ಡಾಟಾದಂತೆ ಎಐ ಕೂಡ ಅಗ್ಗ, 10 ಲಕ್ಷ ಕೋಟಿ ರೂ. ಹೂಡಿಕೆ ಘೋಷಿಸಿದ ಮುಖೇಶ್​ ಅಂಬಾನಿ

Date:

ದೇಶದ ಅತ್ಯಂತ ಪ್ರತಿಷ್ಠಿತ ರಿಲಯನ್ಸ್ ಇಂಡಸ್ಟ್ರೀಸ್ ಗ್ರೂಪ್ ಕೃತಕ ಬುದ್ಧಿಮತ್ತೆ (ಎಐ) ಕ್ಷೇತ್ರದಲ್ಲಿ ಕ್ರಾಂತಿ ಸೃಷ್ಟಿಸಲು ಮುಂದಾಗಿದೆ. ಎಐ ವಿಸ್ತರಣೆಗಾಗಿ ಮುಂದಿನ ಏಳು ವರ್ಷಗಳಲ್ಲಿ ರಿಲಯನ್ಸ್ ಮತ್ತು ಜಿಯೋ ಜಂಟಿಯಾಗಿ ಬರೋಬ್ಬರಿ 10 ಲಕ್ಷ ಕೋಟಿ ರೂಪಾಯಿಗಳನ್ನು ಹೂಡಿಕೆ ಮಾಡಲಿವೆ ಎಂದು ಸಂಸ್ಥೆಯ ಅಧ್ಯಕ್ಷ ಹಾಗೂ ವ್ಯವಸ್ಥಾಪಕ ನಿರ್ದೇಶಕ ಮುಖೇಶ್ ಅಂಬಾನಿ ಘೋಷಿಸಿದ್ದಾರೆ.

- Advertisement -

ಮುಖೇಶ್ ಅಂಬಾನಿ ಘೋಷಿಸಿರುವ 10 ಲಕ್ಷ ಕೋಟಿ ಎಂದರೆ ಕರ್ನಾಟಕ ಮತ್ತು ತಮಿಳುನಾಡು ರಾಜ್ಯಗಳ ವಾರ್ಷಿಕ ಬಜೆಟ್ ಗಾತ್ರಕ್ಕಿಂತ ಹೆಚ್ಚಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಪೊಲೀಸ್ ಸುಧಾರಣೆ | ಹೈಟೆಕ್ ಪೊಲೀಸಿಂಗ್ Vs ವಾಸ್ತವ:...

ಪೊಲೀಸ್‌ ಇಲಾಖೆಯನ್ನು ಆಧುನೀಕರಿಸಲು AI, ಸೈಬರ್‌ ತಂತ್ರಜ್ಞಾನ, ಡಿಜಿಟಲ್‌ ತನಿಖೆ, ಸಿಸಿಟಿವಿ, ಬಾಡಿ ಕ್ಯಾಮೆರಾ ಸೇರಿದಂತೆ ಹಲವು ತಂತ್ರಜ್ಞಾನಗಳು ಪ್ರವೇಶಿಸುತ್ತಿವೆ. ಆದರೆ ಹೈಟೆಕ್‌ ಆಗುತ್ತಿರುವ ಪೊಲೀಸ್‌ ವ್ಯವಸ್ಥೆ ಜನರ ಬದುಕಿಗೆ ಎಷ್ಟು ಹತ್ತಿರವಾಗುತ್ತಿದೆ?...

ಐದು ಭಾಷೆ, ಆರು ದಶಕ, ಅನಂತ ಪ್ರಯೋಗ: ಭಾರತೀಯ...

ಬದುಕಿನ ಕೊನೆಯ ಉಸಿರಿನವರೆಗೂ ಕೇವಲ ಸಿನಿಮಾವನ್ನೇ ಶ್ವಾಸವಾಗಿಸಿಕೊಂಡಿದ್ದ, 95ನೇ ವಯಸ್ಸಿನಲ್ಲೂ ಹೊಸ ಕಥೆಯ ಕನಸು ಕಾಣುತ್ತಿದ್ದ ಭಾರತೀಯ ಚಿತ್ರರಂಗದ ಅಪ್ರತಿಮ ದಾರ್ಶನಿಕ ಸಿಂಗೀತಂ ಶ್ರೀನಿವಾಸರಾವ್ ನಮ್ಮೊಂದಿಗಿಲ್ಲ. ಆರು ದಶಕಗಳ ಕಾಲ ತಮ್ಮ ಅನಂತ...

