ಅಜಿತ್ ಪವಾರ್ ವಿಮಾನ ಪತನ ಅಪಘಾತವಲ್ಲ, ವ್ಯವಸ್ಥಿತ ಕೊಲೆ; ಬೆಂಗಳೂರಿನಲ್ಲಿ FIR ದಾಖಲು

Date:

ಮಹಾರಾಷ್ಟ್ರ ಮಾಜಿ ಉಪಮುಖ್ಯಮಂತ್ರಿ ಅಜಿತ್ ಪವಾರ್ ಅವರ ಸಾವಿಗೆ ಕಾರಣವಾದ ವಿಮಾನ ಪತನವು ಸಾಮಾನ್ಯ ಅಪಘಾತವಲ್ಲ. ಅದು ವ್ಯವಸ್ಥಿತ ಸಂಚು ಮತ್ತು ಕೊಲೆ ಎಂದು ಅವರ ಅಳಿಯ ಮತ್ತು ಎನ್‌ಸಿಪಿ (ಶರದ್ ಪವಾರ್ ಬಣ) ಶಾಸಕ ರೋಹಿತ್ ರಾಜೇಂದ್ರ ಪವಾರ್ ಗಂಭೀರ ಆರೋಪ ಮಾಡಿದ್ದಾರೆ. ಬೆಂಗಳೂರಿನಲ್ಲಿ ದೂರು ದಾಖಲಿಸಿದ್ದಾರೆ.

- Advertisement -

ರೋಹಿತ್ ಪವಾರ್ ಅವರು ತಮ್ಮ ದೂರಿನಲ್ಲಿ ವಿಮಾನದ ನಿರ್ವಹಣೆ, ಸುರಕ್ಷತಾ ನಿಯಮಗಳ ಉಲ್ಲಂಘನೆ ಮತ್ತು ಅನುಮಾನಾಸ್ಪದ ಸಂಗತಿಗಳನ್ನು ಉಲ್ಲೇಖಿಸಿದ್ದಾರೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಕಲಬುರಗಿ | ‘ನಮ್ಮನ್ನ ಎಲ್ಲಿಗೆ ಕಳುಹಿಸುತ್ತೀರಿ?’: ತಗ್ಗಿನ ಬೇಲಿಯ...

92ಕ್ಕೂ ಅಧಿಕ ಸ್ಲಂ ಕುಟುಂಬಗಳ ಬದುಕು ಕೇವಲ ಜಮೀನಿನ ಹಕ್ಕಿನ ಪ್ರಶ್ನೆಯಲ್ಲ; ಅವರ ಸುರಕ್ಷಿತ ಓಡಾಟ, ಕುಡಿಯುವ ನೀರು ಹಾಗೂ ನಿತ್ಯದ ಬದುಕಿನ ಹಕ್ಕಿನ ಪ್ರಶ್ನೆಯೂ ಹೌದು. ನ್ಯಾಯಾಲಯದ ವಿಚಾರಣೆ ಅಂತಿಮಗೊಳ್ಳುವವರೆಗೆ ಯಾವುದೇ...

ಚುನಾವಣಾ ಆಯೋಗದ ಸಭೆ: ಪರಿಹಾರವಲ್ಲ, ತೇಪೆ ಹಚ್ಚುವ ಕಾರ್ಯಕ್ರಮ

ಅವೈಜ್ಞಾನಿಕ 'SIR' ಪ್ರಕ್ರಿಯೆ ಮತ್ತು ಆಯೋಗದೊಳಗಿನ ಭಿನ್ನಾಭಿಪ್ರಾಯಗಳು ಸಾರ್ವಜನಿಕವಾಗಿ ಬಯಲಾದ ಬೆನ್ನಲ್ಲೇ ಬಿಡುಗಡೆಯಾದ ಚುನಾವಣಾ ಆಯೋಗದ ಪತ್ರಿಕಾ ಪ್ರಕಟಣೆ, ತಪ್ಪುಗಳನ್ನು ತಿದ್ದುವ ಬದಲು ವ್ಯವಸ್ಥೆಯ ಲೋಪಗಳಿಗೆ ತೇಪೆ ಹಚ್ಚುವ ಯತ್ನದಂತೆ ಕಾಣುತ್ತಿದೆ. ದೇಶದ ಇತಿಹಾಸದಲ್ಲೇ...

ಹೊರಟ್ಟಿ ಅವರ ಹೋರಾಟದ ಬದುಕು ಮತ್ತು ಅವರ ಭಕ್ತ...

