ಪ್ಯಾಲೆಸ್ತೀನಿಯರನ್ನು ಹಿಂಸಿಸಲು ಇಸ್ರೇಲ್‌ಗೆ ವಿಶ್ವವೇ ‘ಲೈಸೆನ್ಸ್‌’ ನೀಡಿದೆ: ವಿಶ್ವಸಂಸ್ಥೆ ತಜ್ಞೆ

Date:

ಆಕ್ರಮಿತ ಪ್ಯಾಲೆಸ್ತೀನ್ ಪ್ರದೇಶದ ಜೀವನವು ‘ದೈಹಿಕ ಮತ್ತು ಮಾನಸಿಕ ಸಂಕಟಗಳ ಸರಣಿಯಾಗಿದೆ’. ಪ್ಯಾಲೆಸ್ತೀನಿಯರನ್ನು ಹಿಂಸಿಸಲು ಇಸ್ರೇಲ್‌ಗೆ ವಿಶ್ವವೇ ಪರವಾನಗಿ ನೀಡಿದೆ ಎಂದು ವಿಶ್ವಸಂಸ್ಥೆಯ ತಜ್ಞೆ ಫ್ರಾನ್ಸೆಸ್ಕಾ ಅಲ್ಬನೀಸ್ ಹೇಳಿದ್ದಾರೆ.

- Advertisement -

1967ರಿಂದ ಇಸ್ರೇಲ್ ಆಕ್ರಮಿಸಿಕೊಂಡಿರುವ ಪ್ಯಾಲೆಸ್ತೀನ್‌ ಪ್ರದೇಶದಲ್ಲಿನ ಮಾನವ ಹಕ್ಕುಗಳ ಪರಿಸ್ಥಿತಿಯ ಕುರಿತು ವರದಿ ಮಾಡಲು ವಿಶ್ವಸಂಸ್ಥೆಯು ಫ್ರಾನ್ಸೆಸ್ಕಾ ಅಲ್ಬನೀಸ್ ಅವರನ್ನು ವಿಶೇಷ ವರದಿಗಾರ್ತಿಯಾಗಿ ನೇಮಿಸಿದೆ. ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಮಂಡಳಿಗೆ ಅವರು ‘ಹಿಂಸೆ ಮತ್ತು ನರಮೇಧ’ ಎಂಬ ಶೀರ್ಷಿಕೆಯಲ್ಲಿ ತಮ್ಮ ವರದಿಯನ್ನು ಸಲ್ಲಿಸಿದ್ದಾರೆ. ವರದಿ ಮಂಡನೆ ವೇಳೆ, “ಇಸ್ರೇಲ್‌ನಲ್ಲಿ ‘ಹಿಂಸೆ’ ಎಂಬುದು ರಾಜ್ಯ ನೀತಿಯಾಗಿ ಮಾರ್ಪಟ್ಟಿದೆ” ಎಂದು ಆರೋಪಿಸಿದ್ದಾರೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಕಲಬುರಗಿ | ‘ನಮ್ಮನ್ನ ಎಲ್ಲಿಗೆ ಕಳುಹಿಸುತ್ತೀರಿ?’: ತಗ್ಗಿನ ಬೇಲಿಯ...

92ಕ್ಕೂ ಅಧಿಕ ಸ್ಲಂ ಕುಟುಂಬಗಳ ಬದುಕು ಕೇವಲ ಜಮೀನಿನ ಹಕ್ಕಿನ ಪ್ರಶ್ನೆಯಲ್ಲ; ಅವರ ಸುರಕ್ಷಿತ ಓಡಾಟ, ಕುಡಿಯುವ ನೀರು ಹಾಗೂ ನಿತ್ಯದ ಬದುಕಿನ ಹಕ್ಕಿನ ಪ್ರಶ್ನೆಯೂ ಹೌದು. ನ್ಯಾಯಾಲಯದ ವಿಚಾರಣೆ ಅಂತಿಮಗೊಳ್ಳುವವರೆಗೆ ಯಾವುದೇ...