ಸಂಪತ್ತು ಮತ್ತು ಮನುಷ್ಯನ ನೈತಿಕತೆ: ಅರ್ಥಶಾಸ್ತ್ರದ ಇಗ್ ನೊಬೆಲ್...

ಪ್ರತಿವರ್ಷ ನೊಬೆಲ್ ಪ್ರಶಸ್ತಿ ಘೋಷಣೆಯಾಗುವ ಕೆಲವೇ ದಿನಗಳ ಮೊದಲು ಹಾರ್ವರ್ಡ್ ವಿಶ್ವವಿದ್ಯಾಲಯದಲ್ಲಿ ನೊಬೆಲ್ ಪುರಸ್ಕೃತರ ಸಮ್ಮುಖದಲ್ಲೇ ಇಗ್ ನೊಬೆಲ್ ಪ್ರಶಸ್ತಿಗಳನ್ನು ಪ್ರದಾನ ಮಾಡಲಾಗುತ್ತದೆ. "ಮೊದಲು ಜನರನ್ನು ನಗಿಸಬೇಕು, ನಂತರ ಅವರನ್ನು ಆಳವಾಗಿ ಯೋಚಿಸುವಂತೆ...

ನವದೆಹಲಿಯಲ್ಲಿ ನಡೆಯುತ್ತಿರುವ ‘ಎಐ ಇಂಪ್ಯಾಕ್ಟ್ ಸಮ್ಮೇಳನ’ದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಭಾರತದ ಡಿಜಿಟಲ್ ಭವಿಷ್ಯದ ಕುರಿತು ಈ ಮಹತ್ವದ ನಿರ್ಧಾರವನ್ನು ಪ್ರಕಟಿಸಿದರು.

​ಕೃತಕ ಬುದ್ಧಿಮತ್ತೆಯು ಕೇವಲ ಒಂದು ನೂತನ ತಂತ್ರಜ್ಞಾನವಲ್ಲ, ಬದಲಾಗಿ ಮನುಷ್ಯನಂತೆ ಆಲೋಚಿಸುವ ಮತ್ತು ಅರ್ಥಮಾಡಿಕೊಳ್ಳುವ ಶಕ್ತಿಯಿರುವ ಮಾಂತ್ರಿಕ ವ್ಯವಸ್ಥೆಯಾಗಿದೆ ಎಂದು ಬಣ್ಣಿಸಿದ ಅವರು, ಇದನ್ನು ಪುರಾಣಗಳಲ್ಲಿ ಉಲ್ಲೇಖವಾಗಿರುವ ಎಂದಿಗೂ ಬರಿದಾಗದ ‘ಅಕ್ಷಯ ಪಾತ್ರೆ’ಗೆ ಹೋಲಿಸಿದರು. ಇಂದು ಪ್ರಪಂಚದಲ್ಲೇ ಅತಿ ಹೆಚ್ಚು ಡೇಟಾ ಬಳಸುತ್ತಿರುವುದು ನಮ್ಮ ಭಾರತೀಯರು. ದೆಹಲಿಯಿಂದ ಹಿಡಿದು ಕುಗ್ರಾಮದವರೆಗೂ ಇಂಟರ್ನೆಟ್ ವೇಗದಲ್ಲಿ ಯಾವುದೇ ಭೇದಭಾವವಿಲ್ಲ. ಜಿಯೋ ಈಗಾಗಲೇ 50 ಕೋಟಿಗೂ ಅಧಿಕ ಜನರಿಗೆ ಸಂಪರ್ಕ ಒದಗಿಸಿದ್ದು, ಇದೀಗ ದೇಶವನ್ನು ಡೇಟಾ ಯುಗದಿಂದ “ಬುದ್ಧಿವಂತಿಕೆಯ ಯುಗಕ್ಕೆ” ಕೊಂಡೊಯ್ಯಲು ಸಜ್ಜಾಗಿದೆ ಎಂದು ಅವರು ವಿವರಿಸಿದರು.

