ವೈಎಸ್ಆರ್ ಕಾಂಗ್ರೆಸ್‌ನಲ್ಲಿ ರಾಜೀನಾಮೆ ಪರ್ವ: 15 ದಿನಗಳಲ್ಲಿ ಮೂವರು ಸಂಸದರ ರಾಜೀನಾಮೆ

Date:

ವಿಧಾನಸಭೆ ಹಾಗೂ ಲೋಕಸಭೆ ಚುನಾವಣೆಗಳು ಹತ್ತಿರ ಬರುತ್ತಿದಂತೆ ಆಂಧ್ರ ಪ್ರದೇಶದ ಆಡಳಿತರೂಢ ಪಕ್ಷ ವೈಎಸ್‌ಆರ್‌ ಕಾಂಗ್ರೆಸ್‌ಗೆ ತಲೆನೋವು ಶುರುವಾಗಿದೆ. ಕಳೆದ 15 ದಿನಗಳಿಂದ ವೈಎಸ್‌ಆರ್‌ ಕಾಂಗ್ರೆಸ್‌ನ ಮೂವರು ಹಾಲಿ ಸಂಸದರು ರಾಜೀನಾಮೆ ನೀಡಿದ್ದಾರೆ.

ಇಂದು (ಜ.23) ನರಸಾರೋಪೇಟೆ ಕ್ಷೇತ್ರದ ಸಂಸದ ಲವು ಶ್ರೀ ಕೃಷ್ಣ ದೇವರಾಯಲು ತಮ್ಮ ಸಂಸದ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ನರಸಾರೋಪೇಟೆ ಲೋಕಸಭಾ ಕ್ಷೇತ್ರದಲ್ಲಿ ಏಪ್ರಿಲ್/ಮೇ ತಿಂಗಳಿನಲ್ಲಿ ನಡೆಯಲಿರುವ ವಿಧಾನಸಭೆ ಹಾಗೂ ಲೋಕಸಭೆ ಚುನಾವಣೆಯಲ್ಲಿ ವೈಎಸ್‌ಆರ್‌ನಿಂದ ಹೊಸ ಅಭ್ಯರ್ಥಿಯೊಬ್ಬರನ್ನು ಕಣಕ್ಕಿಳಿಸಲಾಗುತ್ತಿದೆ ಎಂಬ ಊಹಾಪೋಹಗಳ ಹಿನ್ನೆಲೆಯಲ್ಲಿ ರಾಜೀನಾಮೆ ನೀಡಿದ್ದಾರೆ ಎನ್ನಲಾಗಿದೆ.

ರಾಜೀನಾಮೆ ನೀಡಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು” ಪಕ್ಷದಲ್ಲಿ ಯಾವುದೇ ಅನಿಶ್ಚತೆ ಉಂಟಾದರೆ ತಾವು ಹೊಣೆಗಾರರಲ್ಲ ಎಂದು ತಿಳಿಸಿದ್ದಾರೆ. ಮೂಲಗಳ ಪ್ರಕಾರ ದೇವರಾಯುಲು ಅವರು ಕ್ಷೇತ್ರದಿಂದ ವಲಸೆ ಹೋಗುತ್ತಿದ್ದು, ಗುಂಟೂರು ಕ್ಷೇತ್ರದಿಂದ ಟಿಕೆಟ್ ಕೇಳಿದ್ದಾರೆ ಎನ್ನಲಾಗಿದೆ.

ದೇವರಾಯಲು ಅವರು 2019ರ ಲೋಕಸಭಾ ಚುನಾವಣೆಯಲ್ಲಿ ಟಿಡಿಪಿ ಅಭ್ಯರ್ಥಿ ವಿರುದ್ಧ 50 ಸಾವಿರ ಮತಗಳ ಅಂತರದಿಂದ ಗೆಲುವು ಸಾಧಿಸಿದ್ದರು.

15 ದಿನಗಳ ಹಿಂದೆ ಕರ್ನೂಲ್ ಜಿಲ್ಲೆಯ ವೈಎಸ್ಆರ್‌ಸಿ ಸಂಸದ ಸಂಜೀವ್ ಕುಮಾರ್ ಮೊದಲು ರಾಜೀನಾಮೆ ನೀಡಿದ್ದರು. ಕಳೆದ 10 ದಿನಗಳ ಹಿಂದೆ ಮಚಲಿಪಟ್ಟಣಂ ಸಂಸದ ಬಾಲಾಶೌರಿ ವಲ್ಲಬೇನಿ ರಾಜೀನಾಮೆ ನೀಡಿ ನಟ ಪವನ್‌ ಕಲ್ಯಾಣ್ ನೇತೃತ್ವದ ಜನಸೇನಾ ಪಕ್ಷ ಸೇರುವುದಾಗಿ ಹೇಳಿದ್ದರು.

ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಯುವಜನರ ವಿಶ್ವಾಸ ಉಳಿಸಿಕೊಳ್ಳುವುದೇ ಕೆಪಿಎಸ್‌ಸಿ?

ಇದಲ್ಲದೆ ಒಂಗ್ಲೋ ಕ್ಷೇತ್ರದ ಸಂಸದ ಎಂ ಶ್ರೀನಿವಾಸಲು ರೆಡ್ಡಿ ಹಾಗೂ ನರಸಾಪುರಂ ಕ್ಷೇತ್ರದ ಸಂಸದ ಕೆ ರಾಮಕೃಷ್ಣ ರಾಜು ಕೂಡ ಪಕ್ಷ ಬಿಡುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿದ್ದು, ಇಬ್ಬರು ಜನಸೇನಾ ಹಾಗೂ ಟಿಡಿಪಿ ಒಕ್ಕೂಟಕ್ಕೆ ಸೇರ್ಪಡೆಯಾಗಲಿದ್ದಾರೆ ಎಂದು ಮೂಲಗಳು ಹೇಳುತ್ತಿವೆ.

ಮುಂದಿನ ಲೋಕಸಭಾ ಚುನಾವಣೆಯಲ್ಲಿ ಹಾಲಿ ಸಂಸದರನ್ನು ಕೈಬಿಡುವ ಅಥವಾ ಕ್ಷೇತ್ರ ಬದಲಿಸುವುದಾಗಿ ವೈಎಸ್‌ಆರ್‌ಪಿ ನೇತಾರರು ಘೋಷಿಸಿದ ನಂತರ ರಾಜೀನಾಮೆ ಪರ್ವ ಶುರುವಾಗಿದೆ. ಚುನಾವಣೆ ಹಿನ್ನೆಲೆ ವೈಎಸ್‌ಆರ್‌ಪಿ ಪಕ್ಷ ಈಗಾಗಲೇ 58 ವಿಧಾನಸಭೆ ಹಾಗೂ ಹತ್ತು ಲೋಕಸಭೆ ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಘೋಷಿಸಿದ್ದು, ಹಲವು ಹೊಸ ಮುಖಗಳಿಗೆ ಆದ್ಯತೆ ನೀಡಿದೆ.

ವಿರೋಧ ಪಕ್ಷ ಟಿಡಿಪಿ ಕೂಡ ರಾಜೀನಾಮೆಗಳಿಂದ ಹೊರಗುಳಿದಿಲ್ಲ. ಕಳೆದ ಎರಡು ವಾರಗಳ ಹಿಂದೆ  ಟಿಡಿಪಿಯ ವಿಜಯವಾಡ ಸಂಸದ ಕೇಸಿನೇನಿ ಶ್ರೀನಿವಾಸ್ ತೆಲುಗು ದೇಶಂ ಪಕ್ಷ ತೊರೆದು ವೈಎಸ್‌ಆರ್‌ಸಿ ಸೇರ್ಪಡೆಗೊಂಡಿದ್ದರು.

ಮುಂದಿನ ಚುನಾವಣೆಗಳಲ್ಲಿ ಹೊಸ ರಾಜಕೀಯ ತಿರುವುಗಳನ್ನು ಜಾರಿಗೊಳಿಸುವ ಸಲುವಾಗಿ ಆಂಧ್ರ ಪ್ರದೇಶ ಸರ್ಕಾರ ಜಾತಿ ಆಧಾರಿತ ಸಮೀಕ್ಷೆಗಳನ್ನು ರಾಜ್ಯದಲ್ಲಿ ಹಮ್ಮಿಕೊಂಡಿದೆ. ಕೆಲವು ದಿನಗಳಲ್ಲಿ ಸಮೀಕ್ಷೆಯ ವರದಿಗಳು ಪ್ರಕಟಿಸುವ ಸಾಧ್ಯತೆಯಿದೆ. ಬಿಹಾರದ ನಂತರ ಆಂಧ್ರ ಪ್ರದೇಶ ಜಾತಿ ಆಧಾರಿತ ಸಮೀಕ್ಷೆ ನಡೆಸಿದ ಎರಡನೇ ರಾಜ್ಯವಾಗಿದೆ.