ಚುನಾವಣಾ ಆಯೋಗದ ಸಭೆ: ಪರಿಹಾರವಲ್ಲ, ತೇಪೆ ಹಚ್ಚುವ ಕಾರ್ಯಕ್ರಮ

ಅವೈಜ್ಞಾನಿಕ 'SIR' ಪ್ರಕ್ರಿಯೆ ಮತ್ತು ಆಯೋಗದೊಳಗಿನ ಭಿನ್ನಾಭಿಪ್ರಾಯಗಳು ಸಾರ್ವಜನಿಕವಾಗಿ ಬಯಲಾದ ಬೆನ್ನಲ್ಲೇ ಬಿಡುಗಡೆಯಾದ ಚುನಾವಣಾ ಆಯೋಗದ ಪತ್ರಿಕಾ ಪ್ರಕಟಣೆ, ತಪ್ಪುಗಳನ್ನು ತಿದ್ದುವ ಬದಲು ವ್ಯವಸ್ಥೆಯ ಲೋಪಗಳಿಗೆ ತೇಪೆ ಹಚ್ಚುವ ಯತ್ನದಂತೆ ಕಾಣುತ್ತಿದೆ. ದೇಶದ ಇತಿಹಾಸದಲ್ಲೇ...

ಹೊರಟ್ಟಿ ಅವರ ಹೋರಾಟದ ಬದುಕು ಮತ್ತು ಅವರ ಭಕ್ತ...

ಗ್ಯಾರಂಟಿ ಯೋಜನೆಗಳಿಂದ ಕೂಲಿ ಕಾರ್ಮಿಕರು ಸಿಗುತ್ತಿಲ್ಲವೆಂಬ ಬಸವರಾಜ ಹೊರಟ್ಟಿ ಅವರ ಹೇಳಿಕೆ ಮತ್ತು ಅದಕ್ಕೆ ಸಿಕ್ಕ ಸಾರ್ವಜನಿಕ ಚಪ್ಪಾಳೆಗಳು, ಕೇವಲ ಹಸಿವನ್ನೇ ಶ್ರಮದ ಇಂಧನವನ್ನಾಗಿ ನೋಡುವ ಸಮಾಜದ ಕ್ರೂರ ಮನಸ್ಥಿತಿಯನ್ನು ಅನಾವರಣಗೊಳಿಸುತ್ತವೆ. ಬಸವರಾಜ ಹೊರಟ್ಟಿ...

“ಇಸ್ರೇಲ್‌ಗೆ ಪ್ಯಾಲೆಸ್ತೀನಿಯರನ್ನು ಹಿಂಸಿಸಲು ಪರವಾನಗಿ ನೀಡಲಾಗಿದೆ. ಏಕೆಂದರೆ ನಿಮ್ಮಲ್ಲಿನ (ವಿಶ್ವಸಂಸ್ಥೆಯ ಸದಸ್ಯರು) ಹೆಚ್ಚಿನ ಸರ್ಕಾರಗಳು ಮತ್ತು ಸಚಿವರು ಅದಕ್ಕೆ ಅವಕಾಶ ಮಾಡಿಕೊಟ್ಟಿದ್ದಾರೆ” ಎಂದು ದೂರಿದ್ದಾರೆ.

“ಒಂದು ಕಾಲದಲ್ಲಿ ಗುಟ್ಟಾಗಿ ನಡೆಯುತ್ತಿದ್ದ ವಿಷಯಗಳು ಈಗ ಬಹಿರಂಗವಾಗಿ ನಡೆಯುತ್ತಿವೆ. ಉನ್ನತ ರಾಜಕೀಯ ಮಟ್ಟದಲ್ಲಿ ಅನುಮೋದಿಸಲ್ಪಟ್ಟ ಸಂಘಟಿತ ಅವಮಾನ, ನೋವು ಹಾಗೂ ಕೆಳಮಟ್ಟದ ನಡವಳಿಕೆಯ ಆಡಳಿತ ವ್ಯವಸ್ಥೆ ಜಾರಿಯಲ್ಲಿದೆ” ಎಂದಿದ್ದಾರೆ.

“ಹಿಂಸೆಯು ಕೇವಲ ಸೆರೆಮನೆ ಮತ್ತು ವಿಚಾರಣಾ ಕೊಠಡಿಗಳಿಗೆ ಸೀಮಿತವಾಗಿಲ್ಲ. ಸಮೂಹ ಸ್ಥಳಾಂತರ, ದಿಗ್ಬಂಧನ, ನೆರವು ಮತ್ತು ಆಹಾರ ನಿರಾಕರಣೆ, ಮಿತಿಮೀರಿದ ಮಿಲಿಟರಿ ಮತ್ತು ವಸಾಹತುಶಾಹಿ ಹಿಂಸಾಚಾರ ಹಾಗೂ ಸತತ ಕಣ್ಗಾವಲು ಮತ್ತು ಭಯೋತ್ಪಾದನೆಯ ಸಂಚಿತ ಪರಿಣಾಮದಿಂದಾಗಿ, ಆಕ್ರಮಿತ ಪ್ಯಾಲೆಸ್ತೀನ್ ಪ್ರದೇಶವು ಸಾಮೂಹಿಕ ಶಿಕ್ಷೆಯ ತಾಣವಾಗಿ ಮಾರ್ಪಟ್ಟಿದೆ” ಎಂದು ಅವರು ಹೇಳಿದ್ದಾರೆ.