ಗ್ಯಾರಂಟಿ ಯೋಜನೆಗಳಿಂದ ಕೂಲಿ ಕಾರ್ಮಿಕರು ಸಿಗುತ್ತಿಲ್ಲವೆಂಬ ಬಸವರಾಜ ಹೊರಟ್ಟಿ ಅವರ ಹೇಳಿಕೆ ಮತ್ತು ಅದಕ್ಕೆ ಸಿಕ್ಕ ಸಾರ್ವಜನಿಕ ಚಪ್ಪಾಳೆಗಳು, ಕೇವಲ ಹಸಿವನ್ನೇ ಶ್ರಮದ ಇಂಧನವನ್ನಾಗಿ ನೋಡುವ ಸಮಾಜದ ಕ್ರೂರ ಮನಸ್ಥಿತಿಯನ್ನು ಅನಾವರಣಗೊಳಿಸುತ್ತವೆ. ಬಸವರಾಜ ಹೊರಟ್ಟಿ...

“ವಿಮಾನದ ಸುರಕ್ಷತಾ ನಿಯಮಗಳನ್ನು ಉಲ್ಲಂಘಿಸಲಾಗಿದೆ. ನಿರ್ವಹಣೆಯಲ್ಲಿ ದೊಡ್ಡ ಪ್ರಮಾಣದ ನಿರ್ಲಕ್ಷ್ಯ ನಡೆದಿದೆ. ದಾಖಲೆಗಳನ್ನು ಬದಲಾಯಿಸಲಾಗಿದೆ ಎಂಬ ಅನುಮಾನಗಳಿವೆ. ಭಾರತೀಯ ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯ (ಡಿಜಿಸಿಎ) ಫೆಬ್ರವರಿ 24ರಂದು ನೀಡಿದ ಸುರಕ್ಷತಾ ಪರಿಶೀಲನಾ ವರದಿಯಲ್ಲಿ ವಿಮಾನದ ಮಾಲೀಕತ್ವವನ್ನು ಹೊಂದಿರುವ ವಿಎಸ್‌ಆರ್ ವೆಂಚರ್ಸ್ ಕಂಪನಿಯ ವಿಮಾನಗಳು ಸುರಕ್ಷಿತವಲ್ಲವೆಂದು ಅವುಗಳನ್ನು ನೆಲಕ್ಕಿಳಿಸಲಾಗಿತ್ತು” ಎಂಬುದನ್ನು ದೂರಿನಲ್ಲಿ ಉಲ್ಲೇಖಿಸಿದ್ದಾರೆ.

“ವಿಮಾನವು ಎಂಜಿನ್‌ನ 5,000 ಗಂಟೆಗಳ ಹಾರಾಟ ಮಿತಿಗೆ ಸಮೀಪವಾಗಿದ್ದರೂ ಹಾರಾಟಕ್ಕೆ ಅನುಮತಿ ನೀಡಲಾಗಿತ್ತು. ಅಧಿಕೃತ ದಾಖಲೆಗಳಲ್ಲಿ ಹಾರಾಟ ಗಂಟೆಗಳನ್ನು ಕಡಿಮೆ ತೋರಿಸಲಾಗಿದ್ದು, ವಾಸ್ತವದಲ್ಲಿ 8,000 ಗಂಟೆಗಳಿಗೂ ಹೆಚ್ಚು ಹಾರಾಟ ನಡೆಸಿರಬಹುದು” ಎಂಬ ಅನುಮಾನ ವ್ಯಕ್ತಪಡಿಸಿದ್ದಾರೆ.

“ವಿಮಾನದ ಮುಖ್ಯ ಪೈಲಟ್ ಸುಮಿತ್ ಕಪೂರ್ ಈ ಹಿಂದೆ ಎರಡು ಬಾರಿ ಮದ್ಯಪಾನದ ಆರೋಪದಲ್ಲಿ ಸಿಕ್ಕಿಬಿದ್ದು, ಅವರನ್ನು ಅಮಾನತುಗೊಳಿಸಲಾಗಿತ್ತು. ಆದರೂ ಅದೇ ಪೈಲಟ್‌ರನ್ನು ಅಜಿತ್ ಪವಾರ್ ಅವರ ವಿಮಾನಕ್ಕೆ ನೇಮಿಸಲಾಗಿತ್ತು. ಕೊನೆಯ ಕ್ಷಣದಲ್ಲಿ ಪೈಲಟ್ ತಂಡವನ್ನು ಬದಲಾಯಿಸಿರುವುದು ಸಹ ಅನುಮಾನಕ್ಕೆ ಕಾರಣವಾಗಿದೆ” ಎಂದು ರೋಹಿತ್ ಪವಾರ್ ದೂರಿದ್ದಾರೆ.