ಪಕ್ಷ ಸಂಘಟನೆಯನ್ನು ಬಲಪಡಿಸುತ್ತಿರುವ ವಿಪಕ್ಷ ಟಿಡಿಪಿ ಹಾಗೂ ಕಾಂಗ್ರೆಸ್‌ಗೆ ಈ ಬಾರಿಯೂ ಸೋಲುಣಿಸಿ ಎರಡನೇ ಬಾರಿ ಅಧಿಕಾರ ಪಡೆಯಲು ಮುಖ್ಯಮಂತ್ರಿ ವೈ ಎಸ್ ಜಗನ್ ಮೋಹನ್ ರೆಡ್ಡಿ ನೇತೃತ್ವದ ವೈಎಸ್‌ಆರ್‌ಸಿಪಿ ಹಲವು ರಾಜಕೀಯ ತಂತ್ರಗಳನ್ನು ಕೈಗೊಳ್ಳುತ್ತಿದೆ.

ಕರ್ನಾಟಕ,ತೆಲಂಗಾಣದಲ್ಲಿ ಭಾರಿ ಬಹುಮತದೊಂದಿಗೆ ಗೆಲುವು ಸಾಧಿಸಿ ಹುರುಪಿನಲ್ಲಿರುವ ಕಾಂಗ್ರೆಸ್ ಕೂಡ ಆಂಧ್ರದಲ್ಲಿ ಅಧಿಕಾರಕ್ಕೆ ಬರಬೇಕೆಂದು ಪಣ ತೊಟ್ಟಿದ್ದು, ಜಗನ್‌ ಮೋಹನ್‌ ಅವರ ಸಹೋದರಿ ವೈ ಎಸ್‌ ಶರ್ಮಿಳಾ ಅವರನ್ನೇ ಆಂಧ್ರದ ಕಾಂಗ್ರೆಸ್ ಮುಖ್ಯಸ್ಥರನ್ನಾಗಿ ನೇಮಿಸಿದೆ.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

Advertisements

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸಿಂಧು ಜಲ ಒಪ್ಪಂದ ಸ್ಥಗಿತವು ಭಾರತಕ್ಕೇ ಹಾನಿಕಾರಕ; ಯಾಕೆ ಗೊತ್ತೇ?

ಒಂದು ದೇಶಕ್ಕೆ ನೀರು ಹರಿಯದಂತೆ ನಿರ್ಬಂಧಿಸುವುದು ಯುದ್ಧ ಅಪರಾಧವಾಗಿದೆ. ಭಾರತವು ಇಂತಹ...

ತಿರುವನಂತಪುರಂ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಾಂಬ್ ಬೆದರಿಕೆ ಇಮೇಲ್

ತಿರುವನಂತಪುರಂ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಾಂಬ್ ಬೆದರಿಕೆ ಬಂದಿದೆ ಎಂದು ವರದಿಯಾಗಿದೆ. ವಿಮಾನ...

ರಕ್ಷಣಾ ಕಾರ್ಯಾಚರಣೆಗಳ ನೇರ ಪ್ರಸಾರಕ್ಕೆ ಅನುಮತಿ ‘ಕಾರ್ಯತಂತ್ರದ ನಿರ್ಲಕ್ಷ್ಯ’ವೇ: ಕೇಂದ್ರಕ್ಕೆ ಅಖಿಲೇಶ್ ಯಾದವ್ ಪ್ರಶ್ನೆ

ರಕ್ಷಣಾ ಕಾರ್ಯಾಚರಣೆಗಳ ನೇರ ಪ್ರಸಾರವನ್ನು ತಪ್ಪಿಸಲು ಕೇಂದ್ರವು ಮಾಧ್ಯಮಗಳಿಗೆ ಸಲಹೆ ನೀಡಿದೆ....

ಜೈಪುರ ಮಸೀದಿಯಲ್ಲಿ ದಾಂಧಲೆ: ಬಿಜೆಪಿ ಶಾಸಕನ ವಿರುದ್ಧ ಪ್ರಕರಣ ದಾಖಲು

ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯ ವಿರುದ್ಧ ರಾಜಸ್ಥಾನದ ಜೈಪುರದಲ್ಲಿ ಬಿಜೆಪಿ ಪ್ರತಿಭಟನೆ...