“ಪ್ಯಾಲೆಸ್ತೀನಿಯರ ಜೀವನ ಪರಿಸ್ಥಿತಿಗಳ ನಾಶವು ನರಮೇಧದ ಹಿಂಸಾಚಾರವನ್ನು ಸಾಮೂಹಿಕ ಹಿಂಸೆಯ ಸಾಧನವನ್ನಾಗಿ ಬದಲಾಯಿಸುತ್ತದೆ. ಇದು ಆಕ್ರಮಿತ ಜನಸಂಖ್ಯೆಯ ಮೇಲೆ ದೀರ್ಘಕಾಲೀನ ಮಾನಸಿಕ ಮತ್ತು ದೈಹಿಕ ಪರಿಣಾಮಗಳನ್ನು ಬೀರುತ್ತದೆ” ಎಂದು ಹೇಳಿದ್ದಾರೆ.

“ವಿಶ್ವಸಂಸ್ಥೆಯ ಸದಸ್ಯ ರಾಷ್ಟ್ರಗಳು ಅಂತರಾಷ್ಟ್ರೀಯ ಕಾನೂನನ್ನು ಎತ್ತಿಹಿಡಿಯಬೇಕು ಮತ್ತು ಇಂತಹ ಹಿಂಸೆ ಹಾಗೂ ನರಮೇಧದ ಕೃತ್ಯಗಳನ್ನು ತಡೆದು ಶಿಕ್ಷಿಸಬೇಕು. ಅಂತರಾಷ್ಟ್ರೀಯ ಸಮುದಾಯವು ಪ್ಯಾಲೆಸ್ತೀನಿಯರ ಮೇಲಿನ ಇಂತಹ ಕೃತ್ಯಗಳನ್ನು ಸಹಿಸಿಕೊಳ್ಳುವುದನ್ನು ಮುಂದುವರಿಸಿದರೆ, ಕಾನೂನಿಗೇ ಅರ್ಥವಿಲ್ಲದಂತಾಗುತ್ತದೆ” ಎಂದು ಅವರು ಎಚ್ಚರಿಸಿದ್ದಾರೆ.

ಈ ಲೇಖನ ಓದಿದ್ದೀರಾ?: ಅಮೆರಿಕ-ಇರಾನ್ ಬಿಕ್ಕಟ್ಟು ಶಮನಕ್ಕೆ ಪಾಕ್ ಸಂಧಾನಕಾರ! ಏನಿದು ಅಚ್ಚರಿಯ ಲೆಕ್ಕಾಚಾರ?

“ಗಾಜಾ ಆರೋಗ್ಯ ಸಚಿವಾಲಯದ ಪ್ರಕಾರ, 2023ರ ಅಕ್ಟೋಬರ್ 7ರಿಂದ ಇಸ್ರೇಲ್ ನಡೆಸಿದ ದಾಳಿಯಲ್ಲಿ ಕನಿಷ್ಠ 72,263 ಜನರು ಸಾವನ್ನಪ್ಪಿದ್ದಾರೆ ಮತ್ತು 1,71,944 ಜನರು ಗಾಯಗೊಂಡಿದ್ದಾರೆ. ಇದೇ ಅವಧಿಯಲ್ಲಿ ಇಸ್ರೇಲಿ ಅಧಿಕಾರಿಗಳು ಕನಿಷ್ಠ 1,500 ಮಕ್ಕಳು ಸೇರಿದಂತೆ 18,500 ಕ್ಕೂ ಹೆಚ್ಚು ಪ್ಯಾಲೆಸ್ತೀನಿಯರನ್ನು ಬಂಧಿಸಿದ್ದಾರೆ” ಎಂದು ಅವರ ವರದಿ ತಿಳಿಸಿದೆ.

