ಯಾದಗಿರಿ | ಎಸ್‌ಐಆರ್ ಕುರಿತು ಸಂವಾದ ಗೋಷ್ಠಿ: ಪೌರತ್ವ ಪ್ರಶ್ನೆ, ಪ್ರಭುತ್ವದ ಹುನ್ನಾರಗಳ ವಿರುದ್ಧ ತೀವ್ರ ಚರ್ಚೆ

Date:

ಎಸ್‌ಐಆರ್ ಸಂಬಂಧಿತ ಪೌರತ್ವ ಪ್ರಶ್ನೆ ಹಾಗೂ ಪ್ರಭುತ್ವದ ಹುನ್ನಾರಗಳ ಕುರಿತು ಶಹಾಪುರ ಪಟ್ಟಣದಲ್ಲಿ ಭಾನುವಾರ ವಿಸ್ತೃತ ಸಂವಾದ ಗೋಷ್ಠಿ ನಡೆಸಲಾಯಿತು.

- Advertisement -

ಪಟ್ಟಣದ ಮಾತೋಶ್ರಿ ಫ್ಯಾಮಿಲಿ ರೆಸ್ಟೋರೆಂಟ್‌ನಲ್ಲಿ ಈ ಕಾರ್ಯಕ್ರಮವನ್ನು ಯಾದಗಿರಿ ಮೇ ಸಾಹಿತ್ಯ ಮೇಳ ಬಳಗ, ದಲಿತ, ಪ್ರಗತಿಪರ, ರೈತ, ಅಲ್ಪಸಂಖ್ಯಾತ ಹಾಗೂ ಕಾರ್ಮಿಕ ಸಂಘಟನೆಗಳು ಮತ್ತು ಡಾ. ಬಿ.ಆರ್. ಅಂಬೇಡ್ಕರ್ ಅವರ 135ನೇ ಜಯಂತೋತ್ಸವ ಸಮಿತಿ, ಶಹಾಪುರ ಇವರ ನೇತೃತ್ವದಲ್ಲಿ ಹಮ್ಮಿಕೊಳ್ಳಲಾಯಿತು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಡಾ. ಟಿ.ಎಸ್.‌ ಚನ್ನೇಶ್‌ ಸರಣಿ | ವೈದ್ಯಕೀಯ ನೊಬೆಲ್‌...

ನಮ್ಮ ಮೆದುಳು, ಭಾವನೆಗಳನ್ನು, ವರ್ತನೆಗಳನ್ನು ಮತ್ತು ದೈಹಿಕ ಕಾರ್ಯಗಳನ್ನು ಹೇಗೆ ನಿಯಂತ್ರಿಸುತ್ತದೆ ಎಂಬುದನ್ನು ಸಂಶೋಧನೆಯಿಂದ ಬಿಡಿಸಿಟ್ಟು 2026ರ ವೈದ್ಯಕೀಯ ನೊಬೆಲ್‌ ಪ್ರಶಸ್ತಿಗೆ ಪಾತ್ರರಾದ ಮೂವರು ಸಂಶೋಧಕರು ಮತ್ತು ಸಂಶೋಧನೆಯ ಸುತ್ತಲಿನ ವಿಶ್ಲೇಷಣಾತ್ಮಕ ಬರಹ ಈ...

ಪೊಲೀಸ್ ಸುಧಾರಣೆ | ಹೈಟೆಕ್ ಪೊಲೀಸಿಂಗ್ Vs ವಾಸ್ತವ:...

ಪೊಲೀಸ್‌ ಇಲಾಖೆಯನ್ನು ಆಧುನೀಕರಿಸಲು AI, ಸೈಬರ್‌ ತಂತ್ರಜ್ಞಾನ, ಡಿಜಿಟಲ್‌ ತನಿಖೆ, ಸಿಸಿಟಿವಿ, ಬಾಡಿ ಕ್ಯಾಮೆರಾ ಸೇರಿದಂತೆ ಹಲವು ತಂತ್ರಜ್ಞಾನಗಳು ಪ್ರವೇಶಿಸುತ್ತಿವೆ. ಆದರೆ ಹೈಟೆಕ್‌ ಆಗುತ್ತಿರುವ ಪೊಲೀಸ್‌ ವ್ಯವಸ್ಥೆ ಜನರ ಬದುಕಿಗೆ ಎಷ್ಟು ಹತ್ತಿರವಾಗುತ್ತಿದೆ?...

