆಯೇ? ‘ಸ್ಪೋಟಕ ಹೇಳಿಕೆ’,...

ಹಬ್ಬ ಅಂದ್ರ ಕೂಡಿಸಬೇಕ್ರಿ, ರಾಜಕೀಯದ ವಿಷ ಬೀಜ ಬಿತ್ತೋದಲ್ಲ…

ಹಬ್ಬಗಳು ಬಾಲ್ಯದ ಆ ಎತ್ತಿನ ಬಂಡಿಯ ನೆನಪಿನಂತೆ ಎಲ್ಲರನ್ನೂ ಮುಗ್ಧವಾಗಿ ಕೂಡಿಸಬೇಕೇ ಹೊರತು, ಮತ್ತೊಬ್ಬರ ಧರ್ಮವನ್ನು ಕೆಣಕಿ, ರಾಜಕೀಯ ಲಾಭಕ್ಕಾಗಿ ಬೀದಿಯಲ್ಲಿ ಬೆಂಕಿ ಹಚ್ಚುವ ಪ್ರವೃತ್ತಿ ಧರ್ಮವೂ ಅಲ್ಲ, ಭಾರತೀಯ ಸಂಸ್ಕೃತಿಯೂ ಅಲ್ಲ....

ಬಳ್ಳಾರಿ ಚಲೋ | ಕಾಂಗ್ರೆಸ್ ಭದ್ರಕೋಟೆಯಲ್ಲಿ ಬಿಜೆಪಿಯ ಪಾದಯಾತ್ರೆ:...

ಬಳ್ಳಾರಿ ಚಲೋ ಒಂದೆಡೆ ಎಸ್‌ಟಿ ಮತಗಳನ್ನು ಮರಳಿ ಸೆಳೆಯಲು ಶ್ರೀರಾಮುಲು ಅವರನ್ನು ಮುನ್ನಲೆಗೆ ತರುವ ಬಿಜೆಪಿ ತಂತ್ರವಾದರೆ, ಮತ್ತೊಂದೆಡೆ ವಿಜಯೇಂದ್ರ ನಾಯಕತ್ವದ ಶಕ್ತಿ ಪ್ರದರ್ಶನ ಮತ್ತು ಮೈತ್ರಿ ಪಕ್ಷ ಜೆಡಿಎಸ್‌ ಪಾದಯಾತ್ರೆಗೆ ಗೈರಾಗಿರುವಂತಹ...

ಯಾದಗಿರಿ ಜಿಲ್ಲೆಯ ಸುರಪುರ ಪಟ್ಟಣದ ಡಾ.ಬಿ ಆರ್ ಅಂಬೇಡ್ಕರ್ ವೃತ್ತದ ಸುತ್ತ ಇರುವ ಸರ್ವೆ ನಂ. 7/1 ರಲ್ಲಿ ಹೆಚ್.ಕೆ.ಇ. ಸೊಸೈಟಿಯವರು ಒತ್ತುವರಿ ಮಾಡಿದ ಸರ್ಕಾರಿ ಖಾರಿಜ್ ಖಾತಾ ಭೂಮಿಯನ್ನು ಸರ್ಕಾರದಿಂದ ಸರ್ವೆ ಮಾಡಿ ಒತ್ತುವರಿಯಾದ 2 ಎಕರೆ 26 ಗುಂಟೆ ಜಾಗದಲ್ಲಿ ಡಾ. ಅಂಬೇಡ್ಕರ್‌ರವರ ಹೆಸರಲ್ಲಿ ಉದ್ಯಾನವನ, ಸಾಂಸ್ಕೃತಿಕ ಭವನ, ಗ್ರಂಥಾಲಯ ನಿರ್ಮಾಣಕ್ಕಾಗಿ ಭೂಮಿ ಮಂಜೂರು ಮಾಡಲು ಒತ್ತಾಯಿಸಿದರು.

ಅಧಿಕಾರ ದುರುಪಯೋಗ ಮಾಡುತ್ತಿರುವ ಸುರಪುರ ಪೋಲಿಸ್ ಠಾಣೆಯ ಪೊಲೀಸ್ ಇನ್ಸ್‌ಪೆಕ್ಟರ್ ಉಮೇಶ ನಾಯಕ್ ಇವರನ್ನು ಅಮಾನತು ಮಾಡಬೇಕು ಹಾಗೂ ದಲಿತರ ಮೇಲೆ ಸುಳ್ಳು ಕೌಂಟರ್ ಕೇಸ್ ದಾಖಲಿಸಿದ್ದನ್ನು ರದ್ದು ಪಡಿಸಬೇಕು. ಕೆಂಭಾವಿ ಮುಖ್ಯ ರಸ್ತೆಯ ಬದಿಯಲ್ಲಿ ಇರುವ [ದರ್ಗಾ ಮತ್ತು ಸಾರ್ವಜನಿಕ ಭಾವಿಯನ್ನು ಹೊರತುಪಡಿಸಿ] ಅನಧಿಕೃತ ಅಂಗಡಿ ಮುಗ್ಗಟ್ಟುಗಳನ್ನು ತೆರೆವುಗೊಳಿಸಬೇಕು ಎಂದು ದಲಿತ ಸಾಮೂಹಿಕ ಸಂಘಟನೆಗಳ ಒಕ್ಕೂಟ ಸುರಪುರ, ಮತ್ತು ಸಮಸ್ತ ದಲಿತ ಸಮಾಜದ ಮುಖಂಡರು ಒತ್ತಾಯಿಸಿದರು.