“ಅಪಘಾತಕ್ಕೂ ಕ್ಷಣಗಳ ಮುನ್ನ ಸಹಪೈಲಟ್ ‘Oh Shit’ ಎಂದು ಕೂಗಿದ ಆಡಿಯೋ ಬಹಿರಂಗವಾಗಿದೆ. ಆದರೆ ಮುಖ್ಯ ಪೈಲಟ್ ಯಾವುದೇ ಪ್ರತಿಕ್ರಿಯೆ ನೀಡದೆ ತುರ್ತು ಕ್ರಮಗಳನ್ನು ಕೈಗೊಳ್ಳದಿರುವುದು ಗಂಭೀರ ಅನುಮಾನ ಹುಟ್ಟಿಸಿದೆ” ಎಂದು ದೂರಿನಲ್ಲಿ ತಿಳಿಸಲಾಗಿದೆ.

ಈ ಲೇಖನ ಓದಿದ್ದೀರಾ?: ಅಮೆರಿಕ-ಇರಾನ್ ಬಿಕ್ಕಟ್ಟು ಶಮನಕ್ಕೆ ಪಾಕ್ ಸಂಧಾನಕಾರ! ಏನಿದು ಅಚ್ಚರಿಯ ಲೆಕ್ಕಾಚಾರ?

ಅವರ ದೂರಿನ ಆಧಾರದ ಮೇಲೆ ಬೆಂಗಳೂರಿನ ಹೈಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ ‘ಝೀರೋ ಎಫ್‌ಐಆರ್’ ದಾಖಲಾಗಿದೆ. ಘಟನೆ ಬೆಂಗಳೂರಿನಲ್ಲಿ ನಡೆಯದಿದ್ದರೂ, ಹೈಗ್ರೌಂಡ್ಸ್ ಪೊಲೀಸರು ದೂರನ್ನು ಸ್ವೀಕರಿಸಿದೆ. ಈಗ ಈ ಪ್ರಕರಣವನ್ನು ಸಂಬಂಧಪಟ್ಟ ವ್ಯಾಪ್ತಿಯ ಪೊಲೀಸ್ ಠಾಣೆಗೆ ವರ್ಗಾಯಿಸಲು ಕ್ರಮಕೈಗೊಳ್ಳಲಾಗುತ್ತಿದೆ.

ಇದೇ ವರ್ಷದ (2026) ಜನವರಿ 28ರಂದು ಮುಂಬೈನಿಂದ ಬಾರಾಮತಿಗೆ ತೆರಳುತ್ತಿದ್ದ ‘ಬಾಂಬಾರ್ಡಿಯರ್ ಲಿಯರ್‌ಜೆಟ್ 45’ ವಿಮಾನವು ಬಾರಾಮತಿ ವಿಮಾನ ನಿಲ್ದಾಣದ ಸಮೀಪ ಪತನಗೊಂಡಿತು. ಈ ದುರಂತದಲ್ಲಿ ಅಜಿತ್ ಪವಾರ್ ಸೇರಿದಂತೆ ಒಟ್ಟು ಐವರು ಮೃತಪಟ್ಟಿದ್ದರು.

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

‘ಕೊಂದವರು ಯಾರು?’ – ಧರ್ಮಸ್ಥಳದ ಸಂತ್ರಸ್ತರಿಗೆ ನ್ಯಾಯಕ್ಕಾಗಿ ಅ.2ರಂದು ಬೃಹತ್ ವಿಚಾರ ಸಂಕಿರಣ

ಧರ್ಮಸ್ಥಳ ಮತ್ತು ಅದರ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಕಳೆದ ಹಲವಾರು ದಶಕಗಳಿಂದ ನಡೆದಿದೆ...

ಉತ್ತರ ಪ್ರದೇಶದಲ್ಲಿ ಜಲಪ್ರಳಯ: ಪ್ರವಾಹಕ್ಕೆ 56 ಮಂದಿ ಬಲಿ, ಸಾವಿರಕ್ಕೂ ಹೆಚ್ಚು ಮನೆಗಳು ಧ್ವಂಸ

ಉತ್ತರ ಪ್ರದೇಶದಲ್ಲಿ ಕಳೆದ 60 ಗಂಟೆಗಳಿಂದ ಭಾರೀ ಮಳೆ ಸುರಿಯುತ್ತಿದ್ದು, ಪ್ರವಾಹ...

ಸಿಂದಗಿ | ರಾಮಾನಂದ ತೀರ್ಥರ ಜನ್ಮದಿನದೊಳಗೆ ವೀರಸೌಧ ಅಭಿವೃದ್ಧಿಗೆ ಕ್ರಮ

ಹೈದರಾಬಾದ್ ವಿಮೋಚನಾ ಚಳವಳಿಯ ಪಿತಾಮಹ ಸ್ವಾಮಿ ರಾಮಾನಂದ ತೀರ್ಥರ ಜನ್ಮದಿನವಾದ ಅಕ್ಟೋಬರ್...