ಐದು ಭಾಷೆ, ಆರು ದಶಕ, ಅನಂತ ಪ್ರಯೋಗ: ಭಾರತೀಯ...

ಬದುಕಿನ ಕೊನೆಯ ಉಸಿರಿನವರೆಗೂ ಕೇವಲ ಸಿನಿಮಾವನ್ನೇ ಶ್ವಾಸವಾಗಿಸಿಕೊಂಡಿದ್ದ, 95ನೇ ವಯಸ್ಸಿನಲ್ಲೂ ಹೊಸ ಕಥೆಯ ಕನಸು ಕಾಣುತ್ತಿದ್ದ ಭಾರತೀಯ ಚಿತ್ರರಂಗದ ಅಪ್ರತಿಮ ದಾರ್ಶನಿಕ ಸಿಂಗೀತಂ ಶ್ರೀನಿವಾಸರಾವ್ ನಮ್ಮೊಂದಿಗಿಲ್ಲ. ಆರು ದಶಕಗಳ ಕಾಲ ತಮ್ಮ ಅನಂತ...

ಕಾರ್ಯಕ್ರಮದಲ್ಲಿ ಪ್ರಸ್ತಾವಿಕವಾಗಿ ಆರ್. ಚನ್ನಬಸ್ಸು ವನದುರ್ಗ ಮಾತನಾಡಿ, “ಮತದಾರರ ಪಟ್ಟಿಯ ಪರಿಷ್ಕರಣೆ ಎಂಬ ಹೆಸರಿನಲ್ಲಿ ಎಸ್‌ಐಆರ್ ಪ್ರಕ್ರಿಯೆ ಮೂಲಕ ಎಸ್‌ಸಿ, ಎಸ್‌ಟಿ ಹಾಗೂ ಅಲ್ಪಸಂಖ್ಯಾತರನ್ನು ಮತಪಟ್ಟಿಯಿಂದ ಹೊರಹಾಕುವ ಸಂಚು ನಡೆಯುತ್ತಿದೆ” ಎಂದು ಆರೋಪಿಸಿದರು. ಇದು ಪ್ರಜಾಪ್ರಭುತ್ವದ ಮೂಲ ತತ್ವಗಳಿಗೆ ಧಕ್ಕೆಯುಂಟು ಮಾಡುವ ಪ್ರಯತ್ನವಾಗಿದೆ” ಎಂದು ಅವರು ಅಭಿಪ್ರಾಯಪಟ್ಟರು.

1594473

ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸ ನೀಡಿದ ಚಿಂತಕ ಶಿವಸುಂದರ ಅವರು, “ಎಸ್‌ಐಆರ್ ನಿಶಸ್ತ್ರ ಜನರ ಮೇಲೆ ನಡೆಯುತ್ತಿರುವ ದಾಳಿಯಂತಾಗಿದೆ. ಇದು ಸಾಮಾನ್ಯ ಆಡಳಿತಾತ್ಮಕ ಕ್ರಮವಲ್ಲ, ವ್ಯವಸ್ಥಿತ ಮಿಷನ್ ಆಗಿದೆ” ಎಂದು ಕಿಡಿಕಾರಿದರು. 1947–49ರ ಸಂವಿಧಾನ ರಚನಾ ಕಾಲಘಟ್ಟವನ್ನು ಉಲ್ಲೇಖಿಸಿ, ಅಸಮಾನತೆಯ ವಿರುದ್ಧ ನಡೆದ ಮಹತ್ವದ ಕ್ರಾಂತಿಯ ಫಲವೇ ಭಾರತೀಯ ಸಂವಿಧಾನ ಎಂದು ಹೇಳಿದರು. “ಒಂದು ಓಟು–ಒಂದು ಮೌಲ್ಯ” ಎಂಬ ಪ್ರಜಾತಾಂತ್ರಿಕ ತತ್ವವನ್ನು ಡಾ. ಬಿ.ಆರ್. ಅಂಬೇಡ್ಕರ್ ಪ್ರತಿಪಾದಿಸಿದ್ದು, ಮತಪಟ್ಟಿಯೇ ಪ್ರಜಾಪ್ರಭುತ್ವದ ಮೂಲಾಧಾರವಾಗಿದೆ” ಎಂದು ಅವರು ತಿಳಿಸಿದರು.