protest 18

ಮನವಿ ಸಲ್ಲಿಸಿದ ಬಳಿಕ ಮಾತನಾಡಿದ ಸಂಚಾಲಕ ಮಲ್ಲಿಕಾರ್ಜುನ ಕ್ರಾಂತಿ, “ನೀಲಿ ಧ್ವಜವನ್ನು ಕೆಳಗೆ ಇಳಿಸುವ ಮೂಲಕ ಧ್ವಜಕ್ಕೆ ಅವಮಾನಿಸಿದವರ ವಿರುದ್ಧ ಕ್ರಮ ಕೈಗೊಳ್ಳಬೇಕು. ಧ್ವಜ ಇಳಿಸುವಾಗ ಸ್ಥಳದಲ್ಲಿಯೇ ಇದ್ದ ಪಿಐ ಉಮೇಶ್ ನಾಯಕ ಅವರನ್ನು ಅಮಾನತುಗೊಳಿಸಬೇಕು ಅಥವಾ ವರ್ಗಾವಣೆ ಮಾಡಬೇಕು. ನೀಲಿ ಧ್ವಜ ಹಾಕಿರುವ ಸ್ಥಳದ ಸರ್ವೇ ಮಾಡಿಸಿ 2 ಎಕರೆ 26 ಗುಂಟೆ ಭೂಮಿಯನ್ನು ಅಂಬೇಡ್ಕ‌ರ್ ಸಾಂಸ್ಕೃತಿ ಭವನ, ಗ್ರಂಥಾಲಯ ನಿರ್ಮಾಣಕ್ಕೆ ಮಂಜೂರು ಮಾಡಬೇಕು. ಬಸ್ ನಿಲ್ದಾಣದ ಮುಂಭಾಗದಲ್ಲಿನ ಮೈದಾನಕ್ಕೆ ಹೊಂದಿಕೊಂಡಿರುವ ಎಲ್ಲ ಅಂಗಡಿಗಳನ್ನು ತೆರವುಗೊಳಿಸಬೇಕು. ದಲಿತರ ಮೇಲೆ ದಾಖಲಿಸಿರುವ ಸುಳ್ಳು ಕೇಸು ಕೈಬಿಡಬೇಕು” ಎಂದು ಆಗ್ರಹಿಸಿದರು.

ಅಲ್ಲದೆ, ನಮ್ಮ ಹೋರಾಟ ಯಾವುದೇ ಜಾತಿಯ ವಿರುದ್ಧವಲ್ಲ. ಧ್ವಜ ಇಳಿಸಿದವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಈ ವೇಳೆ ಮುಖಂಡರಾದ ನಿವೃತ್ತ ಪ್ರೊಫೆಸರ್ ಮಾನು ಗುರಿಕಾರ, ನಾಗಣ್ಣ ಕಲ್ಲದೇವನಹಳ್ಳಿ ಮಾನಪ್ಪ ಕಟ್ಟಿಮನಿ, ವೆಂಕಟೇಶ ಹೊಸ್ಮನಿ, ಭೀಮರಾಯ ಸಿಂದಗೇರಿ, ಚಂದ್ರಶೇಖರ ಜಡಿಮರಳ, ಆದಪ್ಪ ಹೊಸ್ಮನಿ, ರಾಹುಲ್ ಹುಲಿಮನಿ, ಮೂರ್ತಿ ಬೊಮ್ಮನಹಳ್ಳಿ ಶ್ರೀನಿವಾಸ ನಾಯಕ ದೊರೆ ಬೊಮ್ಮನಹಳ್ಳಿ, ಮಾಳಪ್ಪ ಕಿರದಳ್ಳಿ ನಿಂಗಣ್ಣ ಗೋನಾಲ, ಮಲ್ಲಿಕಾರ್ಜುನ ತಳ್ಳಳ್ಳಿ ಶಿವಲಿಂಗ ಹಸನಾಪುರ ಇತರರು ಮಾತನಾಡಿದರು.