​ಹಿಂದೆ ಮೊಬೈಲ್ ಡೇಟಾವನ್ನು ಹೇಗೆ ಅಗ್ಗದ ಬೆಲೆಯಲ್ಲಿ ನೀಡಲಾಗಿತ್ತೋ, ಅದೇ ರೀತಿ ಎಐ ತಂತ್ರಜ್ಞಾನವನ್ನು ಕೂಡ ಪ್ರತಿಯೊಬ್ಬರಿಗೂ ಕಡಿಮೆ ವೆಚ್ಚದಲ್ಲಿ ಲಭ್ಯವಾಗುವಂತೆ ಮಾಡಲಾಗುವುದು ಎಂದು ಮುಖೇಶ್ ಅಂಬಾನಿ ಭರವಸೆ ನೀಡಿದರು.

ಇದನ್ನು ಓದಿದ್ದೀರಾ? 6 ದಶಕಗಳ ಕಾಯುವಿಕೆ ಅಂತ್ಯ: ಬಂಗಾಳವನ್ನು ಬಗ್ಗು ಬಡಿದು ರಣಜಿ ಫೈನಲ್ ಪ್ರವೇಶಿಸಿದ ಜಮ್ಮು ಕಾಶ್ಮೀರ

“ಆರ್ಥಿಕತೆಯ ಪ್ರತಿಯೊಂದು ವಲಯ, ಪ್ರತಿಯೊಬ್ಬ ನಾಗರಿಕ ಹಾಗೂ ಸರ್ಕಾರದ ಪ್ರತಿಯೊಂದು ಸೇವೆಗಳಲ್ಲಿ ಎಐ ಬಳಕೆಯಾಗಲು ಟೆಲಿಕಾಂ ಆಪರೇಟರ್ ಜಿಯೋ ಪ್ರಮುಖ ಪಾತ್ರ ವಹಿಸಲಿದೆ. ಸಮಗ್ರ ಅಭಿವೃದ್ಧಿಯ ದೃಷ್ಟಿಯಿಂದ ಜಿಯೋ ಈಗಾಗಲೇ ಹಲವು ಎಐ ಅಪ್ಲಿಕೇಶನ್‌ಗಳನ್ನು ಪ್ರಾರಂಭಿಸಿದೆ. 22 ಭಾಷೆಗಳಲ್ಲಿ ಹೊಂದಾಣಿಕೆಯ ಕಲಿಕೆಗಾಗಿ ‘ಜಿಯೋಶಿಕ್ಷಕ್’, ತ್ವರಿತ ವೈದ್ಯಕೀಯ ಮಾರ್ಗದರ್ಶನ ಹಾಗೂ ಆರೋಗ್ಯ ಸೇವೆಗಳಿಗಾಗಿ ‘ಜಿಯೋಆರೋಗ್ಯ ಎಐ’, 14 ಕೋಟಿ ರೈತರಿಗೆ ಬೆಳೆ ಇಳುವರಿ ಹೆಚ್ಚಿಸಲು ನೆರವಾಗಲು ‘ಜಿಯೋಕೃಷಿ’ ಹಾಗೂ ಶಿಕ್ಷಣ, ಉದ್ಯೋಗ ಮತ್ತು ಸರ್ಕಾರಿ ಸೇವೆಗಳನ್ನು ಸುಲಭವಾಗಿ ಜನರಿಗೆ ತಲುಪಿಸಲು ‘ಜಿಯೋ ಭಾರತ್‌ ಐಕ್ಯೂ’ ಅನ್ನು ಪರಿಚಯಿಸಲಾಗಿದೆ” ಎಂದು ಮುಖೇಶ್ ಅಂಬಾನಿ ತಿಳಿಸಿದರು.

21ನೇ ಶತಮಾನದಲ್ಲಿ ಭಾರತವು ವಿಶ್ವದ ಅತಿದೊಡ್ಡ ಎಐ ಶಕ್ತಿಗಳಲ್ಲಿ ಒಂದಾಗಿ ಹೊರಹೊಮ್ಮಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ ಮುಖೇಶ್ ಅಂಬಾನಿ, ಮುಂಬರುವ ದಶಕಗಳಲ್ಲಿ ಜಗತ್ತಿನ ಯಾವುದೇ ದೇಶವು ಭಾರತದ ಶಕ್ತಿಯನ್ನು ಸರಿಗಟ್ಟಲು ಸಾಧ್ಯವಿಲ್ಲ ಎಂದರು.