ಪಶ್ಚಿಮ ದಂಡೆಯಲ್ಲಿನ ಇಸ್ರೇಲಿ ಕ್ರಮಗಳು ಮತ್ತು ಗಾಜಾದ ಮೇಲಿನ ಯುದ್ಧದ ವಿರುದ್ಧ ಧ್ವನಿ ಎತ್ತುತ್ತಿರುವ ಅಲ್ಬನೀಸ್ ಅವರು ಇಸ್ರೇಲ್ ಮತ್ತು ಅಮೆರಿಕದಿಂದ ತೀವ್ರ ವಿರೋಧ ಎದುರಿಸುತ್ತಿದ್ದಾರೆ. ಅವರನ್ನು ಹುದ್ದೆಯಿಂದ ತೆಗೆದುಹಾಕಬೇಕೆಂಬ ಒತ್ತಾಯಗಳೂ ಕೇಳಿಬರುತ್ತಿವೆ.

ವಿಶ್ವಸಂಸ್ಥೆಯಲ್ಲಿ ಇಸ್ರೇಲ್ ಪ್ರತಿನಿಧಿಗಳು ಅಲ್ಬನೀಸ್ ಅವರ ವರದಿಯನ್ನು ತೀವ್ರವಾಗಿ ಖಂಡಿಸಿದ್ದಾರೆ. ಅವರನ್ನು ‘ಅರಾಜಕತೆಯ ಏಜೆಂಟ್’ ಎಂದು ಕರೆದಿದ್ದಾರೆ. “ಅಲ್ಬನೀಸ್ ಅವರು ವಿಶ್ವಸಂಸ್ಥೆಯ ವೇದಿಕೆಯನ್ನು ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ. ಅವರು ಭಯೋತ್ಪಾದಕ ಸಂಘಟನೆಗಳನ್ನು ಬೆಂಬಲಿಸುವ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಇಸ್ರೇಲ್ ರಾಷ್ಟ್ರದ ಅಸ್ತಿತ್ವವನ್ನೇ ದುರ್ಬಲಗೊಳಿಸುವ ಪ್ರಯತ್ನ ಮಾಡುತ್ತಿದ್ದಾರೆ” ಎಂದು ಇಸ್ರೇಲ್ ಆರೋಪಿಸಿದೆ.

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸಿಇಸಿ ಗ್ಯಾನೇಶ್ ಕುಮಾರ್ ರಾಜೀನಾಮೆಗೆ ಸಿಜೆಪಿ ಪಟ್ಟು: ಹೋರಾಟಕ್ಕೆ ಸೋನಮ್ ವಾಂಗ್‌ಚುಕ್ ಬೆಂಬಲ

ಮುಖ್ಯ ಚುನಾವಣೆ ಆಯುಕ್ತ (ಸಿಇಸಿ) ಗ್ಯಾನೇಶ್ ಕುಮಾರ್ ಅವರ ಹೊಣೆಗಾರಿಕೆ ಮತ್ತು...

ಬೀದರ್‌ | ಸೆ.29ರಂದು ನೀರು, ಬರ, ಪರಿಸರ ಕುರಿತು ವಿಚಾರ ಸಂಕಿರಣ

ಕರ್ನಾಟಕ ವಿದ್ಯಾವರ್ಧಕ ಸಂಘ ಧಾರವಾಡ, ಸಿದ್ದಾರ್ಥ ಪದವಿ ಪೂರ್ವ ಕಾಲೇಜು, ಟೀಮ್...

ಬೀದರ್‌ | ಶಿಕ್ಷಕರು ಸಮಾಜದ ಭವಿಷ್ಯ ನಿರ್ಮಿಸುವ ಶಿಲ್ಪಿಗಳು: ಪುಣ್ಯವತಿ ವಿಸಾಜಿ

ಶಿಕ್ಷಕರು ಕೇವಲ ಪಾಠ ಬೋಧಿಸುವವರಲ್ಲ. ವಿದ್ಯಾರ್ಥಿಗಳ ವ್ಯಕ್ತಿತ್ವ ರೂಪಿಸುವ ಜೊತೆಗೆ ಸಮಾಜದ...

ಬೀದರ್‌ | ಅಂಬೇಡ್ಕರ್ ಚಿಂತನೆ ವಿದ್ಯಾರ್ಥಿಗಳ ಬದುಕಿಗೆ ಮಾರ್ಗದರ್ಶನವಾಗಲಿ: ಸಿದ್ರಾಮ ಸಿಂಧೆ

ಡಾ.ಬಿ.ಆರ್.ಅಂಬೇಡ್ಕರ್ ಅವರ ಬದುಕು, ಸಾಧನೆ ಹಾಗೂ ಬರಹಗಳನ್ನು ವಿದ್ಯಾರ್ಥಿಗಳು ಆಳವಾಗಿ ಅಧ್ಯಯನ...