ಪ್ರತಿಭಟನೆಯಲ್ಲಿ ಗೋಪಾಲ ವಜ್ಜಲ್, ರಾಜು ಕಟ್ಟಿಮನಿ, ಶಿವಶಂಕರ ಹೊಸ್ಮನಿ, ಮಹಾದೇವ ಚಲವಾದಿ, ತಿಪ್ಪಣ್ಣ ಶೆಳ್ಳಗಿ, ಮಾನಪ್ಪ ಶೆಳ್ಳಗಿ, ಶರಣು ತಳವಾರಗೇರ, ಶರಣು ಚಂದ್ಲಾಪುರ, ಬಸವರಾಜ ದೊಡ್ಡನಿ, ಮಹೇಶ ಯಾದಗಿರಿ, ರವಿ ಬೊಮ್ಮನಹಳ್ಳಿ, ರಾಜು ದೊಡ್ಡನಿ, ವಿಶ್ವನಾಥ ಹೊಸ್ಮನಿ, ಮಲ್ಲು ಮುಷ್ಕಳ್ಳಿ, ಹಣಮಂತ ಭದ್ರಾವತಿ, ವೀರಭದ್ರ ತಳವಾರಗೇರ, ವೈಜನಾಥ ಹೊಸ್ಮನಿ, ರವಿ ಬೊಮ್ಮನಹಳ್ಳಿ, ಪರಶು ನಾಟೇಕಾರ, ಜೆಟ್ಟೆಪ್ಪ ನಾಗರಾಳ, ಶೇಖರ ಮಂಗಳೂರ, ಮಂಜುನಾಥ ಹೊಸ್ಮನಿ, ಪ್ರಭು ಕಟ್ಟಿಮನಿ, ಜೆಟ್ಟೆಪ್ಪ ಹಾದಿಮನಿ, ಹಣಮಂತ ಮಾನಸಗಲ್, ಹಣಮಂತ ರತ್ನಾಳ, ನಾಗೂ ಗೋಗಿಕೇರ, ಗೋಪಾಲ ಗೋಗಿಕೇರ, ಭೀಮಣ್ಣ ಅಡ್ಡೆಡಗಿ, ನಾಗರಾಜ ಓಕಳಿ, ಪ್ರಕಾಶ ಕೆಂಭಾವಿ, ಶಂಕರ ಗೋನಾಲ, ಶರಣಪ್ಪ ತೆಗ್ಗೆಳ್ಳಿ, ಚಿದಾನಂದ ಹೆಬ್ಬಾಳ, ಮಲ್ಲಿಕಾರ್ಜುನ ತಳವಾರಗೇರ, ಅಂಬ್ರೇಶ ದಿಗ್ಗಿ ಸೇರಿದಂತೆ ನೂರಾರು ಜನ ಭಾಗವಹಿಸಿದ್ದರು.

WhatsApp Image 2025 11 17 at 3.21.38 PM
ಈ ದಿನ ಡೆಸ್ಕ್
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಯಾದಗಿರಿ | ದಲಿತ ಸಭೆಯೋ, ಚಹಾ, ಫೋಟೋ ಕೂಟವೋ? ಅಧಿಕಾರಿಗಳ ವಿರುದ್ಧ ವಿಶ್ವ ನಾಟೇಕಾರ್ ಕಿಡಿ

ದಲಿತರ ಮೇಲಿನ ದೌರ್ಜನ್ಯ, ದಬ್ಬಾಳಿಕೆ, ಸಾಮಾಜಿಕ ಅಸ್ಪೃಶ್ಯತೆ, ಭೂಮಿ ಹಾಗೂ ಮೂಲಭೂತ...

​ಚಿಂತಾಮಣಿ | ಮಳೆ ಮುನ್ಸೂಚನೆ, ಕಲ್ಯಾಣ ಮಂಟಪದ ಅಭಾವ:ಸೆ.18ರ ಜೆಡಿಎಸ್ ಬೃಹತ್ ಸಮಾವೇಶ ಚಿಂತಾಮಣಿಗೆ ಸ್ಥಳಾಂತರ

ನಗರದ ಹೊರವಲಯದ ಜೆ.ಕೆ.ಭವನದಲ್ಲಿ ಇಂದು ತುರ್ತು ಪತ್ರಿಕಾಗೋಷ್ಠಿಯನ್ನು ಆಯೋಜಿಸಲಾಗಿತ್ತು. ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ...

ಉಡುಪಿ | ಕಸ್ತೂರಿರಂಗನ್ ವರದಿ: ಸೆ.18ರಂದು ಹೆಬ್ರಿಯಲ್ಲಿ ಗ್ರಾಮಸ್ಥರೊಂದಿಗೆ ಸಿಎಂ ಡಿಕೆಶಿ ಸಂವಾದ

ಕಸ್ತೂರಿರಂಗನ್ ವರದಿಗೆ ಸಂಬಂಧಿಸಿದಂತೆ ಸಾಧಕ-ಬಾಧಕಗಳ ಕುರಿತು ಜಿಲ್ಲೆಯ ಗ್ರಾಮಸ್ಥರ ಅಭಿಪ್ರಾಯ ಹಾಗೂ...

ರಾಯಚೂರು | ಯುರೋಪಿನ ಫ್ಯಾಸಿಸಂಗಿಂತ ಭಾರತದ ಫ್ಯಾಸಿಸಂ ವಿಭಿನ್ನ: ಪಿಜೆ ಜೇಮ್ಸ್

ಯುರೋಪಿನ ಫ್ಯಾಸಿಸಂಗಿಂತ ಭಾರತದ ಫ್ಯಾಸಿಸಂ ವಿಭಿನ್ನ ಸ್ವರೂಪ ಹೊಂದಿದ್ದು, ಮುಸ್ಲಿಂ ವಿರೋಧಿ...