1594363

“ಎಸ್‌ಐಆರ್ ಪ್ರಕ್ರಿಯೆ ಅಸಂವಿಧಾನಿಕವಾಗಿದ್ದು, ಚುನಾವಣಾ ಕಾಯ್ದೆಯಲ್ಲಿ ಇದಕ್ಕೆ ಸ್ಪಷ್ಟ ಅವಕಾಶವಿಲ್ಲ ಎಂದು ಅವರು ಅಭಿಪ್ರಾಯಪಟ್ಟರು. 2003ರಲ್ಲಿ ಮತದಾರರ ಪಟ್ಟಿಯ ಪರಿಷ್ಕರಣೆಗೆ ಸಂಬಂಧಿಸಿದ ತಿದ್ದುಪಡಿ ಬಳಿಕ ನಾಗರಿಕತ್ವದ ಪ್ರಶ್ನೆ ಉದ್ಭವಿಸಿದ್ದು, “ನೀವು ಈ ದೇಶದ ನಾಗರಿಕರೇ?” ಎಂಬ ಪ್ರಶ್ನೆಯನ್ನು ಎತ್ತುವ ಪ್ರಕ್ರಿಯೆಯಾಗಿದೆ” ಎಂದು ವಿವರಿಸಿದರು.

“ಇದು ಕೇವಲ ಮತದಾರರ ಪಟ್ಟಿಯ ಪರಿಷ್ಕರಣೆ ಅಲ್ಲ; ನಾಗರಿಕತ್ವದ ಪರಿಶೀಲನೆಯಾಗಿದೆ. ಸಾಮಾನ್ಯ ಜನರು ಸಾಬೀತುಪಡಿಸಲು ಕಷ್ಟವಾಗುವ ರೀತಿಯಲ್ಲಿ ದಾಖಲೆಗಳನ್ನು ಕೇಳಲಾಗುತ್ತಿದೆ” ಎಂದು ಅವರು ಹೇಳಿದರು. ಸಂವಿಧಾನದ ಆರ್ಟಿಕಲ್ 5ರ ಪ್ರಕಾರ ಈ ದೇಶದಲ್ಲಿ ಹುಟ್ಟಿದವರೆಲ್ಲ ಭಾರತೀಯರು ಎಂಬುದನ್ನು ಉಲ್ಲೇಖಿಸಿದರು.

“ಎನುಮರೇಷನ್ ಪ್ರಕ್ರಿಯೆಯಲ್ಲಿ 11 ವಿಧದ ದಾಖಲೆಗಳನ್ನು ಕೇಳಲಾಗುತ್ತಿದ್ದು, ಕೇಂದ್ರ ಸರ್ಕಾರದ ನೌಕರರ ದಾಖಲೆ, 1987ರ ಹಿಂದಿನ ಬ್ಯಾಂಕ್/ಪೋಸ್ಟ್ ಆಫೀಸ್ ವ್ಯವಹಾರ ದಾಖಲೆಗಳು, ಜನನ ಪ್ರಮಾಣಪತ್ರ, ಪಾಸ್‌ಪೋರ್ಟ್, ಆಸ್ತಿ ದಾಖಲೆಗಳು, ಶೈಕ್ಷಣಿಕ ಪ್ರಮಾಣಪತ್ರಗಳು, ಎನ್‌ಆರ್‌ಸಿ, ಅರಣ್ಯ ಹಕ್ಕುಪತ್ರ, ವಾಸ ಹಾಗೂ ಜಾತಿ ಪ್ರಮಾಣಪತ್ರ ಸೇರಿದಂತೆ ಹಲವಾರು ದಾಖಲೆಗಳನ್ನು ಸಲ್ಲಿಸುವಂತೆ ಸೂಚಿಸಲಾಗಿದೆ. ಇವುಗಳನ್ನು ಒದಗಿಸುವುದು ಸಾಮಾನ್ಯ ಜನರಿಗೆ, ವಿಶೇಷವಾಗಿ ಹಿಂದುಳಿದ ವರ್ಗದವರಿಗೆ ಕಷ್ಟಕರವಾಗಿದೆ ಎಂದು ಹೇಳಿದರು.