ಸುಮಾರು 100 ಕೋಟಿಗೂ ಹೆಚ್ಚು ಇಂಟರ್ನೆಟ್ ಬಳಕೆದಾರರು, ಜಾಗತಿಕವಾಗಿ ಅತಿ ಕಡಿಮೆ ಡೇಟಾ ವೆಚ್ಚ ಹಾಗೂ ಮಾಸಿಕ 12 ಶತಕೋಟಿಗೂ ಅಧಿಕ ಡಿಜಿಟಲ್ ವಹಿವಾಟುಗಳನ್ನು ನಮ್ಮ ದೇಶದ ಜನರು ಪಡೆದಿದ್ದಾರೆ ಎಂದು ಮುಖೇಶ್ ಅಂಬಾನಿ ತಿಳಿಸಿದರು

ಇದೇ ವೇಳೆ, ಎಐ ಬರುವುದರಿಂದ ನಮ್ಮ ಉದ್ಯೋಗಗಳು ನಾಶವಾಗುತ್ತವೆ ಎಂದು ಯಾರೂ ಭಯಪಡುವ ಅಗತ್ಯವಿಲ್ಲ, ಬದಲಾಗಿ ಇದರಿಂದ ಹೆಚ್ಚಿನ ಕೌಶಲ್ಯ ಬೇಡುವ ಹೊಸ ಉದ್ಯೋಗಾವಕಾಶಗಳು ಸೃಷ್ಟಿಯಾಗಲಿವೆ ಎಂದು ಹೇಳಿದರು.

WhatsApp Image 2025 11 17 at 3.21.17 PM
ಈ ದಿನ ಡೆಸ್ಕ್
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಫಕೀರನಂತೆ ‘ಜೋಳಿಗೆ’ ಎತ್ತಿಕೊಂಡು ಹೋಗುವ ಸಮಯ ಬಂತು, ಹೊರಡಿ ಮೋದಿಜಿ: ಕಾಂಗ್ರೆಸ್ ಲೇವಡಿ

ದೇಶಾದ್ಯಂತ ಔಷಧಿಗಳ ಬೆಲೆ ತೀವ್ರವಾಗಿ ಏರಿಕೆಯಾಗುತ್ತಿರುವುದಕ್ಕೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ...

ಸಂಪತ್ತು ಮತ್ತು ಮನುಷ್ಯನ ನೈತಿಕತೆ: ಅರ್ಥಶಾಸ್ತ್ರದ ಇಗ್ ನೊಬೆಲ್ ಪ್ರಶಸ್ತಿ ವಿಜೇತ ಸಂಶೋಧನೆ‌

ಪ್ರತಿವರ್ಷ ನೊಬೆಲ್ ಪ್ರಶಸ್ತಿ ಘೋಷಣೆಯಾಗುವ ಕೆಲವೇ ದಿನಗಳ ಮೊದಲು ಹಾರ್ವರ್ಡ್ ವಿಶ್ವವಿದ್ಯಾಲಯದಲ್ಲಿ...

CEC ಗ್ಯಾನೇಶ್‌ ಕುಮಾರ್‌ ವಿರುದ್ಧ ಭುಗಿಲೆದ್ದ ಆಕ್ರೋಶ; ತೀವ್ರಗೊಂಡ ಮೋಶಾ ದಮನ ಕ್ರಮಗಳು

ಚುನಾವಣಾ ಅಕ್ರಮಗಳ ಆರೋಪದ ಹಿನ್ನೆಲೆಯಲ್ಲಿ ಮುಖ್ಯ ಚುನಾವಣಾ ಆಯುಕ್ತ (CEC) ಗ್ಯಾನೇಶ್‌...

ಸಿಇಸಿ ಗ್ಯಾನೇಶ್ ವಿರುದ್ಧ ಅರ್ಜಿ: ಕೇಂದ್ರ, ಚುನಾವಣಾ ಆಯೋಗಕ್ಕೆ ಸುಪ್ರೀಂ ಕೋರ್ಟ್ ನೋಟಿಸ್

ಮುಖ್ಯ ಚುನಾವಣಾ ಆಯುಕ್ತ (ಸಿಇಸಿ) ಗ್ಯಾನೇಶ್ ಕುಮಾರ್ ಅವರು ಇತರ ಚುನಾವಣಾ...