1594356

ಹೆಸರುಗಳಲ್ಲಿ ಅಲ್ಪ ವ್ಯತ್ಯಾಸಗಳಿದ್ದರೂ ಮತದಾರರನ್ನು ಪರಿಷ್ಕರಣೆಗೆ ಒಳಪಡಿಸುವುದು, ದಲಿತರು, ಆದಿವಾಸಿಗಳು, ಅಲ್ಪಸಂಖ್ಯಾತರು ಹಾಗೂ ಮಹಿಳೆಯರನ್ನು ಗುರುತಿಸಿ ಮತಪಟ್ಟಿಯಿಂದ ಹೊರಹಾಕುವ ಪ್ರಯತ್ನವಾಗಿದೆ ಎಂದು ಆರೋಪಿಸಿದರು. “ಇದು ಬದುಕಿರುವ ವ್ಯಕ್ತಿಯನ್ನು ಸಾಮಾಜಿಕವಾಗಿ ಅಳಿಸುವಂತಹ ಕ್ರಮವಾಗಿದೆ” ಎಂದು ಅವರು ಕಿಡಿಕಾರಿದರು.

ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ಅವರು, “ನರೇಂದ್ರ ಮೋದಿಯವರು ಹಿಟ್ಲರ್ ಶೈಲಿಯ ಆಡಳಿತ ಕ್ರಮಗಳನ್ನು ಅನುಸರಿಸುತ್ತಿದ್ದಾರೆ ಎಂದು ಆರೋಪಿಸಿದರು. ಸುಮಾರು 15 ಕೋಟಿ ಜನರು ನಾಗರಿಕತ್ವ ಕಳೆದುಕೊಳ್ಳುವ ಅಪಾಯವಿದೆ. ಎಸ್‌ಐಆರ್ ರಾಜಕೀಯ ಉದ್ದೇಶ ಹೊಂದಿದ ಪ್ರಕ್ರಿಯೆಯಾಗಿದೆ” ಎಂದು ಅವರು ಹೇಳಿದರು.

ಚುನಾವಣಾ ಆಯೋಗದ ಪಾತ್ರವನ್ನೂ ಪ್ರಶ್ನಿಸಿ, ಸಂವಿಧಾನದ ಆರ್ಟಿಕಲ್ 324 ಪ್ರಕಾರ ಸ್ವತಂತ್ರ ಸಂಸ್ಥೆಯಾಗಬೇಕಾದ ಆಯೋಗವು ಆಡಳಿತದ ಪ್ರಭಾವಕ್ಕೆ ಒಳಗಾಗಿದೆ ಎಂದು ಆರೋಪಿಸಿದರು. “ಚುನಾವಣಾ ಆಯೋಗವನ್ನು ಸಂಪೂರ್ಣವಾಗಿ ಹೈಜೆಕ್ ಮಾಡಲಾಗಿದೆ” ಎಂದು ಅವರು ಟೀಕಿಸಿದರು.

ಅಧ್ಯಕ್ಷತೆ ವಹಿಸಿದ್ದ ಮರೆಪ್ಪ ಚಟ್ಟೇಕರ್ ಮಾತನಾಡಿ, “ಎಸ್‌ಐಆರ್ ಅತ್ಯಂತ ಗಂಭೀರ ವಿಷಯವಾಗಿದ್ದು, ಜನರಲ್ಲಿ ಜಾಗೃತಿ ಮೂಡಿಸುವ ಅಗತ್ಯವಿದೆ” ಎಂದು ಹೇಳಿದರು.

1594361

ಈ ಸಂವಾದ ಗೋಷ್ಠಿಯಲ್ಲಿ ಗಿರೆಪ್ಪಗೌಡ ಬಾಣತಿಹಾಳ, ಮಲ್ಲಿಕಾರ್ಜುನ ಪೂಜಾರಿ, ಚನ್ನಪ್ಪ ಆನೇಗುಂದಿ, ನೀಲಕಂಠ ಬಡಿಗೇರ, ಶಿವಣ್ಣ ಇಜೇರಿ, ದವಲಸಾಬ್ ನಧಾಫ್, ರಾಜು ಅಣಬಿ, ಸಣ್ಣನಿಂಗಣ್ಣ ನಾಯ್ಕೋಡಿ, ಸೈಯ್ಯದ್ ಉದ್ದಿನ್ ಖಾದ್ರಿ, ಶರೀಫ್ ಬಿಳೆಯಲಿ, ನೀಲಮ್ಮ ಮಲ್ಲೆ, ಡಾ.ರವೀಂದ್ರನಾಥ ಹೊಸಮನಿ ಸೇರಿದಂತೆ ಅನೇಕರು ಭಾಗವಹಿಸಿ ಚರ್ಚೆಯಲ್ಲಿ ತೊಡಗಿಸಿಕೊಂಡರು.

1594355

ಇದನ್ನು ಓದಿದ್ದೀರಾ? ಕಲಬುರಗಿ ‌| ಟಿಪ್ಪರ್ ಚಾಲಕನಿಗೆ ಚಾಕು ಇರಿದ ಅಪರಿಚಿತ ವ್ಯಕ್ತಿ

ರಂಗನಾಥ ದೊರೆ ಕಾರ್ಯಕ್ರಮವನ್ನು ನಿರೂಪಿಸಿದರು. ಶರಣಬಸವ ಸ್ವಾಗತಿಸಿದರು, ವಿಶ್ವನಾಥ ನಾಟ್ಟೇಕರ್ ವಂದಿಸಿದರು ಹಾಗೂ ನಿಂಗಣ್ಣ ತಿಪ್ಪನಹಳ್ಳಿ ಕಾರ್ಯಕ್ರಮವನ್ನು ನಿರ್ವಹಿಸಿದರು. ಕಾರ್ಯಕ್ರಮದಲ್ಲಿ ವಿವಿಧ ಸಂಘಟನೆಗಳ ಮುಖಂಡರು, ಕಾರ್ಯಕರ್ತರು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ದಲಿತ ಮುಖಂಡರು, ಹಿಂದುಳಿದ ಸಮುದಾಯಗಳ ಮುಖಂಡರು, ಪ್ರಗತಿಪರ ಚಿಂತಕರು, ಅಲ್ಪಸಂಖ್ಯಾತರು, ವಿಚಾರವಂತರು, ಸಾಹಿತಿಗಳು, ಯುವಕರು, ಮಹಿಳೆಯರು ಒಳಗೊಂಡಂತೆ ಅನೇಕರು ಭಾಗವಹಿಸಿದರು.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಯಾದಗಿರಿ | ಎಕರೆಗೆ ₹25 ಸಾವಿರ ಬರ ಪರಿಹಾರ, ಕೃಷಿ ಸಾಲ ಸಂಪೂರ್ಣ ಮನ್ನಾ ಮಾಡುವಂತೆ ರೈತ ಸಂಘ ಆಗ್ರಹ

ಯಾದಗಿರಿ ಜಿಲ್ಲೆಯನ್ನು ಬರಪೀಡಿತ ಜಿಲ್ಲೆ ಎಂದು ಘೋಷಿಸಿರುವ ಹಿನ್ನೆಲೆಯಲ್ಲಿ ಪ್ರತಿ ರೈತರ...

ಯಾದಗಿರಿ | ಸಮರ್ಪಕ ಕೂಲಿ ಪಾವತಿಗೆ ಆಗ್ರಹ: ರಸ್ತಾಪುರ ಗ್ರಾಪಂ ಕಚೇರಿ ಎದುರು ರೈತ ಸಂಘ ಧರಣಿ

ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ಕೆಲಸ ಮಾಡಿರುವ...

ಯಾದಗಿರಿ | ಮೊಮ್ಮಗಳ ಮೇಲೆ ಲೈಂಗಿಕ ದೌರ್ಜನ್ಯಕ್ಕೆ ಯತ್ನ; ಅಜ್ಜನ ವಿರುದ್ಧ ಪೋಕ್ಸೋ ಪ್ರಕರಣ ದಾಖಲು

ಅಪ್ರಾಪ್ತ ಮೊಮ್ಮಗಳ ಮೇಲೆ ಲೈಂಗಿಕ ದೌರ್ಜನ್ಯಕ್ಕೆ ಯತ್ನಿಸಿದ ಆರೋಪದಡಿ 75 ವರ್ಷದ...

ಯಾದಗಿರಿ | ಟೈರ್ ಬ್ಲಾಸ್ಟ್‌ನ ಭೀಕರ ದುರಂತ; ತಾಯಿ, ಮಗಳು ಸೇರಿ ಮೂವರ ದಾರುಣ ಸಾವು

ಚಲಿಸುತ್ತಿದ್ದ ಕಾರಿನ ಟೈರ್ ಏಕಾಏಕಿ ಬ್ಲಾಸ್ಟ್‌ಗೆ ಪರಿಣಾಮ ಚಾಲಕನ ನಿಯಂತ್ರಣ ತಪ್ಪಿದ...